ಬ್ಯಾಡಗಿ ತಾಲ್ಲೂಕಿನ ಗುಡ್ಡದ ಮಲ್ಲಾಪುರ ಗ್ರಾಮದಲ್ಲಿ 325 ವರ್ಷಗಳ ಹಿಂದೆ ಶ್ರೀಅಜ್ಜಯ್ಯ ಸ್ವಾಮಿಗಳಿಂದ ಸ್ಥಾಪಿತಗೊಂಡ ವಿಶಿಷ್ಟ ಸಂಪ್ರದಾಯದ ಮಠವು ಅಸ್ಥಿತ್ವದಲ್ಲಿದೆ.ಆದರೆ ಇಲ್ಲಿನ ವಿಶೇಷತೆಯೆಂದರೆ ‘ವೃಷಭ’ನು ಮಠದ ಆಚಾರ್ಯ ಪದವಿಯನ್ನು ಪಡೆದುಬೇರೆ ಮಠಗಳ ಸಂಪ್ರದಾಯದಂತೆಯೇ ಪಟ್ಟಾಧಿಕಾರ ಹೊಂದಿ ಧಾರ್ಮಿಕ ಆಚರಣೆಗಳನ್ನುನಡೆಸುತ್ತಾ ಬಂದಿದೆ.ಶ್ರೀ ಮಠದ ಮೂಲ ಪುರುಷರಾದ ಶ್ರೀ ಅಜ್ಜಯ್ಯ ಸ್ವಾಮಿಗಳು ಮೂಲತಃಆಂಧ್ರಪ್ರದೇಶದ ಕಡೆಯಿಂದ ಬಂದವರಾಗಿದ್ದು, ತಾವು ಹೋದಕಡೆಗೆಲ್ಲಾ ಅನುಷ್ಠಾನಕೈಗೊಂಡು ಕೊನೆಯಲ್ಲಿ ಗುಡ್ಡದ ಮಲ್ಲಾಪುರದ ಗುಡ್ಡದಲ್ಲಿ ಅನುಷ್ಠಾನ ಕೈಗೊಳ್ಳುತ್ತಾರೆ.ಹಾಗೆಯೇ ಜನರಿಗೆ ಸಹಾಯ ಮಾಡುತ್ತಾ ತಮ್ಮ ಪವಾಡಗಳಿಂದ ಭಕ್ತರ ಕಷ್ಟಗಳನ್ನುನೀಗಿಸುತ್ತಾ ಆಧ್ಯಾತ್ಮ ಹುಚ್ಚಿನಿಂದಾಗಿ ಶ್ರೀ ಹುಚ್ಚಯ್ಯ ಸ್ವಾಮಿಗಳೆಂದು ಹೆಸರಾಗುತ್ತಾರೆ.ಇಂತಹ ಮಹಾಮಹಿಮ ಶ್ರೀ ಅಜ್ಜಯ್ಯ ಸ್ವಾಮಿಗಳು ಆಗಾಗ್ಗೆ ತಮ್ಮ ಮೂಲಶ್ರೀಶೈಲಕ್ಕೆ ಹೋಗಿ ಬರುವುದು ರೂಢಿಗತವಾಗಿ ನಡೆದು ಬಂದಿತ್ತು. ಆ ಸಮಯದಲ್ಲಿ ತಮ್ಮಜೊತೆಯಲ್ಲಿ ಪೂಜಾ ಸಾಮಾಗ್ರಿಗಳನ್ನು ಹೊತ್ತುಕೊಂಡು ಹೋಗಲು ಸಂಸ್ಕಾರವಂತ ಒಂದುಕಂಟಲೆ ಬಸವ ಜೊತೆಯಾಗಿರುತ್ತಿತ್ತು. ನಂತರ ಶ್ರೀಗಳು ತಮ್ಮ ಅಂತಿಮ ಕಾಲದಲ್ಲಿ ಸೂಕ್ತಉತ್ತರಾಧಿಕಾರಿಗಳು ಸಿಗದೇ ಇದ್ದಾಗ ಈ ಬಸವನಿಗಿಂತ ಯಾರೂ ದೊಡ್ಡವರಿಲ್ಲವೆಂದರಿತುಸದಾ ತಮ್ಮ ಜೊತೆಯಲ್ಲಿರುತ್ತಿದ್ದ ಬಸವನನ್ನೇ(ಎತ್ತು) ಉತ್ತರಾಧಿಕಾರಿಯನ್ನಾಗಿ ಮಾಡಿಕೊಂಡು ಉಪದೇಶಿಸುತ್ತಾರೆ.ಹೀಗೆಯೇ ಬೆಳೆದು ಬಂದ ಪರಂಪರೆಯಲ್ಲಿ ಶ್ರೀ ಮಠಕ್ಕೆ ಅಂದಿನಿಂದಇಂದಿನವರೆಗೂ ವೃಷಭಗಳಿಗೇ ಪಟ್ಟ ಕಟ್ಟುತ್ತಾರೆ. ನಂತರದಲ್ಲಿ ಆ ವೃಷಭದ ಅಂತ್ಯಕಾಲದೊಳಗೆ ಸೂಕ್ತವಾದ ಕೆಲವು ವಿಶಿಷ್ಟ ಗುಣಗಳುಳ್ಳ ಕರುವನ್ನು ಉತ್ತರಾಧಿಕಾರಿಯನ್ನಾಗಿನೇಮಿಸಿಕೊಳ್ಳುತ್ತಾರೆ. ಈ ರೀತಿ ಮಠದ ಸಂಪ್ರದಾಯದಂತೆ ಒಂದು ಜೋಡಿ ವೃಷಭಗಳುಅಧಿಕಾರದಲ್ಲಿರುತ್ತವೆ. ಹಾಗೆಯೇ ಈ ಎಲ್ಲಾ ಕಾರ್ಯಗಳನ್ನು ಶ್ರೀ ಮಠದ ಧರ್ಮದರ್ಶಿಗಳುನೋಡಿಕೊಂಡು ಹೋಗುತ್ತಾರೆ.
Swamiji
Swamiji Name :
ಶ್ರೀ ಷ.ಬ್ರ. ಮೂಕಪ್ಪ ಮಹಾಸ್ವಾಮಿಗಳು
Photo :
Programs
ಪ್ರತಿ ಅಮವಾಸ್ಯೆಗೆ ವಿಶೇಷ ಪೂಜೆ ಮತ್ತು ದರ್ಶನ
ಶ್ರಾವಣ ಮಾಸದಲ್ಲಿ ನಿತ್ಯ ವಿಶೇಷ ಪೂಜೆ, ಕಾರ್ಯಕ್ರಮ
ಮಹಾನವಮಿ ಅಮವಾಸ್ಯೆಯಿಂದ ವಿಜಯ ದಶಮಿಯವರೆಗೆ ಶ್ರೀದೇವಿ ಪುರಾಣ, ದೀಪೋತ್ಸವ, ಕುಂಭೊತ್ಸವ ಮತ್ತು ಬನ್ನಿ ಮುಡಿಯುವ ಕಾರ್ಯಕ್ರಮ.
ಶಿವರಾತ್ರಿ ಆದ ನಂತರ ಪಂಚಮಿಯಿಂದ ಸಪ್ತಮಿಯವರೆಗೆ ಶ್ರೀಮಠದ ಜಾತ್ರೆ.
Institutions
ಪೂರ್ವ ಪ್ರಾಥಮಿಕ / ಕಿರಿಯ / ಹಿರಿಯ ಪ್ರಾಥಮಿಕ / ಪ್ರೌಢ ಶಾಲೆ
ಅನಾಥ ಮಕ್ಕಳ ಕುಟೀರ.
Photos
Full Address Kannada
ಶ್ರೀ ಸಂಸ್ಥಾನ ದಾಸೋಹ ಮಠ
ಗುಡ್ಡದ ಮಲ್ಲಾಪುರ - 581 120
ಅತ್ತಿಕಟ್ಟಿ ಪೋಸ್ಟ್, ಬ್ಯಾಡಗಿ ತಾ||, ಹಾವೇರಿ ಜಿ||