ಆಳಂದ ತಾಲ್ಲೂಕು ಕೇಂದ್ರದಿಂದ 32 ಕಿ.ಮೀ. ದೂರದಲ್ಲಿರುವ ಮುದಡಗಿಗ್ರಾಮದ ಮಧ್ಯಭಾಗದಲ್ಲಿ ಸ್ಥಾಪಿತಗೊಂಡಿರುವ ಶ್ರೀ ಸಂಗಮೇಶ್ವರ ಮಠವು ತನ್ನ ಧಾರ್ಮಿಕಆಚರಣೆಗಳ ಮೂಲಕ ಈ ಭಾಗದಲ್ಲಿ ಧಾರ್ಮಿಕ ವಾತಾವರಣವನ್ನು ನೆಲೆಗೊಳಿಸಿದೆ.ಶ್ರೀಮದ್ ರಂಭಾಪುರಿ ಪೀಠದ ಶಾಖಾಮಠವಾಗಿರುವ ಶ್ರೀ ಸಂಗಮೇಶ್ವರ ಮಠವುಪಂಚಪೀಠಗಳ ಸಂಪ್ರದಾಯವನ್ನು ಪಾಲಿಸಿಕೊಂಡು ಬಂದಿದೆ.ಶ್ರೀ ಸಂಗಮೇಶ್ವರ ಮಠವು ಸುಮಾರು 60-70 ವರ್ಷಗಳ ಹಿಂದೆಸ್ಥಾಪಿತಗೊಂಡಿತೆಂದು ಹೇಳಲಾಗಿದ್ದು ಸ್ಪಷ್ಟತೆಯಿಲ್ಲ. ಸನ್ಯಾಸಿಗಳೊಬ್ಬರು ಸಂಚಾರದಲ್ಲಿಆಗಮಿಸಿ ಗ್ರಾಮದ ಹೊರಗಿನ ದೇವಸ್ಥಾನದಲ್ಲಿ ಅನುಷ್ಠಾನದಲ್ಲಿರುವುದನ್ನು ಕಂಡಗ್ರಾಮಸ್ಥರು ಗುರುಗಳಿಗೆ ಪ್ರತ್ಯೇಕ ಕಟ್ಟಡವನ್ನು ನಿರ್ಮಿಸಿ ಗುರುಗಳ ಅನುಷ್ಠಾನಕ್ಕೆ ನೆರವುಮಾಡಿಕೊಟ್ಟರು. ಸನ್ಯಾಸಿಗಳು ಅಲ್ಲಿ ಅನುಷ್ಠಾನ ಮಾಡಿ ಧಾರ್ಮಿಕ ಆಚರಣೆಗಳನ್ನುಮುನ್ನಡೆಸಿ ಮತ್ತೆ ಸಂಚಾರ ಹೋಗಿದ್ದಾರೆ.ಸನ್ಯಾಸಿಗಳು ಸಂಚಾರಕ್ಕೆ ಹೋದ ನಂತರ ಇಲ್ಲಿಗೆ ಆಗಮಿಸಿದ ಶ್ರೀ ಷ.ಬ್ರ.ಸಂಗಮೇಶ್ವರ ಶಿವಾಚಾರ್ಯ ಸ್ವಾಮಿಗಳು ಇಲ್ಲಿ ನೆಲೆನಿಂತು ಭಕ್ತರನ್ನು ಹರಸುತ್ತಿದ್ದಾರೆ.ಶ್ರೀಮಠದ ಹಳೆಯ ಕಟ್ಟಡವನ್ನು ತೆಗೆಸಿ ನೂತನ ಕಟ್ಟಡವನ್ನು ನಿರ್ಮಿಸಿದ ಶ್ರೀಗಳು ಶ್ರೀಮಠದಧಾರ್ಮಿಕ ಆಚರಣೆಗಳನ್ನು ಚುರುಕುಗೊಳಿಸಿದರು. ವಯೋವೃದ್ಧರಾಗಿರುವ ಶ್ರೀಗಳುಇಂದಿಗೂ ಶ್ರೀಮಠದ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸುತ್ತಾ ಭಕ್ತರಲ್ಲಿ ಧಾರ್ಮಿಕಪ್ರಜ್ಞೆಯನ್ನು ಬೆಳೆಸುತ್ತಿದ್ದಾರೆ.ಶ್ರೀಮಠದಲ್ಲಿ ನಿತ್ಯ ಧಾರ್ಮಿಕ ಆಚರಣೆಗಳೊಂದಿಗೆ ನವರಾತ್ರಿಯಲ್ಲಿ ವಿಶೇಷಪೂಜಾ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. ಶ್ರೀಗಳು ಶ್ರಾವಣ ಮಾಸದಲ್ಲಿಅನುಷ್ಠಾನ ನಿರತರಾಗುತ್ತಿದ್ದು ನಿತ್ಯ ವಿಶೇಷ ಪೂಜೆ ನಡೆಸುತ್ತಾರೆ ಹಾಗೂ ಶ್ರೀಮಠದ ಜಾತ್ರಾಮಹೋತ್ಸವವನ್ನು ಬಸವಜಯಂತಿಯಲ್ಲಿ ಭಕ್ತರ ಸಹಕಾರದೊಂದಿಗೆ ನಡೆಸಿಕೊಂಡುಬರುತ್ತಿದ್ದಾರೆ.
Swamiji
Swamiji Name :
ಶ್ರೀ ಷ.ಬ್ರ. ಸಂಗಮೇಶ್ವರ ಶಿವಾಚಾರ್ಯ ಸ್ವಾಮಿಗಳು
Date of Birth :
09-08-1918
Place :
ಕುರನೂರು, ಅಕ್ಕಲಕೋಟೆ ತಾ||
Photo :
Programs
ಬಸವ ಜಯಂತಿಗೆ ಶ್ರೀ ಮಠದ ಜಾತ್ರೆ
ಶ್ರಾವಣ ಮಾಸದಲ್ಲಿ ಶ್ರೀಗಳ ಅನುಷ್ಠಾನ ಮತ್ತು ವಿಶೇಷ ಪೂಜೆ
ನವರಾತ್ರಿಗೆ ವಿಶೇಷ ಪೂಜೆ
Photos
Full Address Kannada
ಶ್ರೀ ಸಂಗಮೇಶ್ವರ ಮಠ
ಮುದಡಗಿ - 585316
ಆಳಂದ ತಾ||, ಕಲಬುರಗಿ ಜಿಲ್ಲೆ