Shree Puravarga Hirematha

Shree Puravarga Hirematha Claimed

ಶ್ರೀ ಪುರವರ್ಗ ಹಿರೇಮಠ

Average Reviews

Description

ಶ್ರೀ ಪುರವರ್ಗ ಹಿರೇಮಠ

ಶ್ರೀ ಷ.ಬ್ರ. ಅಗ್ಗಣಿ ಚನ್ನಬಸವ ಶಿವಯೋಗಿಗಳು

ಸುಮಾರು 300 ವರ್ಷಗಳ ಇತಿಹಾಸವಿರುವ ಶ್ರೀ ಪುರವರ್ಗ ಹಿರೇಮಠವುಆವರಗೊಳ್ಳ ಗ್ರಾಮದಲ್ಲಿ ಅಸ್ತಿತ್ವದಲ್ಲಿದ್ದು ಶ್ರೀಮಠವು ಶ್ರೀ ರಂಭಾಪುರಿ ಪೀಠದ ಶಾಖಾಮಠವಾಗಿ ಪುತ್ರವರ್ಗದ ಪರಂಪರೆಯಲ್ಲಿ ಬೆಳೆದು ಬಂದಿದೆ. ಶ್ರೀಮಠವು ಗುರುವರ್ಗದಲ್ಲಿಮಾನ್ಯತೆ ಪಡೆದುಕೊಂಡು ಪಂಚಪೀಠಗಳಲ್ಲಿ ಸ್ಥಾನಮಾನ ಉಳಿಸಿಕೊಂಡು ಹೆಸರಾಗಿದೆ.ಪುರಾತನ ಗ್ರಾಮವಾದ ಆವರಗೊಳ್ಳದಲ್ಲಿ ಸುಮಾರು 900 ವರ್ಷಗಳ ಇತಿಹಾಸವಿರುವ ಶ್ರೀ ಕನ್ನೇಶ್ವರ ಹಾಗೂ ಶ್ರೀ ವೀರಭದ್ರೇಶ್ವರ ದೇವಸ್ಥಾನಗಳು ಅಸ್ತಿತ್ವದಲ್ಲಿವೆ. ಇಂತಹಪುರಾತನ ಇತಿಹಾಸ ಪ್ರಸಿದ್ಧ ಗ್ರಾಮದ ಊರ ಹೆಬ್ಬಾಗಿಲಿನಲ್ಲಿ ಶ್ರೀ ಅಗ್ಗಣಿ ಚನ್ನಬಸವಶಿವಯೋಗಿಗಳು ಮಠವನ್ನು ಸ್ಥಾಪಿಸಿ ಬೆಳೆಸಿದ್ದಾರೆ. ಆದರೆ ಪ್ರಸ್ತುತ ಮಠದಲ್ಲಿ ಶ್ರೀ ಅಗ್ಗಣಿಬಸವಣ್ಯಪ್ಪ ಸ್ವಾಮಿಗಳು, ಶ್ರೀ ಮುದ್ದುವೀರಪ್ಪಯ್ಯ ಸ್ವಾಮಿಗಳ ಗದ್ದುಗೆಗಳು ಮಾತ್ರ ಇದ್ದು,ಉಳಿದಂತೆ ಮಠದ ಉಳಿದ ಸ್ವಾಮಿಗಳ ಗದ್ದುಗೆಗಳ ಬಗ್ಗೆ ಮಾಹಿತಿ ಲಭ್ಯವಿಲ್ಲ.ರಂಭಾಪುರಿ ಪೀಠದ ಜಗದ್ಗುರು ಶ್ರೀ ಶಿವಾನಂದ ರಾಜೇಂದ್ರ ಸ್ವಾಮಿಗಳು 1929ರಲ್ಲಿ ಈ ಮಠದಲ್ಲಿ 3 ತಿಂಗಳುಗಳ ಕಾಲ ಅನುಷ್ಠಾನಗೊಂಡಿದ್ದರು. ನಂತರ ಜಗದ್ಗುರು ಶ್ರೀವೀರ ಗಂಗಾಧರೇಶ್ವರ ಸ್ವಾಮಿಗಳು 1973ರಲ್ಲಿ 45 ದಿನಗಳ ಕಾಲ ಅನುಷ್ಠಾನಗೊಂಡಿದ್ದರು.ಇದರ ನೆನಪಿಗಾಗಿ ಜಗದ್ಗುರುಗಳು ಅನುಷ್ಠಾನಕ್ಕೆ ಕುಳಿತ ಸ್ಥಳದಲ್ಲಿ ತೋರುಗದ್ದುಗೆಯನ್ನುನಿರ್ಮಿಸಲಾಗಿದೆ. 1980ರಲ್ಲಿ ಭಕ್ತರೆಲ್ಲಾ ಸೇರಿ ಶ್ರೀರೇಣುಕಾಚಾರ್ಯ ಮೂರ್ತಿ ಸ್ಥಾಪಿಸಿದ್ದಾರೆ.ಈಗಿನ ಗುರುಗಳಾದ ಶ್ರೀ.ಷ.ಬ್ರ. ಓಂಕಾರ ಶಿವಾಚಾರ್ಯ ಸ್ವಾಮಿಗಳು 1995 ರಆಗಸ್ಟ್ 9ರಂದು ಪಂಚಪೀಠಗಳ ಜಗದ್ಗುರುಗಳ ಆಶೀರ್ವಾದದಿಂದ, ಶ್ರೀಮಠದ ಅಧಿಕಾರವಹಿಸಿಕೊಂಡಿದ್ದು ಕೆಲಕಾಲ ಮಠಾಧೀಶರಿಲ್ಲದೆ ಖಾಲಿ ಉಳಿದಿದ್ದ ಮಠವನ್ನು ಅಭಿವೃದ್ಧಿಪಡಿಸಿ ಧಾರ್ಮಿಕ ಹಾಗೂ ಸಾಮಾಜಿಕವಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದಾರೆ.ಪ್ರಾಚೀನ ಇತಿಹಾಸವುಳ್ಳ ಈ ಮಠದಲ್ಲಿ ಹಳೆಯ ಕಾಲದ ಮುದ್ರೆ, ಬಟ್ಟಲು, ಶಂಖ,ಕಮಂಡಲ, ಬೆತ್ತ ಮುಂತಾದ ಪುರಾತನ ಪೂಜಾಪರಿಕರಗಳಿವೆ. ಶ್ರೀಗಳು ಇವುಗಳನ್ನು ಮತ್ತುಮಠದ ಜಮೀನು, ಶ್ರೀ ವೀರಭದ್ರೇಶ್ವರ, ಶ್ರೀ ಕನ್ನೇಶ್ವರ ದೇವಾಲಯಗಳಲ್ಲಿ ದೊರೆತಿರುವಶಿಲಾಶಾಸನಗಳನ್ನು ಮುಂದಿನ ಪೀಳಿಗೆಗೆ ಸಂರಕ್ಷಿಸುವ ಕೆಲಸ ಮಾಡುತ್ತಿದ್ದಾರೆ.

Swamiji

Swamiji Name :
ಶ್ರೀ ಷ.ಬ್ರ. ಓಂಕಾರ ಶಿವಾಚಾರ್ಯ ಸ್ವಾಮಿಗಳು
Date of Birth :
26-06-1969
Place :
ಆವರಗೊಳ್ಳ ದಾವಣಗೆರೆ ತಾ||
Pattadikara :
02-08-1995
Photo :

Programs

ಪ್ರತಿ ಅಮಾವಾಸ್ಯೆ ಮತ್ತು ಹುಣ್ಣಿಮೆಗೆ ವಿಶೇಷ ಪೂಜೆ ಹಾಗೂ ರುದ್ರಾಭಿಷೇಕ.
ಜನವರಿ 3 ರಂದು ಮಠದ ವಿಷರ್ಮನ ಸಂಜೀವಿನಿ ಗದ್ದುಗೆಯ ವಾರ್ಷಿಕೋತ್ಸವ ಹಾಗೂ ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳು.

Institutions

ಕಿರಿಯ / ಹಿರಿಯ ಪ್ರಾಥಮಿಕ ಶಾಲೆ.

Photos

Full Address Kannada

ಶ್ರೀ ಪುರವರ್ಗ ಹಿರೇಮಠ
ಚೌಷಷ್ಟಿ ಗ್ರಾಮ ಆವರಗೊಳ್ಳ - 577 589,
ದಾವಣಗೆರೆ ತಾ., ಜಿ.

Map

Near by Places

ಕೊಂಡಜ್ಜಿ ಕ್ರಾಸ್ - 7 ಕಿ.ಮೀ.
ದಾವಣಗೆರೆ - 7 ಕಿ.ಮೀ.
ಹರಿಹರ - 20 ಕಿ.ಮೀ.
ಹರಪನಹಳ್ಳಿ - 40 ಕಿ.ಮೀ.

Statistic

16 Views
0 Rating
0 Favorite
0 Share
error: Content is protected !!