ಶಿವಮೊಗ್ಗ ಜಿˉÉ್ಲಯ ಸಂತೆಕಡೂರು ಗ್ರಾಮವು ಶಿವಮೊಗ್ಗ ನಗರದಿಂದ ಕೇವಲ 7ಕಿ.ಮೀ. ದೂರದಲ್ಲಿದ್ದು ಇಲ್ಲಿ ಶ್ರೀ ಪ್ರಭುದೇವ ಜ್ಞಾನ ಕೇಂದ್ರವು ಅಸ್ತಿತ್ವದಲ್ಲಿದ್ದು ಶ್ರಿ ಬಸವನವಲಿಂಗ ಶರಣರು ಶ್ರೀಮಠವನ್ನು ಸ್ಥಾಪಿಸಿಕೊಂಡು ತಮ್ಮ ಧಾರ್ಮಿಕ ಹಾಗೂ ಸಾಮಾಜಿಕಕಾರ್ಯಕ್ರಮಗಳ ಮೂಲಕ ಈ ಭಾಗದ ಜನರಲ್ಲಿ ಧಾರ್ಮಿಕ ಪ್ರಜ್ಞೆಯನ್ನು ಮೂಡಿಸುವಲ್ಲಿಯಶಸ್ವಿಯಾಗಿದ್ದಾರೆ.ಶ್ರೀ ಬಸವ ನವಲಿಂಗ ಶರಣರು ಇದೇ ಊರಿನವರಾಗಿದ್ದು 1936ರ ಸೆಪ್ಟೆಂಬರ್ 4ರಂದು ಜನಿಸಿದವರಾಗಿದ್ದಾರೆ. ಶ್ರೀಗಳು ತಮ್ಮ ತಾರುಣ್ಯದಲ್ಲಿಯೇ ಆಧ್ಯಾತ್ಮಿಕತೆಯ ಬಗ್ಗೆಒಲವು ತಳೆದು ಶರಣರೆನಿಸಿಕೊಂಡವರು. 1972ರಲ್ಲಿ ದೀಕ್ಷೆ ಪಡೆದು 30 ವರ್ಷಗಳ ಹಿಂದೆಮಠ ಸ್ಥಾಪಿಸಿದ ಶ್ರೀಗಳು ಚಿತ್ರದುರ್ಗದ ಹೊಳˉÉ್ಕರೆ ರಸ್ತೆಯಲ್ಲಿಯೂ ಕೂಡ ಪ್ರಭುದೇವಜ್ಞಾನ ಕೇಂದ್ರವೆಂಬ ಹೆಸರಿನಲ್ಲಿಯೇ ಇನ್ನೊಂದು ಶಾಖೆಯನ್ನು ಹೊಂದಿದ್ದು ಅಲ್ಲಿಯೂಕೂಡ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಿದ್ದಾರೆ.ಶ್ರೀ ಬಸವ ನವಲಿಂಗ ಶರಣರು ಉತ್ತಮ ವಾಗ್ಮಿಗಳಾಗಿದ್ದು ನಾಡಿನಾದ್ಯಂತಪ್ರವಚನಗಳನ್ನು, ಶಿಬಿರಗಳನ್ನು ನಡೆಸಿಕೊಡುತ್ತಾರೆ. ಶ್ರೀಮಠದಲ್ಲಿ ಭಕ್ತರ ಸಹಕಾರದೊಂದಿಗೆಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿರುವ ಶರಣರು ಧಾರ್ಮಿಕ ಚಿಂತಕರಾಗಿದ್ದು ತಮ್ಮವೈಚಾರಿಕತೆಯಿಂದ ಗಮನ ಸೆಳೆದಿದ್ದಾರೆ. ವರ್ಷದಲ್ಲಿ ಮೂರು ದಿನಗಳ ಕಾಲ ಬಸವ ತತ್ವಜ್ಞಾನ ಶಿಬಿರವನ್ನು ಕೂಡ ಏರ್ಪಡಿಸುತ್ತಾರೆ.ಶರಣರು ‘ಶರಣ ಪ್ರಕಾಶನ ಸಂಸ್ಥೆ’ ಯ ಮೂಲಕ ಸುಮಾರು 17 ಪುಸ್ತಕಗಳನ್ನುತಾವು ಸ್ವತಃ ಬರೆದು ಪ್ರಕಾಶಿಸಿದ್ದಾರೆ. ಶರಣರು ‘ಸೋಹಂ ಎಂದೆನಿಸದೆ ದಾಸೋಹಂಎಂದೆನಿಸಯ್ಯಾ’ ಎಂಬ ಗುರುನುಡಿಯಂತೆ ಬಂದ ಭಕ್ತರ ದಾಸೋಹ ಹಾಗೂವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ನೆರವಾಗುತ್ತಾ ಇತರರಿಗೆ ಆದರ್ಶವೆನಿಸಿದ್ದಾರೆ.
Swamiji
Swamiji Name :
ಶ್ರೀ ಬಸವ ನವಲಿಂಗ ಶರಣರು
Date of Birth :
4-9-1936
Place :
ಸಂತೆಕಡೂರು, ಶಿವಮೊಗ್ಗ ತಾ||
Pattadikara :
1972
Photo :
Programs
ವರ್ಷದಲ್ಲಿ 3 ದಿನಗಳ ಕಾಲ ಬಸವ ತತ್ವಜ್ಞಾನ ಶಿಬಿರವನ್ನು ಏರ್ಪಡಿಸುತ್ತಾರೆ.
Photos
Full Address Kannada
ಶ್ರೀ ಪ್ರಭುದೇವ ಜ್ಞಾನ ಕೇಂದ್ರ ಕೆನರಾಬ್ಯಾಂಕ್ ಎದುರು, ಸಂತೆಕಡೂರು ಶಿವಮೊಗ್ಗ ತಾ|| ಜಿ||