ತುಮಕೂರು ಜಿಲ್ಲೆ ಕೊರಟಗೆರೆ ತಾಲ್ಲೂಕಿನ ಸೋಂಪುರ ಹಾಗೂ ಹೊಳವನಹಳ್ಳಿಗ್ರಾಮಗಳ ಮಧ್ಯ ಭಾಗದಲ್ಲಿ ಅಸ್ತಿತ್ವದಲ್ಲಿರುವ ಶ್ರೀ ಪುಟ್ಟೇಶ್ವರ ಸ್ವಾಮಿ ಮಠವು ಪ್ರಾಚೀನಇತಿಹಾಸವನ್ನು ಹೊಂದಿದ್ದು 12ನೇ ಶತಮಾನದ ಬಸವಾದಿ ಶಿವಶರಣರ ಕಾಲದಲ್ಲಿಸ್ಥಾಪಿತಗೊಂಡಿತ್ತೆಂದು ಹೇಳಲಾಗಿದೆ. 12ನೇ ಶತಮಾನದ ಕ್ರಾಂತಿಯ ಕಾಲದಲ್ಲಿನಾಡಿನಾದ್ಯಂತ ಶರಣರು ಚದುರಿಹೋಗಿದ್ದು ಆಗ ಶ್ರೀ ಪುಟ್ಟೇಶ್ವರ ಸ್ವಾಮಿಗಳು ಕೂಡಸಂಚಾರ ಬಂದು ಈ ಭಾಗದಲ್ಲಿ ನೆಲೆಸಿದ್ದಾರೆಂದು ಹೇಳಲಾಗಿದೆ.ಶ್ರೀ ಪುಟ್ಟೇಶ್ವರರು ಹಾಗೂ ಬಾಳೇಶ್ವರರು ಎಂಬ ಇಬ್ಬರು ಶಿವಶರಣರು ಜೊತೆಜೊತೆಯಲ್ಲಿಯೇ ಸಂಚಾರ ಕೈಗೊಂಡು ಮಧುಗಿರಿ ಹತ್ತಿರದ ಸಿದ್ದಾಪುರ ಗ್ರಾಮದಲ್ಲಿಕೆಲಕಾಲ ನೆಲೆನಿಂತಿದ್ದರೆಂದು, ಬಾಳೇಶ್ವರರು ಅಲ್ಲಿಯೇ ಲಿಂಗೈಕ್ಯರಾದರೆಂದು ಹಾಗೂ ಶ್ರೀಪುಟ್ಟೇಶ್ವರರು ಅಲ್ಲಿಂದ ಮುಂದುವರೆದು ಸೋಂಪುರದ ಈ ಪ್ರದೇಶಕ್ಕೆ ಆಗಮಿಸಿ ಇಲ್ಲಿಯೇಜೀವಂತ ಸಮಾಧಿಯಾದರೆಂದು ತಿಳಿದು ಬರುತ್ತಿದೆ.ಹೀಗೆ ಶ್ರೀ ಮಠವು ತುಂಬಾ ಪ್ರಾಚೀನ ಕಾಲದ್ದೆಂದು ಹೇಳಲು ಮಠದವ್ಯಾಪ್ತಿಯಲ್ಲಿ ಕೆಲವೊಂದು ರಚನೆಗಳು ಕಂಡು ಬರುತ್ತವೆ ಹಾಗೂ ಕಳೆದ ಶತಮಾನದಲ್ಲಿಶಿತಿಲಗೊಂಡಿದ್ದ 63 ಕಲ್ಲಿನ ರಚನೆಗಳನ್ನು ಶೋದಿಸಿದ್ದರೆಂದು ತಿಳಿದು ಬರುತ್ತದೆ. ಶ್ರೀಮಠವು ಸುಮಾರು 700 ವರ್ಷಗಳ ಕಾಲ ಖಾಲಿ ಉಳಿದಿದ್ದು ಇದಕ್ಕೆ ಕಾರಣವೇನೆಂದುತಿಳಿದು ಬರುವುದಿಲ್ಲ. ಈ ಭಾಗದ ಭಕ್ತರು ಪುರಾತನ ಮಠ ಖಾಲಿ ಉಳಿಯಬಾರದೆಂದುಚಿತ್ರದುರ್ಗದ ಶ್ರೀ ಮುರುಘಾ ಮಠಕ್ಕೆ ಭಿನ್ನವಿಸಿಕೊಂಡಾಗ ಚಿತ್ರದುರ್ಗದಿಂದ ಶ್ರೀ ಸಿದ್ದಲಿಂಗಸ್ವಾಮಿಗಳು ಇಲ್ಲಿಗೆ 1916ರಲ್ಲಿ ಆಗಮಿಸಿ ಶ್ರೀ ಮಠದ ಜೀರ್ಣೋದ್ಧಾರ ಕೈಗೊಂಡು ಶ್ರೀಮಠವನ್ನು ಸುಸ್ಥಿತಿಗೆ ತಂದಿದ್ದಾರೆ.ಸುಮಾರು 80 ವರ್ಷಗಳ ಕಾಲ ಶ್ರೀ ಮಠವನ್ನು ಸಮರ್ಥವಾಗಿ ಮುನ್ನಡೆಸಿದಶ್ರೀಗಳು 1986ರಲ್ಲಿ ಈಗಿನ ಶ್ರೀಗಳಾದ ಶ್ರೀ ಮ.ನಿ.ಪ್ರ. ಸೋಮಶೇಖರ ಸ್ವಾಮಿಗಳನ್ನುಅಧಿಕಾರಕ್ಕೆ ತಂದು 1993ರಲ್ಲಿ ಲಿಂಗೈಕ್ಯರಾಗಿದ್ದಾರೆ. ಈಗಿನ ಶ್ರೀಗಳು ಹಿರಿಯ ಗುರುಗಳಹಾದಿಯಲ್ಲಿಯೇ ಶ್ರೀ ಮಠದ ಸರ್ವತೋಮುಖ ಅಭಿವೃದ್ದಿಗೆ ಶ್ರಮಿಸುತ್ತಿದ್ದು ಪ್ರತಿ ವರ್ಷಅಕ್ಟೋಬರ್ 13ರಂದು ಶ್ರೀ ಸಿದ್ದಲಿಂಗ ಸ್ವಾಮಿಗಳ ಪುಣ್ಯಾರಾಧನೆ ಕಾರ್ಯಕ್ರಮವನ್ನುಆಯೋಜಿಸುತ್ತಿದ್ದಾರೆ.
Swamiji
Swamiji Name :
ಶ್ರೀ ಮ.ನಿ.ಪ್ರ. ಸÉೂೀಮಶೇಖರ ಸ್ವಾಮಿಗಳು
Date of Birth :
22-01-1970
Place :
ಮುಕ್ತಿಹಳ್ಳಿ, ಚಿಕ್ಕಮಗಳೂರು ತಾ||
Pattadikara :
1986
Programs
ಪ್ರತಿ ಪೌರ್ಣಮಿಗೆ "ಅರಿವಿನ ಬೆಳಗು" ಕಾರ್ಯಕ್ರಮ ಅಕ್ಟೋಬರ್ 13ರಂದು ಶ್ರೀ ಸಿದ್ದಲಿಂಗ ಸ್ವಾಮಿಗಳ ಪುಣ್ಯಾರಾಧನೆ ಕಾರ್ತೀಕ ಮಾಸದಲ್ಲಿ ಪ್ರತಿ ಸೋಮವಾರ ವಿಶೇಷ ಪೂಜಾ ಕಾರ್ಯಕ್ರಮಗಳು ಶ್ರಾವಣ ಮಾಸದಲ್ಲಿ ನಿತ್ಯ ವಿಶೇಷ ಪೂಜೆ
Full Address Kannada
ಶ್ರೀ ಪುಟ್ಟೇಶ್ವರಸ್ವಾಮಿ ಮಠ (ದೊಡ್ಡ ಮಠ) ಸೋಂಪುರ, ಹೊಳವನಹಳ್ಳಿ ಹೋ|| ಕೊರಟಗೆರೆ ತಾ||, ತುಮಕೂರು ಜಿಲ್ಲೆ