Shree Shadakshari Gavi Matha

Shree Shadakshari Gavi Matha Claimed

ಶ್ರೀ ಷಡಕ್ಷರಿ ಗವಿ ಮಠ

Average Reviews

Description

ಶ್ರೀ ಷಡಕ್ಷರಿ ಗವಿಮಠ – ಡಿ.ಹಲಸಹಳ್ಳಿ

ಕರ್ತೃ – ಪರಮ ಪೂಜ್ಯ ಶ್ರೀ ಷ.ಬ್ರ. ಬಸವಲಿಂಗ ಮಹಾಸ್ವಾಮಿಗಳು

ಮಂಡ್ಯ ಜಿˉÉ್ಲಯ ಮಳವಳ್ಳಿ ತಾಲ್ಲೂಕಿನ ಡಿ.ಹಲಸಹಳ್ಳಿ ಗ್ರಾಮದಹೊರವಲಯದಲ್ಲಿನ ಗವಿ ಸಮೀಪ ಸ್ಥಾಪಿತಗೊಂಡಿರುವ ಶ್ರೀ ಷಡಕ್ಷರಿ ಗವಿಮಠವುಸುತ್ತೂರು ಶ್ರೀ ಶಿವರಾತ್ರೀಶ್ವರ ಮಠದ ಶಾಖಾಮಠವಾಗಿ ಪ್ರಸಿದ್ಧಿಯಲ್ಲಿದೆ. ಧನಗೂರಿನ ಶ್ರೀವೀರಸಿಂಹಾಸನ ಮಠದ ಕರ್ತೃಗುರುಗಳು ತಮ್ಮ ನೂರೊಂದು ವಟುವಳ ಜೊತೆಗೆ ಈತಪೋಭೂಮಿಯಲ್ಲಿ ಅನುಷ್ಠಾನ ಕೈಗೊಂಡಿದ್ದು ಇಲ್ಲಿನ ನೆಲಮಾಳಿಗೆಯೊಳಗೆ ಹೋದವರುಪುನಃ ಬರಲಿಲ್ಲವೆಂಬ ಪ್ರತೀತಿ ಇದ್ದು ಇಂತಹ ಪುಣ್ಯಕ್ಷೇತ್ರದಲ್ಲಿ ಅನುಷ್ಠಾನ ಕೈಗೊಂಡು ಶ್ರೀಷಡಕ್ಷರಿ ಗವಿ ಮಠವನ್ನು ಸ್ಥಾಪಿಸಿದವರು ಪೂಜ್ಯ ಶ್ರೀ ಷ.ಬ್ರ. ಬಸವಲಿಂಗ ಶಿವಾಚಾರ್ಯಮಹಾಸ್ವಾಮಿಗಳು.ಶ್ರೀ ಬಸವಲಿಂಗ ಶಿವಾಚಾರ್ಯರು ಗವಿಯಲ್ಲಿ ಮಠ ಸ್ಥಾಪನೆ ಮಾಡಬೇಕೆಂದುಹೊರಟಾಗ ಭಕ್ತರು ಸಹಕಾರ ನೀಡಿ ಗವಿಮಠದ ಸ್ಥಾಪನೆಯಲ್ಲಿ ಶ್ರಮಿಸಿದರು. ಪ್ರಾರಂಭದಲ್ಲಿಮೂಲ ಗವಿಯಲ್ಲಿ ಮಾತ್ರ ಧಾರ್ಮಿಕ ಆಚರಣೆಗಳು ನಡೆಯುತ್ತಿದ್ದು ಕ್ರಮೇಣ ಬೆಟ್ಟದ ಗವಿಸಮೀಪ ಕಟ್ಟಡಗಳು ನಿರ್ಮಾಣಗೊಂಡವು. ಜೊತೆಯಲ್ಲಿ ದಾಸೋಹ ಕಾರ್ಯಗಳೂಪ್ರಾರಂಭಗೊಂಡವು. ಈ ರೀತಿಯಾಗಿ ಶ್ರೀ ಷಡಕ್ಷರಿ ಗವಿ ಮಠವನ್ನು ಸ್ಥಾಪಿಸಿ ಮುನ್ನಡೆಸಿದಕರ್ತೃಗುರುಗಳು 1945ರಲ್ಲಿ ಲಿಂಗೈಕ್ಯರಾದರು.ಕರ್ತೃಗುರುಗಳ ಐಕ್ಯಾನಂತರ 1946ರಲ್ಲಿ ಶ್ರೀಮಠಕ್ಕೆ ಪಟ್ಟಾಧಿಕಾರಗೊಂಡ ಪೂಜ್ಯಶ್ರೀ ಷ.ಬ್ರ. ಜಡೆ ಶಿವಾಚಾರ್ಯ ಸ್ವಾಮಿಗಳು ಸ್ವತಃ ಕಾಯಕ ಯೋಗಿಗಳಾಗಿ ಮಠವನ್ನುಅಭಿವೃದ್ಧಿಪಡಿಸಿದರು. ಇವರ ಕಾಲದಲ್ಲಿ ಮಠದ ಸುತ್ತಾ ಗುರುಗಳ ವಾಸ್ತವ್ಯ ಗೃಹ,ದಾಸೋಹ ಮಂದಿರ ಮುಂತಾದ ಕಟ್ಟಡಗಳು ಸ್ಥಾಪನೆಗೊಂಡವು. ಶ್ರೀಗಳು ತಾವಿರುವಾಗˉÉೀಈಗಿನ ಶ್ರೀಗಳನ್ನು ತಮ್ಮ ಉತ್ತರಾಧಿಕಾರಿಗಳಾಗಿ ನೇಮಕ ಮಾಡಿಕೊಂಡು 1993ರಸೆಪ್ಟಂಬರ್ 19ರಂದು ಲಿಂಗೈಕ್ಯರಾದರು.ಪ್ರಸ್ತುತ ಶ್ರೀಮಠದ ಪೀಠಾಧಿಪತಿಗಳಾಗಿ ಶ್ರೀಮಠದ ಸರ್ವಾಂಗೀಣ ಅಭಿವೃದ್ಧಿಗೆಶ್ರಮಿಸುತ್ತಿರುವ ಶ್ರೀ ಷ.ಬ್ರ. ಷಡಕ್ಷರಿ ಶಿವಾಚಾರ್ಯ ಸ್ವಾಮಿಗಳು ಭಕ್ತರಿಗೆ ಸೂಕ್ತಮಾರ್ಗದರ್ಶನ ನೀಡುತ್ತಿದ್ದಾರೆ. ಮಠದ ಜಮೀನನ್ನು ಅಭಿವೃದ್ಧಿಪಡಿಸಿ ಆದಾಯಮೂಲವನ್ನಾಗಿ ಪರಿವರ್ತಿಸಿರುವ ಶ್ರೀಗಳು ಶ್ರೀಮಠವನ್ನು ಆರ್ಥಿಕ ಸ್ವಾವಲಂಬನೆಹಾದಿಯಲ್ಲಿ ಮುನ್ನಡೆಸಿದ್ದಾರೆ.

Swamiji

Swamiji Name :
ಶ್ರೀ ಷ.ಬ್ರ. ಷಡಕ್ಷರಿ ಶಿವಾಚಾರ್ಯ ಸ್ವಾಮಿಗಳು
Date of Birth :
01-06-1980
Place :
ಡಿ.ಹಲಸಹಳ್ಳಿ, ಮಳವಳ್ಳಿ ತಾ||
Photo :

Programs

ಪ್ರತಿ ಅಮವಾಸೆಗೆ ವಿಶೇಷ ಪೂಜೆ z£sÀ Àುರ್ಮಾಸದಲ್ಲಿ ಲಿಂ|| ಶ್ರೀ ಷ.ಬ್ರ. ಬಸವಲಿಂಗ ಶಿವಾಚಾರ್ಯ ಸ್ವಾಮಿಗಳ ಪುಣ್ಯಾರಾಧನೆ ವಿಜಯದಶಮಿಯ ಆಯುಧಪೂಜೆಯ ದಿನ ಮಠದ ಮುಂಭಾಗದ ಕೆರೆಯಲ್ಲಿ ತೆಪ್ಪೋತ್ಸವ ಆಚರಣೆ ಭೀಮನ ಅಮವಾಸ್ಯೆಗೆ ಲಿಂ. ಶ್ರೀ ಜಡೆ ಸ್ವಾಮಿಗಳ ಆರಾಧನೆ

Photos

Full Address Kannada

ಶ್ರೀ ಷಡಕ್ಷರಿ ಗವಿ ಮಠ
ಡಿ.ಹಲಸಹಳ್ಳಿ, ಧನಗೂರು ಪೋ.- 571 430
ಮಳವಳ್ಳಿ ತಾ||, ಮಂಡ್ಯ ಜಿಲ್ಲೆ

Map

Near by Places

ಡಿ. ಹಲಸಹಳ್ಳಿ ಗೇಟ್ - 2 ಕಿ.ಮೀ.
ಕನಕಪುರ - 35 ಕಿ.ಮೀ.
ಮಳವಳ್ಳಿ - 15 ಕಿ.ಮೀ.
ಮಂಡ್ಯ - 50 ಕಿ.ಮೀ.

Statistic

22 Views
0 Rating
0 Favorite
0 Share
error: Content is protected !!