ಗದಗ ಜಿಲ್ಲೆಯ ನರಗುಂದ ಪಟ್ಟಣದ ಹೊರಭಾಗದಲ್ಲಿ 2 ಕಿ.ಮೀ.ಅಂತರದಲ್ಲಿರುವ ಶ್ರೀ ಸಿದ್ದೇಶ್ವರ ಬೆಟ್ಟದ ಪಕ್ಕದಲ್ಲಿ ಪೂಜ್ಯ ಶ್ರೀ ವೀರಪ್ಪಜ್ಜಯ್ಯನವರಿಂದಸುಮಾರು 360ವರ್ಷಗಳ ಹಿಂದೆ ಸ್ಥಾಪಿತಗೊಂಡಿದೆಯೆಂದು ಹೇಳಲಾದ ಶ್ರೀ ಪುಣ್ಯಾರಣ್ಯಪತ್ರಿವನ ಮಠವು ಶ್ರೀಮದ್ ಕಾಶಿ ಪೀಠದ ಶಾಖಾ ಮಠವಾಗಿದ್ದು ಶಿಷ್ಯವರ್ಗದಪರಂಪರೆಯಲ್ಲಿ ಬೆಳೆದುಬಂದಿದೆ.ಕರ್ತೃಗುರುಗಳು ವೀರಶೈವ ಧರ್ಮವನ್ನು ಪ್ರಚುರಗೊಳಿಸಿ ಅನೇಕ ವರ್ಷಗಳಕಾಲ ತಪಸ್ಸನ್ನಾಚರಿಸಿ ಈ ಕ್ಷೇತ್ರವನ್ನು ಪಾವನಗೊಳಿಸಿದ್ದಾರೆ. ಮೂಲದಲ್ಲಿ ಈ ಪತ್ರಿವನವುನರಗುಂದದ ಬಾಬಾಸಾಹೇಬರ ತಾಯಿ ಬೆಳಿಸಿದ್ದು ಪುಣ್ಯಕ್ಷೇತ್ರವಾಗಿದೆ. ಇಲ್ಲಿತಪಸನ್ನಾಚರಿಸಿದ ಶ್ರೀ ವೀರಪ್ಪಜ್ಜಯ್ಯನವರು ಶ್ರೀಮಠವನ್ನು ಸ್ಥಾಪಿಸಿದರು.ಕರ್ತೃಗುರುಗಳ ನಂತರ ಶ್ರೀ ಷ.ಬ್ರ. ಶಿವಪ್ಪಜ್ಜಯ್ಯ ಮಹಾಸ್ವಾಮಿಗಳು ಶ್ರೀಮಠದಅಧಿಕಾರವನ್ನು ವಹಿಸಿಕೊಂಡಿದ್ದು ಗುರುಗಳಿಗೆ ತಕ್ಕ ಶಿಷ್ಯರಾಗಿದ್ದರು. ಶ್ರೀಗಳು ಸಂಸಾರವನ್ನುತೊರೆದ ವೈರಾಗಿಗಳಾಗಿದ್ದು ಶ್ರೀಮಠವನ್ನು ಹಾಗೂಭಕ್ತರ ಸಹಕಾರದೊಂದಿಗೆ ಅಭಿವೃದ್ದಿಗೊಳಿಸಿದ್ದಾರೆ.ನಂತರ 1952ರಲ್ಲಿ ಶ್ರೀಮಠದ ಅಧಿಕಾರ ವಹಿಸಿಕೊಂಡ ಶ್ರೀ ಷ.ಬ್ರ.ಶಂಭುಲಿಂಗೇಶ್ವರ ಮಹಾಸ್ವಾಮಿಗಳ ಕಾಲದಲ್ಲಿ ಶ್ರೀಮಠವು ಸರ್ವಾಂಗೀಣವಾಗಿ ಅಭಿವೃದ್ದಿಕಂಡಿದೆ. ಶ್ರೀಗಳು ತಮ್ಮ ಕ್ರಿಯಾಶೀಲ ಚಟುವಟಿಕೆಗಳಿಂದ ಮಠದ ಸಮುಚ್ಚಯವನ್ನುಅಭಿವೃದ್ದಿಗೊಳಿಸಿದ್ದಾರೆ. ದಾಸೋಹ ಕೊಠಡಿ, ಭಕ್ತರಿಗೆ ವಸತಿಗೃಹಗಳು ಈ ರೀತಿ ಸಕಲವ್ಯವಸ್ಥೆಯನ್ನು ಮಾಡಿ ನಿತ್ಯ ದಾಸೋಹ ನಡೆಯುವಂತೆ ಮಾಡಿದ್ದಾರೆ.ಈಗಿನ ಶ್ರೀಗಳಾದ ಶ್ರೀ ಷ.ಬ್ರ. ಗುರು ಸಿದ್ದವೀರ ಶಿವಯೋಗಿ ಶಿವಾಚಾರ್ಯರು2011ರ ಜೂನ್ 19ರಲ್ಲಿ ಶ್ರೀಮಠದ ಪಟ್ಟಕ್ಕೆ ಬಂದಿದ್ದು ಹಿಂದಿನ ಶ್ರೀಗಳ ಹಾದಿಯಲ್ಲಿಯೇಶ್ರೀಮಠವನ್ನು ಸಮರ್ಥವಾಗಿ ಧಾರ್ಮಿಕ ಕಾರ್ಯಗಳೊಂದಿಗೆ ಮುನ್ನಡೆಸಿಕೊಂಡುಬರುತ್ತಿದ್ದಾರೆ. ಶ್ರೀಮಠದ ರಥೋತ್ಸವವು ಶ್ರಾವಣ ಮಾಸದಲ್ಲಿ ಜರುಗುತ್ತಿದ್ದು 7 ದಿನಗಳ ಕಲಜಾತ್ರೆಯು ನಡೆಯುತ್ತದೆ. ಶ್ರೀ ಮಠವು ಸರ್ವಧರ್ಮ ಸಮನ್ವಯ ಕೇಂದ್ರವಾಗಿಕಾರ್ಯನಿರ್ವಹಿಸುತ್ತಿದ್ದು ಸಮಾಜದ ಅಭಿವೃದ್ದಿಯಲ್ಲಿ ತನ್ನದೇ ಆದ ಕೊಡುಗೆ ನೀಡುತ್ತಾಬರುತ್ತಿದೆ.
ಪ್ರತಿ ನಿತ್ಯ ರುದ್ರಾಭಿಷೇಕ
ದಸರಾದಲ್ಲಿ ಒಂಬತ್ತು ದಿನ ಶ್ರೀದೇವಿ ಪುರಾಣ ಪಾರಾಯಣ
ಹಾಗೂ ವಿಶೇಷ ಪೂಜೆ
ಕಾರ್ತಿಕ ಮಾಸದಲ್ಲಿ ಲಿಂ|| ಶ್ರೀ ವೀರಪ್ಪಯ್ಯ ಅಜ್ಜನವರ ಪುಣ್ಯಾರಾಧನೆ
ಪುಷ್ಯ ಮಾಸದಲ್ಲಿ ಲಿಂ|| ಶ್ರೀ ಗುರುಶಿವಯ್ಯ ಅಜ್ಜನವರ ಹಾಗೂ
ಲಿಂ|| ಶ್ರೀ ಗುರುಶಂಭುಲಿಂಗಯ್ಯ ಅಜ್ಜನವರ ಪುಣ್ಯಾರಾಧನೆ
ಶ್ರಾವಣ ಮಾಸದಲ್ಲಿ ರಥೋತ್ಸವ ಮತ್ತು 7 ದಿನಗಳ ಕಾಲ ಜಾತ್ರೆ
Institutions
ಪೂರ್ವ / ಕಿರಿಯ /
ಹಿರಿಯ ಪ್ರಾಥಮಿಕ ಶಾಲೆ
ಪದವಿಪೂರ್ವ ಕಾಲೇಜು
ಸಂಸ್ಕøತ ಪಾಠಶಾಲೆ
ಮಾತೃಶ್ರೀ ನೀಲಮ್ಮನವರ ಪ್ರಸಾದ ನಿಲಯ
ವಿದ್ಯಾರ್ಥಿಗಳ ವಸತಿ ಶಾಲೆ
Photos
Full Address Kannada
ಶ್ರೀ ಪುಣ್ಯಾರಣ್ಯ ಪತ್ರಿವನ ಮಠ
ನರಗುಂದ - 582 207
ನರಗುಂದ ತಾ||, ಗದಗ ಜಿಲ್ಲೆ