ಕೊಪ್ಪಳ ಜಿಲ್ಲೆಯ ಕುಷ್ಠಗಿ ತಾಲ್ಲೂಕು ಚಳಗೇರಿ ಗ್ರಾಮವು ತಾಲ್ಲೂಕು ಕೇಂದ್ರದಿಂದ14 ಕಿ.ಮೀ. ದೂರದಲ್ಲಿದ್ದು ಈ ಗ್ರಾಮದಲ್ಲಿ ಸುಮಾರು 13ನೇ ಶತಮಾನದಲ್ಲಿ ಶ್ರೀ ಷ.ಬ್ರ.ರುದ್ರಮುನಿ ಶಿವಾಚಾರ್ಯ ಸ್ವಾಮಿಗಳಿಂದ ಸ್ಥಾಪಿತಗೊಂಡಿರುವ ಶ್ರೀ ರಂಭಾಪುರಿ ಪೀಠದಶಾಖಾಮಠವಾಗಿರುವ ಶ್ರೀ ಹಿರೇಮಠವು ಅಸ್ತಿತ್ವದಲ್ಲಿದ್ದು ತನ್ನ ಧಾರ್ಮಿಕ ಆಚರಣೆಗಳಮೂಲಕ ಈ ಭಾಗದ ಪ್ರಮುಖ ಧಾರ್ಮಿಕ ಕೇಂದ್ರವಾಗಿ ಬೆಳೆದುಬಂದಿದೆ.ಕರ್ತೃಗುರುಗಳಾದ ಶ್ರೀ ರುದ್ರಮುನಿ ಶಿವಾಚಾರ್ಯ ಸ್ವಾಮಿಗಳು ಲೋಕಸಂಚಾರಕೈಗೊಂಡು ಆನೆಗುಂದಿ ಮಾರ್ಗವಾಗಿ ಚಳಗೇರಿಗೆ ದಯಮಾಡಿಸುತ್ತಾರೆ. ಆಗ ಊರಿನಜನರು ಶ್ರೀಗಳವರ ಆಶೀರ್ವಾದ ಪಡೆದು ಶ್ರೀಗಳವರಿಗೆ ಒಂದು ಶಿಲಾಮಂಟಪದಮಠವನ್ನು ಊರಿನ ಮಧ್ಯಭಾಗದಲ್ಲಿ ಕಟ್ಟಿಸಿದರು. ಊರಿನ ಪಶ್ಚಿಮ ದಿಕ್ಕಿನಲ್ಲಿ ಹಳ್ಳದಗುಂಡಿನವರೆಗೂ ಇರುವ ಭೂಮಿಯನ್ನು ಶ್ರೀಮಠಕ್ಕೆ ದಾನ ಮಾಡಿದರು. ಕರ್ತೃಗುರುಗಳನಂತರ ಅಧಿಕಾರಕ್ಕೆ ಬಂದ ಶ್ರೀ ಪಂಚಾಕ್ಷರ ಶಿವಾಚಾರ್ಯ ಸ್ವಾಮಿಗಳ ಗದ್ದುಗೆಶ್ರೀಮಠದಲ್ಲಿಯೇ ಸ್ಥಾಪಿತಗೊಂಡಿದೆ. ಶ್ರೀಗಳು ಮಹಾಮಹಿಮರಾಗಿದ್ದು ಶ್ರೀಮಠದಅಭಿವೃದ್ಧಿಗೆ ಶ್ರಮಿಸಿದ್ದಾರೆ.ಈಗಿನ ಹಿರಿಯ ಶ್ರೀಗಳಾದ ಶ್ರೀ ವಿರುಪಾಕ್ಷಲಿಂಗ ಶಿವಾಚಾರ್ಯ ಸ್ವಾಮಿಗಳು1969ರ ಏಪ್ರಿಲ್ 30 ರಲ್ಲಿ ಶ್ರೀಮಠಕ್ಕೆ ಪಟ್ಟಾಧಿಕಾರದ ಅನುಗ್ರಹ ಪಡೆದು ಶ್ರೀಮಠವನ್ನುಸಮರ್ಥವಾಗಿ ಮುನ್ನಡೆಸಿ ಕೊಂಡು ಬರುತ್ತಿದ್ದಾರೆ. ಶ್ರೀಗಳು ಬಾಲ್ಯದಿಂದಲೇಶಿವಪೂಜಾನಿಷ್ಠರು ಆಗಿದ್ದು ವೀರಶೈವ ಧರ್ಮಾಚರಣೆಗಳ ಬಗ್ಗೆ ಜನರಿಗೆ ಅರಿವುಮೂಡಿಸುವ ಕಾರ್ಯ ನಿರ್ವಹಿಸುತ್ತಿದ್ದಾರೆ.ಶ್ರೀಗಳು ಶ್ರೀಮಠದ ಅಧಿಕಾರ ವಹಿಸಿಕೊಂಡಾಗಿನಿಂದಲೂ ಧಾರ್ಮಿಕ,ಸಾಮಾಜಿಕ ಹಾಗೂ ಶೈಕ್ಷಣಿಕವಾಗಿಯೂ ಕಾರ್ಯನಿರ್ವಹಿಸುತ್ತಾ ಬಂದಿದ್ದಾರೆ. ಸಕಲಸದ್ಭಕ್ತರ ಅಪೇಕ್ಷೆಯ ಮೇರೆಗೆ 1994ರಲ್ಲಿ ಪೂಜ್ಯ ವಿರೂಪಾಕ್ಷಲಿಂಗ ಶಿವಾಚಾರ್ಯರಪಟ್ಟಾಭಿಷೇಕದ ರಜತಮಹೋತ್ಸವ ನಡೆಯಿತು. ಇದಾದ ನಂತರದ ದಿನವೇ ಶ್ರೀಗಳವರಅಪೇಕ್ಷೆಯಂತೆ 1994ರ ಮೇ 23ರಲ್ಲಿ ಈಗಿನ ಕಿರಿಯ ಶ್ರೀಗಳಾದ ಶ್ರೀ ವೀರಸಂಗಮೇಶ್ವರಶಿವಾಚಾರ್ಯ ಸ್ವಾಮಿಗಳನ್ನು ಪಟ್ಟಕ್ಕೆ ತರಲಾಯಿತು. ಉಭಯ ಶ್ರೀಗಳೂ ಶ್ರೀಮಠವನ್ನುಸಮರ್ಥವಾಗಿ ಮುನ್ನಡೆಸುತ್ತಿದ್ದು ಈ ಭಾಗದ ಭಕ್ತರಿಗೆ ಸನ್ಮಾರ್ಗ ತೋರುತ್ತಾ ಅವರಿಗೆವೀರಶೈವ ಧರ್ಮಾಚರಣೆಗಳ ಬಗ್ಗೆ ಅರಿವು ಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
Swamiji
Swamiji Name :
ಶ್ರೀ ಷ.ಬ್ರ. ವಿರೂಪಾಕ್ಷಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು
Date of Birth :
15-12-1934
Place :
ಚಳಗೇರಾ, ಕುಷ್ಟಗಿ ತಾ||
Pattadikara :
30-4-1969
Photo :
Swamiji Name :
ಶ್ರೀ ಷ.ಬ್ರ. ವೀರಸಂಗಮೇಶ್ವರ ಶಿವಾಚಾರ್ಯ ಸ್ವಾಮಿಗಳು
Date of Birth :
25-3-1975
Place :
ಚಳಗೇರಾ, ಕುಷ್ಟಗಿ ತಾ||
Pattadikara :
22-5-1993
Photo :
Programs
ವೈಶಾಖ ಶುದ್ಧ ತ್ರಯೋದಶಿಗೆ ವರ್ಧಂತಿ ಮಹೋತ್ಸವ ಹಾಗೂ ವಿವಿಧ ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳು.
ಶ್ರಾವಣ ಮಾಸದಲ್ಲಿ ನಿತ್ಯ ರುದ್ರಾಭಿಷೇಕ, ಪ್ರವಚನ.
Institutions
ಕಿರಿಯ / ಹಿರಿಯ ಪ್ರಾಥಮಿಕ ಶಾಲೆ.
ಪದವಿ ಪೂರ್ವ ಕಾಲೇಜು ವಿದ್ಯಾರ್ಥಿ ನಿಲಯ.