Shree Prabhuswami Matha, Agadi

Shree Prabhuswami Matha, Agadi Claimed

ಶ್ರೀ ಪ್ರಭುಸ್ವಾಮಿ ಮಠ, ಅಗಡಿ

Average Reviews

Description

ಶ್ರೀ ಪ್ರಭುಸ್ವಾಮಿ ಮಠ, ಅಗಡಿ

ಕರ್ತೃ – ಶ್ರೀ ಮ.ನಿ.ಪ್ರ. ಗುರುಶಾಂತ ಮಹಾಸ್ವಾಮಿಗಳು

ಹಾವೇರಿ ತಾಲ್ಲೂಕಿನ ಅಗಡಿ ಗ್ರಾಮದಲ್ಲಿ ಸ್ಥಾಪಿತಗೊಂಡಿರುವ ಶ್ರೀ ಪ್ರಭುಸ್ವಾಮಿಮಠಕ್ಕೆ ಸುಮಾರು 900 ವರ್ಷಗಳ ಇತಿಹಾಸವಿದೆಯೆಂದು ಹೇಳಲಾಗುತ್ತಿದೆ. 12ನೇಶತಮಾನದ ಕಲ್ಯಾಣ ಕ್ರಾಂತಿಯ ಸಮಯದಲ್ಲಿ ಲೋಕಸಂಚಾರದಲ್ಲಿದ್ದ ಅನುಭವಮಂಟಪದ ಪ್ರಥಮ ಅಧ್ಯಕ್ಷರಾದ ಮಹಾಶಿವಶರಣ ಅಲ್ಲಮ ಪ್ರಭುದೇವರು ಈ ಗ್ರಾಮದಲ್ಲಿಭಕ್ತರ ಕೋರಿಕೆ ಮೇರೆಗೆ ಅನುಷ್ಠಾನಗೊಂಡ ಸ್ಥಳವೇ ಶ್ರೀ ಪ್ರಭುಸ್ವಾಮಿ ಮಠ.ಇಲ್ಲಿ ಅನುಷ್ಠಾನಗೊಂಡ ಅಲ್ಲಮ ಪ್ರಭುದೇವರು ಮುಂದೆ ಒಬ್ಬ ಯೋಗ್ಯನಿರಂಜನ ಮೂರ್ತಿಯನ್ನು ಅಲ್ಲಿರಿಸಿ ಆಶೀರ್ವಾದ ಮಾಡಿ ಮುನ್ನಡೆದರು. ಶ್ರೀ ಅಲ್ಲಮಪ್ರಭುದೇವರ ಆಶೀರ್ವಾದ ಬಲದಿಂದ ಅಧಿಕಾರ ವಹಿಸಿಕೊಂಡ ಶ್ರೀ ಪ್ರಭುಸ್ವಾಮಿಗಳನಂತರದ ಇತಿಹಾಸ ಲಭ್ಯವಿಲ್ಲ. ಆದರೆ ಸುಮಾರು 140 ವರ್ಷಗಳ ಹಿಂದೆ ಅಧಿಕಾರವಹಿಸಿಕೊಂಡ ಶ್ರೀ ಗುರುಶಾಂತ ಸ್ವಾಮಿಗಳಿಂದ ಮುಂದಿನ ಪರಂಪರೆ ಲಭ್ಯವಿದೆ.ಶ್ರೀ ಗುರುಶಾಂತ ಸ್ವಾಮಿಗಳು ಮಠದ ಆದೇಶವನ್ನು ವಹಿಸಿಕೊಂಡು ಮಠದಲ್ಲಿಧಾರ್ಮಿಕ ಚಟುವಟಿಕೆಗಳು ನಿರಂತರವಾಗಿ ನಡೆಯುವಂತೆ ಮಾಡಿದ್ದಾರೆ. ನಂತರ ಬಂದಶ್ರೀ ರುದ್ರಮುನಿ ಸ್ವಾಮಿಗಳು ಮಹಾನ್ ತಪೋನಿಷ್ಠರು, ವೀರಶೈವ ಧರ್ಮಾಚರಣೆಗಳನ್ನುಕಟ್ಟುನಿಟ್ಟಾಗಿ ಭಕ್ತರಿಗೆ ಬೋಧಿಸಿದ ಮಹಾಮಹಿಮರು. ಶ್ರೀ ರುದ್ರಮುನಿ ಸ್ವಾಮಿಗಳು ಅಗಡಿ,ಗುತ್ತಲ, ಶಿರಾಳಕೊಪ್ಪ, ತ್ರಿವೇಣಿ ಮಠಗಳ ಪೀಠಾಧಿಪತಿಗಳಾಗಿ ಕಠಿಣ ವ್ರತಾಚರಣೆಗಳಮೂಲಕ ಪರಮಸಿದ್ಧಿಯನ್ನು ಪಡೆದು ಅಗ್ರಗಣ್ಯ ಶಿವಯೋಗಿಗಳೆನಿಸಿದವರು.ಇಂತಹ ಪೂಜ್ಯರು ಬಿಟ್ಟು ಹೋದ ಜ್ಞಾನ ದಾಸೋಹ, ಧರ್ಮಕ್ಕನುಸಾರವಾಗಿ,ಹೊಸರೂಪದಲ್ಲಿ, ಸೇವಾಪಥದಲ್ಲಿ ಶ್ರೀ ರುದ್ರಮುನಿ ಶಿವಯೋಗಿಗಳವರ ಶಿಷ್ಯೋತ್ತಮರಾದಶ್ರೀ ಸಂಗನಬಸವ ಮಹಾಸ್ವಾಮಿಗಳವರು ಮಠವನ್ನು ಮುನ್ನಡೆಸಿಕೊಂಡು ಬರುತ್ತಿದ್ದಾರೆ.ಶ್ರೀಗಳು ಈಗಾಗಲೇ ತಮ್ಮ ಉತ್ತರಾಧಿಕಾರಿಗಳನ್ನು ಆಯ್ಕೆ ಮಾಡಿಕೊಂಡಿದ್ದು ಅವರೇ ಶ್ರೀಗುರುಸಿದ್ದದೇವರು. ಉಭಯ ಶ್ರೀಗಳು ಅಗಡಿಯ ಮಠದ ಜೊತೆಯಲ್ಲಿಯೇ ಶ್ರೀ ಗುತ್ತಲಮಠದ ಆಡಳಿತವನ್ನು ನಡೆಸಿಕೊಂಡು ಬರುತ್ತಿದ್ದಾರೆ. ಉಭಯ ಮಠಗಳಲ್ಲಿಯೂಧಾರ್ಮಿಕ ಆಚರಣೆಗಳೊಂದಿಗೆ ಸಾಮಾಜಿಕವಾಗಿಯೂ ಗುರುತಿಸುವಂತೆ ಮಾಡಿದ್ದಾರೆ.

Swamiji

Swamiji Name :
ಶ್ರೀ ಮ.ನಿ.ಪ್ರ. ಸಂಗನ ಬಸವ ಸ್ವಾಮಿಗಳು
Date of Birth :
14-5-1935
Place :
ಹೊಸರಿತ್ತಿ, ಹಾವೇರಿ ತಾ||
Pattadikara :
ಜನವರಿ 1960
Swamiji Name :
ಪೂಜ್ಯ ಶ್ರೀ ಗುರುಸಿದ್ದ ದೇವರು
Date of Birth :
11-9-1974
Place :
ಹೊಸರಿತ್ತಿ, ಹಾವೇರಿ ತಾ||

Programs

ಪ್ರತಿ ಅಮವಾಸ್ಯೆಗೆ ವಿಶೇಷ ಪೂಜೆ, ಶಿವಾನುಭವ ಗೋಷ್ಠಿ.
ಪುಷ್ಯ ಮಾಸದಲ್ಲಿ ಶ್ರೀ ಹಿರಿಯ ಗುರುಗಳ ಪುಣ್ಯಾರಾಧನೆ ಹಾಗೂ ಜಾತ್ರಾ ಮಹೋತ್ಸವ.
ಶಿವರಾತ್ರಿಯಲ್ಲಿ ವಿಶೇಷ ಪೂಜೆ, ಜಾಗರಣೆ.
ಯುಗಾದಿ ಪಾಡ್ಯಕÉ್ಕ ಅಲ್ಲಮ ಪ್ರಭುಗಳ ಜಯಂತಿ.

Institutions

ಸಂಗನ ಬಸವ ವಿದ್ಯಾನಿಕೇತನ ಆಂಗ್ಲ ಮಾಧ್ಯಮ ಶಾಲೆ.
ಪೂರ್ವ ಪ್ರಾಥಮಿಕ ಶಾಲೆ. ಹಿರಿಯ ಪ್ರಾಥಮಿಕ ಶಾಲೆ.

Full Address Kannada

ಶ್ರೀ ಪ್ರಭುಸ್ವಾಮಿ ಮಠ
ಅಗಡಿ - 581 128
ಹಾವೇರಿ ತಾ., ಹಾವೇರಿ ಜಿ.

Map

Near by Places

ಹಾವೇರಿ - 10 ಕಿ.ಮೀ.
ಗುತ್ತಲ - 15 ಕಿ.ಮೀ.
ರಾಣೆಬೆನ್ನ್ನೂರು - 45 ಕಿ.ಮೀ.

Statistic

10 Views
0 Rating
0 Favorite
0 Share
error: Content is protected !!