Shree Sarpabhushana Shivayogigala Matha

Shree Sarpabhushana Shivayogigala Matha Claimed

ಶ್ರೀ ಸರ್ಪಭೂಷಣ ಶಿವಯೋಗಿಗಳ ಮಠ

Average Reviews

Description

ಶ್ರೀ ಸರ್ಪಭೂಷಣ ಶಿವಯೋಗಿಗಳ ಮಠ – ಬೆಂಗಳೂರು

ಕರ್ತೃ – ಪೂಜ್ಯ ಶ್ರೀ ಸರ್ಪಭೂಷಣ ಶಿವಯೋಗಿಗಳು

ಬೆಂಗಳೂರು ನಗರ ರೈಲು ನಿಲ್ದಾಣದ ಮುಂಭಾಗದ ಪ್ರದೇಶವೆಲ್ಲಾ ಇಂದುವಿಶಾಲವಾದ ನಗರ ಬಸ್ ನಿಲ್ದಾಣವಾಗಿ ಪರಿವರ್ತನೆಯಾಗಿಬಿಟ್ಟಿದೆ. ತನ್ನ ಮೂಲಸ್ವರೂಪವನ್ನೇ ಸಂಪೂರ್ಣವಾಗಿ ಮರೆಮಾಚಿರುವ ಈ ಭಾಗವು ಹಿಂದೆ ಅಷ್ಟೇಸಮೃದ್ದವಾದ ಕೆರೆಯಾಗಿತ್ತು ಎಂದರೆ ಆಶ್ಚರ್ಯವಾಗುತ್ತದೆ. ನಾಡದೊರೆಯಾಗಿದ್ದ ಹಿರಿಯಕೆಂಪೇಗೌಡನು ನಿರ್ಮಿಸಿದ ಈ ಕೆರೆಯನ್ನು “ಧರ್ಮಾಂಬುದಿ ಕೆರೆ” ಅಥವಾ “ದೊಡ್ಡಕೆರೆ”ಎಂದೇ ಕರೆಯಲಾಗುತ್ತಿತ್ತು. ಇಂತಹ ದೊಡ್ಡಕೆರೆಯ ಪೂರ್ವಭಾಗದ ಏರಿಯಹಿಂಬದಿಯಲ್ಲಿ ಶ್ರೀ ವಿರಕ್ತ ಮಠವು ಸ್ಥಾಪನೆಯಾಗಿತ್ತು. ಶ್ರೀ ಸಪ್ಪಣ್ಣಸ್ವಾಮಿ ಮಠ ಎಂದುಕರೆಯಲಾಗುತ್ತಿದ್ದ ಮಠವೇ ಇಂದು ಶ್ರೀ ಸರ್ಪಭೂಷಣ ಶಿವಯೋಗಿಗಳ ಮಠವಾಗಿ ಬೆಳೆದುನಿಂತಿದೆ.ಇಂದು ಈ ಪ್ರದೇಶವೆಲ್ಲಾ ಅಜಗಜಾಂತರ ವ್ಯತ್ಯಾಸಗಳಾಗಿ ಬಿಟ್ಟಿವೆ. ಕೆಂಪೇಗೌಡವೃತ್ತದ ಬಳಿ ನಿಂತರೆ ಈ ವೃತ್ತದ ಪಶ್ಚಿಮ ಪಾಶ್ರ್ವಕ್ಕೆ ಹಬ್ಬಿ ನಿಂತಿರುವ ಬೃಹತ್ ವ್ಯಾಪಾರಿಸಮುಚ್ಚಯಗಳ ನಡುವೆಯೂ ಸರ್ಪಭೂಷಣ ಮಠ ತನ್ನ ಅಸ್ತಿತ್ತ್ವವನ್ನು ಉಳಿಸಿಕೊಂಡುಬಂದಿದೆ. ಮಠದ ಮೂಲ ಕರ್ತೃಗಳಾದ ಸರ್ಪಭೂಷಣ ಶಿವಯೋಗಿಗಳತಪೋಭೂಮಿಯೂ, ಸಾಧನಾ ಕ್ಷೇತ್ರವೂ ಆಗಿದ್ದ ಈ ಸ್ಥಳ ಇಂದಿಗೂ ಅಸಂಖ್ಯಾ ಭಕ್ತರಶ್ರದ್ದಾಭಕ್ತಿಯ ಕೇಂದ್ರವಾಗಿ ಬೆಳೆದು ಬಂದಿದೆ. ಶ್ರೀ ಸರ್ಪಭೂಷಣ ಶಿವಯೋಗಿಗಳ ಕಾಲ(1839)ದಲ್ಲಿ ಸ್ವತಃ ಅವರಿಂದಲೇ ಪ್ರಾರಂಭವಾದ ಮಠವು ಅದಕ್ಕೂ ಪೂರ್ವದಲ್ಲಿ “ಶ್ರೀಓಂಕಾರೇಶ್ವರ ಗದ್ದುಗೆ ಮಠ”, “ಕೆರೆ ನಂಜುಂಡಯ್ಯನ ಮಠ” ಎಂಬ ಹೆಸರುಗಳಿಂದಕರೆಯಲ್ಪಡುತ್ತಿತ್ತು.ಶ್ರೀ ಸರ್ಪಭೂಷಣ ಶಿವಯೋಗಿಗಳ ಕಾಲಮಾನ ಸುಮಾರು ಕ್ರಿ.ಶ. 1795 ರಿಂದ1839 ಎಂದೇ ಗುರುತಿಸಲಾಗಿದೆ. ಇವರ ವಂಶಸ್ಥರ ಮೂಲಸ್ಥಳ ಬೆಂಗಳೂರಿಗೆ ಸಮೀಪದಚಿಕ್ಕಬಾಣಾವರ ಗ್ರಾಮವಾಗಿದ್ದು ಇವರ ಮೂಲ ಹೆಸರು ಸಪ್ಪಣ್ಣ. ಇವರು ಬಾಲ್ಯದಿಂದಲೂಅಗಾದವಾದ ಧಾರ್ಮಿಕ ಶ್ರದ್ದೆಯನ್ನು ಹೊಂದಿದವರಾಗಿದ್ದು ಬೆಂಗಳೂರಿನ ಶ್ರೀ ತಿಪ್ಪಶೆಟ್ಟಿ ಮಠದ ಆಗಿನ ಗುರುಗಳಾಗಿದ್ದ ಶ್ರೀ ಗುರುಸಿದ್ದ ಮಹಾಸ್ವಾಮಿಗಳ ಕೃಪಾದೃಷ್ಟಿಗೆಒಳಗಾದವರು. ಗುರುಗಳ ನೆಚ್ಚಿನ ಶಿಷ್ಯರಾಗಿ ಕನ್ನಡ, ಸಂಸ್ಕøತ ಬಾಷೆಗಳೆರಡರಲ್ಲೂಪಾರಂಗತರಾದ ಸಪ್ಪಣ್ಣರಿಗೆ ಗುರುಗಳು ವಿರಕ್ತಾಶ್ರಮ ಧೀಕ್ಷೆಯನ್ನು ಅನುಗ್ರಹಿಸಿಸರ್ಪಭೂಷಣರೆಂದು ನೂತನ ಅಭಿದಾನ ನೀಡಿದರು.ಶ್ರೀ ಸರ್ಪಭೂಷಣ ಶಿವಯೋಗಿಗಳು ಗುರುಗಳ ಅನುಮತಿ ಪಡೆದು ತಮ್ಮ 20ನೇತಾರುಣ್ಯಾವಸ್ಥೆಯಲ್ಲಿದ್ದಾಗ ದೇಶ ಸಂಚಾರ ಕೈಗೊಂಡರು. ಸುಮಾರು 12 ವರ್ಷಗಳ ಕಾಲದೇಶದುದ್ದಗಲಕ್ಕೂ ಸಂಚರಿಸಿ ಪವಿತ್ರ ಕ್ಷೇತ್ರಗಳ ದರ್ಶನ ಪಡೆದು 1828ರ ಸುಮಾರಿಗೆಬೆಂಗಳೂರಿಗೆ ಮರಳಿದ್ದಾರೆ. ಅದೇ ವರ್ಷವೇ ಇವರ ಗುರುಗಳಾಗಿದ್ದ ಶ್ರೀ ಗುರುಸಿದ್ದಸ್ವಾಮಿಗಳು ಶಿವಾಧೀನರಾದಾಗ ಸರ್ಪಭೂಷಣರು ತಮ್ಮ ಅನುಪಸ್ಥಿತಿಯಲ್ಲಿ ಗುರುಗಳ ಸೇವೆಗೈದಿದ್ದ ಶ್ರೀ ಇಮ್ಮಡಿ ಗುರುಸಿದ್ದ ಮಹಾಸ್ವಾಮಿಗಳಿಗೆ ಶ್ರೀ ತಿಪ್ಪಶೆಟ್ಟಿ ಮಠದ ಅಧಿಕಾರವನ್ನುವಹಿಸಿ ಅಧ್ಯಯನ ನಿರತರಾದರು. ಕೆಲ ಕಾಲದ ನಂತರ ಪುನಃ ಲೋಕಸಂಚಾರ ಕೈಗೊಂಡಶ್ರೀಗಳು ಶ್ರೀಶೈಲ, ಉರುವಕೊಂಡ ಮುಂತಾದ ಸ್ಥಳಗಳಲ್ಲಿ ಸಂಚರಿಸಿ ಬೆಂಗಳೂರಿಗೆಮರಳಿದರು.ಶ್ರೀ ಸರ್ಪಭೂಷಣ ಶಿವಯೋಗಿಗಳು ಸುಮಾರು 1938ರ ವೇಳೆಗೆ ಬೆಂಗಳೂರಿಗೆಮರಳಿದಾಗ ಶ್ರೀ ಓಂಕಾರೇಶ್ವರ ಗದ್ದುಗೆ ಮಠ ಅಥವಾ ಶ್ರೀ ಕೆರೆನಂಜುಂಡಯ್ಯನ ಮಠಎಂದೇ ಕರೆಯಲಾಗುತ್ತಿದ್ದ ಮಠದಲ್ಲಿ ವಾಸ್ತವ್ಯ ಕೈಗೊಂಡಿದ್ದಾರೆ. ಅವರು ಇಲ್ಲಿ ವಾಸ್ತವ್ಯವನ್ನುಹೂಡಿದ ಆರೇಳು ತಿಂಗಳಲ್ಲೇ ಲಿಂಗೈಕ್ಯರಾಗಿದ್ದು ಇವರ ಗದ್ದುಗೆ ಮಠದ ಆವರಣದಲ್ಲಿನಿರ್ಮಿಸಲಾಗಿದೆ. ಶ್ರೀ ಸರ್ಪಭೂಷಣ ಶಿವಯೋಗಿಗಳು ಶಿವಜ್ಞಾನಿಗಳೆಂದೇ ಹೆಸರುಗಳಿಸಿದ್ದವರು. ಯಾವುದೇ ಪ್ರತಿಷ್ಠಿತ ಹಿನ್ನಲೆಯ ಮಠಾಧಿಪತ್ಯವಿಲ್ಲದೆಯೂ ಸರ್ಪಭೂಷಣರಶಿವಯೋಗ ಸಂಪನ್ನತೆ ಹಾಗೂ ಉಭಯ ಭಾಷಾ ಪ್ರಾವಿಣ್ಯತೆಗಳು ಅವರನ್ನು ವೀರಶೈವತತ್ತ್ವ ಸಾಹಿತ್ಯದ ಇತಿಹಾಸದಲ್ಲಿಯೇ ಅಗ್ರ ಪಂಕ್ತಿಯಲ್ಲಿ ಇರಿಸಿವೆ. “ಕೈವಲ್ಯ ಕಲ್ಪವಲ್ಲರಿ”, “ಜ್ಞಾನಶತಕ”, “ಭುಜಂಗ ಮಾಲಾ ಶಿವಸಂಕೀರ್ತನಂ” ಮುಂತಾದ ಶ್ರೇಷ್ಠ ಕೃತಿಗಳನ್ನು ರಚಿಸಿದಇವರ “ಕೈವಲ್ಯ ಕಲ್ಪವಲ್ಲರಿ” ತತ್ತ್ವ ಸಾಹಿತ್ಯದ ಇತಿಹಾಸದಲ್ಲಿಯೇ ವಿಶೇಷವಾದ ಸ್ಥಾನವನ್ನುಪಡೆದಿದೆ.ಶ್ರೀ ಸರ್ಪಭೂಷಣ ಶಿವಯೋಗಿಗಳು ಲಿಂಗೈಕ್ಯರಾದ ನಂತರ ಅವರ ಶಿಷ್ಯರಾಗಿದ್ದಶ್ರೀ ಫಾಲಲೋಚನ ಮಹಾಸ್ವಾಮಿಗಳು ಸರ್ಪಭೂಷಣ ಮಠದ ಅಧಿಪತಿಗಳಾದರು. ಇವರುಶ್ರೀ ಸರ್ಪಭೂಷಣರು ಸಂಚಾರದಲ್ಲಿದ್ದ ಸಂದರ್ಭದಲ್ಲಿ ಶ್ರೀಶೈಲದಲ್ಲಿ ಪರಿಚಯವಾಗಿಗುರುಗಳ ಜತೆಯಲ್ಲಿಯೇ ಆಗಮಿಸಿದ್ದವರು. ಶ್ರೀಗಳು ಧಾರ್ಮಿಕ ಹಾಗೂ ಸಾಮಾಜಿಕವಾಗಿಮಠದ ಘನತೆಯನ್ನು ಉತ್ತಮ ಪಡಿಸಿ ಹತ್ತಾರು ಅಂಕಣದ ನೂತನ ಕಟ್ಟಡವನ್ನುಕಟ್ಟಿಸಿದ್ದರು. ಇವರ ನಂತರ ಬಂದ ಶ್ರೀ ಮ.ನಿ.ಪ್ರ. ಗುರು ಸ್ವಾಮಿಗಳ ಕಾಲದಲ್ಲಿ ಶ್ರೀಮಠದಕಟ್ಟಡ ಹಾಗೂ ಕಾರ್ಯವ್ಯಾಪ್ತಿ ವಿಸ್ತರಿಸಿದ್ದು ಕಂಡು ಬರುತ್ತದೆ. ಇವರ ನಂತರದ ಶ್ರೀಮ.ನಿ.ಪ್ರ. ಚನ್ನಬಸವ ಸ್ವಾಮಿಗಳು ಶ್ರೀಮಠದಲ್ಲಿ ವೇದ ಪಾಠಶಾಲೆಯನ್ನು ಪ್ರಾರಂಭಿಸಿದ್ದಲ್ಲದೇ ಬೆಂಗಳೂರಿನ ಇತಿಹಾಸದಲ್ಲಿ ಶ್ರೀ ಸರ್ಪಭೂಷಣ ಮಠಕ್ಕೆ ವಿಶೇಷವಾದಸ್ಥಾನವನ್ನು ತಂದುಕೊಟ್ಟಿದ್ದರು.ಪರಂಪರೆಯ ಆರನೆಯ ಗುರುಗಳಾದ ಶ್ರೀ ಮ.ನಿ.ಪ್ರ. ಮಹಾದೇವಮಹಾಸ್ವಾಮಿಗಳ ಕಾಲದಲ್ಲಿ ಸಂಸ್ಕøತ ಪಾಠಶಾಲೆ ಹಾಗೂ ಉಚಿತ ವಿದ್ಯಾರ್ಥಿನಿಲಯಗಳನ್ನು ಪ್ರಾರಂಭಿಸಲಾಗಿದ್ದು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆಅನುಕೂಲವಾಯಿತು. ಕನ್ನಡ ಸಾಹಿತ್ಯ ಪರಿಷತ್‍ನೊಂದಿಗೆ ನಿಕಟ ಸಂಪರ್ಕವನ್ನುಹೊಂದಿದ್ದ ಶ್ರೀಗಳು ಮಠದಲ್ಲಿ ಬಸವಜಯಂತಿ ಹಾಗೂ ಅಕ್ಕಮಹಾದೇವಿ ಜಯಂತಿಗಳಆಚರಣೆಗಳನ್ನು ಪ್ರಾರಂಭಿಸಿದರು. ಈ ರೀತಿ ಧಾರ್ಮಿಕ, ಸಾಮಾಜಿಕ, ಸಾಂಸ್ಕøತಿಕ ಹಾಗೂಸಾಹಿತ್ಯಿಕವಾಗಿ ಮಠದ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿದ ಶ್ರೀಗಳು 1961ರ ನವೆಂಬರ್12ರಂದು ಲಿಂಗೈಕ್ಯರಾದರು.ಹಿಂದಿನ ಗುರುಗಳಾದ ಶ್ರೀ ಮ.ನಿ.ಪ್ರ. ಶಿವಕುಮಾರ ಮಹಾಸ್ವಾಮಿಗಳನ್ನುಸರ್ಪಭೂಷಣ ಮಠದ ಮುಂದಿನ ಮಠಾಧಿಪತಿಗಳನ್ನಾಗಿ ಚಿತ್ರದುರ್ಗದ ಶ್ರೀ ಜಯವಿಭವಜಗದ್ಗುರುಗಳೇ ನೇಮಕ ಮಾಡಿದ್ದು ಇವರು 1985ರ ನವೆಂಬರ್ 20ರಂದು ಕಾರುಅಪಘಾತದಲ್ಲಿ ಲಿಂಗೈಕ್ಯರಾದರು. ಇವರ ನಂತರ ಶ್ರೀಮಠದ ಮಠಾಧಿಪತಿಗಳಾಗಿಬಂದವರೇ ಈಗಿನ ಶ್ರೀಗಳಾದ ಶ್ರೀ ಮ.ನಿ.ಪ್ರ. ಮಲ್ಲಿಕಾರ್ಜುನ ದೇವರು ಮಹಾಸ್ವಾಮಿಗಳು.1985ರ ಡಿಸಂಬರ್ 21ರಂದು ಚಿತ್ರದುರ್ಗ ಬೃಹನ್ಮಠದ ಹಿಂದಿನ ಜಗದ್ಗುರು ಶ್ರೀಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳೇ ಪ್ರಸ್ತುತ ಶ್ರೀಗಳನ್ನು ನೇಮಕಮಾಡಿದ್ದು ಶ್ರೀ ಮಲ್ಲಿಕಾರ್ಜುನ ದೇವರು ಮಹಾಸ್ವಾಮಿಗಳು ಪರಂಪರೆಯ ಹಾದಿಯಲ್ಲಿಶ್ರೀಮಠವನ್ನು ಮುನ್ನಡೆಸಿಕೊಂಡು ಬರುತ್ತಿದ್ದಾರೆ.ಪ್ರಸ್ತುತ ಶ್ರೀಗಳು ಶ್ರೀಮಠದಲ್ಲಿ ನಡೆಸಿದ ಸಾಂಸ್ಕøತಿಕ ಚಟುವಟಿಕೆಗಳುನಾಡಿನಾದ್ಯಂತ ಗಮನ ಸೆಳೆದವು. ಪ್ರತಿ ಶ್ರಾವಣ ಮಾಸಗಳಲ್ಲಿ ನಾಡಿನ ಖ್ಯಾತವಿದ್ವಾಂಸರುಗಳಿಂದ ವೀರಶೈವ ಧರ್ಮ-ಸಾಹಿತ್ಯ-ಸಂಸ್ಕøತಿಯನ್ನು ಕುರಿತು ವಿಶೇಷಉಪನ್ಯಾಸ ಮಾಲಿಕೆಗಳನ್ನು ನಡೆಸಿದ್ದಾರೆ. ಪ್ರತಿ ಯುಗಾದಿಯಲ್ಲಿ ಸರ್ಪಭೂಷಣಶಿವಯೋಗಿಗಳು ಹಾಗೂ ಅಲ್ಲಮಪ್ರ¨s Àುಗಳ ಜಯಂತಿಗಳನ್ನು ವೈ¨s Àವದಿಂದಆಚರಿಸುತ್ತಿದ್ದಾರೆ. ಈ ರೀತಿಯಾಗಿ ಮಠವನ್ನು ಸಾಂಸ್ಕøತಿಕ ವೇದಿಕೆಯನ್ನಾಗಿ ಪರಿವರ್ತಿಸಿದಶ್ರೀಗಳ ಶ್ರಮ ಸ್ತುತ್ಯಾರ್ಹ. ಪ್ರಸ್ತುತ 1961ರಿಂದಲೂ ಶ್ರೀ ಸರ್ಪಭೂಷಣ ಶಿವಯೋಗಿಗಳಮಠದ ಟ್ರಸ್ಟ್ (ರಿ) ಅಸ್ತಿತ್ತ್ವದಲ್ಲಿದ್ದು ಶ್ರೀಗಳು ಟ್ರಸ್ಟ್‍ನಲ್ಲಿ ಪೋಷಕರ ಸಾನದಲ್ಲಿದ್ದಾರೆ.

Swamiji

Swamiji Name :
ಶ್ರೀ ನಿ.ಪ್ರ. ಮಲ್ಲಿಕಾರ್ಜುನ ದೇವರು ಮಹಾಸ್ವಾಮಿಗಳು
Date of Birth :
15-04-1963
Place :
ರಟ್ಟಿಹಳ್ಳಿ, ಹಿರೇಕೇರೂರು ತಾ||
Pattadikara :
21-12-1985
Photo :

Programs

ಪ್ರತಿ ಅಮವಾಸ್ಯೆಗೆ ವಿಶೇಷ ಪೂಜೆ "ಅರ್ಚನ, ಅರ್ಪಣ, ಅನುಭವ"
ಶಿವರಾತ್ರಿಗೆ ಸಾಮೂಹಿಕ ಶಿವಪೂಜೆ
ಯುಗಾದಿಯಲ್ಲಿ ಸರ್ಪಭೂಷಣ ಶಿವಯೋಗಿಗಳ ಜಯಂತಿ ಹಾಗೂ
ಅಲ್ಲಮ ಪ್ರಭುಗಳ ಜಯಂತಿ, ಸಂಗೀತ, ಸಾಹಿತ್ಯ, ಅನುಭವ ಒಳಗೊಂಡ
ವಿಶೇಷ ಕಾರ್ಯಕ್ರಮಗಳು (ಪಂಚಾಂಗ ಶ್ರವಣ)
ಶ್ರಾವಣ ಮಾಸದಲ್ಲಿ ಪ್ರವಚನ
ಬಸವ ಜಯಂತಿ ವಿಶೇಷ ಆಚರಣೆ
ಆಗಸ್ಟ್ 15 (ಸ್ವಾತಂತ್ರ್ಯೋತ್ಸವ) ಆಚರಣೆ

Institutions

ಉಚಿತ ವಿದ್ಯಾರ್ಥಿನಿಲಯಗಳು - ಶ್ರೀಮಠದಲ್ಲಿ, ಕೆ.ಜಿ.ಎಫ್.ನಲ್ಲಿ
ಉಚಿತ ಮಹಿಳಾ ವಿದ್ಯಾರ್ಥಿನಿಲಯ - ಆರ್.ಪಿ.ಸಿ. ಲೇಔಟ

Photos

Full Address Kannada

ಶ್ರೀ ಸರ್ಪಭೂಷಣ ಶಿವಯೋಗಿಗಳ ಮಠ ಟ್ರಸ್ಟ್(ರಿ.)
ಕೆಂಪೇಗೌಡ ವೃತ್ತ, ಮೆಜೆಸ್ಟಿಕ್,
ಬೆಂಗಳೂರು - 560 009

Map

Near by Places

ಕೆಂ.ಬ.ನಿ. - 500 ಮೀ.
ರೈಲ್ವೆ ಸ್ಟೇಷನ್ - 1 ಕಿ.ಮೀ.
ಆನಂದರಾವ್ ಸರ್ಕಲ್ - 1 ಕಿ.ಮೀ.

Statistic

1781 Views
0 Rating
0 Favorite
4 Shares
error: Content is protected !!