Shree Shakha Shivyoga Mandira

Shree Shakha Shivyoga Mandira Claimed

ಶ್ರೀ ಶಾಖಾ ಶಿವಯೋಗ ಮಂದಿರ

Average Reviews

Description

ಶ್ರೀ ಶಾಖಾ ಶಿವಯೋಗ ಮಂದಿರ

ಕರ್ತೃ – ಶ್ರೀ ಮ.ನಿ.ಪ್ರ. ಚನ್ನಬಸವ ಮಹಾಸ್ವಾಮಿಗಳು

ಗದಗ ಜಿಲ್ಲೆ ರೋಣ ತಾಲ್ಲೂಕಿನ ನಿಡಗುಂದಿ ಕೊಪ್ಪ ಗ್ರಾಮದ ಹೊರವಲಯದಹಳ್ಳದ ದಡದಲ್ಲಿ ಸುಮಾರು 1914ರಲ್ಲಿ ಸ್ಥಾಪಿತಗೊಂಡಿರುವ ಶ್ರೀ ಶಾಖಾ ಶಿವಯೋಗಮಂದಿರವು ಈ ಭಾಗದಲ್ಲಿ ತನ್ನ ಧಾರ್ಮಿಕ, ಸಾಮಾಜಿಕ, ಸಾಂಸ್ಕøತಿಕ ಕಾರ್ಯಕ್ರಮಗಳಿಂದಹೆಸರುವಾಸಿಯಾಗಿದ್ದು ಭಕ್ತರಲ್ಲಿ ಧಾರ್ಮಿಕ ಪ್ರಜ್ಞೆಯನ್ನು ಮೂಡಿಸುತ್ತಿದೆ. ಹಾನಗಲ್ಲು ಶ್ರೀಗುರು ಕುಮಾರ ಮಹಾಸ್ವಾಮಿಗಳು ಹಾಗೂ ಹಾವೇರಿಯ ಶ್ರೀ ಶಿವಬಸವ ಮಹಾಸ್ವಾಮಿಗಳುನಿಡಗುಂದಿ – ಕೊಪ್ಪ ಗ್ರಾಮಗಳಿಗೆ ಸಂಚಾರ ಬಂದಾಗ ಶ್ರೀ ಶಿವಬಸವ ಮಹಾಸ್ವಾಮಿಗಳುಧೀರ್ಘ ಅನುಷ್ಟಾನ ಕುಳಿತು, ಶ್ರೀ ಗುರುಕುಮಾರ ಸ್ವಾಮಿಗಳಿಂದ ಸ್ಥಾಪಿತಗೊಂಡ ಮಠವೇಶ್ರೀ ಶಾಖಾ ಶಿವಯೋಗ ಮಂದಿರ, ಹೀಗೆ ಸ್ಥಾಪಿಗೊಂಡ ಮಠಕ್ಕೆ 1915ರಲ್ಲಿ ಬಂದು ಸಂಗೀತಸುದೆಯನ್ನು ಹರಿಸಿ ಸಂಗೀತ ಪಾಠಶಾಲೆಯನ್ನು ಪ್ರಾರಂಬಿಸಿದವರೇ ಶ್ರೀ ಪಂಚಾಕ್ಷರಿಗವಾಯಿಗಳವರು.ಶ್ರೀಮಠದಲ್ಲಿ ಅನೇಕ ಪೂಜ್ಯರು ತಪವನ್ನು ಗೈದು ತಪೊಕ್ಷೇತ್ರವನ್ನಾಗಿ ಮಾಡಿದ್ದಾರೆಕೊನೆಗೆ ಹಾವೇರಿ – ಹಾನಗಲ್ಲ ಶ್ರೀಗಳು ಗೋಕಾಕ ಚರಂತಿ ಮಠದ ಶ್ರೀ ಮ.ನಿ.ಪ್ರ.ಚನ್ನಬಸವ ಮಹಾಸ್ವಾಮಿಗಳನ್ನು ಪಟ್ಟಕ್ಕೆ ತಂದು ಶ್ರೀಮಠದ ಪೂರ್ಣ ಜವಾಬ್ದಾರಿಯನ್ನುವಹಿಸಿಕೊಡುತ್ತಾರೆ. ಅಂದಿನಿಂದ ಶ್ರೀಮಠವು ಸುತ್ತಮುತ್ತಲಿನ ಗ್ರಾಮಗಳಲ್ಲೆಲ್ಲಾಪ್ರಸಿದ್ದಗೊಂಡಿತು.ಶ್ರೀ ಮ.ನಿ.ಪ್ರ. ಚನ್ನಬಸವ ಮಹಾಸ್ವಾಮಿಗಳು ಹಾನಗಲ್ಲ ಶ್ರೀ ಕುಮಾರಮಹಾಸ್ವಾಮಿಗಳು ಹಾಗೂ ಹಾವೇರಿ ಶ್ರೀ ಶಿವಬಸವ ಸ್ವಾಮಿಗಳ ಮಾರ್ಗದರ್ಶನದಲ್ಲಿಶ್ರೀಮಠವನ್ನು ಸರ್ವಾಂಗೀಣ ಅಭಿವೃದ್ದಿ ಪಡಿಸುವತ್ತ ಗಮನಹರಿಸಿದರು. ಮೊದಲು ಹಳೆಯಕಟ್ಟಡವನ್ನು ವಿಸ್ತರಿಸಲು ಯಥೇಚ್ಚವಾಗಿ ಕಟ್ಟಿಗೆಯನ್ನು ಬಳಸಿದ್ದರಿಂದಾಗಿ ಶ್ರೀಮಠಕ್ಕೆ “ಕಟ್ಟಿಗಮಠ’ವೆಂದು ಹೆಸರು ಬಂದಿತು. ಶ್ರೀಗಳು ತಮ್ಮ ಕೊನೆಯ ಕಾಲದಲ್ಲಿ ಹಳೆಯ ಕಟ್ಟಿಗೆ ಮಠದಪಕ್ಕದಲ್ಲಿ ನೂತನ ಕಲ್ಲಿನ ಕಟ್ಟಡವನ್ನು ನಿರ್ಮಿಸಿದರು.ಈಗಿನ ಶ್ರೀಗಳಾದ ಶ್ರೀ. ಮ.ನಿ.ಪ್ರ. ಶಿವಬಸವ ಮಹಾಸ್ವಾಮಿಗಳು 1993ರ ಮೇ30ರಲ್ಲಿ ಶ್ರೀಮಠದ ಅಧಿಕಾರ ವಹಿಸಿಕೊಂಡು ತಮ್ಮ ಧಾರ್ಮಿಕ ಹಾಗೂ ಸಾಮಾಜಿಕಕಾರ್ಯಕ್ರಮಗಳಿಂದ ಶ್ರೀಮಠವನ್ನು ಸಮರ್ಥವಾಗಿ ಮುನ್ನಡೆಸಿಕೊಂಡು ಬರುತ್ತಿದ್ದು.ಆರೋಗ್ಯ ದಾಸೋಹಿ ಭವರೋಗವೈದ್ಯ ಗಿಡಮೂಲಿಕೆ ನಾಟಿ ತಜ್ಞರೆಂದು ಹೆಸರು ಪಡೆದುಮುಂದುವರೆಯುತ್ತಿದ್ದಾರೆ.

ವಿಶೇಷತೆ

ಪ್ರತಿ ಗುರುವಾರ, ಭಾನುವಾರ, ಅಮವಾಸ್ಯೆ

ಹಾಗೂ ಹುಣ್ಣಿಮೆಗೆ ಶ್ರೀಗಳ ದರ್ಶನ & ಭಕ್ತರಿಗೆ

 ಆಯುರ್ವೇದ ಉಚಿತ ಔಷದ ವಿತರಣೆ

ಉಚಿತ ಆರೋಗ್ಯ ಶಿಬಿರ

ಉಚಿತ ನಾಟಿ ವೈದ್ಯ ತರಬೇತಿ ಶಿಬಿರ

Swamiji

Swamiji Name :
ಶ್ರಿ ಮ.ನಿ.ಪ್ರ. ಶಿವಬಸವ ಮಹಾಸ್ವಾಮಿಗಳು
Date of Birth :
5-5-1965
Place :
ಮುಂಡಗೋಡು, ಮುಂಡಗೋಡು ತಾ||
Pattadikara :
30-5-1993
Photo :

Programs

ಪುಷ್ಯ ಮಾಸದಲ್ಲಿ ಶ್ರೀ ಹಿರಿಯ ಗುರುಗಳ ಪುಣ್ಯಾರಾಧನೆ ಮಾಘ ಮಾಸದಲ್ಲಿ ಹಾನಗಲ್ಲು ಕುಮಾರ ಸ್ವಾಮಿಗಳ ಜಾತ್ರೆ ಮಹೋತ್ಸವ ಶ್ರಾವಣ ಮಾಸದಲ್ಲಿ ನಿತ್ಯ ರುದ್ರಾಭಿಷೇಕ ಹಾಗು ಪುರಾಣ ಪ್ರವಚನ

Photos

Full Address Kannada

ಶ್ರೀ ಶಾಖಾ ಶಿವಯೋಗ ಮಂದಿರ
ನಿಡಗುಂದಿ ಕೊಪ್ಪ - 582 119
ರೋಣ ತಾ||, ಗದಗ ಜಿಲ್ಲೆ

Map

Near by Places

ನರೇಗಲ್ಲ - 9 ಕಿ.ಮೀ.
ಗದಗ - 42 ಕಿ.ಮೀ.
ಗಜೇಂದ್ರಗಡ - 18 ಕಿ.ಮೀ.
ರೋಣ - 19 ಕಿ.ಮೀ.

Statistic

80 Views
0 Rating
0 Favorite
0 Share
error: Content is protected !!