Shree Revanasiddeshwara Matha Mallabad

Shree Revanasiddeshwara Matha Mallabad Claimed

ಶ್ರೀ ರೇವಣಸಿದ್ದೇಶ್ವರ ಮಠ ಮಲ್ಲಾಬಾದ್

Average Reviews

Description

ಶ್ರೀ ರೇವಣಸಿದ್ದೇಶ್ವರ ಮಠ – ಮಲ್ಲಾಬಾದ್

ಕರ್ತೃ ಪೂಜ್ಯ ಶ್ರೀ ರೇವಣಸಿದ್ದೇಶ್ವರ ಶಿವಯೋಗಿಗಳು

ಅಫಜಲಪುರ ತಾಲ್ಲೂಕು ಕೇಂದ್ರದಿಂದ 8 ಕಿ.ಮೀ. ದೂರದಲ್ಲಿರುವ ಮಲ್ಲಾಬಾದ್ಗ್ರಾಮದಲ್ಲಿ ಅಸ್ತಿತ್ತ್ವದಲ್ಲಿರುವ ಶ್ರೀ ರೇವಣಸಿದ್ದೇಶ್ವರ ಮಠವು ಪ್ರಾಚೀನ ಇತಿಹಾಸವನ್ನುಹೊಂದಿದ್ದು ಶ್ರೀಮಠದ ಪರಂಪರೆಯು ಮಸುಕಾಗಿದೆ. ಶ್ರೀಮದ್ ರಂಭಾಪುರಿ ಪೀಠದಶಾಖಾಮಠವಾಗಿ ಪುತ್ರವರ್ಗದ ಪರಂಪರೆಯಲ್ಲಿ ಬೆಳೆದು ಬಂದಿರುವ ಶ್ರೀ ರೇವಣಸಿದ್ದೇಶ್ವರಮಠದ ಕರ್ತೃ ಗುರುಗಳು ಪೂಜ್ಯ ಶ್ರೀ ರೇವಣಸಿದ್ದೇಶ್ವರ ಶಿವಯೋಗಿಗಳು.ಪುರಾತನ ಮಠದ ಪರಂಪರೆಯ ಬಗ್ಗೆ ದಾಖಲೆಗಳ ಕೊರತೆಯಿಂದಾಗಿದಾಖಲಿಸಲು ಸಾಧ್ಯವಿಲ್ಲ. ಈಗಿನ ಗುರುಗಳಾದ ಶ್ರೀ ಷ.ಬ್ರ. ರೇವಣಸಿದ್ದ ಶಿವಾಚಾರ್ಯಸ್ವಾಮಿಗಳು ಶ್ರೀಮಠದ ಅಧಿಕಾರವನ್ನು ವಹಿಸಿಕೊಂಡು ಸಮರ್ಥವಾಗಿ ಮುನ್ನಡೆಸುತ್ತಿದ್ದಾರೆ.ಕರ್ತೃ ಗುರುಗಳ ನಂತರ ಈಗಿನ ಶ್ರೀಗಳ ಹೆಸರನ್ನು ಮಾತ್ರ ದಾಖಲಿಸಬಹುದಾಗಿದೆ.1975ರಲ್ಲಿ ಜನಿಸಿದ ಶ್ರೀ ಷ.ಬ್ರ. ರೇವಣಸಿದ್ದ ಶಿವಾಚಾರ್ಯರು ಪ್ರಾಥಮಿಕ/ಪ್ರೌಢ ಶಿಕ್ಷಣವನ್ನುಸ್ವಗ್ರಾಮ ಮಲ್ಲಾಬಾದ್ನಲ್ಲಿಯೇ ಪೂರೈಸಿ, ಗದಗದ ವೀರೇಶ್ವರ ಪುಣ್ಯಾಶ್ರಮದಲ್ಲಿ ಸಂಗೀತಅಭ್ಯಾಸವನ್ನು ಮಾಡಿದರು. ಹಾವೇರಿ ಜಿಲ್ಲೆ ಹಂದಿಗನೂರಿನ ಮಠದಲ್ಲಿ ವೈಧಿಕ-ಜ್ಯೋತಿಷ್ಯನಂತರ ಬಿಜಾಪುರ ಜಿಲ್ಲೆ ಬೊಮ್ಮನಹಳ್ಳಿಯ ಮಠದಲ್ಲಿ ವಚನ ಸಾಹಿತ್ಯದ ಬಗ್ಗೆ ಆಳವಾಗಿಅಧ್ಯಯನ ಮಾಡಿದರು.ತದನಂತರ ಶ್ರೀಮಠಕ್ಕೆ ಆಗಮಿಸಿದ ಶ್ರೀಗಳು ಚಿಂಚನಸೂರು ಮಠದ ಶ್ರೀ ಷ.ಬ್ರ.ಸಿದ್ದಮಲ್ಲ ಶಿವಾಚಾರ್ಯ ಸ್ವಾಮಿಗಳಿಂದ ಶ್ರೀಮಠದ ಪಟ್ಟಾಧಿಕಾರದ ಅನುಗ್ರಹ ಪಡೆದು1996ರ ಮಾರ್ಚ್ 29ರಲ್ಲಿ ಅಧಿಕಾರ ಸ್ವೀಕರಿಸಿದರು. ಶ್ರೀಗಳು ಶ್ರೀಮಠದ ಧಾರ್ಮಿಕಆಚರಣೆಗಳನ್ನು ಚುರುಕುಗೊಳಿಸಿದ್ದು ಪ್ರತಿ ಸೋಮವಾರ, ಅಮವಾಸ್ಯೆ, ಹುಣ್ಣಿಮೆಗಳಲ್ಲಿವಿಶೇಷ ಭಜನಾ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ. ಶ್ರಾವಣ ಮಾಸದಲ್ಲಿಪುರಾಣ ಪ್ರವಚನ ಕಾರ್ಯಕ್ರಮದೊಂದಿಗೆ ಪಲ್ಲಕ್ಕಿ ಉತ್ಸವವನ್ನು ನಡೆಸುತ್ತಾರೆ. ಶ್ರೀಗಳುಕ್ರಿಯಾಶೀಲರಾಗಿ ಮಠದ ಆಸ್ತಿಯನ್ನು ಅಭಿವೃದ್ದಿಪಡಿಸುತ್ತಿದ್ದು ಆದಾಯ ಮೂಲಗಳನ್ನುಹೆಚ್ಚಿಸಿದ್ದಾರೆ.

Swamiji

Swamiji Name :
ಶ್ರೀ ಷ.ಬ್ರ. ರೇವಣಸಿದ್ದ ಶಿವಾಚಾರ್ಯ ಸ್ವಾಮಿಗಳು
Date of Birth :
15-08-1975
Place :
ಮಲ್ಲಾಬಾದ್, ಅಫಜಲಪುರ ತಾ||
Pattadikara :
29-03-1996
Photo :

Programs

ಪ್ರತಿ ಸೋಮವಾರ, ಅಮವಾಸೆ, ಹುಣ್ಣಿಮೆಗೆ ವಿಶೇಷ ಭಜನಾ ಕಾರ್ಯಕ್ರಮ
ಶ್ರಾವಣದಲ್ಲಿ ಪುರಾಣ ಪ್ರವಚನ, ಪಲ್ಲಕಿ ಮಹೋತ್ಸವ

Photos

Full Address Kannada

ಶ್ರೀ ರೇವಣಸಿದ್ದೇಶ್ವರ ಮಠ
ಮಲ್ಲಾಬಾದ್ - 585 301
ಅಫಜಲಪುರ ತಾ||, ಕಲಬುರಗಿ ಜಿಲ್ಲೆ

Map

Near by Places

ಚೌಡಪುರ 16 ಕಿ.ಮೀ.
ಅಫಜಲಪುರ 8 ಕಿ.ಮೀ.
ಕಲಬುರಗಿ 45 ಕಿ.ಮೀ.

Statistic

1 Views
0 Rating
0 Favorite
0 Share
error: Content is protected !!