Shree Samsthana Hirematha (Karibasaveshwara Matha)

Shree Samsthana Hirematha (Karibasaveshwara Matha) Claimed

ಶ್ರೀ ಸಂಸ್ಥಾನ ಹಿರೇಮಠ (ಕರಿಬಸವೇಶ್ವರ ಮಠ)

Average Reviews

Description

ಶ್ರೀ ಸಂಸ್ಥಾನ ಹಿರೇಮಠ (ಕರಿಬಸವೇಶ್ವರ ಮಠ)

ಕರ್ತೃ ಶ್ರೀ ಷ.ಬ್ರ. ಸೋಮಶೇಖರ ಶಿವಾಚಾರ್ಯ ಸ್ವಾಮಿಗಳು

ಹುಮನಾಬಾದ್ ತಾಲ್ಲೂಕು ಕೇಂದ್ರದಿಂದ ಕೇವಲ 8 ಕಿ.ಮೀ. ಅಂತರದಲ್ಲಿರುವಹುಡುಗಿ ಗ್ರಾಮದಲ್ಲಿ ಅಸ್ತಿತ್ವದಲ್ಲಿರುವ ಪುರಾತನ ಕಾಲದ ಶ್ರೀ ಸಂಸ್ಥಾನ ಹಿರೇಮಠವುಶ್ರೀಮದ್ ರಂಭಾಪುರಿ ಪೀಠದ ಶಾಖಾಮಠವಾಗಿ ಶಿಷ್ಯವರ್ಗದ ಪರಂಪರೆಯಲ್ಲಿ ಬೆಳೆದುಬಂದಿದೆ. ಮಲೆನಾಡ ದೇಶದಿಂದ ಸಂಚಾರ ಬಂದ ಶ್ರೀ ಷ.ಬ್ರ. ಸೋಮಶೇಖರಶಿವಾಚಾರ್ಯ ಸ್ವಾಮಿಗಳು ಹುಡುಗಿ ಗ್ರಾಮಕ್ಕೆ ಆಗಮಿಸಿ ಆಗಲೇ ಅಸ್ತಿತ್ವದಲ್ಲಿದ್ದ ಶ್ರೀಮಠದಲ್ಲಿಅನುಷ್ಠಾನಗೊಂಡು ಭಕ್ತರನ್ನುದ್ಧರಿಸಿದರು ಎಂದು ಹೇಳಲಾಗುತ್ತದೆ.ಶ್ರೀ ಸೋಮಶೇಖರ ಶಿವಾಚಾರ್ಯರ ಪೂರ್ವದಲ್ಲೇ ಶ್ರೀ ಘನಲಿಂಗ ರುದ್ರಮುನಿಶಿವಾಚಾರ್ಯರು ಶ್ರೀಮಠವನ್ನು ಸ್ಥಾಪಿಸಿದ್ದಾರೆಂದು ತಿಳಿದುಬರುತ್ತದೆ. ಹೀಗೆ ಶ್ರೀ ಸೋಮಶೇಖರ ಶಿವಾಚಾರ್ಯರ ಕತೃತ್ವಶಕ್ತಿಯಿಂದ ಬೆಳೆದ ಶ್ರೀಮಠದ ಪರಂಪರೆಯಲ್ಲಿ 10 ಜನಶ್ರೀಗಳು ಅಧಿಕಾರ ನಡೆಸಿದ್ದಾರೆ. ಮಧ್ಯದಲ್ಲಿ ಬರುವ ಶ್ರೀ ಷ.ಬ್ರ. ಕರಿಬಸವ ಶಿವಾಚಾರ್ಯಸ್ವಾಮಿಗಳಿಂದಾಗಿ ಶ್ರೀಮಠವು ಹೆಚ್ಚಿನ ಪ್ರಸಿದ್ಧಿಗೆ ಬಂದಿದ್ದು ಅವರ ಹೆಸರಿನಿಂದಲೇ ಶ್ರೀಮಠವನ್ನು ಶ್ರೀ ಕರಿಬಸವೇಸ್ವರ ಮಠ ಎಂತಲೂ ಕರೆಯಲಾಗುತ್ತದೆ. ಇವರು ಅನುಷ್ಠಾನ ಮೂರ್ತಿಗಳಾಗಿ ಉಟ್ಟಬಟ್ಟೆಯನ್ನೇ ಕಿತ್ತೊಗೆದು ದಿಗಂಬರರಾಗಿ ಗೊಟಂಗೊಟ್ಟಿಗೆ ಹೋಗಿ ಅಲ್ಲಿಧೀರ್ಘ ತಪಸ್ಸನ್ನು ಆಚರಿಸಿ ನಂತರ ಹುಡುಗಿ ಗ್ರಾಮಕ್ಕೆ ಬಂದರೆಂದು ತಿಳಿದುಬರುತ್ತದೆ.ಹಿಂದಿನ ಶ್ರೀಗಳಾದ ಶ್ರೀ ಷ.ಬ್ರ. ಸೋಮಪ್ಪ ಪಟ್ಟದ ದೇವರುಗಳು ಶ್ರೀಮಠವನ್ನುಮುನ್ನಡೆಸಿ 1963ರಲ್ಲಿ ಲಿಂಗೈಕ್ಯರಾದರು. ಇವರಿರುವಾಗಲೇ ಉತ್ತರಾಧಿಕಾರಿಗಳಾಗಿನೇಮಕಗೊಂಡಿದ್ದ ಈಗಿನ ಶ್ರೀಗಳು 1904ರಲ್ಲಿ ಶ್ರೀ ಷ.ಬ್ರ. ವಿರುಪಾಕ್ಷ ಶಿವಾಚಾರ್ಯಸ್ವಾಮಿಗಳೆಂಬ ಅಭಿದಾನದೊಂದಿಗೆ ಶ್ರೀಮಠಕ್ಕೆ ಪಟ್ಟಾಧಿಕಾರಗೊಂಡರು. ಶ್ರೀಗಳುಯಾದಗಿರಿಯ ಶಂಕರ ಕಾಲೇಜ್ ಹಾಗೂ ಮಹಾಗಾಂವ್ನ ರುದ್ರಾರಾಧ್ಯ ಶಾಸ್ತ್ರಿಗಳಲ್ಲಿಸಂಸ್ಕøತ ಅಭ್ಯಾಸವನ್ನು ಮಾಡಿದ್ದು ತಮ್ಮ ಆಚರಣೆಗಳ ಮೂಲಕ ಭಕ್ತರನ್ನು ಸನ್ಮಾರ್ಗದಲ್ಲಿಕೊಂಡೊಯ್ಯುತ್ತಿದ್ದಾರೆ. ಶ್ರೀಮಠದಲ್ಲಿ ಒಟ್ಟು 9 ಗದ್ದುಗೆಗಳನ್ನು ಕಾಣಬಹುದಾಗಿದ್ದು ನಿತ್ಯಪೂಜೆಗೆ ಒಳಪಟ್ಟಿವೆ ಹಾಗೂ ಶ್ರೀಗಳು ಶ್ರೀಮಠವನ್ನು ಸರ್ವಾಂಗೀಣವಾಗಿ ಅಭಿವೃದ್ಧಿಗೊಳಿಸಿರುವುದು ಕಂಡುಬರುತ್ತದೆ.

Swamiji

Swamiji Name :
ಶ್ರೀ ಷ.ಬ್ರ. ವಿರೂಪಾಕ್ಷ ಶಿವಾಚಾರ್ಯ ಸ್ವಾಮಿಗಳು
Date of Birth :
2-2-1931
Place :
ಕಟಕ ಚಿಂಚೋಳಿ, ಭಾಲ್ಕಿ ತಾ||
Pattadikara :
1964
Photo :

Programs

ಶಿವರಾತ್ರಿಗೆ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು.
ವೈಶಾಖ ಶುದ್ಧ ಪಂಚಮಿಗೆ ಶ್ರೀಮಠದ ಜಾತ್ರೆ.
ಶ್ರಾವಣ ಮಾಸದಲ್ಲಿ ನಿತ್ಯ ವಿಶೇಷ ಪೂಜೆ.

Institutions

ಕಿರಿಯ / ಹಿರಿಯ ಪ್ರಾಥಮಿಕ / ಪ್ರೌಢ ಶಾಲೆ

Photos

Full Address Kannada

ಶ್ರೀ ಸಂಸ್ಥಾನ ಹಿರೇಮಠ (ಕರಿಬಸವೇಶ್ವರ ಮಠ)
ಹುಡುಗಿ - 585 329
ಹುಮನಾಬಾದ್ ತಾ||. ಬೀದರ್ ಜಿ||

Map

Near by Places

ಹುಮನಾಬಾದ್ - 8 ಕಿ.ಮೀ.
ಬಸವಕಲ್ಯಾಣ - 40 ಕಿ.ಮೀ.
ಬೀದರ್ - 50 ಕಿ.ಮೀ.

Statistic

184 Views
0 Rating
0 Favorite
0 Share
error: Content is protected !!