ಚಾಮರಾಜನಗರ ಜಿಲ್ಲೆಯ ಕುದೇರು ಗ್ರಾಮವು ಜಿಲ್ಲಾ ಕೇಂದ್ರದಿಂದ 30 ಕಿ.ಮೀ.ದೂರದಲ್ಲಿದ್ದು ಈ ಗ್ರಾಮದ ಹೊರವಲಯದಲ್ಲಿ ಅಸ್ತಿತ್ತ್ವದಲ್ಲಿರುವ ಶ್ರೀ ಶಂಕರದೇವರಮಠವು ಶ್ರೀ ಜಗದ್ಗುರು ಸುತ್ತೂರು ಮಠದ ಶಾಖಾ ಮಠವಾಗಿದ್ದು ತನ್ನ ಧಾರ್ಮಿಕಆಚರಣೆಗಳ ಮೂಲಕ ಪ್ರಚಲಿತದಲ್ಲಿದೆ. ಶ್ರೀಮಠವು ಪುರಾತನ ಇತಿಹಾಸವನ್ನುಹೊಂದಿದೆಯೆಂದು ಹೇಳಲಾದರೂ ಪರಂಪರೆಯ ಬಗ್ಗೆ ಮಾಹಿತಿಯಿಲ್ಲ.ಶ್ರೀಮಠದ ಕರ್ತೃಗುರುಗಳೆಂದು ಪೂಜ್ಯ ಶ್ರೀ ಶಂಕರ ಮಹಾಸ್ವಾಮಿಗಳನ್ನುಗುರುತಿಸಲಾದರೂ ನಿಖರತೆಯಿಲ್ಲ. ಶ್ರೀಮಠವು ಆಗಾಗ್ಗೆ ಧೀರ್ಘಕಾಲ ಖಾಲಿಉಳಿದುಕೊಂಡು ಬಂದಿದ್ದು ಈ ಕಾರಣದಿಂದಾಗಿ ಶ್ರೀಮಠದ ಇತಿಹಾಸದ ಬಗ್ಗೆ ಸ್ಪಷ್ಟತೆಯಿಲ್ಲ.ಶ್ರೀಮಠದ ಪರಂಪರೆಯಲ್ಲಿ ಕಂಡು ಬರುವ ಹಿಂದಿನ ಶ್ರೀಗಳಾದ ಶ್ರೀ ಶಂಕರ ಸ್ವಾಮಿಗಳಕುರಿತಂತೆ ಅಲ್ಪ ಮಾಹಿತಿಗಳು ಸಿಗುತ್ತಿದ್ದು ಈಗ್ಗೆ 60 ವರ್ಷಗಳ ಹಿಂದೆ ಲಿಂಗೈಕ್ಯರಾಗಿದ್ದಾರೆ.ಪ್ರಸ್ತುತ 1996ರಲ್ಲಿ ಶ್ರೀಮಠದ ಅಧಿಕಾರ ವಹಿಸಿಕೊಂಡು ಶ್ರೀಮಠವನ್ನುಸಮರ್ಥವಾಗಿ ಮುನ್ನಡೆಸಿಕೊಂಡು ಬರುತ್ತಿರುವ ಶ್ರೀ ಷ.ಬ್ರ. ನಟರಾಜ ಸ್ವಾಮಿಗಳುಪರಂಪರೆಯ ಹಾದಿಯಲ್ಲಿ ಮುನ್ನಡೆದಿದ್ದಾರೆ. ದಶಕಗಳಿಗೂ ಅಧಿಕ ಕಾಲ ಖಾಲಿ ಉಳಿದಿದ್ದಶ್ರೀ ಶಂಕರ ದೇವರ ಮಠವನ್ನು ಸುಸ್ಥಿತಿಗೆ ತರುವಲ್ಲಿ ಬಹುವಾಗಿ ಶ್ರಮಿಸಿರುವ ಶ್ರೀಗಳುಅದರಲ್ಲಿ ಯಶಸ್ವಿಯಾಗಿದ್ದು 2014ರಲ್ಲಿ ಶ್ರೀಮಠದ ಜೀರ್ಣೋದ್ದಾರಗೊಳಿಸಿದ್ದಾರೆ.ಶ್ರೀಮಠದಲ್ಲಿ ಕರ್ತೃಗದ್ದುಗೆಯಿದ್ದು ನಿತ್ಯ ಪೂಜೆಗೆ ಒಳಪಟ್ಟಿದ್ದು ವಿಶೇಷ ಸಂದರ್ಭಗಳಲ್ಲಿವಿಶೇಷ ಪೂಜೆ ಪುನಸ್ಕಾರಗಳು ನಡೆಯುತ್ತವೆ. ಹಾಗೆಯೇ ಶ್ರೀ ಸುತ್ತೂರು ಶಿವರಾತ್ರೀಶ್ವರಜಯಂತಿಯನ್ನು ಶ್ರೀಮಠದಲ್ಲಿ ಆಚರಿಸಲಾಗುತ್ತದೆ.
Swamiji
Swamiji Name :
ಶ್ರೀ ಷ.ಬ್ರ. ನಟರಾಜ ಸ್ವಾಮಿಗಳು
Date of Birth :
1968
Place :
ಕುದೇರು, ಚಾಮರಾಜನಗರ ತಾ||
Pattadikara :
1996
Photo :
Programs
ಪ್ರತಿ ಅಮವಾಸ್ಯೆ, ಹುಣ್ಣಿಮೆಗಳಿಗೆ ವಿಶೇಷ ಪೂಜೆ
ಶ್ರೀ ಶಿವರಾತ್ರೇಶ್ವರ ಜಯಂತಿ ಆಚರಣೆ
Photos
Full Address Kannada
ಶ್ರೀ ಶಂಕರದೇವರ ಮಠ
ಕುದೇರು - 571 136
ಚಾಮರಾಜನಗರ ತಾ|| ಮತ್ತು ಜಿಲ್ಲೆ