Shree Rajarajeshwari Brahanmatha

Shree Rajarajeshwari Brahanmatha Claimed

ಶ್ರೀ ರಾಜರಾಜೇಶ್ವರಿ ಬೃಹನ್ಮಠ

Average Reviews

Description

ಶ್ರೀ ರಾಜರಾಜೇಶ್ವರಿ ಬೃಹನ್ಮಠ

ಕರ್ತೃ – ಪೂಜ್ಯ ಶ್ರೀ ಶರಣಬಸವಯ್ಯ ತಾತನವರು

ಕೊಪ್ಪಳ ಜಿಲ್ಲೆ ಗಂಗಾವತಿ ತಾಲ್ಲೂಕಿನ ಅರಳಹಳ್ಳಿ ಗ್ರಾಮದ ಹೊರಭಾಗದಲ್ಲಿಸುಮಾರು 80 ವರ್ಷಗಳ ಹಿಂದೆ ಪರಮಪೂಜ್ಯ ಶ್ರೀ ಶರಣಬಸವಯ್ಯನವರ ವಂಶಸ್ಥರಿಂದಸ್ಥಾಪಿತಗೊಂಡಿರುವ ಶ್ರೀ ರಾಜರಾಜೇಶ್ವರಿ ಬೃಹನ್ಮಠವು ಅಸ್ತಿತ್ವದಲ್ಲಿದ್ದು ಈ ಭಾಗದಲ್ಲಿ ತನ್ನಧಾರ್ಮಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಕಾರ್ಯಗಳಿಂದಾಗಿ ಹೆಸರು ಪಡೆದಿದೆ.ಶ್ರೀ ರಾಜರಾಜೇಶ್ವರಿ ಬೃಹನ್ಮಠದ ಮೂಲಪುರುಷರು ಕುಂಟೋಜಿ ಹಿರೇಮಠದವರು ಎಂದು ತಿಳಿದುಬರುತ್ತದೆ. ಈ ವಂಶದಲ್ಲಿ ಮುಂದೆ ಬಂದ ಪರಮಪೂಜ್ಯ ಶ್ರೀಶರಣಬಸವಯ್ಯ ತಾತನವರು ಈ ಮಠಕ್ಕೆ ಧಾರ್ಮಿಕ ಹಾಗೂ ಸಾಮಾಜಿಕ ರೂಪಕೊಟ್ಟುಕಾರ್ಯನಿರ್ವಹಿಸಿರುವುದರಿಂದ ಶ್ರೀಗಳನ್ನೇ ಕರ್ತೃಗುರುಗಳೆಂದು ಪರಿಗಣಿಸಲಾಗುತ್ತದೆ. ಶ್ರೀಶರಣಬಸವಯ್ಯ ತಾತನವರು ಮಹಾನ್ ಶಿವಪೂಜಾನಿಷ್ಠರಾಗಿದ್ದು ತಮ್ಮ ಧಾರ್ಮಿಕಆಚರಣೆಗಳ ಮೂಲಕ ಈ ಭಾಗದ ಭಕ್ತರನ್ನು ಶ್ರೀಮಠದತ್ತ ಸೆಳೆದಿದ್ದಾರೆ. ಶ್ರೀಗಳು ಸ್ವತಃಪುರಾಣ ಪ್ರವಚನಗಾರರಾಗಿದ್ದು ತಮ್ಮ ಪುರಾಣ ಪ್ರವಚನಗಳ ಮೂಲಕ ವೀರಶೈವಧರ್ಮಾಚರಣೆಗಳ ಮಹತ್ವವನ್ನು ಭಕ್ತರಿಗೆ ಸಾರುತ್ತಾ ಅವರನ್ನು ಸನ್ಮಾರ್ಗದತ್ತಕೊಂಡೊಯ್ದಿದ್ದಾರೆ.ಶ್ರೀ ಶರಣಬಸವಯ್ಯ ತಾತನವರು ಧಾರ್ಮಿಕವಾಗಿ ಅಲ್ಲದೇಸಾಮಾಜಿಕವಾಗಿಯೂ ಶ್ರೀಮಠದ ವತಿಯಿಂದ ಕಾರ್ಯಕ್ರಮಗಳನ್ನು ಆಯೋಜಿಸಿ ಅದರಮೂಲಕ ಬಡ ಅನಾಥ ಜನರ-ವಿದ್ಯಾರ್ಥಿಗಳಿಗೆ ಅನುಕೂಲಗಳನ್ನು ಮಾಡಿದ್ದಾರೆ. ಶ್ರೀಗಳುಸಾಧ್ಯವಾದಷ್ಟು ಬಡಜನರಿಗೆ ಸ್ಪಂದಿಸುತ್ತಾ ಶ್ರೀಮಠದಲ್ಲಿ ಪ್ರತಿನಿತ್ಯ ದಾಸೋಹವನ್ನುನಡೆಸಿಕೊಂಡು ಬಂದಿದ್ದು ಭಕ್ತರ ಪ್ರೀತಿಗೆ ಪಾತ್ರರಾಗಿದ್ದರು.ಈಗಿನ ಶ್ರೀಗಳಾದ ಶ್ರೀ ಗವಿಸಿದ್ಧೇಶ್ವರ ತಾತನವರು ಶ್ರೀಮಠದ ಅಧಿಕಾರವನ್ನುವಹಿಸಿಕೊಂಡು ಹಿಂದಿನ ಶ್ರೀಗಳ ಹಾದಿಯಲ್ಲಿಯೇ ಶ್ರೀಮಠವನ್ನು ಧಾರ್ಮಿಕ ಹಾಗೂಸಾಮಾಜಿಕ ಕಾರ್ಯಕ್ರಮಗಳ ಮೂಲಕ ಮುನ್ನಡೆಸುತ್ತಿದ್ದು ಭಕ್ತರ ಸಹಕಾರದೊಂದಿಗೆಅಭಿವೃದ್ಧಿಗೊಳಿಸುವತ್ತ ಗಮನಹರಿಸಿದ್ದಾರೆ. ಶ್ರೀಮಠದಲ್ಲಿ ಪ್ರತಿನಿತ್ಯ ಧಾರ್ಮಿಕಆಚರಣೆಗಳೊಂದಿಗೆ ಆಶ್ವೀಜ ಮಾಸದಲ್ಲಿ ಶ್ರೀ ಹಿರಿಯಗುರುಗಳ ಪುಣ್ಯಾರಾಧನೆ ಮತ್ತುಶಿವಾನುಭವ ಗೋಷ್ಠಿ ಹಾಗೂ ಸಾಮೂಹಿಕ ವಿವಾಹಗಳನ್ನು ನಡೆಸಲಾಗುತ್ತಿದೆ. ಶ್ರೀಮಠದವತಿಯಿಂದ ಬಳ್ಳಾರಿಯಲ್ಲಿ ವೀರಶೈವ ಬಡ ವಿದ್ಯಾರ್ಥಿನಿಯರ ಉಚಿತ ಪ್ರಸಾದ ಮತ್ತುವಸತಿನಿಲಯವನ್ನು ನಡೆಸಲಾಗುತ್ತಿದೆ.

Swamiji

Swamiji Name :
ಪೂಜ್ಯ ಶ್ರೀ ಗವಿಸಿದ್ದೇಶ್ವರ ತಾತನವರು
Date of Birth :
27-12-1971
Place :
ಅgಳಹಳ್ಳಿ, ಗಂಗಾವತಿ ತಾ||
Photo :

Programs

ಪ್ರತಿ ಅಮವಾಸ್ಯೆ, ಹುಣ್ಣಿಮೆಗಳಲ್ಲಿ ವಿಶೇಷಪೂಜೆ ಮತ್ತು ಶ್ರೀಗಳ ದರ್ಶನ.
ಆಶ್ವೀಜ ಬಹುಳ ಅಷ್ಟಮಿಯಂದು ಶ್ರೀ ಹಿರಿಯ ಗುರುಗಳ ಪುಣ್ಯಾರಾಧನೆ
ಮತ್ತು ಶಿವಾನುಭವ ಗೋಷ್ಠಿ ಹಾಗೂ ಸಾಮೂಹಿಕ ವಿವಾಹಗಳು.
ಶ್ರಾವಣ ಮಾಸ ಮತ್ತು ಕಾರ್ತೀಕ ಮಾಸಗಳಲ್ಲಿ ಶ್ರೀಗಳು ಭಕ್ತರ
ಮನೆಮನೆಗಳಿಗೆ ತೆರಳಿ ಪೂಜಾಕಾರ್ಯಕ್ರಮಗಳನ್ನು ನಡೆಸಿಕೊಡುತ್ತಾರೆ.

Institutions

ಕಿರಿಯ / ಹಿರಿಯ ಪ್ರಾಥಮಿಕ ಶಾಲೆ
ಐ.ಟಿ.ಐ. ಕಾಲೇಜು, ವಿದ್ಯಾರ್ಥಿ ನಿಲಯ, ಗೋಶಾಲೆ.
ಬಡ ವೀರಶೈವ ಲಿಂಗಾಯತ ವಿದ್ಯಾರ್ಥಿನಿಯರ
ಉಚಿತ ವಸತಿ ಮತ್ತು ಪಸಾದ ನಿಲಯ-ಬಳ್ಳಾರಿ.

Photos

Full Address Kannada

ಶ್ರೀ ರಾಜರಾಜೇಶ್ವರಿ ಬೃಹನ್ಮಠ
ಅರಳಹಳ್ಳಿ, ಸುಳೇಕಲ್ಲು ಪೋಸ್ಟ್ - 584119
ಗಂಗಾವತಿ ತಾ||, ಕೊಪ್ಪಳ ಜಿ||

Map

Near by Places

ಗಂಗಾವತಿ - 10 ಕಿ.ಮೀ.
ಕೊಪ್ಪಳ - 60 ಕಿ.ಮೀ.
ಹೊಸಪೇಟೆ - 60 ಕಿ.ಮೀ.
ಕನಕಗಿರಿ - 10 ಕಿ.ಮೀ.



Statistic

10 Views
0 Rating
0 Favorite
0 Share
error: Content is protected !!