ಕರ್ತೃ – ಪೂಜ್ಯ ಶ್ರೀ ಷ.ಬ್ರ. ಮಳೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು
ಅಫಜಲಪುರ ಪಟ್ಟಣದ ಮಧ್ಯಭಾಗದಲ್ಲಿ ಅಸ್ತಿತ್ತ್ವದಲ್ಲಿರುವ ಶ್ರೀ ಸಂಸ್ಥಾನಹಿರೇಮಠವು ಪುರಾತನ ಕಾಲದ ಮಠವಾಗಿದ್ದು ಹನ್ನೆರಡನೇ ಶತಮಾನದ ಕಾಲದಲ್ಲಿಉಜ್ಜಯಿನಿ ಪೀಠದ ಜಗದ್ಗುರುಗಳಾಗಿದ್ದ ಶ್ರೀ ಷ.ಬ್ರ. ಮಳೇಂದ್ರ ಶಿವಾಚಾರ್ಯಮಹಾಸ್ವಾಮಿಗಳಿಂದ ಸ್ಥಾಪಿತಗೊಂಡಿತೆಂದು ಹೇಳಲಾಗಿದೆ. ಶ್ರೀ ಮಠವು ಶ್ರೀಮದ್ಉಜ್ಜಯಿನಿ ಪೀಠದ ಶಾಖಾಮಠವಾಗಿದ್ದು ಪುತ್ರವರ್ಗದ ಪರಂಪರೆಯಲ್ಲಿ ಬೆಳೆದುಬಂದಿದೆ.ಲೋಕ ಕಲ್ಯಾಣಾರ್ಥ ಸಂಚಾರ ಕೈಗೊಂಡು ಈ ಭಾಗಕ್ಕೆ ಆಗಮಿಸಿದ ಶ್ರೀ ಷ.ಬ್ರ.ಮಳೇಂದ್ರ ಶಿವಾಚಾರ್ಯರು ಇಲ್ಲಿ ಕೆಲಕಾಲ ನೆಲೆನಿಂತು ಮಠವನ್ನು ಸ್ಥಾಪಿಸಿದ್ದು ಶ್ರೀಮಠದಪರಂಪರೆಯು ಇಂದಿನವರೆಗೂ ಮುಂದುವರೆದುಕೊಂಡು ಬಂದಿದೆ. ಶ್ರೀಮಠದಗುರುಪರಂಪರೆಯಲ್ಲಿ ಎಲ್ಲಾ ಗುರುಗಳೂ ಕರ್ತೃ ಗುರುಗಳ ಹೆಸರನ್ನೇ ಅಭಿದಾನ ಪಡೆದುಅಧಿಕಾರ ನಡೆಸಿರುವುದರಿಂದ ಪರಂಪರೆಯ ಬಗ್ಗೆ ಸ್ಪಷ್ಟತೆಯಿಲ್ಲ.ಹಿಂದಿನ ಗುರುಗಳ ಅನುಗ್ರಹ ಗುರುಗಳಾಗಿದ್ದ ಶ್ರೀ ಷ.ಬ್ರ. ಮಳೇಂದ್ರಶಿವಾಚಾರ್ಯ ಮಹಾಸ್ವಾಮಿಗಳು ತಮ್ಮ ಧಾರ್ಮಿಕ ಆಚರಣೆಗಳ ಮೂಲಕಪ್ರಸಿದ್ದಿಗೊಂಡಿದ್ದು ಶ್ರೀಮಠವನ್ನು ಅಭಿವೃದ್ಧಿಪಡಿಸಿ 1942ರಲ್ಲಿ ಲಿಂಗೈಕ್ಯರಾದರು. ಅವರತರುವಾಯ ಶ್ರೀಮಠದ ಅಧಿಕಾರ ವಹಿಸಿಕೊಂಡ ಹಿಂದಿನ ಗುರುಗಳಾದ ಶ್ರೀ ಷ.ಬ್ರ.ಮಳೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು ಶಿವಯೋಗಮಂದಿರದಲ್ಲಿ ಅಭ್ಯಸಿಸಿದವರು.ಇವರ ಕಾಲದಲ್ಲಿ ಶ್ರೀಮಠವು ಸರ್ವಾಂಗೀಣವಾಗಿ ಅಭಿವೃದ್ದಿಗೊಂಡಿದ್ದು ಮಠದ ಹಳೆಯಕಟ್ಟಡವನ್ನು ತೆಗೆದು ಹೊಸ ಕಟ್ಟಡವನ್ನು ನಿರ್ಮಿಸಿದರು. ಆಗಾಗ ಸಂಚಾರ ಕೈಗೊಂಡುಧರ್ಮ ಪ್ರಚಾರ ಮಾಡುತ್ತಿದ್ದ ಶ್ರೀಗಳು ಜಗದ್ಗುರು ಪಂಚಾಚಾರ್ಯರನ್ನು ಅಫಜಲಪುರಕ್ಕೆಬರಮಾಡಿಕೊಂಡು ವಿಜೃಂಭಣೆಯ ಧಾರ್ಮಿಕ ಸಭೆಯನ್ನು ನಡೆಸಿದ್ದರು.ಈಗಿನ ಗುರುಗಳಾದ ಶ್ರೀ ಷ.ಬ್ರ. ಮಳೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳುಹಿಂದಿನ ಗುರುಗಳ ಅನುಗ್ರಹದೊಂದಿಗೆ ಶ್ರೀ ಮಠದ ಅಧಿಕಾರವನ್ನು ವಹಿಸಿಕೊಂಡಿದ್ದುಶ್ರೀಮಠವನ್ನು ಅಭಿವೃದ್ದಿಪಡಿಸುತ್ತಿದ್ದಾರೆ. ಶ್ರೀಮಠದಲ್ಲಿ ನಿತ್ಯ ಧಾರ್ಮಿಕ ಆಚರಣೆಗಳೊಂದಿಗೆಪ್ರತಿ ಅಮವಾಸ್ಯೆ, ಹುಣ್ಣಿಮೆಗಳಲ್ಲಿ ವಿಶೇಷ ಪೂಜೆ ಹಾಗೂ ಶ್ರಾವಣ ಮಾಸದಲ್ಲಿ ಒಂದುತಿಂಗಳ ಪರ್ಯಂತ ಪುರಾಣ ಪ್ರವಚನ ಮತ್ತು ಅಡ್ಡ ಪಲ್ಲಕ್ಕಿ ಉತ್ಸವವನ್ನು ನಡೆಸಿಕೊಂಡುಬರುತ್ತಿದ್ದಾರೆ.
Swamiji
Swamiji Name :
ಶ್ರೀ ಷ.ಬ್ರ. ಮಳೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು
Date of Birth :
28-07-1980
Place :
ವಳಸಂಗ, ದ.ಸೊಲ್ಲಾಪುರ ತಾ||
Photo :
Programs
ಪ್ರತಿ ಅಮವಾಸÉ, ಹುಣ್ಣಿಮೆಯಂದು ವಿಶೇಷ ಪೂಜೆ
ಶ್ರಾವಣ ಮಾಸದಲ್ಲಿ ಒಂದು ತಿಂಗಳು ಪುರಾಣ ಪ್ರವಚನ ಮತ್ತು ಅಡ್ಡ ಪಲ್ಲಕಿ ಉತ್ಸವ