ಕರ್ತೃ – ಶ್ರೀ ಷ.ಬ್ರ. ಶಾಂತಲಿಂಗೇಶ್ವರ ಶಿವಾಚಾರ್ಯ ಸ್ವಾಮಿಗಳು
ಕಲಬುರಗಿ ಜಿಲ್ಲಾ ಕೇಂದ್ರದಿಂದ 30 ಕಿ.ಮೀ ದೂರದಲ್ಲಿರುವ ಕಮಲಾಪುರಗ್ರಾಮದ ಮಧ್ಯಭಾಗದಲ್ಲಿ ಶ್ರೀ ಶಾಂತಲಿಂಗೇಶ್ವರ ಹಿರೇಮಠವು ಸ್ಥಾಪನೆಯಾಗಿದ್ದು ಶ್ರೀ ಕಾಶೀಪೀಠದ ಶಾಖಾಮಠವಾಗಿ ಪುತ ್ರವರ್ಗದ ಸಂಪ ್ರದಾಯದಲ್ಲಿ ತಿಳಿದುಬಂದಿದೆ.ನೂರಾಅರವತ್ತು (160) ವರ್ಷಗಳ ಹಿಂದೆ ಶ್ರೀ ಷ.ಬ್ರ. ಶಾಂತಲಿಂಗೇಶ್ವರ ಶಿವಾಚಾರ್ಯಮಹಾಸ್ವಾಮಿಗಳು ಶ್ರೀಮಠವನ್ನು ಸ್ಥಾಪಿಸಿದ್ದು ವೀರಶೈವ ಧರ್ಮವನ್ನು ಪ್ರಚುರಪಡಿಸಿಬೆಳೆಸಿದರು.ಕರ್ತೃಗುರುಗಳು ಮಹಾತಪಸ್ವಿಗಳಾಗಿದ್ದು ಆಧ್ಯಾತ್ಮದ ಮಹಾಗಣಿಗಳಾಗಿದ್ದರು.ಶ್ರೀಗಳು ಶಿವಯೋಗಸಿದ್ದಿಯನ್ನು ಸಂಪಾದಿಸಿದ್ದು ಈ ಭಾಗದ ¨s Àಕ ್ತರನ್ನುಸಂಸ್ಕಾರವಂತರನ್ನಾಗಿ ಮಾಡಿದ್ದಾರೆ. ಮಠವು ನಿರಂತರವಾಗಿ ಧಾರ್ಮಿಕ ಆಚರಣೆಗಳನ್ನುನಡೆಸಬೇಕೆಂಬ ದೃಢ ಸಂಕಲ್ಪದಿಂದ ಮಠಕ್ಕೆ ಆರ್ಥಿಕ ಸದೃಢತೆಯನ್ನು ತಂದುಕೊಟ್ಟ ಶ್ರೀಶಾಂತಲಿಂಗೇಶ್ವರ ಶಿವಾಚಾರ್ಯರು ಐಕ್ಯಗೊಂಡ ನಂತರ ಶ್ರೀ ಷ.ಬ್ರ. ಸಿದ್ದರಾಮೇಶ್ವರಶಿವಾಚಾರ್ಯ ಸ್ವಾಮಿಗಳು ಶ್ರೀಮಠದ ಧಾರ್ಮಿಕ ಆಚರಣೆಗಳನ್ನು ಮುನ್ನಡೆಸಿಕೊಂಡುಬಂದರು.ಶ್ರೀ ಸಿದ್ದರಾಮೇಶ್ವರ ಶಿವಾಚಾರ್ಯರು ತಮ್ಮ ಅನುಷ್ಠಾನಗಳಿಂದ ಪ್ರಸಿದ್ದಗೊಂಡುಅಪಾರ ಭಕ್ತಬಳಗವನ್ನು ಹೊಂದಿದ್ದರು. ಆದರೆ ಶ್ರೀಗಳು ಲಿಂಗೈಕ್ಯರಾದ ನಂತರ ಶ್ರೀಮಠವುಉತ್ತರಾಧಿಕಾರಿಗಳಿಲ್ಲದೆ ದಶಕಗಳ ಕಾಲ ಖಾಲಿ ಉಳಿಯಿತು. ಈ ಸಂದರ್ಭದಲ್ಲಿ ಶ್ರೀಮಠಹಾಗೂ ಭಕ್ತರ ನಡುವಿನ ಸಂಬಂಧ ದೂರವಾಗುತ್ತಾ ಬಂದಿತು. ಹಿರಿಯರು ಕಟ್ಟಿ ಬೆಳೆಸಿದಮಠವು ನಶಿಸಿ ಹೋಗಬಾರದೆಂಬ ಮಹದಾಸೆಯಿಂದ ಮಠದ ವಂಶಸ್ಥರು ಈಗಿನ ಶ್ರೀಶಾಂತವೀರ ಸ್ವಾಮಿಗಳನ್ನು ಶ್ರೀಮಠದ ಉತ್ತರಾಧಿಕಾರಿಗಳಾಗಿ ನೇಮಕಗೊಳಿಸಿದರು.ಶ್ರೀ ಶಾಂತವೀರ ಸ್ವಾಮಿಗಳು ಪದವೀದರರಾಗಿದ್ದು ಗದಗಿನ ಪುಟ್ಟರಾಜಗವಾಯಿಗಳಲ್ಲಿ ಸಂಗೀತ ವಿದ್ಯಾಭ್ಯಾಸವನ್ನು ಕಲಿತು ಮಠಕ್ಕೆ ಮರಳಿದರು. ಶ್ರೀಗಳೂಪರಂಪರೆಯ ಗುರುಗಳಂತೆ ಅನುಷ್ಠಾನಪ್ರಿಯರಾಗಿದ್ದು ಕರ್ನಾಟಕ, ಆಂzs À ್ರ,ಮಹಾರಾಷ್ಟ್ರದಾದ್ಯಂತ ಭಕ್ತರನ್ನು ಹೊಂದಿದ್ದಾರೆ. ಹಾಗೂ ಹೈದರಾಬಾದ್ ಕರ್ನಾಟಕಪ್ರಾಂತ್ಯದಲ್ಲಿ ಸಂಚರಿಸುತ್ತಾ ಪುರಾಣ ಪ್ರವಚನಗಳನ್ನು ನೀಡುತ್ತಾ ಬಂದಿದ್ದಾರೆ. ಶ್ರೀಮಠದಲ್ಲಿಭಾದ್ರಪದ ಬಹುಳ ಪಂಚಮಿಗೆ ಶ್ರೀಮಠದ ಪಲ್ಲಕ್ಕಿ ಮಹೋತ್ಸವ ಕಾರ್ಯಕ್ರಮವನ್ನುನಡೆಸಲಾಗುತ್ತಿದೆ.
Swamiji
Swamiji Name :
ಪೂಜ್ಯ ಶ್ರೀ ಶಾಂತವೀರ ಸ್ವಾಮಿಗಳು
Date of Birth :
08-05-1965
Place :
ಕಮಲಾಪುರ, ಕಲಬುರಗಿ ತಾ||
Photo :
Programs
ಭಾದ್ರಪದ ಬಹುಳ ಪಂಚಮಿಗೆ ಶ್ರೀ ಮಠದ ಪಲ್ಲಕ್ಕಿ ಮಹೋತ್ಸವ
Photos
Full Address Kannada
ಶ್ರೀ ಶಾಂತಲಿಂಗೇಶ್ವರ ಹಿರೇಮಠ
ಕಮಲಾಪುರ - 585 313
ಕಲಬುರಗಿ ತಾ., ಜಿಲ್ಲೆ