Shree Pattanada Matha – Hanakola

Shree Pattanada Matha – Hanakola Claimed

ಶ್ರೀ ಪಟ್ಟದ ಮಠ - ಹಣಕೋಳ

Average Reviews

Description

ಶ್ರೀ ಪಟ್ಟದ ಮಠ – ಹಣಕೋಳ

ಕರ್ತೃ – ಪೂಜ್ಯ ಶ್ರೀ ದೇವಪ್ಪ ದೇವರು

ಮಂಡ್ಯ ಜಿˉÉ್ಲಯ ಮಳವಳ್ಳಿ ತಾಲ್ಲೂಕು ಕೇಂದ್ರದಿಂದ 15 ಕಿ.ಮೀ. ದೂರದಲ್ಲಿರುವಹಣಕೋಳ ಗ್ರಾಮದಲ್ಲಿ ಅಸ್ತಿತ್ತ್ವದಲ್ಲಿರುವ ಶ್ರೀ ಪಟ್ಟದ ಮಠವು ಶ್ರೀಮದ್ ರಂಭಾಪುರಿಪೀಠದ ಶಾಖಾಮಠವಾಗಿ ಪಂಚಾಚಾರ್ಯರ ತತ್ತ್ವಗಳನ್ನು ಪ್ರಚುರ ಪಡಿಸುತ್ತಿದೆ. ಸುಮಾರು85 ವರ್ಷಗಳ ಹಿಂದೆ ಸ್ಥಾಪಿತಗೊಂಡಿತೆಂದು ಹೇಳˉÁಗಿರುವ ಶ್ರೀ ಪಟ್ಟದ ಮಠದ ಕರ್ತೃಗುರುಗಳು ಪೂಜ್ಯ ಶ್ರೀ ದೇವಪ್ಪ ದೇವರು. ಶ್ರೀಗಳ ಕುರಿತಾಗಿ ಹೆಚ್ಚಿನ ಮಾಹಿತಿಗಳ ಅಲಭ್ಯತೆಇದೆ. ಶ್ರೀಗಳು ಶ್ರೀಮಠವನ್ನು ಸಮರ್ಥವಾಗಿ ಮುನ್ನಡೆಸಿ 1967ರಲ್ಲಿ ಲಿಂಗೈಕ್ಯರಾಗಿದ್ದಾರೆ. ಆನಂತರ 1983ರಲ್ಲಿ ಶ್ರೀಮಠದ ಪಟ್ಟಾಧಿಕಾರ ಸ್ವೀಕರಿಸಿ ಬಂದವರು ಈಗಿನ ಶ್ರೀಗಳಾದ ಶ್ರೀಷ.ಬ್ರ. ಚಿದ್ಘನ ಶಿವಾಚಾರ್ಯ ಸ್ವಾಮಿಗಳು.ಹಣಕೋಳ ಗ್ರಾಮದಲ್ಲಿ ಧಾರ್ಮಿಕ ಕಾರ್ಯಗಳನ್ನು ನಡೆಸುವ ಉದ್ದೇಶದಿಂದಪ್ರಾರಂಭಗೊಂಡ ಶ್ರೀ ಪಟ್ಟದ ಮಠವು ಖಾಲಿ ಉಳಿದಿದ್ದನ್ನು ಕಂಡ ಆಗ ನೆಲ್ಲಿಕೆರೆಯಲ್ಲಿದ್ದಈಗಿನ ಕನಕಪುರದ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮಿಗಳು ಶ್ರೀ ಷ.ಬ್ರ. ಚಿದ್ಘನ ಶಿವಾಚಾರ್ಯಸ್ವಾಮಿಗಳನ್ನು ನೇಮಿಸಿದರು. ಶ್ರೀ ಚಿದ್ಘನ ಶಿವಾಚಾರ್ಯರು ಕನಕಪುರದ ದೇಗುಲ ಮಠದಲ್ಲಿವಿದ್ಯಾಭ್ಯಾಸ ಪೂರ್ಣಗೊಳಿಸಿ 1983ರಲ್ಲಿ ಶ್ರೀಮಠದ ಪಟ್ಟಾಧಿಕಾರವನ್ನು ವಹಿಸಿಕೊಂಡರು.ಶ್ರೀ ಚಿದ್ಘನ ಶಿವಾಚಾರ್ಯರು ಶ್ರೀಮಠದ ಅಧಿಕಾರ ವಹಿಸಿಕೊಂಡ ಮೇˉÉಶ್ರೀಮಠದ ಕಾರ್ಯಕ್ರಮಗಳು ಚುರುಕುಗೊಂಡವು. ಸ್ವತಃ ಕಾಯಕಯೋಗಿಗಳಾದ ಶ್ರೀಗಳುಮಠದ ಆಸ್ತಿಯಾಗಿದ್ದ ಹತ್ತು ಎಕರೆ ಜಮೀನನ್ನು ಅಭಿವೃದ್ಧಿಪಡಿಸಿ ಮಠಕ್ಕೆ ಹೆಚ್ಚು ಆದಾಯಬರುವಂತೆ ಮಾಡಿದರು ಹಾಗೂ ಭಕ್ತರ ಸಹಕಾರದೊಂದಿಗೆ ಶ್ರೀಮಠವನ್ನುವಿಸ್ತಾರಗೊಳಿಸಿರುವ ಶ್ರೀಗಳು ಭಕ್ತರನ್ನು ಸನ್ಮಾರ್ಗದಲ್ಲಿ ಮುನ್ನಡೆಸುತ್ತಿದ್ದಾರೆ.ಶ್ರೀಮಠದಲ್ಲಿ ಪ್ರತಿನಿತ್ಯ ಧಾರ್ಮಿಕ ಆಚರಣೆಗಳೊಂದಿಗೆ ಶ್ರೀಗಳು ಗ್ರಾಮದಹಾಗೂ ಭಕ್ತರ ಮನೆಗಳಲ್ಲಿನ ಧಾರ್ಮಿಕ ಚಟುವಟಿಕೆಗಳಲ್ಲಿ ಭಾಗವಹಿಸುತ್ತಾ ಸೂಕ್ತಮಾರ್ಗದರ್ಶನ ಮಾಡುತ್ತಿದ್ದಾರೆ. ಶ್ರೀಮಠದಲ್ಲಿ ಕಾರ್ತೀಕ ಶಿವರಾತ್ರಿ, ಧನುರ್ಮಾಸಗಳಲ್ಲಿವಿಶೇಷ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬರುತ್ತಿದ್ದಾರೆ. ಶ್ರೀಗಳುಶಿಥಿಲಗೊಂಡಿದ್ದ ಮಠವನ್ನು 2009ರಲ್ಲಿ ಜೀರ್ಣೋದ್ಧಾರಗೊಳಿಸಿದ್ದು 2015ರಲ್ಲಿ ಮತ್ತೊಮ್ಮೆನವೀಕರಿಸಿದ್ದಾರೆ.

Swamiji

Swamiji Name :
ಶ್ರೀ ಷ.ಬ್ರ. ಚಿದ್ಘನ ಶಿವಾಚಾರ್ಯ ಸ್ವಾಮಿಗಳು
Date of Birth :
03-06-1963
Place :
ಹಣಕೋಳ, ಮಳವಳ್ಳಿ ತಾ||
Pattadikara :
1983
Photo :

Programs

ಶಿವರಾತ್ರಿ ವಿಶೇಷ ಪೂಜೆ ಮತ್ತು ಜಾಗರಣೆ
ಧನುರ್ಮಾಸದಲ್ಲಿ ನಿತ್ಯ ವಿಶೇಷ ಪೂಜೆ ಕಾರ್ತಿಕ ಮಾಸದಲ್ಲಿ ದೀಪೋತ್ಸವ

Photos

Full Address Kannada

ಶ್ರೀ ಪಟ್ಟದ ಮಠ ಹಣಕೋಳ,
ಚಿಕ್ಕಬಾಗಿಲು ಪೋಸ್ಟ್ - 571 463
ಮಳವಳ್ಳಿ ತಾ||, ಮಂಡ್ಯ ಜಿಲ್ಲೆ

Map

Near by Places

ಮಳವಳ್ಳಿ - 15 ಕಿ.ಮೀ.
ಮೈಸೂರು - 42 ಕಿ.ಮೀ.
ಮಂಡ್ಯ - 16 ಕಿ.ಮೀ.

Statistic

18 Views
0 Rating
0 Favorite
0 Share
error: Content is protected !!