Shree Samsthana Hirematha

Shree Samsthana Hirematha Claimed

ಶ್ರೀ ಸಂಸ್ಥಾನ ಹಿರೇಮಠ

Average Reviews

Description

ಶ್ರೀ ಸಂಸ್ಥಾನ ಹಿರೇಮಠ

ಕರ್ತ – ಶ್ರೀ ಷ.ಬ್ರ. ಸಿದ್ದರಾಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು

ಕೊಪ್ಪಳ ಜಿಲ್ಲೆ ಯಲಬುರ್ಗಾ ನಗರದ ಮಧ್ಯಭಾಗದಲ್ಲಿ ಶ್ರೀ ಸಿದ್ದರಾಮೇಶ್ವರಶಿವಾಚಾರ್ಯ ಮಹಾಸ್ವಾಮಿಗಳಿಂದ ಪುರಾತನ ಕಾಲದಲ್ಲಿ ಸ್ಥಾಪಿತಗೊಂಡಿರುವ ಶ್ರೀಸಂಸ್ಥಾನ ಹಿರೇಮಠವು ತನ್ನ ಧಾರ್ಮಿಕ, ಸಾಹಿತ್ಯಿಕ, ಸಾಮಾಜಿಕ ಚಟುವಟಿಕೆಗಳ ಮೂಲಕನಾಡಿನ ಪ್ರಮುಖ ಧಾರ್ಮಿಕ ಕೇಂದ್ರಗಳಲ್ಲಿ ಒಂದಾಗಿ ಬೆಳೆದು ಬಂದಿದೆ. ಶ್ರೀಮಠವುಶ್ರೀಶೈಲ ಪೀಠದ ಶಾಖಾಮಠವಾಗಿ ಪುತ್ರವರ್ಗದ ಸಂಪ್ರದಾಯದಲ್ಲಿ ಬೆಳೆದುಬಂದಿದೆ.ಶ್ರೀ ಸಂಸಾ್ಥನ ಹಿರೇಮಠದ ಕಾಲಮಾನದ ಬಗ್ಗೆ ನಿಖರವಾಗಿತಿಳಿಯುವುದಿಲ್ಲವಾದರೂ ಸುಮಾರು 11-12ನೇ ಶತಮಾನದಲೆ ್ಲೀ ಶ್ರೀಮಠದಸ್ಥಾಪನೆಯಾಗಿರಬಹುದೆಂದು ಹೇಳಲಾಗುತ್ತದೆ. ಶ್ರೀ ಪರ್ವತಲಿಂಗ ಸ್ವಾಮಿ ಎಂಬುವವರಎರಡನೇ ಪುತ್ರರಾದ ಶ್ರೀ ರುದ್ರಮುನಿ ಸ್ವಾಮಿಗಳು ಕಲ್ಯಾಣದಿಂದ ಹೊರಟು ಪವಾಡಗಳನ್ನುನಡೆಸುತ್ತಾ ಸುರಪುರದ ಪಾಳೇಗಾರನಿಗೆ ಆಶೀರ್ವದಿಸಿದಾಗ ಪಾಳೇಗಾರನು ಅನೇಕಗ್ರಾಮಗಳನ್ನು ಗುರುಗಳಿಗೆ ಉಂಬಳಿಯಾಗಿ ನೀಡಿದ ಜನಪದ ಕಥೆ ಜನಜನಿತವಾಗಿದೆ.ಶ್ರೀ ರುದ್ರಮುನಿ ಸ್ವಾಮಿಗಳು ತಮ್ಮ ಸಹೋದರ ಸಂಬಂದಿಯಾದ ಶ್ರೀ ಸಿದ್ದರಾಮಸ್ವಾಮಿಗಳನ್ನು ಉತ್ತರಾದಿಕಾರಿಯನ್ನಾಗಿ ಸ್ಥಿರ ಪಟ್ಟಾಧಿಕಾರ ನೀಡಿದರು. ಶ್ರೀ ಸಿದ್ದರಾಮಸ್ವಾಮಿಗಳ ಗದ್ದುಗೆ ರುದ್ರಗುಂಜಿ ಗ್ರಾಮದಲ್ಲಿದ್ದು ಇಂದಿಗೂ ಪೂಜ್ಯನೀಯವಾಗಿದೆ. ಈಪರಂಪರೆಯಲ್ಲಿ ಬಂದಂತಹ ಶ್ರೀ ಸೊಲಭಸ್ವಾಮಿಗಳು ಹುಲಿಯನ್ನೇರಿ ಸಂಚರಿಸುತ್ತಬರುತ್ತಿದ್ದಾಗ ಆಗಿನ ಕಾಲದ ಪಾಳೇಗಾರರು ಯಲಬುರ್ಗಿ, ಚಿಕ್ಕಮ್ಯಾಗೇರಿಗಳಲ್ಲಿ ಮಠಮಾನ್ಯಮಾಡಿಕೊಟ್ಟರು. ಈ ಮಹಾಮಹಿಮರ ಗದ್ದುಗೆಯು ಯಲಬುರ್ಗಿಯ ಉತ್ತರಭಾಗದಚೌಕಿಮಠದಲ್ಲಿದ್ದು ಪೂಜನೀಯವಾಗಿದೆ.ಹೀಗೆ ಬೆಳೆದು ಬಂದಿರುವ ವಂಶದ ಪರಂಪರೆಯ ಶ್ರೀ ಸಿದ್ದರಾಮೇಶ್ವರಶಿವಾಚಾರ್ಯ ಮಹಾಸ್ವಾಮಿಗಳು ಶ್ರೀಮಠವನ್ನು ಸ್ಥಾಪಿಸಿದ್ದು, ಅವರ ಬಗ್ಗೆಯಾಗಲೀನಂತರದ ಇಬ್ಬರು ಗುರುಗಳ ಬಗ್ಗೆಯಾಗಲೀ ಸ್ಪಷ್ಟವಾದ ಮಾಹಿತಿಗಳು ಲಭ್ಯವಿಲ್ಲ. ಶ್ರೀಮಠದಪರಂಪರೆಯಲ್ಲಿ ಇಲ್ಲಿಯವರೆಗೂ 10 ಜನ ಸ್ವಾಮಿಗಳು ಸ್ಥಿರಪಟ್ಟಾಧ್ಯಕ್ಷರಾಗಿ ಹಾಗೂ 7 ಜನಚರಪಟ್ಟಾಧ್ಯಕ್ಷರಾಗಿ ಶ್ರೀಮಠದ ಧಾರ್ಮಿಕ ಕಾರ್ಯಗಳನ್ನು ನೋಡಿಕೊಂಡಿದ್ದಾರೆ.ಪರಂಪರೆಯ ನಾಲ್ಕನೇ ಸ್ಥಿರಪಟ್ಟದ ಶ್ರೀ ಸಿದ್ದರಾಮ ಶಿವಾಚಾರ್ಯರು ರುದ್ರಾಕ್ಷಿಟೊಪ್ಪಿಗೆಯನ್ನು ಧರಿಸಿ, ಸದಾ ಶಿವಪೂಜಾ ಮಗ್ನರಾಗಿದುರುತ್ತಿದ್ದರಿಂದ ಇವರು ರುದ್ರಾಕ್ಷಿಕಿರೀಟದ ಸ್ವಾಮಿಗಳೆಂದು ಹೆಸರು ಪಡೆದರು. ನಂತರ ಅಧಿಕಾರಕ್ಕೆ ಬಂದ 5 ಮತ್ತು 6 ನೇಗುರುಗಳು ವೈರಾಗ್ಯ ಮೂರ್ತಿಗಳಾಗಿ ಲೌಕಿಕ ವಿಚಾರದ ಕಡೆ ಗಮನ ಕೊಡದೆ ಧ್ಯಾನದಲ್ಲಿಮಗ್ನರಾಗಿರುತ್ತಿದ್ದರಿಂದ ಇವರು ಶ್ರೀ ವೈರಾಗ್ಯ ಸಿದ್ದರಾಮ ಸ್ವಾಮಿಗಳೆಂದು ಹೆಸರು ಪಡೆದರು.ಪರಂಪರೆಯ ಏಳನೇ ಗುರುಗಳಾದ ಶ್ರೀ ಸಿದ್ದರಾಮ ಶಿವಾಚಾರ್ಯ ಸ್ವಾಮಿಗಳುಕಾಶಿಯಲ್ಲಿ ಸಂಸ್ಕøತ ಅಧ್ಯಯನ ಮಾಡಿದವರು. ಇವರ ಸಾಧನೆಯನ್ನು ಗುರುತಿಸಿದಬನಾರಸ್ ವಿಶ್ವ ವಿದ್ಯಾನಿಲಯವು “ವಿದ್ಯಾಸಾಗರ” ಎಂಬ ಬಿರುದನ್ನು ನೀಡಿ ಗೌರವಿಸಿದೆ.ಶ್ರೀಗಳು ವಿದ್ಯಾಸಾಗರ ಪದವಿಯಂತೆ ಇಂಗ್ಲೀಷ್, ಉರ್ದು, ಪಾರ್ಸಿ, ಅರಬ್ಬಿ, ಗುಜರಾತಿ,ಬೆಂಗಾಲಿ, ಹಿಂದಿ, ತಮಿಳು, ತೆಲುಗು ಮುಂತಾದ ಭಾಷೆಗಳಲ್ಲಿ ಪ್ರಾವೀಣ್ಯತೆಯನ್ನುಪಡೆದಿದ್ದು ಆಯಾ ಭಾಷೆಗಳ ಸಾಹಿತ್ಯವನ್ನು ಅಭ್ಯಸಿಸಿದವರು.ಶ್ರೀ ವಿದ್ಯಾಸಾಗರರು ಸ್ವತಃ ಸಾಹಿತಿಗಳಾಗಿ, ಕಲಾವಿದರಾಗಿ ಹೆಸರು ಮಾಡಿದ್ದರು.ಇವರು ಧರ್ಮಗುಪ್ತ ಎಂಬ ಬಯಲಾಟ ಬರೆದು ಸ್ವತಃ ನಿರ್ದೇಶಿಸಿದ್ದರು. ಈ ಭಾಗದಲ್ಲಿನಡೆಯುತ್ತಿದ್ದ ವ್ಯಾಜ್ಯಗಳನ್ನು ತಾವೇ ಬಗೆಹರಿಸಿ ಸಮಾಜದಲ್ಲಿ ಶಾಂತಿ ನೆಲೆಸುವಂತೆಮಾಡಿದ್ದರು. ಇವರ ತರುವಾಯ ಬಂದ ಶ್ರೀ ಸಿದ್ದರಾಮ ಶಿವಾಚಾರ್ಯ ಸ್ವಾಮಿಗಳು (ಸಿಹಿ)ಶ್ರೀಮಠವನ್ನು ತಮ್ಮ ಕಾಯಕಯೋಗದಿಂದ ಮುನ್ನಡೆಸಿದ್ದು ಅಭಿವೃದ್ಧಿಗೊಳಿಸಿದ್ದಾರೆ.ಶ್ರೀಗಳೂ ಕೂಡ ಬಹುಭಾಷಾ ಪಂಡಿತರಾಗಿದ್ದು “ಸಿಹಿ” ಕಾವ್ಯನಾಮದಿಂದ ಕವನಸಂಹಲನ,ಕೃತಿಗಳನ್ನು ಬರೆದಿದ್ದಾರೆ. ತದನಂತರ ಶ್ರೀಗಳು ಗೃಹಸ್ಥಾಶ್ರಮ ಸ್ವೀಕರಿಸಿ ಹಿಂದಿನ ಶ್ರೀಗಳಾದಶ್ರೀ ಸಿದ್ದರಾಮ ಶಿವಾಚಾರ್ಯರಿಗೆ ಪಟ್ಟಾಧಿಕಾರವನ್ನು ವಹಿಸಿಕೊಟ್ಟರು.ಶ್ರೀ ಸಿದ್ದರಾಮ ಶಿವಾಚಾರ್ಯರು ಶ್ರೀಮಠದಲ್ಲಿ ಅಭಿವೃದ್ಧಿ ಕಾರ್ಯಗಳನ್ನುಕೈಗೊಂಡು ಧಾರ್ಮಿಕ, ಸಾಮಾಜಿಕ ಹಾಗೂ ಸಾಹಿತ್ಯಿಕ ಕಾರ್ಯಕ್ರಮಗಳ ಮೂಲಕಶ್ರೀಮಠವನ್ನು ಸಮರ್ಥವಾಗಿ ಮುನ್ನಡೆಸಿಕೊಂಡು ಬಂದಿದ್ದಾರೆ. ಶ್ರೀಗಳು ತಮ್ಮ ಉದಾತ್ತಚಿಂತನೆಯಿಂದ ಧರ್ಮವನ್ನು ವೈಚಾರಿಕ ಹಾಗೂ ವಾಸ್ತವಿಕ ನೆಲೆಗಟ್ಟಿನಲ್ಲಿ ಅವಲೋಕಿಸುತ್ತಾ2000ರ ಫೆಬ್ರವರಿ 10ರಂದು ಈಗಿನ ಶ್ರೀಗಳಾದ ಶ್ರೀ ಸಿದ್ದರಾಮೇಶ್ವರ ಶಿವಾಚಾರ್ಯರಿಗೆಪಟ್ಟಾಧಿಕಾರದ ಅನುಗ್ರಹ ನೀಡಿ 2004ರಲ್ಲಿ ಲಿಂಗೈಕ್ಯರಾದರು.ಈಗಿನ ಶ್ರೀಗಳಾದ ಶ್ರೀ ಸಿದ್ದರಾಮೇಶ್ವರ ಶಿವಾಚಾರ್ಯರು ಹಿರಿಯ ಗುರುಗಳಂತೆಯೇ ಶ್ರೀಮಠವನ್ನು ಸಮರ್ಥವಾಗಿ ಮುನ್ನಡೆಸಿಕೊಂಡು ಬರುತ್ತಿದ್ದಾರೆ. ಹಾಗೆಯೇಪರಂಪರೆಯ ಗುರುಗಳಂತೆ ಸಾಮಾಜಿಕವಾಗಿ ಹಾಗೂ ಸಾಹಿತ್ಯಿಕವಾಗಿಯೂ ಶ್ರೀಮಠದಲ್ಲಿಕಾರ್ಯಕ್ರಮಗಳನ್ನು ಹಮ್ಮಿಕೊಂಡು ಪ್ರಚುರಪಡಿಸುತ್ತಿದ್ದಾರೆ. ಈ ರೀತಿಯಲ್ಲಿ ಶ್ರೀಮಠವುಕನ್ನಡ ನಾಡಿನ ಸಾಹಿತ್ಯಿಕ ಹಾಗೂ ಸಾಂಸ್ಕøತಿಕ ವಲಯಕ್ಕೆ ತನ್ನದೇ ಅದ ಕೊಡುಗೆಯನ್ನುನೀಡುತ್ತಾ ಧಾರ್ಮಿಕವಾಗಿ ಭಕ್ತರಿಗೆ ಸನ್ಮಾರ್ಗ ತೋರುವುದರಲ್ಲಿ ಯಶಸ್ವಿಯಾಗಿದೆ.

ವಿಶೇಷತೆ:

ಪ್ರತಿ ವರ್ಷ ಮೃಗಶಿರ ನಕ್ಷತ್ರದ ಸಮಯದಲ್ಲಿ

ಶ್ರೀಮಠದಿಂದ ಅಸ್ತಮಾ ರೋಗಿಗಳಿಗೆ

ಉಚಿತ ಔಷಧ ವಿತರಣೆ.

Swamiji

Swamiji Name :
ಶ್ರೀ ಷ.ಬ್ರ. ಸಿದ್ದರಾಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು
Date of Birth :
16-5-1974
Place :
ಯಲಬುರ್ಗಾ
Pattadikara :
10-2-2000
Photo :

Programs

ಪ್ರತಿ ಅಮವಾಸ್ಯೆಗೆ ವಿಶೇಷ ಪೂಜೆ. ಪ್ರತಿ ಸೋಮವಾರ ರುದ್ರಾಭಿಷೇಕ.
ಮಾಘ ಶುದ್ಧ ಬಹುಳ ದಶಮಿಗೆ ಶ್ರೀಗುರು ರಾಜರ್ಷಿ ಲಿಂ|| ಶ್ರೀ ಷ.ಬ್ರ. ವಿದ್ಯಾಸಾಗರ ಶಿವಾಚಾರ್ಯ ಮಹಾಸ್ವಾಮಿಗಳ ಪುಣ್ಯಾರಾಧನೆ
ಶ್ರಾವಣ ಮಾಸದಲ್ಲಿ ಪ್ರತಿ ಸೋಮವಾರ ಸರ್ವಧರ್ಮದವರಿಗೆ ಇಷ್ಟಲಿಂಗ ವಿಧಿ ವಿಧಾನಗಳ ಮತ್ತು ತರಬೇತಿಯನ್ನು ಶ್ರೀಗಳ ಮಾರ್ಗದರ್ಶನದಲ್ಲಿ ನಡೆಯುತ್ತದೆ..

Institutions

ಆಂಗ್ಲ ಮಾಧ್ಯಮ / ಕನ್ನಡ ಮಾಧ್ಯಮ ಪ್ರಾಥಮಿಕ / ಪ್ರೌಢ ಶಾಲೆ.
ಡಿ.ಎಡ್. ಕಾಲೇಜು.

Photos

Full Address Kannada

ಶ್ರೀ ಸಂಸ್ಥಾನ ಹಿರೇಮಠ
ಯಲಬುರ್ಗಾ - 583 236
ಕೊಪ್ಪಳ ಜಿ||

Map

Near by Places

ಕೊಪ್ಪಳ - 37 ಕಿ.ಮೀ.
ಗದಗ - 60 ಕಿ.ಮೀ.
ಕುಷ್ಟಗಿ - 30 ಕಿ.ಮೀ.

Statistic

68 Views
0 Rating
0 Favorite
0 Share
error: Content is protected !!