ಹಾಸನ ಜಿಲ್ಲೆ ಆಲೂರು ತಾಲ್ಲೂಕು ಕೇಂದ್ರದಿಂದ 15 ಕಿ.ಮೀ. ದೂರದಲ್ಲಿರುವಸಂಕಲಾಪುರ ಗ್ರಾಮದಲ್ಲಿ ಸ್ಥಾಪಿತಗೊಂಡಿರುವ ಶ್ರೀ ಸಂಕಲಾಪುರ ಮಠವು ಪ್ರಾಚೀನಇತಿಹಾಸವನ್ನು ಹೊಂದಿದ್ದು ಈ ಭಾಗದ ಪ್ರಮುಖ ಧಾರ್ಮಿಕ ಕೇಂದ್ರವಾಗಿಗುರುತಿಸಿಕೊಂಡಿದೆ. ಮಹಾತಪಸ್ವಿ ಪೂಜ್ಯ ಶ್ರೀ ಶಾಂತಮಲ್ಲೇಶ್ವರ ಶಿವಯೋಗಿಗಳು ಲೋಕಸಂಚಾರ ಮಾಡುತ್ತಾ ಈ ಭಾಗಕ್ಕೆ ಆಗಮಿಸಿ, ಇಲ್ಲಿನ ಪ್ರಶಾಂತ ವಾತಾವರಣವನ್ನು ಕಂಡುನೆಲೆನಿಂತು ಶ್ರೀಮಠವನ್ನು ಸ್ಥಾಪಿಸಿದರೆಂದು ಹೇಳಲಾಗುತ್ತದೆ.ಕರ್ತೃ ಗುರುಗಳು ಇಲ್ಲಿ ಮಠ ಸ್ಥಾಪಿಸುವ ಮುಂಚೆ ಈ ಪ್ರದೇಶ ಬಯಲುಪ್ರದೇಶವಾಗಿದ್ದು ಕ್ರಮೇಣ ಮಠದ ಸುತ್ತಲಲ್ಲಿ 10-15 ಮನೆಗಳು ನಿರ್ಮಾಣಗೊಂಡುಗ್ರಾಮವಾಗಿ ಗುರುತಿಸಿಕೊಳ್ಳುತ್ತಿದೆ. ಕರ್ತೃ ಗುರುಗಳು ಹಾಗೂ ಆನಂತರ ಶ್ರೀಮಠಕ್ಕೆಪೀಠಾಧಿಪತಿಗಳಾಗಿ ಬಂದ ಗುರುಗಳ ಬಗ್ಗೆ ಯಾವುದೇ ಮಾಹಿತಿಗಳು ಲಭ್ಯವಿಲ್ಲ. ಇದಕ್ಕೆಕಾರಣ ಪ್ರಸ್ತುತ ಶ್ರೀಗಳು ಅಧಿಕಾರಕ್ಕೆ ಬರುವ ಮುನ್ನ ಶ್ರೀಮಠವು ಸುಮಾರು ಎಂಬತ್ತುವರ್ಷಗಳ ಕಾಲ ಖಾಲಿ ಉಳಿದಿರುವುದು.ಸುಮಾರು ಎಂಬತ್ತು ವರ್ಷಗಳ ಕಾಲ ಖಾಲಿ ಉಳಿದಿದ್ದ ಶ್ರೀಮಠಕ್ಕೆಉತ್ತರಾಧಿಕಾರಿಗಳನ್ನು ನೇಮಕ ಮಾಡಬೇಕೆಂದು ಗ್ರಾಮಸ್ಥರು ತೀರ್ಮಾನವನ್ನು ಕೈಗೊಂಡುಈಗಿನ ಶ್ರೀಗಳಾದ ಶ್ರೀ ಮ.ನಿ.ಪ ್ರ. zs Àರ್ಮರಾಜೇಂದ ್ರ ಮಹಾಸ್ವಾಮಿಗಳನ್ನುಪಟ್ಟಾಧಿಕಾರಗೊಳಿಸಿದರು. ಕೇವಲ ತಮ್ಮ 12ನೇ ವಯಸ್ಸಿನಲ್ಲಿಯೇ 1960ರ ಮೇ 22ರಲ್ಲಿಶ್ರೀಮಠದ ಅಧಿಕಾರ ವಹಿಸಿಕೊಂಡ ಶ್ರೀಗಳು ಆನಂತರ ತಮ್ಮ ವಿದ್ಯಾಭ್ಯಾಸವನ್ನುಮುಂದುವರೆಸಿ ಸಿದ್ದಗಂಗಾ ಮಠದಲ್ಲಿ ಆಶ್ರಯವನ್ನು ಪಡೆದು ಸಂಸ್ಕøತ ವೇದಾಧ್ಯಯನದಜೊತೆಗೆ ಕಾಲೇಜು ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿದರು.ತಮ್ಮ ವಿದ್ಯಾಭ್ಯಾಸ ಪೂರ್ಣಗೊಳಿಸಿ ಮಠಕ್ಕೆ ಮರಳಿದ ಶ್ರೀಗಳು ಶಿಥಿಲಗೊಂಡಿದ್ದಮಠದ ಕಟ್ಟಡವನ್ನು ಭಕ್ತರ ಸಹಕಾರದೊಂದಿಗೆ ನವೀಕರಣಗೊಳಿಸಿದರು. ವೀರಶೈವಧರ್ಮದ ಆಚರಣೆಗಳ ಬಗೆಗೆ ಭಕ್ತರಿಗೆ ಮಾರ್ಗದರ್ಶನವನ್ನು ನೀಡುತ್ತಾ ಶ್ರೀಮಠ ಹಾಗೂಸಮಾಜಗಳೆರಡರ ಅಭಿವೃದ್ಧಿಯಲ್ಲಿ ನಿರತರಾಗಿದ್ದಾರೆ. ಶ್ರೀಗಳು ಶ್ರೀಮಠದ ಜೊತೆಯಲ್ಲಿಸಕಲೇಶಪುರ ತಾ|| ಬೆಳಗೋಡು ಗ್ರಾಮದ ಶ್ರೀ ಗುಳುಗುಂಡೆ ಕಲ್ಲುಮಠದ ಅಧ್ಯಕ್ಷರಾಗಿಯೂಕಾರ್ಯನಿರತರಾಗಿದ್ದಾರೆ.
Swamiji
Swamiji Name :
ಶ್ರೀ ಮ.ನಿ.ಪ್ರ. ಧರ್ಮರಾಜೇಂದ್ರ ಮಹಾಸ್ವಾಮಿಗಳು
Date of Birth :
26-04-1948
Place :
ಸಂಕಲಾಪುರ, ಸಕಲೇಶಪುರ ತಾ||
Pattadikara :
22-05-1960
Photo :
Programs
ಪ್ರತಿ ಸೋಮವಾರ, ಅಮವಾಸೆ, ಹುಣ್ಣಿಮೆಗಳಲ್ಲಿ ವಿಶೇಷ ಪೂಜೆ
ಶ್ರಾವಣ ಮಾಸದಲ್ಲಿ ನಿತ್ಯ ರುದ್ರಾಭಿಷೇಕ
ಕಾರ್ತಿಕ ಮಾಸದಲ್ಲಿ ಶ್ರೀ ಮಠದ ಜಾತ್ರೆ (ಶ್ರೀ ಶಾಂತಮಲ್ಲೇಶ್ವರ ಸ್ವಾಮಿ ಪಲ್ಲಕ್ಕಿ ಪಾದೋತ್ಸವ)
Institutions
ಪೂರ್ವ / ಕಿರಿಯ / ಹಿರಿಯ ಪ್ರಾಥಮಿಕ ಶಾಲೆ ಜಾನ್ಸಿ ವಿದ್ಯಾಸಂಸ್ಥೆ
Photos
Full Address Kannada
ಶ್ರೀ ಸಂಕಲಾಪುರ ಮಠ ಸಂಕಲಾಪುರ,
ಮಡಬಲು ಪೋ-573 218
ಆಲೂರು ತಾ||, ಹಾಸನ ಜಿಲ್ಲೆ