ಕಲಬುರಗಿ ತಾಲ್ಲೂಕಿನ ಸ್ವಂತ ಗ್ರಾಮದಲ್ಲಿ ಶ್ರೀ ಸಂಸ್ಥಾನ ಹಿರೇಮಠವುಸ್ಥಾಪಿತಗೊಂಡಿದ್ದು ತನ್ನ ಧಾರ್ಮಿಕ ಆಚರಣೆಗಳ ಮೂಲಕ ಈ ಭಾಗದ ಜನರಲ್ಲಿ ಧಾರ್ಮಿಕಸಂಸ್ಕಾರವನ್ನು ಮೂಡಿಸುತ್ತಿದೆ. ಶ್ರೀಮದ್ ರಂಭಾಪುರಿ ಪೀಠದ ಶಾಖಾಮಠವಾಗಿಪುತ್ರವರ್ಗದ ಪರಂಪರೆಯಲ್ಲಿ ಬೆಳೆದುಬಂದಿರುವ ಶ್ರೀ ಸಂಸ್ಥಾನ ಹಿರೇಮಠವುಶ್ರೀ.ಷ.ಬ್ರ.ಚನ್ನಮಲ್ಲ ಶಿವಯೋಗಿ ಶಿವಾಚಾರ್ಯ ಮಹಾಸ್ವಾಮಿಗಳಿಂದ ಸ್ಥಾಪಿತಗೊಂಡುವೀರಶೈವ ಧರ್ಮದ ಪ್ರಚಾರ ಕಾರ್ಯವನ್ನು ಕೈಗೊಂಡಿದೆ.ಶ್ರೀ ಚನ್ನಮಲ್ಲ ಶಿವಯೋಗಿಗಳು ಮಹಾತಪಸ್ವಿಗಳಾಗಿದ್ದು ಸಂಚಾರದಲ್ಲಿ ಸ್ವಂತಗ್ರಾಮಕ್ಕೆ ಆಗಮಿಸಿ ಊರ ಹೊರಗಿನ ಪ್ರಶಾಂತ ಸ್ಥಳದಲ್ಲಿ ಅನುಷ್ಠಾನ ನಿರತರಾಗುತ್ತಾರೆ.ಗುರುಗಳು ಅನುಷ್ಠಾನದಲ್ಲಿರುವ ಸುದ್ದಿ ತಿಳಿದ ಗ್ರಾಮದ ಜನರು ನಿತ್ಯ ಗುರುಗಳ ದರ್ಶನಕ್ಕೆಬರುತ್ತಾ ಅವರ ಕೃಪಾಶೀರ್ವಾದಕ್ಕೆ ಪಾತ್ರರಾಗುತ್ತಾರೆ. ಭಕ್ತರೇ ಮುಂದಾಗಿ ಗುರುಗಳಅಪ್ಪಣೆಯಂತೆ ಮಠದ ಕಟ್ಟಡವನ್ನು ನಿರ್ಮಿಸಿದ್ದು ಗುರುಗಳು ಅಲ್ಲಿಯೇ ಧಾರ್ಮಿಕಆಚರಣೆಗಳನ್ನು ಮುನ್ನಡೆಸುತ್ತಾ ಲಿಂಗೈಕ್ಯರಾಗಿದ್ದಾರೆ.ಕರ್ತೃಗುರುಗಳ ನಂತರದ ಪರಂಪರೆಯ ಬಗ್ಗೆ ಸ್ಪಷ್ಟತೆಯಿಲ್ಲ. ಹಿಂದಿನಗುರುಗಳಾದ ಶ್ರೀ.ಷ.ಬ್ರ. ಶಾಂತವೀರ ಶಿವಾಚಾರ್ಯ ಮಹಾಸ್ವಾಮಿಗಳು ಅಧಿಕಾರಕ್ಕೆ ಬಂದಮೇಲೆ ಮಠವು ಆರ್ಥಿಕ ಸದೃಢತೆಯನ್ನು ಕಂಡಿತು. ಗುರುಗಳು ಮಠದ ಸರ್ವಾಂಗೀಣಅಭಿವೃದ್ಧಿಗೆ ಶ್ರಮಿಸಿದ್ದು ವೀರಶೈವ ಧರ್ಮವನ್ನು ಪ್ರಚುರಪಡಿಸಿ ಮಠ ಹಾಗೂಸಮಾಜವನ್ನು ಬೆಳೆಸಿದರು. ಶ್ರೀಗಳು ತಮ್ಮ ಆಡಳಿತದ ದೀರ್ಘಾವಧಿಯಲ್ಲಿ ಭಕ್ತರನ್ನು ಹರಸಿ2012ರ ಡಿಸೆಂಬರ್ 12 ರಲ್ಲಿ ತಮ್ಮ 90ನೇ ವಯಸ್ಸಿನಲ್ಲಿ ಲಿಂಗೈಕ್ಯರಾಗಿದ್ದಾರೆ.ಪ್ರಸ್ತುತ ಶ್ರೀಗಳಾದ ಶ್ರೀ.ಷ.ಬ್ರ.ಶಿವಕುಮಾರ ಶಿವಾಚಾರ್ಯ ಸ್ವಾಮಿಗಳು ತಮ್ಮ ಕಿರಿವಯಸ್ಸಿನಲ್ಲಿಯೇ 1992 ರಲ್ಲಿ ಹಿಂದಿನ ಗುರುಗಳಿರುವಾಗಲೇ ಶ್ರೀಮಠದ ಅಧಿಕಾರಸ್ವೀಕರಿಸಿದ್ದು ಶ್ರೀಮಠವನ್ನು ಸಮರ್ಥವಾಗಿ ಮುನ್ನಡೆಸಿಕೊಂಡು ಬರುತ್ತಿದ್ದಾರೆ. ಶ್ರೀಗಳಿಗೆಪಟ್ಟಾಧಿಕಾರದ ಅನುಗ್ರಹ ನೀಡಿದ ಗುರುಗಳು ಹಾರಕೂಡದ ಶ್ರೀ ಚನ್ನವೀರ ಶಿವಾಚಾರ್ಯಮಹಾಸ್ವಾಮಿಗಳು. ಶ್ರೀಗಳು ಶ್ರೀಮಠದ ಜೊತೆಗೆ ಶಾಖಾಮಠಗಳ ಅಭಿವೃದ್ಧಿಯನ್ನುಕೈಗೊಂಡಿದ್ದು ಎಲ್ಲಾ ಮಠಗಳಲ್ಲಿ ಧಾರ್ಮಿಕ ಆಚರಣೆಗಳನ್ನು ಚುರುಕುಗೊಳಿಸಿದ್ದಾರೆ.
Swamiji
Swamiji Name :
ಶ್ರೀ ಷ.ಬ್ರ. ಶಿವಕುಮಾರ ಶಿವಾಚಾರ್ಯ ಸ್ವಾಮಿಗಳು
Date of Birth :
30-06-1985
Place :
ಸ್ವಂತ, ಕಲಬುರಗಿ ತಾ||
Pattadikara :
1992
Programs
ದಸರಾದಲ್ಲಿ ದೇವಿ ಪುರಾಣ ಪಾರಾಯಣ, ಪ್ರವಚನ
ಛಟ್ಟಿ ಅಮವಾಸ್ಯೆ ಪ್ರತಿಪದ - ಹಿಂದಿನ ಶ್ರೀಗಳ ಸ್ಮರಣೋತ್ಸವ
ಶಿವರಾತ್ರಿಗೆ - ರಥೋತ್ಸವ, ಜಾತ್ರಾಮಹೋತ್ಸವ
ನರನಾಳ ಶಾಖಾಮಠದಲ್ಲಿ ಶ್ರಾವಣ ಮಾಸದಲ್ಲಿ ಪುರಾಣ ಪ್ರವಚನ
ಹಾಗೂ ದಸರಾದಲ್ಲಿ ಪುರಾಣ