Shree Shankarlingeshawara Samsthana Brahanmatha – Udachana

Shree Shankarlingeshawara Samsthana Brahanmatha – Udachana Claimed

ಶ್ರೀ ಶಂಕರಲಿಂಗೇಶ್ವರ ಸಂಸ್ಥಾನ ಬೃಹನ್ಮಠ - ಉಡಚಾಣ

Average Reviews

Description

ಶ್ರೀ ಶಂಕರಲಿಂಗೇಶ್ವರ ಸಂಸ್ಥಾನ ಬೃಹನ್ಮಠ – ಉಡಚಾಣ

ಕರ್ತೃ – ಪೂಜ್ಯ ಶ್ರೀ ಶಂಕರಲಿಂಗ ಮಹಾರಾಜರು

ಕಲಬುರಗಿ ಜಿಲ್ಲೆ ಅಫಜಲಪುರ ತಾಲ್ಲೂಕು ಕೇಂದ್ರದಿಂದ 32 ಕಿ.ಮೀ.ದೂರದಲ್ಲಿರುವ ಉಡಚಾಣ ಗ್ರಾಮದ ಹೊರವಲಯದ ಭೀಮಾ ನದಿ ತೀರದಲ್ಲಿಅಸ್ತಿತ್ವದಲ್ಲಿರುವ ಮಠವೇ ಶ್ರೀ ಶಂಕರಲಿಂಗೇಶ್ವರ ಸಂಸ್ಥಾನ ಬೃಹನ್ಮಠ. ಶ್ರೀಮದ್ ರಂಭಾಪುರಿಪೀಠದ ಶಾಖಾಮಠವಾಗಿ ಪಂಚಪೀಠಗಳ ಸಂಪ್ರದಾಯವನ್ನು ಪಾಲಿಸಿಕೊಂಡುಬರುತ್ತಿರುವ ಶ್ರೀ ಮಠದ ಕರ್ತೃ ಗುರುಗಳು ಪೂಜ್ಯ ಶ್ರೀ ಶಂಕರಲಿಂಗ ಮಹಾರಾಜರು.ಸುಮಾರು 100 ವರ್ಷಗಳ ಹಿಂದೆ ಸಂಚಾರದಲ್ಲಿ ಉಡಚಾಣ ಗ್ರಾಮದಹೊರವಲಯಕ್ಕೆ ಬಂದು ನೆಲೆನಿಂತ ಕರ್ತೃ ಪೂಜ್ಯ ಶ್ರೀ ಶಂಕರಲಿಂಗ ಮಹಾರಾಜರು ಇಲ್ಲಿನಪ್ರಶಾಂತ ವಾತಾವರಣಕ್ಕೆ ಮನಸೋತು ತಮ್ಮ ಅನುಷ್ಠಾನಕ್ಕೆ ಇದೇ ಉತ್ತಮ ತಾಣವೆಂದರಿತುಇಲ್ಲಿ ನೆಲೆಗೊಂಡರು. ತಮ್ಮ ಅನುಷ್ಠಾನದಿಂದ, ಧಾರ್ಮಿಕ ಆಚರಣೆಗಳ ಮೂಲಕ ಅಪಾರಭಕ್ತಬಳಗವನ್ನು ಹೊಂದಿದ್ದ ಶ್ರೀಗಳು ಭಕ್ತರ ಸಹಕಾರದೊಂದಿಗೆ ಶ್ರೀಮಠದ ಸ್ಥಾಪನೆಗೆಕಾರಣರಾದರು.ಕರ್ತೃಗುರುಗಳ ನಂತರ ಮಾತೆ ಸೀತಾಮಾತಾ ತಾಯಿಯವರು ಹಾಗೂನಂತರದಲ್ಲಿ ಹಿಂದಿನ ಶ್ರೀಗಳಾದ ಶ್ರೀ ಚಂದ್ರಶೇಖರ ಮಹಾರಾಜರು ಶ್ರೀಮಠವನ್ನುಸಮರ್ಥವಾಗಿ ಮುನ್ನಡೆಸಿಕೊಂಡು ಬಂದಿದ್ದಾರೆ. ಹಿಂದಿನ ಶ್ರೀಗಳಾದ ಶ್ರೀ ಚಂದ್ರಶೇಖರಮಹಾರಾಜರು ತಮ್ಮ ಧಾರ್ಮಿಕ ಆಚರಣೆಗಳ ಜೊತೆಯಲ್ಲಿ ಈ ಭಾಗದ ವಿದ್ಯಾರ್ಥಿಗಳಿಗೆಅನುಕೂಲವಾಗುವಂತೆ ಶ್ರೀ ಶಂಕರಲಿಂಗ ಮಹಾರಾಜ ಶಿಕ್ಷಣ ಸಂಸ್ಥೆ (ರಿ) ಯನ್ನು ಆರಂಭಿಸಿಮಕ್ಕಳ ವಿದ್ಯಾಭ್ಯಾಸಕ್ಕೆ ಸಹಕಾರಿಯಾಗಿ 2010ರಲ್ಲಿ ಲಿಂಗೈಕ್ಯರಾಗಿದ್ದಾರೆ.ಹಿಂದಿನ ಶ್ರೀಗಳಿರುವಾಗಲೇ 2000ದ ಇಸವಿಯಲ್ಲಿ ಶ್ರೀಮಠಕ್ಕೆ ಪಟ್ಟಾಧಿಕಾರದಅನುಗ್ರಹವನ್ನು ಪಡೆದಿದ್ದ ಈಗಿನ ಶ್ರೀಗಳಾದ ಶ್ರೀ ಷ.ಬ್ರ. ಶಾಂತಲಿಂಗ ಶಿವಾಚಾರ್ಯಸ್ವಾಮಿಗಳು ಪರಂಪರೆಯ ಹಾದಿಯಲ್ಲಿ ಶ್ರೀಮಠವನ್ನು ಮುನ್ನಡೆಸುತ್ತಿದ್ದು ಶ್ರೀಮಠದಧಾರ್ಮಿಕ ಆಚರಣೆಗಳನ್ನು ಚುರುಕುಗೊಳಿಸಿದ್ದಾರೆ. ಪ್ರತಿ ವರ್ಷ ನವರಾತ್ರಿಗೆ ಶ್ರೀದೇವಿಪುರಾಣ ಪಾರಾಯಣ ಕಾರ್ಯಕ್ರಮವು ನಡೆಯುತ್ತಿದ್ದು, ದೀಪಾವಳಿ ನಂತರದ ಅಷ್ಠಮಿತಿಥಿಗೆ ಶ್ರೀಮಠದ ಜಾತ್ರಾಮಹೋತ್ಸವ ಅದ್ದೂರಿಯಾಗಿ ಆಯೋಜಿಸಲ್ಪಡುತ್ತದೆ.

Swamiji

Swamiji Name :
ಶ್ರೀ ಷ.ಬ್ರ. ಶಾಂತಲಿಂಗ ಶಿವಾಚಾರ್ಯ ಸ್ವಾಮಿಗಳು
Date of Birth :
ವಿಜಯಪುರ
Place :
27-03-1978
Pattadikara :
2000
Photo :

Programs

ದೀಪಾವಳಿ ಅದ 8ನೇ ದಿನಕ್ಕೆ ಶ್ರೀ ಮಠದ ಜಾತ್ರೆ ಹಾಗೂ ಶ್ರೀ ಹಿರಿಯ ಗುರುಗಳ ಪುಣ್ಯರಾಧನೆ ನವರಾತ್ರಿಗೆ ಶ್ರೀ ದೇವಿ ಪುರಾಣ ಪಾರಾಯಣ
ಶ್ರಾವಣ ಮಾಸದಲ್ಲಿ ಪಾದಪೂಜೆ, ರುದ್ರಾಭಿಷೇಕ

Institutions

ಶ್ರೀ ಶಂಕರಲಿಂಗ ಮಹಾರಾಜ ಶಿಕ್ಷಣ ಸಂಸ್ಥೆ (ರಿ)
ಪ್ರೌಢಶಾಲೆ ಪದವಿ ಪೂರ್ವ ಕಾಲೇಜ್

Photos

Full Address Kannada

ಶ್ರೀ ಶಂಕರಲಿಂಗೇಶ್ವರ ಸಂಸ್ಥಾನ ಬೃಹನ್ಮಠ
ಉಡಚಾಣ - 585 217
ಅಫಜಲಪುರ ತಾ||, ಕಲಬುರಗಿ ಜಿಲ್ಲೆ

Map

Near by Places

ಕರರ್ಜಿ 10 ಕಿ.ಮೀ.
ಅಫಜಲಪುರ 32 ಕಿ.ಮೀ.
ಕಲಬುರಗಿ 90 ಕಿ.ಮೀ.

Statistic

2 Views
0 Rating
0 Favorite
0 Share
error: Content is protected !!