Shree Samsthana Matha, Shantapur

Shree Samsthana Matha, Shantapur Claimed

ಶ್ರೀ ಸಂಸ್ಥಾನ ಮಠ, ಶಾಂತಪೂರ

Average Reviews

Description

ಶ್ರೀ ಸಂಸ್ಥಾನ ಮಠ, ಶಾಂತಪೂರ

ಕರ್ತೃ – ಪೂಜ್ಯ ಶ್ರೀ ಇಂಗಳೇಶ್ವರ ಸ್ವಾಮಿಗಳು

ಸೊರಬ ತಾಲ್ಲೂಕಿನ ಶಾಂತಪೂರ ಗ್ರಾಮದ ಹೊರವಲಯದಲ್ಲಿ ಪ್ರಕೃತಿಸೌಂದರ್ಯದಿಂದ ಕೂಡಿದ ಕಾಡಿನ ಮಧ್ಯದಲ್ಲಿ ಪ್ರಾಚೀನ ಇತಿಹಾಸವಿರುವ ಶ್ರೀರಂಭಾಪುರೀ ಶಾಖಾಮಠವಾದ ಶ್ರೀ ಶಾಂತಪೂರ ಸಂಸ್ಥಾನ ಮಠವು ಅಸ್ತಿತ್ವದಲ್ಲಿದೆ.ಪ್ರಾಚೀನ ಇತಿಹಾಸವಿರುವ ಶ್ರೀ ಮಠದ ಸ್ಥಾಪನೆ ಬಗ್ಗೆ ನಿಖರವಾದ ಮಾಹಿತಿಗಳುಲಭ್ಯವಿಲ್ಲದಿದ್ದರೂ ಶ್ರೀ ಮಠದ ಶ್ರೀ ಇಂಗಳೇಶ್ವರ ಸ್ವಾಮಿಗಳಿಂದ ಸ್ಥಾಪಿತಗೊಂಡಿದೆ ಎಂದುಹೇಳಬಹುದು. ಹಾಗೆಯೇ ಶ್ರೀ ಮಠದ ಬಳಿ ದೊರೆತಿರುವ ಶಾಸನಗಳ ಪ್ರಕಾರ ಶಾಂತಪೂರಹಾಗೂ ಶ್ರೀ ಮಠವು ಪುರಾತನ ಇತಿಹಾಸ ಹೊಂದಿದ್ದು, ಆ ಕಾಲದ ಎˉÁ್ಲ ಮಹಾರಾಜರುಹಾಗೂ ಆಗ ಉಚ್ಛ್ರಾಯ ಸ್ಥಿತಿಯಲ್ಲಿದ್ದ ಜೈನಧರ್ಮದ ಜೈನಮುನಿಗಳು ಕಾಲಕಾಲಕ್ಕೆಸಹಾಯ, ಸಹಕಾರ ನೀಡುತ್ತಾ ಬಂದಿರುವುದು ತಿಳಿದು ಬರುತ್ತದೆ.ಶ್ರೀಮಠವು ಪ್ರಾಚೀನ ಇತಿಹಾಸವನ್ನು ಹೊಂದಿದ್ದರೂ ಮಠದ ಪರಂಪರೆಯಬಗ್ಗೆ ಮಾಹಿತಿಗಳ ಕೊರತೆಯಿಂದ ಹಿಂದಿನ ಗುರುಗಳ ಬಗ್ಗೆ ತಿಳಿದು ಬರುವುದಿಲ್ಲ. ಪ್ರಸ್ತುತಶ್ರೀ ಷ.ಬ್ರ. ಶಿವಾನಂದ ಸ್ವಾಮಿಗಳು ರಂಭಾಪುರೀ ಜಗದ್ಗುರುಗಳ ಆಶೀರ್ವಾದದೊಂದಿಗೆ2002 ರ ಫೆಬ್ರವರಿ 18 ರಂದು ಪಟ್ಟಾಧಿಕಾರದ ಅನುಗ್ರಹ ಪಡೆದಿದ್ದಾರೆ.ಶ್ರೀಗಳು ಅಧಿಕಾರಕ್ಕೆ ಬಂದ ನಂತರ ಮಠದ ಧಾರ್ಮಿಕ ಚಟುವಟಿಕೆಗಳುಚುರುಕುಗೊಂಡವು, ಜೊತೆಯಲ್ಲಿ ಪರಂಪರಾನುಗತವಾಗಿ ನಡೆದು ಬಂದಿರುವ ಆಚರಣೆಗಳನ್ನು ಮುನ್ನಡೆಸುತ್ತಿದ್ದಾರೆ. ಶ್ರೀಮಠದಲ್ಲಿ ಪಾಲ್ಗುಣ ಮಾಸದಲ್ಲಿ ಜಾತ್ರೆ ನಡೆಯುತ್ತದೆ ಆಗಭಕ್ತರು ಬಹಳ ಸಂಖ್ಯೆಯಲ್ಲಿ ಪಾˉÉ್ಗೂಂಡು ಶ್ರೀಗಳ ದರ್ಶನ ಪಡೆಯುತ್ತಾರೆ.ಶ್ರೀಗಳು ಮಠವನ್ನು ಧಾರ್ಮಿಕವಾಗಿ ಹಾಗೂ ಸಾಮಾಜಿಕವಾಗಿ ಅಭಿವೃದ್ಧಿಪಡಿಸುವತ್ತ ತಮ್ಮ ಗಮನವನ್ನು ಕೇಂದ್ರೀಕರಿಸಿದ್ದು ಕೇವಲ ದಾರ್ಮಿಕವಾಗಿ ವಿಚಾರಮಾಡದೆ ಶ್ರೀಮಠದ ಪ್ರಾಚೀನತೆ ಹಾಗೂ ಈ ಭಾಗದ ಗುಡಿಗಳು, ಶಾಸನಗಳಪ್ರಾಚೀನತೆಯನ್ನು ಸಂಶೋಧನೆ ಮಾಡಿಸಿ ಮಾಹಿತಿ ಕˉÉಹಾಕುತ್ತಿದ್ದಾರೆ. ಈ ಮೂಲಕಮುಂದಿನ ಪೀಳಿಗೆಗೆ ನಶಿಸಿಹೋಗುತ್ತಿರುವ ಶಿˉÁಶಾಸನಗಳ ಮಹತ್ವ ಹಾಗೂ ಪ್ರಾಚೀನಧಾರ್ಮಿಕ ಆಚರಣೆಗಳ ಮಹತ್ವ ಸಾರುತ್ತಿದ್ದಾರೆ.

Swamiji

Swamiji Name :
ಶ್ರೀ ಷ.ಬ್ರ.ಶ್ರೀ ಶಿವಾನಂದ ಶಿವಾಚಾರ್ಯ ಮಹಾಸ್ವಾಮಿಗಳು
Date of Birth :
13-2-1974
Place :
ಹರ್ಲಾಪುರ ಗದಗ ತಾ||
Pattadikara :
18-2-2002
Photo :

Programs

ಪ್ರತಿ ಅಮವಾಸ್ಯೆಗೆ ವಿಶೇಷ ಪೂಜೆ ಪಾಲ್ಗುಣ ಮಾಸದಲ್ಲಿ ಶ್ರೀ ಹಿರಿಯ ಗುರುಗಳ ಪುಣ್ಯಾರಾಧನೆ ಮತ್ತು ಜಾತ್ರೆ. ಕಾರ್ತೀಕ ಮಾಸದಲ್ಲಿ ದೀಪೋತ್ಸವ.

Photos

Full Address Kannada

ಶ್ರೀ ಸಂಸ್ಥಾನ ಮಠ, ಶಾಂತಪೂರ
ದೊಡ್ಡ ತಲೆಗದ್ದೆ ಪೋಸ್ಟ್ - 577 419
ಸೊರಬ ತಾ||, ಶಿವಮೊಗ್ಗ ಜಿ||

Map

Near by Places

ಆನವಟ್ಟಿ - 20 ಕಿ.ಮೀ. ಬನವಾಸಿ - 28 ಕಿ.ಮೀ. ಹಾನಗಲ್- 30 ಕಿ.ಮೀ. ಸೊರಬ - 40 ಕಿ.ಮೀ.

Statistic

126 Views
0 Rating
0 Favorite
0 Share
error: Content is protected !!