ಹುಬ್ಬಳ್ಳಿ ನಗರದ ಮಂಗಳವಾರ ಪೇಟೆ ಪ್ರದೇಶದ ರುದ್ರಾಕ್ಷಿ ಮಠ ಓಣಿಯಲ್ಲಿಅಸ್ತಿತ್ವದಲ್ಲಿರುವ ಶ್ರೀ ರುದ್ರಾಕ್ಷಿ ಮಠವು ಸುಮಾರು 300 ವರ್ಷಗಳ ಹಿಂದೆ ಶ್ರೀ ಮ.ನಿ.ಪ್ರ.ಬಸವಲಿಂಗ ಶಿವಯೋಗಿಗಳಿಂದ ಸ್ಥಾಪಿತಗೊಂಡಿತೆಂದು ತಿಳಿದುಬರುತ್ತದೆ. ಆದರೆಕರ್ತೃಗುರುಗಳ ಬಗ್ಗೆಯಾಗಲೀ ನಂತರದ ಪರಂಪರೆಯ ಕುರಿತಾಗಲೀ ಸ್ಪಷ್ಟವಾದ ಮಾಹಿತಿಗಳು ದೊರಕದೇ ಇರುವುದು ಬೇಸರದ ಸಂಗತಿ.ಕರ್ತೃಗುರುಗಳ ನಂತರದ ಪರಂಪರೆಯಲ್ಲಿ ಶ್ರೀ ಚನ್ನಮಲ್ಲ ಸ್ವಾಮಿಗಳು, ಶ್ರೀಬಸವಲಿಂಗ ಸ್ವಾಮಿಗಳು, ಶ್ರೀ ರುದ್ರಸ್ವಾಮಿಗಳೆಂಬ ಕೆಲ ಶ್ರೀಗಳ ಮಾಹಿತಿ ತಿಳಿದುಬರುತ್ತಿದ್ದುಉಳಿದವರ ಬಗ್ಗೆ ಸ್ಪಷ್ಟತೆಯಿಲ್ಲ. ಬಹುಶಃ ಪರಂಪರೆಯ ಬಹುತೇಕ ಶ್ರೀಗಳು ಕರ್ತೃಗುರುಗಳಹೆಸರನ್ನೇ ಅಭಿದಾನ ಪಡೆದು ಅಧಿಕಾರಕ್ಕೆ ಬಂದಿರಬಹುದಾದ ಸಾಧ್ಯತೆಯಿದೆ. ಶ್ರೀ ರುದ್ರಾಕ್ಷಿಮಠದಲ್ಲಿ ಕರ್ತೃಗದ್ದುಗೆ ಸೇರಿದಂತೆ 5 ಗದ್ದುಗೆಗಳು ಹಾಗೂ ಬೈಲಹೊಂಗಲ ರುದ್ರಾಕ್ಷಿಮಠದಲ್ಲಿ 5 ಗದ್ದುಗೆಗಳು ಕಾಣಸಿಗುತ್ತಿದ್ದು ಪರಂಪರೆಯಲ್ಲಿ 10 ಜನ ಶ್ರೀಗಳು ಅಧಿಕಾರನಡೆಸಿರಬಹುದೆಂದು ಅಂದಾಜಿಸಬಹುದು.ಹಿಂದಿನ ಶ್ರೀಗಳಾದ ಶ್ರೀ ಮ.ನಿ.ಪ್ರ. ರುದ್ರಸ್ವಾಮಿಗಳು 1975ರಲ್ಲಿ ಶ್ರೀಮಠದಪೀಠಾಧಿಕಾರಿಗಳಾಗಿ ಅಧಿಕಾರ ಸ್ವೀಕರಿಸಿ ಭಕ್ತರ ಸಹಕಾರದೊಂದಿಗೆ ಶ್ರೀಮಠದ ಅಭಿವೃದ್ಧಿಗೆಶ್ರಮಿಸಿದ್ದು 1992ರಲ್ಲಿ ಲಿಂಗೈಕ್ಯರಾದರು. ಹಿರಿಯ ಶ್ರೀಗಳಿರುವಾಗಲೇ ಶ್ರೀಮಠದಉತ್ತರಾಧಿಕಾರಿಗಳಾಗಿ ನೇಮಕಗೊಂಡಿದ್ದ ಈಗಿನ ಶ್ರೀಗಳು 1992ರ ನವೆಂಬರ್2009ರಂದು ಶ್ರೀ ಮ.ನಿ.ಪ್ರ. ಬಸವಲಿಂಗ ಸ್ವಾಮಿಗಳೆಂಬ ಅಭಿದಾನದೊಂದಿಗೆ ಶ್ರೀಮಠದಅಧಿಕಾರ ಸ್ವೀಕರಿಸಿದರು.ಶ್ರೀ ಬಸವಲಿಂಗ ಸ್ವಾಮಿಗಳು ಹುಬ್ಬಳ್ಳಿ ಮೂರುಸಾವಿರ ಮಠ, ಶಿವಯೋಗಮಂದಿರಗಳಲ್ಲಿ ಅಭ್ಯಸಿಸಿದವರಾಗಿದ್ದು ಈಗಿನ ಹಾನಗಲ್ ಕುಮಾರ ಮಹಾಸ್ವಾಮಿಗಳಿಂದಶ್ರೀ ರುದ್ರಾಕ್ಷಿ ಮಠಕ್ಕೆ ಪಟ್ಟಾಧಿಕಾರದ ಅನುಗ್ರಹವನ್ನು ಪಡೆದರು. ಶ್ರೀಗಳು ಶ್ರೀಮಠವನ್ನುಧಾರ್ಮಿಕ, ಸಾಮಾಜಿಕ ಕಾರ್ಯಚಟುವಟಿಕೆಗಳೊಂದಿಗೆ ಸರ್ವತೋಮುಖವಾಗಿ ಅಭಿವೃದ್ಧಿಗೊಳಿಸಲು ಶ್ರಮಿಸುತ್ತಿದ್ದು ಪ್ರತಿದಿನ ಪ್ರವಚನಗಳನ್ನು ನಡೆಸುತ್ತಾರೆ. ಹಾಗೂ ಬಸವಾದಿಶಿವಶರಣರ ಜಯಂತಿಗಳನ್ನು ಪ್ರತಿವರ್ಷ ತಪ್ಪದೇ ಆಚರಿಸಿಕೊಂಡು ಬರುತ್ತಿದ್ದಾರೆ.
Swamiji
Swamiji Name :
ಶ್ರೀ ಮ.ನಿ.ಪ್ರ. ಬಸವಲಿಂಗ ಸ್ವಾಮಿಗಳು
Date of Birth :
1-6-1963
Place :
ಗುಡಗುಂಟಿ, ಲಿಂಗಸೂಗೂರು ತಾ||
Pattadikara :
9-11-1992
Photo :
Programs
ಪ್ರತಿನಿತ್ಯ ಮುಂಜಾನೆ ಪ್ರವಚನ. ಪ್ರತಿ ಹುಣ್ಣಿಮೆಗೆ ವಿಶೇಷ ಪೂಜೆ.
ಬಸವ ಜಯಂತಿ, ಅಕ್ಕಮಹಾದೇವಿ ಜಯಂತಿಗಳ ಆಚರಣೆ. ಸ್ವಾಮಿ ವಿವೇಕಾನಂದರ ಜಯಂತಿ ಆಚರಣೆ. ಕಾರ್ತೀಕ ಮಾಸದಲ್ಲಿ ಶ್ರೀ ನಿಜಗುಣರ ಜಯಂತಿ,
ಶ್ರೀ ಬಸವಲಿಂಗೇಶ್ವರ ದೀಪೋತ್ಸವ ಹಾಗೂ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು.
Institutions
ಕಿರಿಯ / ಹಿರಿಯ ಪ್ರಾಥಮಿಕ ಶಾಲೆ.
Photos
Full Address Kannada
ಶ್ರೀ ರುದ್ರಾಕ್ಷಿ ಮಠ
ಮಂಗಳವಾರ ಪೇಟೆ, ಹುಬ್ಬಳ್ಳಿ - 580 020
ಧಾರವಾಡ ಜಿ||