ವಿಜಯಪುರ ಜಿಲ್ಲೆಯ ಸಿಂಧಗಿ ತಾಲ್ಲೂಕಿನ ಬನ್ನಿಹಟ್ಟಿ ಗ್ರಾಮವು ತಾಲ್ಲೂಕುಕೇಂದ್ರದಿಂದ 12 ಕಿ.ಮೀ. ದೂರದಲ್ಲಿದ್ದು ಈ ಗ್ರಾಮದಲ್ಲಿ ಶ್ರೀ ಷ.ಬ್ರ. ಸಂಗಮೇಶ್ವರಶಿವಾಚಾರ್ಯ ಸ್ವಾಮಿಗಳಿಂದ ಇತ್ತೀಚಿನ ಶತಮಾನಗಳಲ್ಲಿ ಸ್ಥಾಪಿತಗೊಂಡಿರುವ ಶ್ರೀರಂಭಾಪುರಿ ಪೀಠದ ಶಾಖಾ ಮಠವಾದ ಶ್ರೀ ಸಂಗಮೇಶ್ವರ ಮಠವು ಅಸ್ತಿತ್ವದಲ್ಲಿದ್ದು ತನ್ನಧಾರ್ಮಿಕ ಆಚರಣೆಗಳ ಮೂಲಕ ಈ ಭಾಗದಲ್ಲಿ ಪ್ರಚಲಿತದಲ್ಲಿದೆ.ಶ್ರೀ ಸಂಗಮೇಶ್ವರ ಮಠದ ಕರ್ತೃಗುರುಗಳಾದ ಶ್ರೀ ಷ.ಬ್ರ. ಸಂಗಮೇಶ್ವರಶಿವಾಚಾರ್ಯ ಸ್ವಾಮಿಗಳು ಮೈಸೂರು ಸೀಮೆ ಕಡೆಯಿಂದ ಬಂದವರೆಂದು ಹೇಳˉÁಗಿದ್ದು,ಶ್ರೀಗಳು ಸಂಚಾರ ಮಾಡುತ್ತಾ ಬನ್ನಿಹಟ್ಟಿ ಗ್ರಾಮಕ್ಕೆ ಆಗಮಿಸಿದ್ದಾರೆ. ಶ್ರೀಗಳು ಬನ್ನಿಹಟ್ಟಿಗ್ರಾಮದಲ್ಲಿ ಅನುಷ್ಠಾನ ಕೈಗೊಂಡು ಗ್ರಾಮದ ಜನರಿಗೆ ಧರ್ಮೋಪದೇಶ ಮಾಡುತ್ತಾ ಅವರಸಹಕಾರದಿಂದ ಶ್ರೀಮಠವನ್ನು ಸ್ಥಾಪಿಸಿ ಜೀವಂತ ಸಮಾಧಿಯಾಗಿದ್ದಾರೆ ಎಂದು ತಿಳಿದುಬರುತ್ತದೆ.ಕರ್ತೃಗುರುಗಳ ನಂತರ ಶ್ರೀಮಠದಲ್ಲಿ ಧಾರ್ಮಿಕ ಆಚರಣೆಗಳನ್ನುಮುನ್ನಡೆಸಿಕೊಂಡು ಬಂದವರು ಶ್ರೀ ನೀಲಕಂಠೇಶ್ವರ ಸ್ವಾಮಿಗಳು. ಶ್ರೀಗಳು ಮೊದಲುಸಂಸಾರಿಗಳಾಗಿದ್ದು ನಂತರ ಸಂಸಾರದಲ್ಲಿ ವೈರಾಗ್ಯವನ್ನು ತಾಳಿ ಜಂಗಮದೀಕ್ಷೆಯನ್ನುಪಡೆದು ಶ್ರೀ ಸಂಗಮೇಶ್ವರ ಮಠಕ್ಕೆ ಆಗಮಿಸಿ ಅನೇಕ ವರ್ಷಗಳ ಕಾಲ ಅನುಷ್ಠಾನಗೊಂಡುಲಿಂಗೈಕ್ಯರಾಗಿದ್ದಾರೆ.ಶ್ರೀ ನೀಲಕಂಠೇಶ್ವರರ ನಂತರ ಶ್ರೀಮಠದ ಪಟ್ಟಾಧಿಕಾರವನ್ನು ಸ್ವೀಕರಿಸಿದ ಈಗಿನಶ್ರೀಗಳಾದ ಶ್ರೀ.ಷ.ಬ್ರ. ಓಂಕಾರೇಶ್ವರ ಶಿವಾಚಾರ್ಯ ಸ್ವಾಮಿಗಳು ಶ್ರೀಮಠದ ಧಾರ್ಮಿಕಆಚರಣೆಗಳನ್ನು ಚುರುಕುಗೊಳಿಸಿ ಭಕ್ತರಿಗೆ ವೀರಶೈವ ಧರ್ಮದ ಆಳ ಅರಿವಿನ ಬಗ್ಗೆ ಅರಿವುಮೂಡಿಸುತ್ತಿದ್ದಾರೆ. ಶ್ರೀಗಳು ಶ್ರೀಮಠದಲ್ಲಿ ಶ್ರಾವಣ ಮಾಸದಲ್ಲಿ ನಿತ್ಯ ವಿಶೇಷ ಪೂಜೆ ಹಾಗೂಭಜನೆಗಳನ್ನು ನಡೆಸುತ್ತಿದ್ದು ಶ್ರೀಮಠದ ಜಾತ್ರೆಯನ್ನು ಯುಗಾದಿ ಪಾಡ್ಯಕ್ಕೆ ನಡೆಸುತ್ತಾಬಂದಿದ್ದಾರೆ.
Swamiji
Swamiji Name :
ಶ್ರೀ ಷ.ಬ್ರ. ಓಂಕಾರೇಶ್ವರ ಶಿವಾಚಾರ್ಯ ಸ್ವಾಮಿಗಳು
Place :
ಸ್ವಾಮಿಗಳು ಮಾಡಬಳ, ಸಿಂಧಗಿ ತಾ||
Photo :
Programs
ಯುಗಾದಿ ಪಾಡ್ಯಕ್ಕೆ ಶ್ರೀಮಠದ ಜಾತ್ರೆ.
ಶ್ರಾವಣ ಮಾಸದಲ್ಲಿ ನಿತ್ಯ ವಿಶೇಷ ಪೂಜೆ ಹಾಗೂ ಭಜನಾ ಕಾರ್ಯಕ್ರಮಗಳು.