Shree Puravargada Matha

Shree Puravargada Matha Claimed

ಶ್ರೀ ಪುರವರ್ಗದ ಮಠ

Average Reviews

Description

ಶ್ರೀ ಪುರವರ್ಗದ ಮಠ

ಕರ್ತೃ ಶ್ರೀ ಷ.ಬ್ರ. ಮಳೆಯೋಗೀಶ್ವರ ಮಹಾಸ್ವಾಮಿಗಳು

ಹೂವಿನಹಡಗಲಿ ತಾಲ್ಲೂಕು ಮಾನಿಹಳ್ಳಿ ಗ್ರಾಮವು ತಾಲ್ಲೂಕು ಕೇಂದ್ರದಿಂದ17ಕಿ.ಮೀ. ದೂರದಲ್ಲಿದ್ದು ಈ ಗ್ರಾಮದಲ್ಲಿ ಶ್ರೀ ಮಳೆಯೋಗೀಶ್ವರ ಮಹಾಸ್ವಾಮಿಗಳಿಂದಸುಮಾರು 450 ವರ್ಷಗಳ ಹಿಂದೆ ಸ್ಥಾಪಿತಗೊಂಡಿರುವ ಉಜ್ಜಯಿನಿ ಪೀಠದ ಶಾಖಾಮಠವಾದ ಶ್ರೀ ಪುರವರ್ಗದ ಮಠವು ಅಸ್ತಿತ್ವದಲ್ಲಿದ್ದು ತನ್ನ ಧಾರ್ಮಿಕ ಆಚರಣೆಗಳಿಂದಾಗಿ ಈಗ್ರಾಮದ ಜನರಲ್ಲಿ ಧಾರ್ಮಿಕ ಪ್ರಜ್ಞೆಯನ್ನು ಮೂಡಿಸುವಲ್ಲಿ ಯಶಸ್ವಿಯಾಗಿದೆ.ಕರ್ತೃಗುರುಗಳಾದ ಶ್ರೀ ಮಳೆಯೋಗೀಶ್ವರ ಮಹಾಸ್ವಾಮಿಗಳು ಸದಾ ಸಂಚಾರಿಗಳಾಗಿದ್ದು ಲೋಕಸಂಚಾರ ಮಾಡುತ್ತಾ ಈ ಗ್ರಾಮಕ್ಕೆ ಬಂದು ಇಲ್ಲಿ ಅನುಷ್ಠಾನಗೊಂಡುಭಕ್ತರಿಗೆ ವೀರಶೈವ ಧರ್ಮಾಚರಣೆಗಳ ಮಹತ್ವವನ್ನು ಸಾರುತ್ತಾ ಧರ್ಮೋಪದೇಶಮಾಡುತ್ತಿದ್ದರು. ಇಂತಹ ಶ್ರೀಗಳ ಅನುಷ್ಠಾನ ಶಕ್ತಿಗೆ ಬೆರಗಾದ ಗ್ರಾಮದ ಜನರು ಅವರನ್ನುಈ ಗ್ರಾಮದಲ್ಲೇ ನೆಲೆಗೊಳ್ಳುವಂತೆ ಮನವಿ ಮಾಡಿ ಅವರಿಗೆ ಮಠವನ್ನು ಕಟ್ಟಿಸಿಕೊಟ್ಟರು.ಶ್ರೀಗಳು ಶ್ರೀಮಠದಲ್ಲಿ ಧಾರ್ಮಿಕ ಆಚರಣೆಗಳನ್ನು ನಡೆಸುತ್ತಾ ಗ್ರಾಮದ ಜನರಿಗೆಸನ್ಮಾರ್ಗವನ್ನು ತೋರಿದರು.ಕರ್ತೃಗುರುಗಳ ನಂತರದ ಪರಂಪರೆಯ ಬಗ್ಗೆ ನಿಖರವಾದ ಮಾಹಿತಿಗಳುಲಭ್ಯವಿಲ್ಲ. ಇದಕ್ಕೆ ಕಾರಣ ಈಗಿನ ಶ್ರೀಗಳೂ ಸೇರಿದಂತೆ ಪರಂಪರೆಯ ಎಲ್ಲಾ ಗುರುಗಳೂಕರ್ತೃಗುರುಗಳ ಹೆಸರನ್ನೇ ಅಭಿದಾನ ಪಡೆದು ಅಧಿಕಾರ ನಡೆಸಿದುದು. ಇಲ್ಲಿನ ಭಕ್ತರುಹೇಳುವಂತೆ ಶ್ರೀಮಠದ ಈಗಿನ ಗುರುಗಳು 8ನೆಯವರು ಇರಬಹುದೆಂದುಅಂದಾಜಿಸಬಹುದು.ಈಗಿನ ಗುರುಗಳಾದ ಶ್ರೀ ಮಳೆ ಶಿವಯೋಗೀಶ್ವರ ಶಿವಾಚಾರ್ಯ ಸ್ವಾಮಿಗಳುಶ್ರೀಮಠದ ಪಟ್ಟಕ್ಕೆ ಬಂದಂದಿನಿಂದ ಶ್ರೀಮಠವು ಹೆಚ್ಚಿನ ಅಭಿವೃದ್ಧಿಯನ್ನು ಕಂಡಿದೆ. ಶ್ರೀಗಳುಶ್ರೀಮಠದಲ್ಲಿ ಧಾರ್ಮಿಕ ಆಚರಣೆಗಳೊಂದಿಗೆ ಸಾಮಾಜಿಕವಾಗಿಯೂ ಕಾರ್ಯನಿರ್ವಹಿಸುತ್ತಿದ್ದು, ನೂತನ ಕಟ್ಟಡವನ್ನು ನಿರ್ಮಿಸಿ ಅಭಿವೃದ್ಧಿಪಡಿಸಿದ್ದಾರೆ ಹಾಗೂ ಶ್ರೀಮಠದ ಆದಾಯಮೂಲಗಳನ್ನು ಅಭಿವೃದ್ಧಿಪಡಿಸಿ ಶ್ರೀಮಠಕ್ಕೆ ಹೆಚ್ಚಿನ ಆದಾಯ ಬರುವಂತೆ ಮಾಡಿದ್ದಾರೆ.ಶ್ರೀಗಳು ತಮ್ಮ ಕಾರ್ಯಕ್ರಮಗಳ ಮೂಲಕ ಶ್ರೀಮಠಕ್ಕೆ ಹೆಚ್ಚಿನ ಭಕ್ತರನ್ನು ಸೆಳೆದಿದ್ದಾರೆ.

Swamiji

Swamiji Name :
ಶ್ರೀ ಷ.ಬ್ರ. ಮಳೆಯೋಗೀಶ್ವರ ಶಿವಾಚಾರ್ಯ ಸ್ವಾಮಿಗಳು
Date of Birth :
16-2-1973
Place :
ಜಾಲವಾಡಗಿ, ಮುಂಡರಗಿ ತಾ||
Photo :

Programs

ಪ್ರತಿ ಅಮವಾಸ್ಯೆ, ಹುಣ್ಣಿಮೆಗೆ ವಿಶೇಷ ಪೂಜೆ.
ಪ್ರತಿ ಹಬ್ಬಗಳಲ್ಲಿ ವಿಶೇಷ ಪೂಜೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳು.
ಚೈತ್ರಮಾಸದಲ್ಲಿ ಶ್ರೀ ಮರುಳಸಿದ್ದೇಶ್ವರ ರಥೋತ್ಸವ ಹಾಗೂ ವಿವಿಧ ಧಾರ್ಮಿಕ,
ಸಾಂಸ್ಕøತಿಕ ಕಾರ್ಯಕ್ರಮಗಳು.

Institutions

ವಿದ್ಯಾರ್ಥಿ ನಿಲಯ.

Photos

Full Address Kannada

ಶ್ರೀ ಪುರವರ್ಗದ ಮಠ
ಮಾನಿಹಳ್ಳಿ - 583 216
ಹೂವಿನಹಡಗಲಿ ತಾ||, ಬಳ್ಳಾರಿ ಜಿ||

Map

Near by Places

ಹಿರೇಹಡಗಲಿ - 2 ಕಿ.ಮೀ.
ಹೂವಿನಹಡಗಲಿ - 17 ಕಿ.ಮೀ.
ಕುರುವತ್ತಿ - 27 ಕಿ.ಮೀ.

Statistic

19 Views
0 Rating
0 Favorite
0 Share
error: Content is protected !!