Shree Samsthana Hirematha

Shree Samsthana Hirematha Claimed

ಶ್ರೀ ಸಂಸ್ಥಾನ ಹಿರೇಮಠ

Average Reviews

Description

ಶ್ರೀ ಸಂಸ್ಥಾನ ಹಿರೇಮಠ, ಕಡೇಚೂರು

ಕರ್ತೃ – ಶ್ರೀ ಷ.ಬ್ರ. ಪರ್ವತಲಿಂಗ ಶಿವಾಚಾರ್ಯ ಸ್ವಾಮಿಗಳು

ಯಾದಗಿರಿ ಜಿಲ್ಲೆಯ ಕಡೇಚೂರು ಗ್ರಾಮವು ತಾಲ್ಲೂಕು ಕೇಂದ್ರದಿಂದ 50 ಕಿ.ಮೀ.ದೂರದಲ್ಲಿದ್ದು ಈ ಗ್ರಾಮದ ಪ್ರಾರಂಭದಲ್ಲಿ ಶ್ರೀ ಸೋಮೇಶ್ವರ ದೇವಾಲಯಕ್ಕೆಹೊಂದಿಕೊಂಡಂತೆ ಸ್ಥಾಪಿತಗೊಂಡಿರುವ ಪುರಾತನ ಕಾಲದ ಶ್ರೀ ಉಜ್ಜಯಿನಿ ಶಾಖಾಸಂಸ್ಥಾನ ಹಿರೇಮಠವು ಅಸ್ತಿತ್ವದಲ್ಲಿದ್ದು ತನ್ನ ಧಾರ್ಮಿಕ ಆಚರಣೆಗಳ ಮೂಲಕ ಈಭಾಗದಲ್ಲಿ ಪ್ರಚಲಿತಕ್ಕೆ ಬಂದಿದೆ.ಶ್ರೀಮಠವು ಪುರಾತನ ಕಾಲದ್ದೆಂದು ಹೇಳಲಾದರೂ ಕರ್ತೃಗುರುಗಳು ಯಾರು,ಶ್ರೀಮಠದ ಸ್ಥಾಪನೆಯ ನಿರ್ದಿಷ್ಠ ಕಾಲಮಾನ ಹಾಗೂ ಆ ನಂತರದ ಗುರುಪರಂಪರೆಯಬಗ್ಗೆ ಯಾವುದೇ ಮಾಹಿತಿಗಳನ್ನು ದಾಖಲಿಸಿಲ್ಲ. ಆದರೆ ಶ್ರೀಮಠದ ಕಟ್ಟಡ ಹಾಗೂಆವರಣದಲ್ಲಿರುವ ಅವಶೇಷಗಳು ಗದ್ದುಗೆಗಳನ್ನು ನೋಡಿದರೆ ಶ್ರೀಮಠವು ಪರಾತನಕಾಲದ್ದು ಮತ್ತು ಹಿಂದೆ ಬಹು ವೈಭವಯುತವಾಗಿದ್ದಿರಬಹುದೆಂದು ಅಂದಾಜಿಸಬಹುದು.ಶ್ರೀಮಠದಲ್ಲಿ ಈ ಹಿಂದೆ ಅಧಿಕಾರ ನಡೆಸಿರುವ ಶ್ರೀ ಪರ್ವತಲಿಂಗ ಶಿವಾಚಾರ್ಯಸ್ವಾಮಿಗಳನ್ನೇ ಕರ್ತೃಗುರುಗಳೆಂದು ಹೆಸರಿಸಲಾಗಿದ್ದು 1998ರಲ್ಲಿ ಅವರು ಲಿಂಗೈಕ್ಯರಾದನಂತರ ಶ್ರೀಮಠವು ಕೆಲಕಾಲ ಖಾಲಿ ಉಳಿದಿದೆ. ಆನಂತರ ಶ್ರೀಮಠಕ್ಕೆ ಶ್ರೀ ಗುರುಮೂರ್ತಿದೇವರನ್ನು ಉತ್ತರಾಧಿಕಾರಿಯನ್ನಾಗಿ ನೇಮಕ ಮಾಡಲಾಯಿತು. ಶ್ರೀಗಳು ಜ್ಯೋತಿಷ್ಯವೇದಾಗಮಗಳನ್ನು ಕಲಿತು, ಪುರಾಣ ಪ್ರವಚನ ಪ್ರವೀಣರಾಗಿ 2001ರ ಜೂನ್‍ನಲ್ಲಿಶ್ರೀಮಠದ ಅಧಿಕಾರ ವಹಿಸಿಕೊಂಡಿದ್ದಾರೆ.ಶ್ರೀಗಳು ಶ್ರೀಮಠದ ಅಧಿಕಾರ ವಹಿಸಿಕೊಂಡು ಮಠದ ಧಾರ್ಮಿಕ ಆಚರಣೆಗಳನ್ನು ಚುರುಕುಗೊಳಿಸಿದ್ದು ಭಕ್ತರ ಸಹಕಾರದೊಂದಿಗೆ ಶ್ರೀಮಠವನ್ನು ಸರ್ವಾಂಗೀಣವಾಗಿಅಭಿವೃದ್ಧಿಪಡಿಸಲು ಶ್ರಮಿಸುತ್ತಿದ್ದಾರೆ. ಶ್ರೀಗಳು ಪ್ರವಚನ ಪ್ರವೀಣರಾಗಿದ್ದು ನಾಡಿನ ನಾನಾಭಾಗಗಳಲ್ಲಿ ವೀರಶೈವ ಧರ್ಮಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದಾರೆ. ಶ್ರೀಮಠದಲ್ಲಿಪುರಾತನ ಕಾಲದ ಮುದ್ರೆಬಿಲ್ಲೆಗಳು, ಬೆಳ್ಳಿ, ಬೆತ್ತ, ಚಾಮರಗಳು ದೊರೆತಿವೆ. ಹಾಗೂಹಳೆಯ ಕಟ್ಟಡವನ್ನು ತೆಗೆದು ನೂತನ ಕಟ್ಟಡವನ್ನು ನಿರ್ಮಿಸಿದ್ದರೂ ಹಳೆಯ ಕಟ್ಟಡದಲ್ಲಿದ್ದಗದ್ದುಗೆಗಳನ್ನು ಉಳಿಸಿಕೊಳ್ಳಲಾಗಿದೆ. ಹಾಗೂ ನವರಾತ್ರಿಯಲ್ಲಿ ದೇವಿ ಪುರಾಣ ಮತ್ತು ಶ್ರೀಹಿರಿಯ ಗುರುಗಳ ಪುಣ್ಯಾರಾಧನೆ ಮಹೋತ್ಸವವನ್ನು ಹಮ್ಮಿಕೊಳ್ಳಲಾಗುತ್ತಿದೆ.

Swamiji

Swamiji Name :
ಶ್ರೀ ಷ.ಬ್ರ. ಗುರುಮೂರ್ತಿ ಶಿವಾಚಾರ್ಯ ಸ್ವಾಮಿಗಳು
Date of Birth :
1972
Place :
ಬರಡೂಲ, ಇಂಡಿ ತಾ||
Pattadikara :
ಜೂನ್ 2001
Photo :

Programs

ಅಮವಾಸ್ಯೆ ಹಾಗೂ ಹುಣ್ಣಿಮೆಗಳಲ್ಲಿ ವಿಶೇಷ ಪೂಜೆ.
ನವÀರಾತ್ರಿಗೆ ನಿತ್ಯ ವಿಶೇಷ ಪೂಜೆ, ದೇವಿ ಪುರಾಣ
ಹಾಗೂ ಕೊನೆಯ ದಿನ ಶ್ರೀಮಠದ ಹಿಂದಿನ
ಎಲ್ಲಾ ಗುರುಗಳ ಪುಣ್ಯಸ್ಮರಣೋತ್ಸವ.

Photos

Full Address Kannada

ಶ್ರೀ ಸಂಸ್ಥಾನ ಹಿರೇಮಠ
ಕಡೇಚೂರು - 585 221
ಯಾದಗಿರಿ ತಾ|| ಜಿ||

Map

Near by Places

ಶಕ್ತಿನಗರ - 20 ಕಿ.ಮೀ.
ಯಾದಗಿರಿ - 50 ಕಿ.ಮೀ.
ರಾಯಚೂರು - 45 ಕಿ.ಮೀ.

Statistic

71 Views
0 Rating
0 Favorite
0 Share
error: Content is protected !!