ಕರ್ತೃ – ಶ್ರೀ ಮ.ನಿ.ಪ್ರ.ಸ್ವ. ಮರಿದೇವರು ಶಿವಯೋಗಿ ಮಹಾಸ್ವಾಮಿಗಳು
ಮಂಡ್ಯ ಜಿˉÉ್ಲ ಪಾಂಡವಪುರ ತಾಲ್ಲೂಕಿನ ಬೇಬಿ ಬೆಟ್ಟವು ಪುರಾತನಕಾಲದಿಂದಲೂ ತಪೋಭೂಮಿಯಾಗಿ ಭಕ್ತಜನರ ಭಕ್ತಿಕೇಂದ್ರವಾಗಿದ್ದು ಇಂತಹಪುಣ್ಯಭೂಮಿಯಲ್ಲಿ 1950ರ ಸುಮಾರಿಗೆ ಸ್ಥಾಪಿತಗೊಂಡ ಮಠವೇ ಶ್ರೀ ರಾಮಯೋಗೀಶ್ವರಮಠ. ಮಹಾತಪಸ್ವಿಗಳಾಗಿದ್ದ ಶ್ರೀ ರಾಮಯೋಗೀಶ್ವರರು ಪುರಾತನ ಕಾಲದಲ್ಲಿ ಬೇಬಿಬೆಟ್ಟದಲ್ಲಿ ನೆˉÉಗೊಂಡು ತಮ್ಮ ಅನುಷ್ಠಾನ ಬಲದಿಂದ ಭಕ್ತರನ್ನು ಉದ್ದರಿಸಿದ್ದರೆಂದುತಿಳಿದುಬರುತ್ತದೆ. ಈ ಕಾರಣದಿಂದಾಗಿ ಶ್ರೀಮಠಕ್ಕೆ ಶ್ರೀ ರಾಮಯೋಗೀಶ್ವರ ಮಠವೆಂಬಹೆಸರು ಬಂದಿದೆ.ಶ್ರೀ ರಾಮಯೋಗೀಶ್ವರರ ತಪಸ್ಸಿನಿಂದ ಪಾವನಗೊಂಡಿದ್ದ ಪುಣ್ಯಕ್ಷೇತ್ರದಮಹಿಮೆಯನ್ನರಿತು ತಮ್ಮ ಸಾಧನೆಗೆ ಸರಿಯಾದ ಕ್ಷೇತ್ರವೆಂದು ಇಲ್ಲಿಗೆ ಬಂದವರು ಕರ್ತೃಗುರುಗಳಾದ ಶ್ರೀ ಮ.ನಿ.ಪ್ರ.ಸ್ವ. ಮರಿದೇವರು ಶಿವಯೋಗಿಗಳು. ಶ್ರೀ ಮರಿದೇವರುಶಿವಯೋಗಿಗಳು ಬೆಳಗಾವಿ ಜಿˉÉ್ಲ ಮುರುಗೋಡಿನ ಮಹಾಂತ ಮಠದಲ್ಲಿದ್ದು ನಂತರˉÉೂೀಕಸಂಚಾರ ಮಾಡುತ್ತಾ ಕೊಳ್ಳೇಗಾಲ ತಾಲ್ಲೂಕಿನ ಶಂಭುಲಿಂಗೇಶ್ವರ ಬೆಟ್ಟದಲ್ಲಿನೆˉÉನಿಂತಿದ್ದಾಗೆ ಈ ಕ್ಷೇತ್ರದ ಮಹಿಮೆಯನ್ನರಿತು ಇಲ್ಲಿಗೆ ಬಂದು ನೆˉÉನಿಂತರು.ಮೊದಲು ಬೇಬಿಗ್ರಾಮಕ್ಕೆ ಆಗಮಿಸಿ ಭಕ್ತರ ಕಷ್ಟಸುಖಗಳಿಗೆ, ಸಮಸ್ಯೆಗಳಿಗೆಸ್ಪಂದಿಸುತ್ತಾ ಅಪಾರ ಭಕ್ತ ಬಳಗವನ್ನು ಸಂಪಾದಿಸಿಕೊಂಡಿದ್ದ ಶ್ರೀಗಳು ಭಕ್ತರ ಸಹಕಾರಪಡೆದು ಬೇಬಿ ಬೆಟ್ಟದಲ್ಲಿ ಸಂಪೂರ್ಣ ಜೀರ್ಣಗೊಂಡಿದ್ದ ಮಠವನ್ನುಜೀರ್ಣಾಭಿವೃದ್ದಿಗೊಳಿಸಿದರು. ತದ ನಂತರ 1950ರಲ್ಲಿ ಶ್ರೀಮಠಕ್ಕೆ ಪಟ್ಟಾಧಿಕಾರ ಸ್ವೀಕರಿಸಿದಶ್ರೀಗಳು ವೀರಶೈವ ಧರ್ಮಾಚರಣೆಗಳನ್ನು ಪ್ರಚುರಪಡಿಸಿದರು. ಸುಮಾರು 35 ವರ್ಷಗಳಕಾಲ ಮಠವನ್ನು ಮುನ್ನಡೆಸಿದ ಶ್ರೀಗಳು ನಂತರದಲ್ಲಿ ಈಗಿನ ಶ್ರೀಗಳಾದ ಶ್ರೀ ಮ.ನಿ.ಪ್ರ.ಸ್ವ.ಸದಾಶಿವ ಮಹಾಸ್ವಾಮಿಗಳನ್ನು ಪಟ್ಟಕ್ಕೆ ತಂದು ಬೇಬಿಗ್ರಾಮಕ್ಕೆ ತೆರಳಿ ನೆˉÉನಿಂತರು. ಕರ್ತೃಗುರುಗಳು 1993ರಲ್ಲಿ ಬೇಬಿಗ್ರಾಮದಲ್ಲಿ ಶ್ರೀ ದುರ್ದುಂಡೇಶ ್ವರ ಮಹಾಂತಶಿವಯೋಗಿಗಳವರ ಮಠವನ್ನು ಸ್ಥಾಪಿಸಿ ಅˉÉ್ಲೀ ಕಾಲವಾದರು.ಈಗಿನ ಶ್ರೀಗಳಾದ ಶ್ರೀ ಮ.ನಿ.ಪ್ರ.ಸ್ವ. ಸದಾಶಿವ ಮಹಾಸ್ವಾಮಿಗಳು ಭಕ್ತರಸಹಕಾರದೊಂದಿಗೆ ಕರ್ತೃಗುರುಗಳ ಪ್ರೇರಣೆಯಂತೆ ಧಾರ್ಮಿಕ ಆಚರಣೆಗಳನ್ನುಮುನ್ನಡೆಸಿಕೊಂಡು ಬಂದಿದ್ದು ಶ್ರೀಮಠದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ.
Swamiji
Swamiji Name :
ಶ್ರೀ ಮ.ನಿ.ಪ್ರ.ಸ್ವ. ಸದಾಶಿವ ಮಹಾಸ್ವಾಮಿಗಳು
Photo :
Programs
ಪ್ರತಿ ಅಮವಾಸ್ಯೆ, ಹುಣ್ಣಿಮೆಗಳಲ್ಲಿ ವಿಶೇಷ ಪೂಜೆ
¥ತಿÀ್ರ ಹಬ್ಬಗಳ ಆಚರಣೆ
Photos
Full Address Kannada
ಶ್ರೀ ರಾಮಯೋಗೀಶ್ವರ ಮಠ ಬೇಬಿ ಬೆಟ್ಟ,
ಚಿನಕುರಳಿ ಹೋಬಳಿ - 571 455
ಪಾಂಡವಪುರ ತಾ||, ಮಂಡ್ಯ ಜಿಲ್ಲೆ