Shree Rachoteshwara Matha – Niluru

Shree Rachoteshwara Matha – Niluru Claimed

ಶ್ರೀ ರಾಚೋಟೇಶ್ವರ ಮಠ - ನೀಲೂರು

Average Reviews

Description

ಶ್ರೀ ರಾಚೋಟೇಶ್ವರ ಮಠ – ನೀಲೂರು

ಕರ್ತೃ ಪೂಜ್ಯ ಶ್ರೀ ರಾಚೋಟೇಶ್ವರ ಮಹಾಸ್ವಾಮಿಗಳು

ಅಫಜಲಪುರ ತಾಲ್ಲೂಕಿನ ನೀಲೂರು ಗ್ರಾಮದಲ್ಲಿ ಅಸ್ತಿತ್ತ್ವದಲ್ಲಿರುವ ಶ್ರೀರಾಚೋಟೇಶ್ವರ ಮಠವು ತನ್ನ ಪರಂಪರೆಯಿಂದಾಗಿ ಹಾಗೂ ತನ್ನ ಕಾರ್ಯಕ್ರಮಗಳಮೂಲಕ ಪ್ರಸಿದ್ದಿಯಲ್ಲಿದೆ. ಶ್ರೀಮದ್ ರಂಭಾಪುರಿ ಪೀಠದ ಶಾಖಾ ಮಠವಾಗಿ ಪುತ್ರವರ್ಗದಪರಂಪರೆಯಲ್ಲಿ ಬೆಳೆದು ಬಂದಿರುವ ಶ್ರೀಮಠದ ಸ್ಥಾಪಕ ಗುರುಗಳು ಪೂಜ್ಯ ಶ್ರೀರಾಚೋಟೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು.ಶ್ರೀ ರಾಚೋಟೇಶ್ವರ ಮಹಾಸ್ವಾಮಿಗಳು ಸಂಚಾರಿಗಳಾಗಿದ್ದು ಸಂಚಾರದಲ್ಲಿಲೋಕಾನುಭವ ಗಳಿಸಿ ನೀಲೂರು ಗ್ರಾಮಕ್ಕೆ ಆಗಮಿಸಿ ಮಠವನ್ನು ಸ್ಥಾಪನೆ ಮಾಡಿದರು.ಶ್ರೀಗಳು ಶಿವಪೂಜಾನಿಷ್ಠರಾಗಿದ್ದು ಶ್ರೀಮಠದಲ್ಲಿ ಶಿವಾನುಭವ ಶಿವಧೀಕ್ಷೆ ಕಾರ್ಯಕ್ರಮಗಳಮೂಲಕ ಅಪಾರ ಭಕ್ತ ಬಳಗವನ್ನು ಸಂಪಾದಿಸಿಕೊಂಡಿದ್ದರು. ಗುರುಗಳ ಧಾರ್ಮಿಕಕಾರ್ಯಕ್ರಮಗಳಿಂದ ಗ್ರಾಮವು ಸಂಸ್ಕಾರವನ್ನು ಪಡೆದು ಪ್ರಸಿದ್ಧಿಗೆ ಬಂದಿತು. ಗುರುಗಳುಮಠವನ್ನು ಸ್ಥಾಪಿಸಿದ ನಂತರ ಪುನಃ ಸಂಚಾರ ಕೈಗೊಂಡು ಧರ್ಮಪ್ರಚಾರ ಮಾಡಿವೀರಶೈವ ಧರ್ಮವನ್ನು ನಾಡಿನಾದ್ಯಂತ ಪಸರಿಸಿದರು.ಕರ್ತೃ ಗುರುಗಳು ಲಿಂಗೈಕ್ಯರಾದ ನಂತರ ಈವರೆಗೆ 8 ಜನ ಶ್ರೀಗಳು ಶ್ರೀಮಠವನ್ನುಮುನ್ನಡೆಸಿದ್ದು, ಧಾರ್ಮಿಕ, ಸಾಮಾಜಿಕ ಹಾಗೂ ಸಾಂಸ್ಕøತಿಕವಾಗಿ ಮಠವನ್ನುಶ್ರೀಮಂತಗೊಳಿಸಿದ್ದಾರೆ. ಹಿಂದಿನ ಶ್ರೀಗಳಾದ ಶ್ರೀ ಷ.ಬ್ರ. ಅಯ್ಯಪ್ಪ ಶಿವಾಚಾರ್ಯಮಹಾಸ್ವಾಮಿಗಳು ಈಗ್ಗೆ 65 ವರ್ಷಗಳ ಹಿಂದೆ ಲಿಂಗೈಕ್ಯರಾಗಿದ್ದು ಆನಂತರ ಶ್ರೀಮಠವುಮೂರೂವರೆ ದಶಕಗಳಿಗೂ ಅಧಿಕ ಕಾಲ ಖಾಲಿ ಉಳಿದಿದೆ. ಹೀಗೆ ಧೀರ್ಘ ಕಾಲ ಖಾಲಿಉಳಿದ ಶ್ರೀಮಠದ ಅಧಿಕಾರ ವಹಿಸಿಕೊಂಡವರು ಈಗಿನ ಶ್ರೀಗಳಾದ ಶ್ರೀ ಷ.ಬ್ರ.ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳು.1984ರ ಏಪ್ರಿಲ್ 04ರಲ್ಲಿ ಶ್ರೀಮಠದ ಪಟ್ಟಕ್ಕೆ ಬಂದ ಈಗಿನ ಶ್ರೀಗಳುಆಯುರ್ವೇದ ಶಾಸ್ತ್ರದಲ್ಲಿ ಪಾಂಡಿತ್ಯ ಗಳಿಸಿದವರು. ಶ್ರೀಗಳು ಮಠದ ಅಧಿಕಾರವಹಿಸಿಕೊಂಡ ಮೇಲೆ ಶ್ರೀಮಠವು ಸರ್ವವಿಧದಲ್ಲಿಯೂ ಅಭಿವೃದ್ದಿಯನ್ನು ಕಂಡಿದೆ. ಮಠದಆವರಣದಲ್ಲಿಯ ಗದ್ದುಗೆಗಳನ್ನು ನಿತ್ಯಪೂಜೆಗೆ ಒಳಪಡಿಸಿರುವ ಶ್ರೀಗಳು ದಸರಾದಲ್ಲಿಅನುಷ್ಠಾನವನ್ನು ಕೈಗೊಳ್ಳುತ್ತಾರೆ ಹಾಗೂ ಯುಗಾದಿ ಮತ್ತು ಶಿವರಾತ್ರಿಗಳಲ್ಲಿ ಪುರಾಣಪ್ರವಚನಗಳನ್ನು ಹೇಳಲಾಗುತ್ತದೆ.

Swamiji

Swamiji Name :
ಶ್ರೀ ಷ.ಬ್ರ. ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳು
Date of Birth :
1958
Place :
ಮಂಡೇವಾಲ, ಜೇವರ್ಗಿ ತಾ||
Pattadikara :
04-04-1984
Photo :

Programs

ಯುಗಾದಿಗೆ ಪುರಾಣ ಪ್ರವಚನ ಹಾಗೂ ಕಾರ್ಯಕ್ರಮಗಳು
ಶ್ರಾವಣ ಮಾಸದಲ್ಲಿ ವಿಶೇಷ ಪೂಜೆ ಹಾಗೂ ಭಜನೆ ಕಾರ್ಯಕ್ರಮ
ದಸರದಲ್ಲಿ ಶ್ರೀ ಗುರುಗಳು ಅನುಷ್ಠಾನದಲ್ಲಿ ಇರುತ್ತಾರೆ
ಪ್ರತಿ ಶಿವರಾತ್ರಿಗೆ ಪುರಾಣ ಪ್ರವಚನ

Photos

Full Address Kannada

ಶ್ರೀ ರಾಚೋಟೇಶ್ವರ ಮಠ ನೀಲೂರು - 585 213
ಅಫಜಲಪುರ ತಾ||, ಕಲಬುರಗಿ ಜಿಲ್ಲೆ

Map

Near by Places

ಕಲಬುರಗಿ 22 ಕಿ.ಮೀ.
ಆಳಂದ 40 ಕಿ.ಮೀ.
ಅಫಜಲಪುರ 40 ಕಿ.ಮೀ.

Statistic

2 Views
0 Rating
0 Favorite
0 Share
error: Content is protected !!