Shree Rajapura Matha

Shree Rajapura Matha Claimed

ಶ್ರೀ ರಾಜಾಪುರ ಮಠ

Average Reviews

Description

ಶ್ರೀ ರಾಜಾಪುರ ಮಠ – ಟಿ. ಮಾಯಗೊಂಡನಹಳ್ಳಿ

ಕರ್ತೃ – ಶ್ರೀ ಷ.ಬ್ರ. ಸೋಮಶೇಖರ ಮಹಾಸ್ವಾಮಿಗಳು

ಹಾಸನ ಜಿಲ್ಲೆ ಹೊಳೆನರಸೀಪುರ ತಾಲ್ಲೂಕಿನ ಟಿ. ಮಾಯಗೊಂಡನಹಳ್ಳಿಗ್ರಾಮದಲ್ಲಿ ಕಳೆದ ಶತಮಾನದ ಪ್ರಾರಂಭದಲ್ಲಿ ಸ್ಥಾಪಿತಗೊಂಡು ಭಕ್ತರಲ್ಲಿ ಧರ್ಮ ಜಾಗೃತಿಮೂಡಿಸುತ್ತಿರುವ ಮಠವೇ ಶ್ರೀ ರಾಜಾಪುರ ಮಠ. ಶ್ರೀಮದ್ ರಂಭಾಪುರಿ ಪೀಠದಶಾಖಾಮಠವಾಗಿ ಪುತ್ರವರ್ಗದ ಪರಂಪರೆಯಲ್ಲಿ ಬೆಳೆದು ಬಂದಿರುವ ಶ್ರೀ ರಾಜಾಪುರಮಠದ ಕರ್ತೃಗುರುಗಳು ಶ್ರೀ ಷ.ಬ್ರ. ಸೋಮಶೇಖರ ಶಿವಾಚಾರ್ಯ ಮಹಾಸ್ವಾಮಿಗಳು.ಶ್ರೀಮಠದ ಮೂಲ ಮಠವು ರಾಜಾಪುರ ಗ್ರಾಮದಲ್ಲಿದ್ದು ಆ ಗ್ರಾಮವು ಇದೀಗಹೇಮಾವತಿ ಹಿನ್ನೀರಿನಲ್ಲಿ ಮುಳುಗಡೆಯಾಗಿದೆ. ಗ್ರಾಮವು ಮುಳುಗಡೆ ಆಗುವುದಕ್ಕೂಮುನ್ನವೇ ಕರ್ತೃಗಳ ತಂದೆ-ತಾಯಿಯರು ಕಾರಣಾಂತರಗಳಿಂದ ಹೊಳೆನರಸೀಪುರತಾಲ್ಲೂಕಿನ ಉದ್ದೂರು ಹೊಸಹಳ್ಳಿಗೆ ಬಂದು ನೆಲೆನಿಂತಿರುತ್ತಾರೆ. ನಂತರದಲ್ಲಿಕರ್ತೃಗುರುಗಳು ಪೂರ್ವಾಶ ್ರಮವನ್ನು ಬಿಟ್ಟು ಸಂಚಾರ ಹೊರಟು ಟಿ.ಮಾಯಾಗೊಂಡನಹಳ್ಳಿಗೆ ಬಂದು ಭಕ್ತರ ಒತ್ತಾಸೆಯಂತೆ ಬಹುವರ್ಷಗಳ ಕಾಲ ನೆಲೆನಿಂತುನಂತರ 1905ರಲ್ಲಿ ಶ್ರೀ ರಾಜಾಪುರಮಠವನ್ನು ಸ್ಥಾಪಿಸಿದರು.ಟಿ. ಮಾಯಗೊಂಡನಹಳ್ಳಿಯಲ್ಲಿ ಮಠ ಸ್ಥಾಪಿಸಿದ ಶ್ರೀಗಳು ತದನಂತರಹುಣಸೂರು ತಾ|| ಮಾದಹಳ್ಳಿ ಮಠಕ್ಕೆ ತೆರಳಿ ಅಲ್ಲಿ 40 ವರ್ಷಗಳ ಕಾಲ ಇದ್ದು ಉಭಯಮಠಗಳನ್ನು ಅಭಿವೃದ್ಧಿಪಡಿಸಿ ನಂತರ ಮಾದಹಳ್ಳಿಯ ಮಠದಲ್ಲೇ ಲಿಂಗೈಕ್ಯರಾದರು. ಇವರನಂತರ 1955ರಲ್ಲಿ ಶ್ರೀಮಠದ ಪಟ್ಟಕ್ಕೆ ಬಂದವರು ಹಿಂದಿನ ಶ್ರೀಗಳಾದ ಶ್ರೀ ಷ.ಬ್ರ.ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು. ಶ್ರೀಗಳು ಶ್ರೀಮಠದ ಧಾರ್ಮಿಕ ಆಚರಣೆಗಳನ್ನುಚುರುಕುಗೊಳಿಸಿ ಮಠವನ್ನು ಪ್ರಗತಿಪಥದತ್ತ ಮುನ್ನಡೆಸಿದರು. ಗುರು-ವಿರಕ್ತರಲ್ಲಿಸಮಭಾವನೆಯನ್ನು ಹೊಂದಿದ್ದ ಶ್ರೀಗಳು ಸಮಾಜದ ಅಭಿವೃದ್ಧಿಗೆ ಶ್ರಮಿಸಿ 2008ರಲ್ಲಿಲಿಂಗೈಕ್ಯರಾದರು.ಈಗಿನ ಶ್ರೀಗಳಾದ ಶ್ರೀ ಷ.ಬ್ರ. ಸೋಮಶೇಖರ ಶಿವಾಚಾರ್ಯ ಸ್ವಾಮಿಗಳು2008ರ ಮಾರ್ಚ್ 16ರಲ್ಲಿ ಶ್ರೀಮಠದ ಪಟ್ಟಕ್ಕೆ ಬಂದಿದ್ದು ಹಿಂದಿನ ಪರಂಪರೆಯಹಾದಿಯಲ್ಲಿ ಶ್ರೀಮಠವನ್ನು ಸಮರ್ಥವಾಗಿ ಮುನ್ನಡೆಸುತ್ತಿದ್ದಾರೆ. ಶ್ರೀಮಠದಲ್ಲಿ ಹಿಂದಿನಶ್ರೀಗಳ ಗದ್ದುಗೆಯನ್ನು ಸ್ಥಾಪಿಸಿ ನಿತ್ಯಪೂಜೆಗೆ ಒಳಪಡಿಸಿರುವ ಶ್ರೀಗಳು ಶ್ರಾವಣ ಮಾಸದಕಡೇ ಸೋಮವಾರ ಕರ್ತೃಗಳ ಆರಾಧನೆಯನ್ನು ನಡೆಸುತ್ತಾರೆ.

Swamiji

Swamiji Name :
ಶ್ರೀ ಷ.ಬ್ರ. ಸೋಮಶೇಖರ ಶಿವಾಚಾರ್ಯ ಸ್ವಾಮಿಗಳು
Date of Birth :
10-6-1987
Place :
ಉದ್ದೂರು ಹೊಸಹಳ್ಳಿ, ಹೊಳೆನರಸೀಪುರತಾ||
Pattadikara :
16-03-2008
Photo :

Programs

ಶ್ರಾವಣ ಮಾಸದ ಕಡೇ ಸೋಮವಾರ ಕರ್ತೃಗುರುಗಳ ಪುಣ್ಯಾರಾಧನೆ
ಧನುರ್ಮಾಸದಲ್ಲಿ ನಿತ್ಯ ವಿಶೇಷ ಪೂಜೆ

Photos

Full Address Kannada

ಶ್ರೀ ರಾಜಾಪುರ ಮಠ
ಟಿ. ಮಾಯಗೊಂಡನಹಳ್ಳಿ, ಹಳ್ಳಿ
ಮೈಸೂರು ಪೋಸ್ಟ್ - 573210
ಹೊಳೆನರಸೀಪುರ ತಾ||, ಹಾಸನ ಜಿಲ್ಲೆ

Map

Near by Places

ಹಳ್ಳಿ ಮೈಸೂರು - 4 ಕಿ.ಮೀ.
ಹೊಳೆನರಸೀಪುರ - 12 ಕಿ.ಮೀ.
ಹಾಸನ - 40 ಕಿ.ಮೀ.

Statistic

159 Views
0 Rating
0 Favorite
0 Share
error: Content is protected !!