ಕರ್ನಾಟಕದ ಧಾರ್ಮಿಕ ಇತಿಹಾಸದಲ್ಲಿ 15ನೇ ಶತಮಾನಕ್ಕೆ ತನ್ನದೇ ಆದ ವಿಶೇಷಸ್ಥಾನವಿದೆ. ಹರದನಹಳ್ಳಿಯಿಂದ ಹೊರಟು ನಾಡಿನಾದ್ಯಂತ ಸಂಚರಿಸಿ ಧಾರ್ಮಿಕ ಕ್ರಾಂತಿನಡೆಸಿದ ಶ್ರೀ ತೋಂಟದ ಸಿದ್ದಲಿಂಗೇಶ್ವರರ ಕಾಲಘಟ್ಟವದು. ತೋಂಟದ ಸಿದ್ದಲಿಂಗೇಶ್ವರರುಅನೇಕ ಮಠ ಮಾನ್ಯಗಳನ್ನು ಸ್ಥಾಪಿಸಿ ಅಲ್ಲಿಗೆ ಗುರುಗಳನ್ನು ನೆಲೆಗೊಳಿಸಿ ಅವರ ಮೂಲಕಆಯಾಯ ಪ್ರಾಂತ್ಯದ ಜನಾಂಗಕ್ಕೆ ಧಾರ್ಮಿಕ ಸಂಸ್ಕಾರ ನೆಲೆಗೊಳ್ಳುವಂತೆ ಮಾಡುತ್ತಿದ್ದರು.ಈ ರೀತಿಯಾಗಿ ಶ್ರೀ ತೋಂಟದ ಸಿದ್ದಲಿಂಗೇಶ್ವರರ ಧಾರ್ಮಿಕ ಕ್ರಾಂತಿಯಲ್ಲಿ ಸ್ಥಾಪಿತಗೊಂಡಮಠವೇ ನೆಲಮಂಗಲದ ಶ್ರೀ ಪವಾಡ ಬಸವಣ್ಣ ದೇವರ ಮಠ.
ಶ್ರೀ ಪವಾಡ ಬಸವಣ್ಣ ದೇವರ ಮಠದ ಮೂಲಪುರುಷರಾದ “ಬಸವಣ್ಣದೇವರು” ಸಿದ್ದಲಿಂಗೇಶ್ವರರ 701 ಜನ ವಿರಕ್ತ ಶಿಷ್ಯರಲ್ಲೊಬ್ಬರೆಂದು, ಇವರು ಗುರುಗಳಿಂದಅನುಗ್ರಹಿತರಾಗಿ ನೆಲಮಂಗಲದಲ್ಲಿ ನೆಲೆನಿಂತು ಧರ್ಮಪ್ರಚಾರ ಮಾಡಿದರೆಂದು ತಿಳಿದುಬರುತ್ತದೆ. ತ್ರಿವಿದ ದಾಸೋಹಿಗಳು, ಲಿಂಗಲೀಲಾ ವಿನೋದಚಿತ್ತರೂ ಆಗಿದ್ದ ಇವರಪರಿಶುದ್ಧ ಜೀವನದ ಅನೇಕ ಘಟನೆಗಳು ಲೋಕಕ್ಕೆಲ್ಲಾ ಪವಾಡಗಳಾಗಿ ಕಾಣುತ್ತಿದ್ದವೆಂದುಜನ ಇವರನ್ನು “ಪವಾಡ ಬಸವಣ್ಣ ದೇವರು” ಎಂದೇ ಕರೆಯತೊಡಗಿ ಮುಂದೆ ಶ್ರೀಮಠವು“ಶ್ರೀ ಪವಾಡ ಬಸವಣ್ಣ ದೇವರ ಮಠ” ಎಂದೇ ಪ್ರಸಿದ್ದಿಗೊಂಡಿತು.
ಶ್ರೀಮಠದಲ್ಲಿ ಕರ್ತೃ ಗುರುಗಳ ನಂತರ ಅನೇಕ ಗುರುಗಳು ಅಧಿಕಾರವನ್ನುನಡೆಸಿದರೂ ದಾಖಲೆಗಳ ಕೊರತೆಯಿಂದ ಪೂರ್ವ ಇತಿಹಾಸವನ್ನು ದಾಖಲಿಸಲುಸಾಧ್ಯವಾಗುವುದಿಲ್ಲ. ಶ್ರೀಮಠದ ಪರಂಪರೆಯಲ್ಲಿ ಇತ್ತೀಚೆಗೆ ಆಗಿಹೋದ ಶ್ರೀ ಮರುಳಸಿದ್ದಸ್ವಾಮಿಗಳು, ಶ್ರೀ ಗುರುಸಿದ್ದ ಸ್ವಾಮಿಗಳು, ಶ್ರೀ ಇಮ್ಮಡಿ ಮರುಳಸಿದ್ದ ಸ್ವಾಮಿಗಳು ಹಾಗೂಹಿಂದಿನ ಶ್ರೀಗಳಾದ ಶ್ರೀ ಸದಾಶಿವ ಮಹಾಸ್ವಾಮಿಗಳ ಕುರಿತಾಗಿ ಮಾಹಿತಿಗಳು ಲಭ್ಯವಿದೆ.
ಶ್ರೀ ಮರುಳಸಿದ್ದ ಮಹಾಸ್ವಾಮಿಗಳು ಶಿವಪೂಜಾನಿಷ್ಠರಾಗಿ, ಸಮರ್ಥಧರ್ಮಾಧಿಕಾರಿಗಳಾಗಿ ಮಠದ ಧಾರ್ಮಿಕ ಚಟುವಟಿಕೆಗಳನ್ನು ವಿಸ್ತರಿಸಿದರು. ಧಾರ್ಮಿಕವಿಚಾರಗಳ ಬಗ್ಗೆ ಆಳವಾದ ಅಧ್ಯಯನ ನಡೆಸಿ ಧರ್ಮದ ಬಗ್ಗೆ ಸಮರ್ಥವಾಗಿಮಾತನಾಡಬಲ್ಲಂತಹ ಮೇದಾವಿಗಳಾಗಿದ್ದ ಶ್ರೀಗಳ ಪವಾಡಗಳು ಇಂದಿಗೂ ಪ್ರಚಲಿತದಲ್ಲಿವೆ.ಒಮ್ಮೆ ಮಠದ ಮುಂದಿದ್ದ ಕಲ್ಯಾಣಿಯಲ್ಲಿ ಮುಳುಗಿದ್ದ ಬಾಲಕನ ಶರೀರವನ್ನು ಗುರುಗಳುಸ್ಪರ್ಶಿಸಿ ವಿಭೂತಿ ದಾರಣೆ ಮಾಡಿದ ತಕ್ಷಣ ಬಾಲಕನು ಎಚ್ಚರಗೊಂಡ ಪವಾಡವನ್ನುಇಂದಿಗೂ ಕಾಲಾನುಕ್ರಮದಲ್ಲಿ ಭಕ್ತರು ಜನಪದ ಕಥೆಯ ರೂಪದಲ್ಲಿ ಹೇಳುತ್ತಾರೆ.
ಇಂತಹ ಪವಾಡ ಪುರುಷ ಮಹಾ ಮೇಧಾವಿ ಶ್ರೀ ಮರುಳಸಿದ್ದ ಸ್ವಾಮಿಗಳಐಕ್ಯಾನಂತರ ಶ್ರೀಮಠದ ಪಟ್ಟಕ್ಕೆ ಬಂದವರು ಶ್ರೀ ಗುರುಸಿದ್ದ ಮಹಾಸ್ವಾಮಿಗಳು. ಇವರೂಕೂಡ ಗುರುಗಳಂತೆಯೇ ಲಿಂಗನಿಷ್ಠರೂ, ತ್ರಿವಿದ ದಾಸೋಹಿಗಳೆಂದೆನಿಸಿ ಶ್ರೀಮಠವನ್ನುಅಭಿವೃದ್ದಿಗೊಳಿಸಿದರು. ಇವರ ನಂತರ ಬಂದ ಶ್ರೀ ಇಮ್ಮಡಿ ಮರುಳಸಿದ್ದ ಮಹಾಸ್ವಾಮಿಗಳುಧೀರ್ಘಕಾಲ ಶ್ರೀಮಠದ ಆಡಳಿತ ನಡೆಸಿದ್ದು ಇವರು ಮಠದ ಅಭಿವೃದ್ದಿಯೆಡೆಗೆ ಗಮನನೀಡದೇ, ಶಿವಪೂಜಾನಿಷ್ಠರಾಗಿ ಲೌಕಿಕ ಜಗತ್ತಿನಿಂದ ದೂರ ಉಳಿದು ಶಿವಪೂಜೆಯಲ್ಲಿಯೇಐಕ್ಯಗೊಂಡರು.
ಶ್ರೀ ಇಮ್ಮಡಿ ಮರುಳಸಿದ್ದ ಸ್ವಾಮಿಗಳ ನಂತರ ಶ್ರೀಮಠವು ಕೆಲಕಾಲ ಖಾಲಿಉಳಿಯಿತು. ಆಗ ಮಠದ ಭಕ್ತರು ಸಿದ್ದಗಂಗೆಯ ಜಂಗಮ ಜ್ಯೋತಿ ಶ್ರೀ ಶಿವಕುಮಾರಮಹಾಸ್ವಾಮಿಗಳಲ್ಲಿಗೆ ಬಂದು ಮಠಕ್ಕೆ ಉತ್ತರಾಧಿಕಾರಿಗಳನ್ನು ನೇಮಿಸಿಕೊಡಬೇಕೆಂದುಬಿನ್ನವಿಸಿಕೊಳ್ಳುತ್ತಾರೆ. ಸಿದ್ದಗಂಗಾ ಶ್ರೀಗಳ ಕೃಪಾದೃಷ್ಟಿಯು ಹುಸ್ಕೂರಿನ ಗದ್ದುಗೆಯಲ್ಲಿಹತ್ತಾರು ವರ್ಷಗಳಿಂದ ಪೂಜೆಯನ್ನು ಮಾಡಿಕೊಂಡಿದ್ದು ತಮ್ಮ ಭಕ್ತಿಯನ್ನು ಪ್ರದರ್ಶಿಸಿದ್ದಶ್ರೀ ಸದಾಶಿವ ಸ್ವಾಮಿಗಳವರ ಮೇಲೆ ಬಿದ್ದಿತು. ಸಿದ್ದಗಂಗಾ ಶ್ರೀಗಳು ಶ್ರೀ ಸದಾಶಿವಸ್ವಾಮಿಗಳೇ ನೆಲಮಂಗಲದ ಮಠಕ್ಕೆ ಯೋಗ್ಯವೆಂದರಿತು ಶ್ರೀಮಠಕ್ಕೆ ಉತ್ತರಾಧಿಕಾರಿಯನ್ನಾಗಿಮಾಡಿದರು.
1971ರ ಸೆಪ್ಟಂಬರ್ 29ರಂದು ಶ್ರೀ ಪವಾಡ ಬಸವಣ್ಣ ದೇವರ ಮಠದಪಟ್ಟಾಧಿಕಾರ ಸ್ವೀಕರಿಸಿ ಬಂದ ಶ್ರೀ ಸದಾಶಿವ ಮಹಾಸ್ವಾಮಿಗಳ ಮುಂದಿನ ಹಾದಿಸುಲಭವಾಗಿದ್ದಿರಲಿಲ್ಲ. ಇವರು ಅಧಿಕಾರಕ್ಕೆ ಬಂದ ಸಮಯದಲ್ಲಿ ನಾಲ್ಕಾರು ಬರಿಯಮಂಟಪ, ಸ್ವಲ್ಪ ಮಳೆಯಾಶ್ರಿತ ಭೂಮಿ ಬಿಟ್ಟರೆ ಬೇರೇನೂ ಇರಲಿಲ್ಲ. ಆದರೆ ಯಾವುದಕ್ಕೂಎದೆಗುಂದದೆ ಮುನ್ನಡೆದ ಶ್ರೀಗಳು ಶ್ರೀಮಠದ ಕಟ್ಟಡವನ್ನು ಅವಶ್ಯಕತೆಗೆ ತಕ್ಕಷ್ಟುವಿಸ್ತರಿಸಿಕೊಂಡು, ದಾಸೋಹ ಕ್ರಿಯೆಯನ್ನು ಪ್ರಾರಂಭಿಸಿ ಹಂತಹಂತವಾಗಿ ಭಕ್ತರನ್ನುಸಂಘಟಿಸಿದರು. ಸಮಾಜ ಆರ್ಥಿಕವಾಗಿ ಸದೃಡವಾಗಬೇಕೆಂದು ಆ ಹಾದಿಯಲ್ಲಿಸಾಧಿಸಲಿಚ್ಚಿಸುವ ಭಕ್ತರಿಗೆ ಮಾರ್ಗದರ್ಶಕರಾದರು. ಬಡವ-ಬಲ್ಲಿದ, ದೀನ-ದಲಿತರೆಂಬಬೇದ ತೋರದೆ ಬಸವಣ್ಣನವರ ಆಶಯದಂತೆ ಸಮಾಜದ ಒಗ್ಗೂಡುವಿಕೆಗೆ ಬಹುವಾಗಿಶ್ರಮಿಸಿದರು.
ಶ್ರೀ ಸದಾಶಿವ ಮಹಾಸ್ವಾಮಿಗಳು ಹಂತಹಂತವಾಗಿ ಶ್ರೀಮಠ ಹಾಗೂ ಸಮಾಜದಅಭಿವೃದ್ದಿಗೆ ಶ್ರಮಿಸಿದ್ದಲ್ಲದೇ ಮಠದ ಮುಖಾಂತರ ಶೈಕ್ಷಣಿಕ ಸೇವೆಗೆ ಮುಂದಾದರು.ಪ್ರಪ್ರಥಮವಾಗಿ ಮಹಾಲಿಂಗೇಶ್ವರ ಸಂಸ್ಕøತ ಪಾಠಶಾಲೆಯನ್ನು ಪ್ರಾರಂಭಿಸಿದ ಶ್ರೀಗಳುನಂತರದಲ್ಲಿ ಪೂರ್ವ ಪ್ರಾಥಮಿಕದಿಂದ ಪದವಿವರೆಗಿನ ಶಿಕ್ಷಣ ನೀಡುವ ಶಿಕ್ಷಣ ಸಂಸ್ಥೆಗಳನ್ನುಪ್ರಾರಂಭಿಸಿದರು. ಹೆಣ್ಣು ಮಕ್ಕಳು ಕಲಿತರಷ್ಟೇ ದೇಶದ ಉದ್ದಾರ ಸಾಧ್ಯವೆಂದರಿತಿದ್ದ ಶ್ರೀಗಳುಬಾಲಕಿಯರ ಪ್ರೌಢಶಾಲೆ, ಮಹಿಳಾ ಪದವಿಪೂರ್ವ ಕಾಲೇಜು, ಪದವಿ ಕಾಲೇಜುಗಳನ್ನುಸ್ಥಾಪಿಸಿದರು. ತಮ್ಮ ಜೀವನದುದ್ದಕ್ಕೂ ಸಮಷ್ಠಿ ಸಮಾಜದ ಅಭಿವೃದ್ದಿಗೆ ಶ್ರಮಿಸಿದ ಶ್ರೀಗಳುಅವಿಸ್ಮರಣೀಯರು.
ಪ್ರಸ್ತುತ ಈಗಿನ ಶ್ರೀಗಳಾದ ಶ್ರೀ ಪೂಜ್ಯ ಸಿದ್ದಲಿಂಗ ಮಹಾಸ್ವಾಮಿಗಳು 2002ರಆಗಸ್ಟ್ 11ರಂದು ಶ್ರೀಮಠಕ್ಕೆ ಪಟ್ಟಾಧಿಕಾರಗೊಂಡಿದ್ದು ಗುರುಗಳ ಹಾದಿಯಲ್ಲಿಯೇಶ್ರೀಮಠವನ್ನು ಸರ್ವಾಂಗೀಣವಾಗಿ ಅಭಿವೃದ್ದಿಗೊಳಿಸುತ್ತಿದ್ದಾರೆ. ಶ್ರೀಮಠದ ಧಾರ್ಮಿಕ,ಸಾಮಾಜಿಕ ಹಾಗೂ ಶೈಕ್ಷಣಿಕ ಕಾರ್ಯಚಟುವಟಿಕೆಗಳನ್ನು ವಿಸ್ತರಿಸಿರುವ ಶ್ರೀಗಳು ಕಳೆದಒಂದೂವರೆ ದಶಕಗಳಲ್ಲಿ ಮಠದ ವತಿಯಿಂದ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡುಯಶಸ್ವಿಗೊಳಿಸಿದೆ. ಶ್ರೀಮಠದಲ್ಲಿ ನಿತ್ಯ ದಾಸೋಹದ ವ್ಯವಸ್ಥೆಯಿದ್ದು ಮಠದ ವತಿಯಿಂದಉಚಿತ ವಿದ್ಯಾರ್ಥಿ ನಿಲಯವನ್ನು ನಡೆಸಲಾಗುತ್ತಿದೆ.
Swamiji
Swamiji Name :
ಪೂಜ್ಯ ಶ್ರೀ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು
Date of Birth :
20-05-1982
Place :
ಹುಸ್ಕೂರು, ಬೆಂಗಳೂರು ಉತ್ತರ ತಾ||
Pattadikara :
11-08-2002
Photo :
Programs
ಪ್ರತಿ ಅಮವಾಸೆಗೆ ವಿಶೇಷ ಪೂಜೆ
ಪ್ರತಿ ತಿಂಗಳು “ಶರಣ ಸಂಗಮ ಅರಿವಿನ ಅಂಗಳ” ಚಿಂತನಾ ಗೋಷ್ಠಿ ಕಾರ್ತಿಕ ಮಾಸದಲ್ಲಿ ಒಂದು ತಿಂಗಳ ಕಾಲ ಪ್ರವಚನ ಮತ್ತು ಲಕ್ಷದೀಪೋತ್ಸವ ಭಾದ್ರಪದ ಮಾಸದಲ್ಲಿ ಶ್ರೀ ಹಿರಿಯ ಗುರುಗಳ ಪುಣ್ಯಾರಾಧನೆ
Institutions
ಕಿರಿಯ / ಹಿರಿಯ ಪ್ರಾಥಮಿಕ / ಪ್ರೌಢಶಾಲೆ
ಪದವಿಪೂರ್ವ / ಪದವಿ ಕಾಲೇಜು
ಸಂಸ್ಕøತ ಪದವಿ ಕಾಲೇಜು
ಮಹಿಳಾ ಸಂಜೆ ಪದವಿ ಕಾಲೇಜು
ಸಂಸ್ಕøತ ವೇದ ಪಾಠಶಾಲೆ
ಉಚಿತ ವಿದ್ಯಾರ್ಥಿ ನಿಲಯ
Photos
Videos
Full Address Kannada
ಶ್ರೀ ಪವಾಡ ಬಸವಣ್ಣದೇವರ ಮಠ
ನೆಲಮಂಗಲ - 562 123
ಬೆಂಗಳೂರು ಗ್ರಾಮಾಂತರ ಜಿಲ್ಲೆ