Shree Ramlingeshwara Dasoha Matha

Shree Ramlingeshwara Dasoha Matha Claimed

ಶ್ರೀ ರಾಮಲಿಂಗೇಶ್ವರ ದಾಸೋಹ ಮಠ

Average Reviews

Description

ಶ್ರೀ ರಾಮಲಿಂಗೇಶ್ವರ ದಾಸೋಹ ಮಠ

ಕರ್ತೃ – ಶ್ರೀ ಮ.ನಿ.ಪ್ರ. ಫಕೀರ ಮಹಾಸ್ವಾಮಿಗಳು

ಗದಗ ಜಿಲ್ಲೆ ಶಿರಹಟ್ಟಿ ತಾಲ್ಲೂಕಿನ ಬೆಳ್ಳಟ್ಟಿ ಗ್ರಾಮವು ತಾಲ್ಲೂಕು ಕೇಂದ್ರದಿಂದ 20ಕಿ.ಮೀ. ದೂರದಲ್ಲಿದ್ದು ಈ ಗ್ರಾಮದ ಹೊರವಲಯದ ಗುಡ್ಡದ ಮೇಲೆ ಶ್ರೀ ಮ.ನಿ.ಪ್ರ. ಫಕೀರಮಹಾಸ್ವಾಮಿಗಳಿಂದ ಸುಮಾರು 120 ವರ್ಷಗಳ ಹಿಂದೆ ಸ್ಥಾಪಿತಗೊಂಡಿರುವ ಶ್ರೀರಾಮಲಿಂಗೇಶ್ವರ ದಾಸೋಹ ಮಠವು ಈ ಭಾಗದ ಪ್ರಮುಖ ಧಾರ್ಮಿಕ ಕೇಂದ್ರವಾಗಿಬೆಳೆದುಬಂದಿದೆ. ಈ ಹಿಂದೆ ಪುರಾಣ ಪ್ರಸಿದ್ದ ಈ ಜಾಗದಲ್ಲಿ ರಾಮ – ಲಕ್ಷ್ಮಣರುವನವಾಸದ ಸಂದರ್ಭದಲ್ಲಿ ಇಲ್ಲಿನ ಬೆಟ್ಟದ ಮೇಲೆ ಪೂಜೆಗೆ ಕುಳಿತು ಈಶ್ವರಲಿಂಗವನ್ನುಸ್ಥಾಪನೆ ಮಾಡಿದ್ದರಿಂದಾಗಿ ಈ ಬೆಟ್ಟಕ್ಕೆ ರಾಮಲಿಂಗೇಶ್ವರ ಬೆಟ್ಟ ಎಂದು ಹೆಸರು ಬಂದಿದ್ದುಇಂತಹ ಪುರಾಣ ಪ್ರಸಿದ್ದ ಬೆಟ್ಟದಲ್ಲಿ ಪೂಜ್ಯ ಶ್ರೀ ಫಕೀರೇಶ್ವರರು ಮಠವನ್ನುಸ್ಥಾಪಿಸಿದ್ದರಿಂದಾಗಿ ಶ್ರೀ ಮಠಕ್ಕೆ ಶ್ರೀ ರಾಮಲಿಂಗೇಶ್ವರ ಮಠವೆಂಬ ಹೆಸರು ಬಂದಿದೆ.ಕರ್ತೃಗುರುಗಳು ತಮ್ಮ ತಪೋಶಕ್ತಿಯಿಂದಾಗಿ ಶ್ರೀಮಠಕ್ಕೆ ಭಕ್ತರನ್ನು ಸೆಳೆದುಅವರ ಸಹಕಾರದೊಂದಿಗೆ ಮಠವನ್ನು ಅಭಿವೃದ್ದಿ ಪಡಿಸಿದ್ದಾರೆ. ಶ್ರೀಗಳು ತಮ್ಮ ಧಾರ್ಮಿಕಕಾರ್ಯಕ್ರಮಗಳ ಮೂಲಕ ಭಕ್ತರಿಗೆ ಸೂಕ್ತ ಮಾರ್ಗದರ್ಶನ ನೀಡಿ ಭಕ್ತರನ್ನು ಉದ್ದರಿಸಿ1899ರಲ್ಲಿ ಲಿಂಗೈಕ್ಯರಾದರು. ಶ್ರೀ ಮಠದ ಪರಂಪರೆಯಲ್ಲಿ ನಂತರ ಬಂದಂತಹ ಗುರುಗಳುಶಿವಪೂಜಾನಿಷ್ಠರಾಗಿ ವೀರಶೈವ ಧರ್ಮವು ಬೆಳೆಯಲು ಸಹಾಯಕರಾಗಿದ್ದಾರೆ. ಹಿಂದಿನಶ್ರೀಗಳಾದ ಶ್ರೀ ಮ.ನಿ.ಪ್ರ. ವೀರಭದ್ರ ಮಹಾಸ್ವಾಮಿಗಳು ತಮ್ಮ ಧಾರ್ಮಿಕ ಕಾರ್ಯಕ್ರಮಗಳಮೂಲಕ ಭಕ್ತರಿಗೆ ಧಾರ್ಮಿಕ ಅರಿವನ್ನು ನೀಡಿದ್ದಾರೆ. ಶ್ರೀಗಳು ಶ್ರೀ ಮಠದ ಅಧಿಕಾರವಹಿಸಿಕೊಂಡ ನಂತರ ಶ್ರೀಮಠವು ಸರ್ವಾಂಗೀಣವಾಗಿ ಅಭಿವೃದ್ದಿಗೊಂಡಿದ್ದು ಶ್ರೀಗಳು2000ದ ಜುಲೈ 22ರಲ್ಲಿ ಲಿಂಗೈಕ್ಯರಾದರು.ಈಗಿನ ಶ್ರೀಗಳಾದ ಶ್ರೀ ಮ.ನಿ.ಪ್ರ. ಬಸವರಾಜ ಮಹಾಸ್ವಾಮಿಗಳು 2000ದನವೆಂಬರ್ 08ರಂದು ಶ್ರೀಮಠದ ಅಧಿಕಾರವನ್ನು ಸ್ವೀಕರಿಸಿ ಹಿಂದಿನ ಗುರುಗಳಹಾದಿಯಲ್ಲಿಯೇ ಶ್ರೀ ಮಠದಲ್ಲಿ ಅಭಿವೃದ್ದಿಕಾರ್ಯಗಳನ್ನು ಕೈಗೆತ್ತಿಕೊಂಡುಮುನ್ನಡೆಸುತ್ತಿದ್ದಾರೆ. ಶ್ರೀಮಠದಲ್ಲಿ ಪ್ರತಿನಿತ್ಯ ಧಾರ್ಮಿಕ ಆಚರಣೆಗಳೊಂದಿಗೆ ಯುಗಾದಿಪ್ರತಿಪದೆಯಿಂದ ಅಷ್ಟಮಿಯವರೆಗೆ ರಾಮಲಿಂಗೇಶ್ವರ ಜಾತ್ರೆಯು ನಡೆಯುತ್ತಾ ಬಂದಿದೆ.ಶ್ರೀಗಳು ಪ್ರತಿ ಮಂಗಳವಾರ ಮೌನ ಅನುಷ್ಟಾನದಲ್ಲಿರುವುದು ವಿಶೇಷ.

Swamiji

Swamiji Name :
ಶ್ರೀ ಮ.ನಿ.ಪ್ರ. ಬಸವರಾಜ ಮಹಾಸ್ವಾಮಿಗಳು
Date of Birth :
21-07-1976
Place :
ಅಕ್ಕಲಕೋಟೆ, ಸೊಲ್ಲಾಪುರ ಜಿಲ್ಲೆ
Pattadikara :
08-11-2000
Photo :

Programs

ಯುಗಾದಿ ಪ್ರತಿಪದೆಯಿಂದ ಅಷ್ಟಮಿವರೆಗೆ ಸಪ್ತಾಹ ಮತ್ತು ತೇರು
ಛಟ್ಟಿ ಅಮವಾಸೆ ನಂತರ ಕಾರ್ತಿಕೋತ್ಸವ
ಶ್ರೀಗಳು ಪ್ರತಿ ಮಂಗಳವಾರ ಮೌನ ಅನುಷ್ಠಾನ

Photos

Full Address Kannada

ಶ್ರೀ ರಾಮಲಿಂಗೇಶ್ವರ ದಾಸೋಹ ಮಠ
ಬೆಳ್ಳಟ್ಟಿ - 582 112
ಶಿರಹಟ್ಟಿ ತಾ||, ಗದಗ ಜಿಲ್ಲೆ

Map

Near by Places

ಸೂರಣಗಿ - 9 ಕಿ.ಮೀ.
ಶಿರಹಟ್ಟಿ - 20 ಕಿ.ಮೀ.
ಗದಗ - 55 ಕಿ.ಮೀ.
ಗುತ್ತಲ - 32 ಕಿ.ಮೀ.

Statistic

39 Views
0 Rating
0 Favorite
1 Share
error: Content is protected !!