Shree Rudreshwara Swmi Hirematha

Shree Rudreshwara Swmi Hirematha Claimed

ಶ್ರೀ ರುದ್ರೇಶ್ವರ ಸ್ವಾಮಿ ಹಿರೇಮಠ

Average Reviews

Description

ಶ್ರೀ ರುದ್ರೇಶ್ವರ ಸ್ವಾಮಿ ಹಿರೇಮಠ – ಹಿರೇವಡ್ಡಟ್ಟಿ

ಕರ್ತೃ – ಶ್ರೀ ಮ.ಘ.ಚ. ರುದ್ರಯ್ಯ ಪಟ್ಟದ ದೇವರು

ಗದಗ ಜಿಲ್ಲೆ ಮುಂಡರಗಿ ತಾಲ್ಲೂಕಿನ ಹಿರೇವಡ್ಡಟ್ಟಿ ಗ್ರಾಮದ ಮಧ್ಯಭಾಗದಲ್ಲಿಸುಮಾರು 170 ವರ್ಷಗಳ ಹಿಂದೆ ಶ್ರೀ ರುದ್ರಯ್ಯ ಪಟ್ಟದ ದೇವರುಗಳಿಂದಸ್ಥಾಪಿತಗೊಂಡಿರುವ ಶ್ರೀ ರುದ್ರೇಶ್ವರ ಸ್ವಾಮಿ ಹಿರೇಮಠವು ಕಾಶಿ ಪೀಠದ ಶಾಖಾಮಠವಾಗಿದ್ದು ಪುತ್ರವರ್ಗದ ಪರಂಪರೆಯಲ್ಲಿ ಬೆಳೆದು ಬಂದಿದೆ. ಕರ್ತೃಗುರುಗಳಾದ ಶ್ರೀರುದ್ರಯ್ಯ ಪಟ್ಟದ ದೇವರು ಭಾಲ್ಯದಲ್ಲಿಯೇ ಆಧ್ಯಾತ್ಮವನ್ನು ಮೈಗೂಡಿಸಿಕೊಂಡವರಾಗಿದ್ದುಲೋಕಸಂಚಾರದಲ್ಲಿ ಮಹಾತ್ಮರ ಕ್ಷೇತ್ರಗಳನ್ನು ಸಂದರ್ಶಿಸುತ್ತ ಶಿರಹಟ್ಟಿ ತಾಲ್ಲೂಕಿನಕಪ್ಪತ್ತಗುಡ್ಡಕ್ಕೆ ಆಗಮಿಸಿದರು. ಅಲ್ಲಿ ದೀರ್ಘ ಅನುಷ್ಟಾನಗೊಂಡು ಆಧ್ಯಾತ್ಮ ಸಾಧನೆಯಸಿದ್ಧಿಯನ್ನು ಪಡೆದು ಹಿರೇವಡ್ಡಟ್ಟಿಗೆ ಬಂದ ಶ್ರೀಗಳು ಭಕ್ತರ ಸಹಕಾರದೊಂದಿಗೆಶ್ರೀಮಠವನ್ನು ಸ್ಥಾಪಿಸಿದರು.ಕರ್ತೃ ಶ್ರೀಗಳು ಹಿರೇವಡ್ಡಟ್ಟಿಯಲ್ಲಿ ನೆಲೆಸಿ ಶ್ರೀಮಠವನ್ನು ಸ್ಥಾಪಿಸಿದ ನಂತರಶ್ರೀಮಠದಲ್ಲಿ ಧಾರ್ಮಿಕ ಆಚರಣೆಗಳೊಂದಿಗೆ ನಿತ್ಯ ಶಿವಾನುಭವಗೋಷ್ಟಿಗಳನ್ನು ನಡೆಸಿಭಕ್ತರಿಗೆ ಸೂಕ್ತ ಮಾರ್ಗದರ್ಶನ ಮಾಡುತ್ತಿದ್ದರು. ಇವರ ನಂತರ ಶ್ರೀ ಷ.ಬ್ರ. ರುದ್ರದೇವಶಿವಾಚಾರ್ಯರು ಹಾಗೂ ಶ್ರೀ ಚನ್ನವೀರಯ್ಯ ಶಿವಾಚಾರ್ಯರು ಅಧಿಕಾರ ನಡೆಸಿದ್ದುಶ್ರೀಮಠವನ್ನು ಅಭಿವೃದ್ಧಿ ಪಥದತ್ತ ಮುನ್ನಡೆಸಿದ್ದಾರೆ. ಹಿಂದಿನ ಶ್ರೀಗಳಾದ ಶ್ರೀ ಷ.ಬ್ರ.ದೊಡ ್ಡರುದ್ರಯ್ಯ ಶಿವಾಚಾರ್ಯ ಮಹಾಸ್ವಾಮಿಗಳು ಶ್ರೀಮಠದಲ್ಲಿ ಧಾರ್ಮಿಕಆಚರಣೆಗಳೊಂದಿಗೆ ಶ್ರೀಮಠದ ಸರ್ವಾಂಗೀಣ ಅಭಿವೃದ್ದಿಗೆ ಶ್ರಮಿಸಿದ್ದಾರೆ ಹಾಗೂ ಭಕ್ತರನ್ನುಪುನಃ ಶ್ರೀಮಠದತ್ತ ಬರುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದು ಭಕ್ತರಿಗೆ ಸನ್ಮಾರ್ಗ ತೋರಿ1964ರ ಅಕ್ಟೋಬರ್ ಹತ್ತರಂದು ಲಿಂಗೈಕ್ಯರಾದರು.ಈಗಿನ ಶ್ರೀಗಳಾದ ಶ್ರೀ ಷ.ಬ್ರ. ವೀರೇಶ್ವರ ಶಿವಾಚಾರ್ಯ ಸ್ವಾಮಿಗಳು 1964ರಲ್ಲೇಶ್ರೀಮಠದ ಉತ್ತರಾಧಿಕಾರಿಗಳಾಗಿ ನೇಮಕಗೊಂಡು ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿಸಂಸ್ಕøತ ವೇದಾಭ್ಯಾಸಗಳನ್ನು ಮಾಡಿ ಶ್ರೀಮಠಕ್ಕೆ ಬಂದು 1996ರ ಮೇ 25 ರಂದುಶ್ರೀಮಠಕ್ಕೆ ಪಟ್ಟಾಧಿಕಾರಗೊಂಡರು. ಶ್ರೀಗಳು ಶ್ರೀಮಠದಲ್ಲಿ ಧಾರ್ಮಿಕ ಆಚರಣೆಗಳೊಂದಿಗೆಮಠದ ಸರ್ವಾಂಗೀಣ ಅಭಿವೃದ್ದಿಯಲ್ಲಿ ನಿರತರಾಗಿದ್ದು ಶ್ರೀ ಮಠದ ಕಟ್ಟಡವನ್ನುನವೀಕರಿಸಿದ್ದಾರೆ. ಹಾಗೆಯೇ ಶ್ರೀಮಠದ ಜಮೀನನ್ನು ಅಭಿವೃದ್ದಿ ಪಡಿಸಿ ಶ್ರೀಮಠವುಅಥಿರ್üಕವಾಗಿ ಸಬಲಗೊಳ್ಳುವಂತೆ ಮುತುವರ್ಜಿ ವಹಿಸಿದ್ದಾರೆ.

Swamiji

Swamiji Name :
ಶ್ರೀ ಷ.ಬ್ರ. ವೀರೇಶ್ವರ ಶಿವಾಚಾರ್ಯ ಸ್ವಾಮಿಗಳು
Date of Birth :
22-07-1957
Place :
ಹಿರೇವಡ್ಡಟ್ಟಿ, ಮುಂಡರಗಿ ತಾ||
Pattadikara :
25-05-1996
Photo :

Programs

ಪ್ರತಿ ಅಮವಾಸ್ಯೆಗೆ ರುದ್ರಾಭಿಷೇಕ
ಬಸವ ಜಯಂತಿ ಮತ್ತು ರೇಣುಕ ಜಯಂತಿ ಆಚರಣೆ
ಶಾª್ರÀಣ ಮಾಸದಲ್ಲಿ ನಿತ್ಯ ರುದ್ರಾಭಿಷೇಕ
ಶಿವರಾತ್ರಿಯಿಂದ ಯುಗಾದಿಯವರೆಗೆ ನಿತ್ಯ ಪುರಾಣ ಪ್ರವಚನ
ಶ್ರೀಗಳ ವರ್ಧಂತಿ ಮಹೋತ್ಸವ ದಿನದಂದು
ವಿವಿದ ಧಾರ್ಮಿಕ ಸಾಂಸ್ಕøತಿಕ ಕಾರ್ಯಕ್ರಮಗಳು

Photos

Full Address Kannada

ಶ್ರೀ ರುದ್ರೇಶ್ವರ ಸ್ವಾಮಿ ಹಿರೇಮಠ
ಹಿರೇವಡ್ಡಟ್ಟಿ - 582 113
ಮುಂಡರಗಿ ತಾ||, ಗದಗ ಜಿಲ್ಲೆ

Map

Near by Places

ಕಲ್ಕೆರೆ 10 ಕಿ.ಮೀ.
ಮುಂಡರಗಿ - 15 ಕಿ.ಮೀ.
ಶಿರಹಟ್ಟಿ - 35 ಕಿ.ಮೀ.
ಗದಗ - 30 ಕಿ.ಮೀ.

Statistic

7 Views
0 Rating
0 Favorite
0 Share
error: Content is protected !!