Shree Sadananda Shivayogashrama

Shree Sadananda Shivayogashrama Claimed

ಶ್ರೀ ಸದಾನಂದ ಶಿವಯೋಗಾಶ್ರಮ

Average Reviews

Description

ಶ್ರೀ ಸದಾನಂದ ಶಿವಯೋಗಾಶ್ರಮ

ಕರ್ತೃ – ಶ್ರೀ ಮ.ನಿ.ಪ್ರ. ಚನ್ನಬಸವೇಶ್ವರ ಸ್ವಾಮಿಗಳು

ಸುಮಾರು 1970 ರಲ್ಲಿ ಶ್ರೀ ಮ.ನಿ.ಪ್ರ ಸಿದ್ದಲಿಂಗ ಸ್ವಾಮಿಗಳಿಂದ ಸ್ಥಾಪಿತವಾದ ಶ್ರೀಸದಾಂನಂದಾಶ್ರಮವು ಮೂಲತಃ ತಾಳಗುಪ್ಪದ ಕೂಡ್ಲಿ ಮಠಕ್ಕೆ ನೇರ ಸಂಪರ್ಕ ಹೊಂದಿದೆ.ಈ ಮೊದಲು ಶರಾವತಿ ನದಿ ಹಾಗೂ ಎಣ್ಣೆಹೊಳೆ ನದಿಗಳ ಸಂಗಮ ಕ್ಷೇತ್ರದಲ್ಲಿ ಇದ್ದಮಠವೇ ಕೂಡ್ಲಿ ಮಠ.ಇಂತಹ ಪುರಾಣ ಪ್ರಸಿದ್ಧ ಮಠ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ನಿರ್ಮಿಸಿದಮೇಲೆ ಆಣೆಕಟ್ಟೆಯ ಹಿನ್ನೀರಿನಿಂದ 1962 ರಲ್ಲಿ ಮುಳುಗಡೆಯಾಯಿತು. ಮುಳುಗಡೆಗೂಮುನ್ನವೇ ಶ್ರೀ ಸಿದ್ದಲಿಂಗ ಸ್ವಾಮಿಗಳು ಹಳೇ ಮಠದಲ್ಲಿ ಪಟ್ಟಾಧಿಕಾರ ಪಡೆದು ನಂತರತಾಳಗುಪ್ಪಕ್ಕೆ ಮಠವನ್ನು 1963 ರಲ್ಲಿ ಸ್ಥಳಾಂತರ ಮಾಡಿದರು. ಹಿಂದೆ ಎರಡೂ ನದಿಗಳಸಂಗಮದಲ್ಲಿ ಮಠವು ನಿರ್ಮಾಣಗೊಂಡ ಕಾರಣಕ್ಕೆ ತಾಳಗುಪ್ಪದ ಮಠಕ್ಕೆ ‘ಕೂಡ್ಲಿಮಠ’ಎಂದು ಹೆಸರು ಬಂತು.ಮಠ ಮರುಸ್ಥಾಪನೆಯಾದ ಮೇಲೆ ಏಳುವರ್ಷ ನೆಲೆನಿಂತ ಶ್ರೀ ಸಿದ್ದಲಿಂಗಸ್ವಾಮಿಗಳು ಈಗಿನ ಪುಣಜಿ ಮೂಲಗದ್ದೆಯಲ್ಲಿ ತಮಗೆ ಪಟ್ಟಾಧಿಕಾರದ ಅನುಗ್ರಹ ನೀಡಿದಶ್ರೀ ಸದಾನಂದ ಸ್ವಾಮಿಗಳ ಹೆಸರಿನಲ್ಲಿ ಸದಾನಂದಾಶ್ರಮವನ್ನು 1970 ರಲ್ಲಿ ಸ್ಥಾಪಿಸುತ್ತಾರೆ.ಶ್ರೀ ಸದಾನಂದಸ್ವಾಮಿಗಳು 1989ರಲ್ಲಿ ಲಿಂಗೈಕ್ಯರಾದ ಮೇಲೆ ತಾಳಗುಪ್ಪದಲ್ಲಿ ಗದ್ದುಗೆನಿರ್ಮಿಸಿ ಮೂಲಗದ್ದೆಯಲ್ಲಿ ತೋರುಗದ್ದುಗೆ ನಿರ್ಮಿಸಿ ಪೂಜೆ ನಡೆಸತೊಡಗಿದ್ದಾರೆ. 2006ರವರೆಗೂ ತಾಳಗುಪ್ಪದ ಮಠ ಹಾಗೂ ಮೂಲಗದ್ದೆಯ ಮಠ ಎರಡನ್ನೂ ನೋಡಿಕೊಳ್ಳುತ್ತಿದ್ದ ಶ್ರೀಗಳು 2006 ರಲ್ಲಿ ತಾಳಗುಪ್ಪದ ಮಠಕ್ಕೆ ಶ್ರೀ ಸಿದ್ದವೀರ ಮಹಾಸ್ವಾಮಿಗಳನ್ನುನೇಮಿಸಿದ್ದಾರೆ.ಶ್ರೀ ಸಿದ್ದಲಿಂಗ ಸ್ವಾಮಿಗಳು ಸದಾನಂದಾಶ್ರಮದಲ್ಲಿ ಕಾರ್ತೀಕ ಮಾಸದಲ್ಲಿ ಹಿರಿಯಗುರುಗಳ ಪಣ್ಯತಿಥಿ ಕಾರ್ಯಕ್ರಮ ಹಾಗೂ ಮಕರ ಸಂಕ್ರಮಣದಂದು ಶಿವಾನುಭವಕಾರ್ಯಕ್ರಮಗಳನ್ನು ನಡೆಸುತ್ತಾರೆ. ಈ ಸಂದರ್ಭದಲ್ಲಿ ನಾಡಿನ ಖ್ಯಾತ ವಿದ್ವಾಂಸರು ಹಾಗೂಗುರುಗಳಿಂದ ಧರ್ಮೋಪದೇಶ ಮಾಡಿಸುತ್ತಾರೆ.

Swamiji

Swamiji Name :
ಶ್ರೀ ಮ.ನಿ.ಪ್ರ. ಸಿದ್ದಲಿಂಗ ಸ್ವಾಮಿಗಳು
Date of Birth :
5-2-1932
Place :
ಕೊಟ್ಟಲಗಿ, ಅಥಣಿ ತಾ||
Pattadikara :
19-4-1962
Photo :

Programs

ಮಕರ ಸಂಕ್ರಾಂತಿಯಂದು ವಿಶೇಷ ಕಾರ್ಯಕ್ರಮ. ಶ್ರಾವಣ ಮಾಸದಲ್ಲಿ ಶ್ರೀಗಳ ಅನುಷ್ಠಾನ. ಕಾರ್ತಿಕ ಮಾಸದಲ್ಲಿ ಶ್ರೀ ಹಿರಿಯ ಗುರುಗಳ ಪುಣ್ಯಾರಾಧನೆ.

Photos

Full Address Kannada

ಶ್ರೀ ಸದಾನಂದ ಶಿವಯೋಗಾಶ್ರಮ ಪುಣಜಿ-ಮೂಲಗದ್ದೆ ಹೊಸನಗರ ಪೋಸ್ಟ್- 577 418 ಹೊಸನಗರ ತಾ., ಶಿವಮೊಗ್ಗ ಜಿ.

Map

Near by Places

ಹೊಸನಗರ - 10 ಕಿ.ಮೀ. ಆನಂದಪುರಂ - 20 ಕಿ.ಮೀ. ಶಿವಮೊಗ್ಗ - 60 ಕಿ.ಮೀ.

Statistic

11 Views
0 Rating
0 Favorite
0 Share
error: Content is protected !!