Shree Sadguru Korisiddeshwara Samsthana Matha – Nalawara

Shree Sadguru Korisiddeshwara Samsthana Matha – Nalawara Claimed

ಶ್ರೀ ಸದ್ಗುರು ಕೋರಿಸಿದ್ದೇಶ್ವರ ಸಂಸ್ಥಾನ ಮಠ - ನಾಲವಾರ

Average Reviews

Description

ಶ್ರೀ ಸದ್ಗುರು ಕೋರಿಸಿದ್ದೇಶ್ವರ ಸಂಸ್ಥಾನ ಮಠ – ನಾಲವಾರ

ಕರ್ತೃ ಪೂಜ್ಯ ಶ್ರೀ ಕೋರಿ ಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು

ಕಲಬುರಗಿ ಜಿಲ್ಲೆ ಚಿತ್ತಾಪುರ ತಾಲ್ಲೂಕಿನ ನಾಲವಾರ ಗ್ರಾಮವು ತಾಲ್ಲೂಕುಕೇಂದ್ರದಿಂದ ನೈರುತ್ಯಕ್ಕೆ ಮೂವತ್ತು ಕಿ.ಮೀ. ದೂರದಲ್ಲಿದೆ. ವ್ಯಾಪಾರೀ ಕೇಂದ್ರವಾಗಿಅಭಿವೃದ್ದಿ ಹೊಂದಿರುವ ನಾಲವಾರ ಗ್ರಾಮದ ಹೊರವಲಯದಲ್ಲಿ ಅಸ್ತಿತ್ವದಲ್ಲಿರುವ ಶ್ರೀಸದ್ಗುರು ಕೋರಿಸಿದ್ದೇಶ್ವರ ಸಂಸ್ಥಾನ ಮಠವು ತನ್ನ ಶ್ರೀಮಂತ ಪರಂಪರೆ ಹಾಗೂ ಗುರುಗಳಕರ್ತೃತ್ವ ಶಕ್ತಿಯಿಂದಾಗಿ ಮುಂಚೂಣಿಗೆ ಬಂದಿದೆ.ಪೂಜ್ಯ ಶ್ರೀ ಕೋರಿಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳೆಂದರೆ ಈ ಭಾಗದಬಹು ದೊಡ್ಡ ಹೆಸರು. ಶ್ರೀಗಳು ನೆಲೆನಿಂತ ಸ್ಥಳಗಳೆಲ್ಲಾ ಜಾಗೃತ ಗೊಂಡುಸುಕ್ಷೇತ್ರವೆನಿಸಿದವು. ಇಂತಹ ಪವಾಡ ಪುರುಷರು ಲೋಕ ಸಂಚಾರ ಮಾಡುತ್ತಾ ಅಲ್ಲಲ್ಲಿನೆಲೆನಿಂತು ಭಕ್ತರನ್ನು ಹರಸುತ್ತಾ ನಾಲವಾರ ಗ್ರಾಮಕ್ಕೆ ಆಗಮಿಸುತ್ತಾರೆ. ಗುರುಗಳು ಬರುವಪೂರ್ವದಲ್ಲಿಯೇ ಈ ಗ್ರಾಮದಲ್ಲಿ ಒಂದು ಮಠವಿದ್ದು ಸಂಪೂರ್ಣ ಜೀರ್ಣಾವಸ್ಥೆಗೆತಲುಪಿತ್ತು. ನಾಲವಾರ ಗ್ರಾಮಕ್ಕೆ ಆಗಮಿಸುವ ಶ್ರೀಗಳು ಪೂರ್ಣ ಜೀರ್ಣಾವಸ್ಥೆಯಲ್ಲಿದ್ದಮಠದಲ್ಲಿ ಆಶ್ರಯ ಪಡೆದು ಅನುಷ್ಠಾನಗೊಂಡರು.ಶ್ರೀ ಕೋರಿಸಿದ್ದೇಶ್ವರರು ನಾಲವಾರ ಗ್ರಾಮದಲ್ಲಿ ಅನುಷ್ಠಾನನಿರತರಾದ ಸುದ್ದಿತಿಳಿದ ಜನರು ತಂಡೋಪತಂಡವಾಗಿ ಗುರುಗಳ ದರ್ಶನಕ್ಕೆ ಬರತೊಡಗಿದರು. ಇಲ್ಲಿನಭಕ್ತರು ಶ್ರೀಗಳಿಗೆ ಬೇರೆಕಡೆ ವ್ಯವಸ್ಥೆ ಮಾಡಿಕೊಡುವುದಾಗಿ ವಿನಂತಿಸಿಕೊಂಡರೂ ಭಕ್ತರಮಾತಿಗೆ ಒಪ್ಪದೇ ಜೀರ್ಣಾವಸ್ಥೆಯ ಮಠದಲ್ಲಿಯೇ ಧೀರ್ಘ ಅನುಷ್ಠಾನದಲ್ಲಿನಿರತರಾಗುತ್ತಾರೆ. ಶ್ರೀಗಳು ಇಲ್ಲಿ ನೆಲೆನಿಂತ ನಂತರ ತಮ್ಮ ಪವಾಡಗಳ ಮೂಲಕಪ್ರಸಿದ್ದಿಗೊಂಡರು. ಜನರ ಹರಿಯುವಿಕೆ ಹೆಚ್ಚಾಗಿ ಸಂಪೂರ್ಣ ಜೀರ್ಣಾವಸ್ಥೆಯಲ್ಲಿದ್ದ ಮಠವುಜೀರ್ಣಗೊಂಡು ನೂತನ ಕಟ್ಟಡ ನಿರ್ಮಾಣಗೊಂಡು ಈ ಕ್ಷೇತ್ರವು ಸುಕ್ಷೇತ್ರವಾಗಿಪರಿವರ್ತಿತಗೊಂಡಿತು.ಹೀಗೆ ಶ್ರೀ ಕೋರಿಸಿದ್ದೇಶ್ವರ ಮಹಾಸ್ವಾಮಿಗಳಿಂದ ಜಾಗೃತಗೊಂಡು ಸುಕ್ಷೇತ್ರವಾದಶ್ರೀಮಠದ ಪರಂಪರೆಯು ಶ್ರೀಮಂತವಾಗಿ ಬೆಳೆದು ಬಂದಿದೆ. ಕರ್ತೃಗುರುಗಳ ನಂತರದಎಲ್ಲಾ ಗುರುಗಳು ಶ್ರೀ ತೋಟೇಂದ್ರ ಶಿವಾಚಾರ್ಯ ಸ್ವಾಮಿಗಳೆಂಬ ಅಭಿದಾನ ಪಡೆದು ಪಟ್ಟಕ್ಕೆಬಂದಿದ್ದು ಶ್ರೀಮಠವನ್ನು ಅಭಿವೃದ್ದಿಪಡಿಸಿದ್ದಾರೆ. ಕರ್ತೃಗುರುಗಳ ನಂತರ ಶ್ರೀ ತೋಟೇಂದ್ರಶಿವಾಚಾರ್ಯರು ಅಧಿಕಾರಕ್ಕೆ ಬಂದಿದ್ದು ಇವರು ಕೂಡ ಪವಾಡಪುರುಷರಾಗಿ ಅನೇಕಲೀಲೆಗಳನ್ನು ಮಾಡಿ ಈ ಮಠದ ಪರಂಪರೆಯನ್ನು ಬೆಳಗಿಸುವ ಮೂರ್ತಿಯಾದರು. ಇವರನಂತರದ ಎಲ್ಲಾ ಶ್ರೀಗಳು ಮಹಾ ಮಾನವತಾದಿಗಳಾಗಿ, ಮಹಾದಾಸೋಹಿಗಳಾಗಿಮಠವನ್ನು ಬೆಳೆಸಿದ್ದಾರೆ.ಈಗಿನ ಮಠಾಧ್ಯಕ್ಷರಾದ ಶ್ರೀ ಶ್ರೀ ಸಿದ್ದತೋಟೇಂದ್ರ ಶಿವಾಚಾರ್ಯಮಹಾಸ್ವಾಮಿಗಳು 1964ರಲ್ಲಿ ಚಿತ್ತಾಪುರ ತಾಲ್ಲೂಕಿನ ಸೂಗೂರು ಗ್ರಾಮದಲ್ಲಿಜನಿಸಿದವರಾಗಿದ್ದು ಬಾಲ್ಯದಿಂದಲೂ ಆದ್ಯಾತ್ಮಿಕತೆಯ ಒಲವು ಹೊಂದಿದ್ದವರು. 119ಬಾಲ್ಯದಿಂದಲೂ ಸಂಗೀತ ಅಭ್ಯಾಸ ಮಾಡುತ್ತಾ ಸಮಷ್ಠಿ ಸಮಾಜದ ಒಗ್ಗಟ್ಟಿಗಾಗಿ ಪ್ರಾರ್ಥನೆಸಲ್ಲಿಸಿದ್ದಾರೆ. ಇವರು ಮೊದಲಿನಿಂದಲೂ ಪ್ರಗತಿಪರ ವಿಚಾರಗಳನ್ನು ಹೊಂದಿ ವೀರಶೈವಧರ್ಮವನ್ನು ಬೆಳೆಸಿದ್ದಾರೆ. ಈ ಕಾರಣಕ್ಕಾಗಿಯೇ “ಬಾಲ ತಪಸ್ವಿ”ಎಂಬ ಬಿರುದನ್ನುಪಡೆದವರು. ಶ್ರೀಗಳು ಚಿಕ್ಕ ವಯಸ್ಸಿನಲ್ಲಿಯೇ ಶ್ರೀಮಠದ ಪಟ್ಟಕ್ಕೆ ಬಂದಿದ್ದು ನಂತರವಿದ್ಯಾಭ್ಯಾಸ ಮುಂದುವರೆಸಿದರು.ಶ್ರೀಗಳು ಅಪ್ರತಿಮ ಪಂಡಿತರಾಗಿದ್ದು ತಮ್ಮ ವಿಚಾರದಾರೆಯ ಮೂಲಕಸಮಾಜದ ಅಭಿವೃದ್ದಿಗೆ ಶ್ರಮಿಸುತ್ತಿದ್ದಾರೆ. ವೀರಶೈವ ಧರ್ಮದ ಬಗ್ಗೆ ಆಳವಾದ ಅರಿವನ್ನುಹೊಂದಿರುವ ಶ್ರೀಗಳು ಆಚಾರ್ಯರು ಹಾಗೂ ಬಸವಾದಿ ಪ್ರಥಮರ ತತ್ತ್ವಗಳನ್ನುಅಧ್ಯಯನ ಮಾಡಿದ್ದು “ಉಪಾಚಾರ್ಯ ರತ್ನ”ಎಂಬ ಬಿರುದನ್ನು ಪಡೆದಿದ್ದಾರೆ. ಸದಾಹಸನ್ಮುಖರಾಗಿ ಮಠಕ್ಕೆ ಬರುವ ಅಪಾರ ಸಂಖ್ಯೆಯ ಭಕ್ತಬಳಗವನ್ನು ಹರಸುತ್ತಿರುವ ಶ್ರೀಗಳುತಮ್ಮ ಪ್ರಭಾವದಿಂದ ಈ ಕ್ಷೇತ್ರವನ್ನು ಅಭಿವೃದ್ದಿಪಡಿಸುತ್ತಿದ್ದಾರೆ. ಶ್ರೀಗಳು ಪ್ರತಿ ಗುರುವಾರ,ರವಿವಾರ ಹಾಗೂ ಪ್ರತಿ ಅಮವಾಸ್ಯೆ ಸಂಜೆ 7 ಘಂಟೆಗೆ ಮಠದಲ್ಲಿಯೇ ಇದ್ದು ದೂರದಿಂದಬರುವ ಭಕ್ತರಿಗೆ ದರ್ಶನ ಕೊಡುತ್ತಾರೆ. ಹಾಗೂ ಪ್ರತಿ ಅಮವಾಸ್ಯೆಗಳಲ್ಲಿ “ಶಿವಾನುಭವಚಿಂತನ” ಕಾರ್ಯಕ್ರಮವನ್ನು ನಿರಂತರವಾಗಿ ನಡೆಸುತ್ತಾ ಬಂದಿದ್ದು ಅರ್ಥಪೂರ್ಣವಿಚಾರಗಳ ಬಗ್ಗೆ ನಾಡಿನ ವಿವಿದ ಕ್ಷೇತ್ರಗಳ ಗಣ್ಯರು ಹಾಗೂ ವಿದ್ವಾಂಸರಿಂದ ಉಪನ್ಯಾಸಮಾಡಿಸುತ್ತಿದ್ದಾರೆ.ಶ್ರೀಗಳು 1992ರಲ್ಲಿ ಶ್ರೀ ಕೋರಿಸಿದ್ದೇಶ್ವರ ಶಿಕ್ಷಣ ಸಂಸ್ಥೆಯನ್ನು ಪ್ರಾರಂಬಿಸಿದ್ದುಅದರಡಿಯಲ್ಲಿ ಅನೇಕ ಶಾಲಾಕಾಲೇಜುಗಳನ್ನು ತೆರೆದಿದ್ದಾರೆ. ಶ್ರೀ ಸಿದ್ದತೋಟೇಂದ್ರಮಹಾಸ್ವಾಮಿಗಳು ಅಧಿಕಾರಕ್ಕೆ ಬಂದ ಮೇಲೆ ಮಠವು ಸರ್ವತೋಮುಖ ಅಭಿವೃದ್ದಿಸಾದಿಸಿದೆ. ಮಠದ ಹಳೆಯ ಕಟ್ಟಡ ತೆಗೆಸಿ ಕಟ್ಟಡಗಳ ಸುಮುಚ್ಚಯವನ್ನು ನಿರ್ಮಿಸಲಾಗಿದೆ.ಕಲ್ಯಾಣಮಂಟಪ, ಯಾತ್ರಿ ನಿವಾಸ, ಪುರಾಣ ಮಂಟಪ, ದಾಸೋಹ ಮಂಟಪ ಹೀಗೆಹಲವಾರು ಅಭಿವೃದ್ದಿ ಕಾರ್ಯಗಳಾಗಿವೆ. ಶ್ರೀಗಳು ಶ್ರೀಮಠದ ಜೊತೆಯಲ್ಲಿ ಶ್ರೀಮಠದಶಾಖಾಮಠಗಳ ಅಭಿವೃದ್ದಿಯತ್ತಲೂ ಗಮನ ಹರಿಸಿದ್ದು ಕರ್ತೃಗುರುಗಳ ಮೂಲಮಠವಾಗಿದ್ದ ಕಾಖಂಡಿಕ ಮಠಕ್ಕೆ ನೂತನ ಕಟ್ಟಡವನ್ನು ನಿರ್ಮಿಸಿದ್ದಾರೆ.

Swamiji

Swamiji Name :
ಪೂಜ್ಯ ಶ್ರೀ ಶ್ರೀ ಸಿದ್ದತೋಟೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು
Date of Birth :
1964
Place :
ಸೂಗೂರು (ಎನ್), ಚಿತ್ತಾಪುರ ತಾ||
Photo :

Programs

ಪ್ರತಿ ಗುರುವಾರ, ರವಿವಾರ ಹಾಗೂ ಅಮವಾಸೆಗಳಂದು ಸಂಜೆ 7 ಗಂಟೆಗೆ ಶ್ರೀಗಳ ದರ್ಶನ ಹಾಗೂ ಆಶೀರ್ವಾದ ಪ್ರತಿ ಅಮವಾಸ್ಯೆಯಲ್ಲಿ ಶಿವಾನುಭವ ಚಿಂತನ ಕಾರ್ಯಕ್ರಮ ಸೀಗೆ ಹುಣ್ಣಿಮೆಯ ಸಪ್ತಮಿ ತಿಥಿಯಂದು ಕರ್ತೃಗುರುಗಳ ಪುಣ್ಯಸ್ಮರಣೋತ್ಸವ

Institutions

ಕಿರಿಯ / ಹಿರಿಯ ಪ್ರಾಥಮಿಕ /ಪ್ರೌಢಶಾಲೆ
ಪದವಿಪೂರ್ವ ಕಾಲೇಜ್
ಅನಾಥಾಶ್ರಮ ವಿದ್ಯಾರ್ಥಿ ನಿಲಯ
ಗೋಶಾಲೆ ಸಂಗೀತ ಪಾಠಶಾಲೆ

Photos

Full Address Kannada

ಶ್ರೀ ಸದ್ಗುರು ಕೋರಿಸಿದ್ದೇಶ್ವರ ಸಂಸ್ಥಾನ ಮಠ
ನಾಲವಾರ - 585 218
ಚಿತ್ತಾಪುರ ತಾ||, ಕಲಬುರಗಿ ಜಿಲ್ಲೆ

Map

Near by Places

ರೈಲ್ವೆ ಸ್ಟೇಷನ್ - 3 ಕಿ.ಮೀ.
ಯಾದಗಿರಿ - 25 ಕಿ.ಮೀ.
ವಾಡಿ - 12 ಕಿ.ಮೀ.
ಚಿತ್ತಾಪುರ - 30 ಕಿ.ಮೀ.

Statistic

5 Views
0 Rating
0 Favorite
0 Share
error: Content is protected !!