Shree Rudramuneshwara Samsthana Matha

Shree Rudramuneshwara Samsthana Matha Claimed

ಶ್ರೀ ರುದ್ರಮುನೇಶ್ವರ ಸಂಸ್ಥಾನ ಮಠ

Average Reviews

Description

ಶ್ರೀ ರುದ್ರಮುನೇಶ್ವರ ಸಂಸ್ಥಾನ ಮಠ

ಕರ್ತೃ – ಶ್ರೀ ಷ.ಬ್ರ. ರುದ್ರಮುನೇಶ್ವರ ಶಿವಾಚಾರ್ಯ ಸ್ವಾಮಿಗಳು

ಬೀದರ್ ತಾಲ್ಲೂಕಿನ ಚಾಂಬೋಳ ಗ್ರಾಮದ ಮಧ್ಯಭಾಗದಲ್ಲಿ ಪ್ರಾಚೀನಪರಂಪರೆಯನ್ನು ಹೊಂದಿರುವ ಶ್ರೀ ರುದ್ರಮುನೇಶ್ವರ ಸಂಸ್ಥಾನ ಮಠವು ಅಸ್ತಿತ್ವದಲ್ಲಿದ್ದುಶ್ರೀಮದ್ ಉಜ್ಜಯಿನಿ ಪೀಠದ ಶಾಖಾಮಠವಾಗಿ ಶಿಷ್ಯವರ್ಗದ ಪರಂಪರೆಯಲ್ಲಿ ಬೆಳೆದುಬಂದಿದೆ. ಶ್ರೀಮಠದ ಕರ್ತೃಗುರುಗಳೆಂದು ಶ್ರೀ ಷ.ಬ್ರ. ರುದ್ರಮುನೇಶ್ವರ ಶಿವಾಚಾರ್ಯಸ್ವಾಮಿಗಳನ್ನು ಗುರುತಿಸಲಾಗಿದ್ದು ಕಾಲಮಾನದ ಬಗ್ಗೆ ಸ್ಪಷ್ಟತೆಯಿಲ್ಲ.ಶ್ರೀಮಠವು ಅತಿ ಪ್ರಾಚೀನ ಕಾಲದ್ದಾಗಿದ್ದು 20 ಜನ ಗುರುಗಳು ಅಧಿಕಾರನಡೆಸಿರಬಹುದೆಂದು ಹೇಳಲಾಗಿದ್ದರೂ, ಸೂಕ್ತ ದಾಖಲೆಗಳು ಲಭ್ಯವಿಲ್ಲ. ಹಾಗೂ ಶ್ರೀಮಠದಪಟ್ಟಕ್ಕೆ ಬರುವ ಎಲ್ಲಾ ಶ್ರೀಗಳು ಕರ್ತೃಗುರುಗಳ ಹೆಸರನ್ನೇ ಅಭಿದಾನ ಪಡೆದಿರುವುದರಿಂದಶ್ರೀಮಠದ ಇತಿಹಾಸವನ್ನು ನಿಖರವಾಗಿ ದಾಖಲಿಸಲು ಸಾದ್ಯವಾಗುವುದಿಲ್ಲ. ಹಿಂದಿನಶ್ರೀಗಳಾದ ಲಿಂ. ಶ್ರೀ ಷ.ಬ್ರ. ರುದ್ರಮುನೇಶ್ವರ ಶಿವಾಚಾರ್ಯರು ಲಿಂಗೈಕ್ಯರಾದ ನಂತರಶ್ರೀಮಠವು 40 ವರ್ಷಗಳ ಕಾಲ ಖಾಲಿ ಉಳಿದಿದೆ.ಪ್ರಸ್ತುತ ಶ್ರೀಗಳಾದ ಶ್ರೀ ಷ.ಬ್ರ. ರುದ್ರಮುನಿ ಶಿವಾಚಾರ್ಯ ಸ್ವಾಮಿಗಳು 1963ರಮಾರ್ಚ್ 18ರಂದು ಶ್ರೀಮಠದ ಪಟ್ಟಾಧಿಕಾರವನ್ನು ಸ್ವೀಕರಿಸಿದ್ದು ಅಂದಿನಿಂದ ಶ್ರೀಮಠವುಅಭಿವೃದ್ಧಿ ಕಡೆಗೆ ಮುಖ ಮಾಡಿದೆ. ಶ್ರೀಗಳು ಶಿವಯೋಗ ಮಂದಿರದಲ್ಲಿ ಆಧ್ಯಾತ್ಮ ಶಿಕ್ಷಣಪಡೆದವರಾಗಿದ್ದು ತಮ್ಮ ವಿಚಾರಗಳ ಮೂಲಕ ಭಕ್ತರಲ್ಲಿ ಧಾರ್ಮಿಕ ಅರಿವನ್ನುಮೂಡಿಸುತ್ತಿದ್ದಾರೆ.ಶ್ರೀ ರುದ್ರಮುನಿ ಶಿವಾಚಾರ್ಯರು ಶ್ರೀಮಠವನ್ನು ಜೀರ್ಣೋದ್ಧಾರಗೊಳಿಸಿದ್ದುಶ್ರೀಮಠದ ಧಾರ್ಮಿಕ ಆಚರಣೆಗಳನ್ನು ಚುರುಕುಗೊಳಿಸಿದ್ದಾರೆ. ಹಾಗೂ ಶ್ರೀ ನೀಲಮ್ಮತಾಯಿ ಪ್ರಾಥಮಿಕ ಶಾಲೆ, ಶ್ರೀ ವೀರಭದ್ರೇಶ್ವರ ಪ್ರೌಢ ಶಾಲೆ ಮತ್ತು ಶ್ರೀ ವೀರಭದ್ರೇಶ್ವರ ಉಚಿತವಸತಿನಿಲಯಗಳನ್ನು ಪ್ರಾರಂಭಿಸಿದ್ದು ಇವುಗಳ ಮುಖೇನ ಬಡ ಅಸಹಾಯಕವಿದ್ಯಾರ್ಥಿಗಳಿಗೆ ನೆರವಾಗಿದ್ದಾರೆ. ಈ ರೀತಿ ಕಾಯಕದೊಂದಿಗೆ ಶೈಕ್ಷಣಿಕ ಮತ್ತು ಸಾಮಾಜಿಕಸೇವೆಯನ್ನು ಸದ್ದಿಲ್ಲದೆ ಮಾಡುತ್ತಿದ್ದಾರೆ. ಹಾಗೂ ಇತ್ತೀಚೆಗೆ ಪೂಜ್ಯ ಶ್ರೀ ಮುರುಘೇಂದ್ರದೇವರನ್ನು ತಮ್ಮ ಉತ್ತರಾಧಿಕಾರಿಗಳನ್ನಾಗಿ ನೇಮಿಸಿಕೊಂಡಿದ್ದಾರೆ.

Swamiji

Swamiji Name :
ಶ್ರೀ ಷ.ಬ್ರ. ರುದ್ರಮುನಿ ಶಿವಾಚಾರ್ಯ ಸ್ವಾಮಿಗಳು
Date of Birth :
1938
Place :
ಇಂಗಳೇಶ್ವರ, ಬಸವನಬಾಗೇವಾಡಿ ತಾ||
Pattadikara :
18-3-1963
Photo :

Programs

ಪ್ರತಿ ತಿಂಗಳ 17ರಂದು ಶಿವಾನುಭವ ಗೋಷ್ಠಿ, ಭಜನೆ ಹಾಗೂ ಸಂಗೀತ ದರ್ಬಾರ್.
ಮಾರ್ಚ್ ತಿಂಗಳಲ್ಲಿ ಶ್ರೀ ವೀರಭದ್ರೇಶ್ವರ ಜಾತ್ರೆ.
ಗುರುಪೌರ್ಣಿಮೆಯಂದು ಗ್ರಾಮಸ್ಥರಿಂದ ಗುರುವಂದನಾ ಕಾರ್ಯಕ್ರಮ.

Institutions

ಕಿರಿಯ / ಹಿರಿಯ ಪ್ರಾಥಮಿಕ / ಪ್ರೌಢ ಶಾಲೆ.
ವಿದ್ಯಾರ್ಥಿ ನಿಲಯ.

Photos

Full Address Kannada

ಶ್ರೀ ರುದ್ರಮುನೇಶ್ವರ ಸಂಸ್ಥಾನ ಮಠ
ಚಾಂಬೋಳ - 585 402
ಬೀದರ್ ತಾ||, ಜಿ||

Map

Near by Places

ಜನವಾಡ - 5 ಕಿ.ಮೀ.
ಬೀದರ್ - 14 ಕಿ.ಮೀ.
ಔರಾದ್ - 45 ಕಿ.ಮೀ.

Statistic

2 Views
0 Rating
0 Favorite
0 Share
error: Content is protected !!