Shree Pattada Matha

Shree Pattada Matha Claimed

ಶ್ರೀ ಪಟ್ಟದ ಮಠ

Average Reviews

Description

ಶ್ರೀ ಪಟ್ಟದ ಮಠ

ಕರ್ತೃ – ಪೂಜ್ಯ ಶ್ರೀ ಜಡೆ ಶಿವಾಚಾರ್ಯ ಮಹಾಸ್ವಾಮಿಗಳು

ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲ್ಲೂಕಿನ ಅಜ್ಜೀಪುರ ಗ್ರಾಮವುತಾಲ್ಲೂಕು ಕೇಂದ್ರದಿಂದ 30 ಕಿ.ಮೀ. ದೂರದಲ್ಲಿದ್ದು ಈ ಗ್ರಾಮದಲ್ಲಿ ಸುಮಾರು 18ನೇಶತಮಾನದಲ್ಲಿ ಸ್ಥಾಪಿತಗೊಂಡಿರುವ ಶ್ರೀ ಪಟ್ಟದ ಮಠವು ಅಸ್ತಿತ್ತ್ವದಲ್ಲಿದೆ. ಶ್ರೀಮದ್ರಂಭಾಪುರಿ ಪೀಠದ ಶಾಖಾಮಠವಾಗಿರುವ ಶ್ರೀ ಪಟ್ಟದ ಮಠವು ಶಿಷ್ಯವರ್ಗದಸಂಪ್ರದಾಯದಲ್ಲಿ ಬೆಳೆದು ಬಂದಿದ್ದು ಶ್ರೀಮಠದ ಕರ್ತೃ ಗುರುಗಳೆಂದು ಪೂಜ್ಯ ಶ್ರೀ ಜಡೆಶಿವಾಚಾರ್ಯ ಮಹಾಸ್ವಾಮಿಗಳನ್ನು ಗುರುತಿಸಲಾಗಿದೆ.ಕರ್ತೃ ಗುರುಗಳ ಕಾಲಮಾನ 18ನೇ ಶತಮಾನವೆಂದು ಹೇಳಲಾದರೂದಾಖಲೆಗಳ ಕೊರತೆಯಿಂದಾಗಿ ಸ್ಪಷ್ಟವಾಗಿ ಹೇಳಲು ಬರುವುದಿಲ್ಲ ಹಾಗೂ ಪರಂಪರೆಯಲ್ಲಿಈವರೆಗೂ 12 ಜನ ಶ್ರೀಗಳು ಅಧಿಕಾರ ನಡೆಸಿದ್ದಾರೆಂದು ಹೇಳಲಾಗಿದ್ದು ಗುರುಪರಂಪರೆಪೂರ್ಣವಾಗಿ ಲಭ್ಯವಾಗುವುದಿಲ್ಲ. ಶ್ರೀಮಠದ ಆವರಣದಲ್ಲಿ ಐದು ಗದ್ದುಗೆಗಳಿದ್ದು, ಒಂದುಗದ್ದುಗೆ ಮಧುವನಹಲ್ಳಿ, ಒಂದು ಗದ್ದುಗೆ ಹುಗ್ಯ, ಒಂದು ಗದ್ದುಗೆ ಕನಕಪುರ ತಾಲ್ಲೂಕಿನಮುಳ್ಳಳ್ಳಿಗಳಲ್ಲಿವೆಯೆಂದು ಹೇಳಲಾಗುತ್ತದೆ.ಶ್ರೀಮಠದ ಹಿಂದಿನ ಗುರುಗಳಾದ ಶ್ರೀ ಷ.ಬ್ರ. ವೃಷಭೇಂದ್ರ ಶಿವಾಚಾರ್ಯಮಹಾಸ್ವಾಮಿಗಳು ಈಗ್ಗೆ 70-80 ವರ್ಷಗಳ ಹಿಂದೆ ಲಿಂಗೈಕ್ಯರಾಗಿದ್ದು ಅಲ್ಲಿಂದ ಮುಂದೆಸುಧೀರ್ಘ 5 ದಶಕಗಳ ಕಾಲ ಶ್ರೀಮಠವು ಖಾಲಿ ಉಳಿದು ಜೀರ್ಣಗೊಳ್ಳತೊಡಗಿತ್ತು. ಆಗಮಠದ ಭಕ್ತರೇ 1983 ರಿಂದ 1987ರವರೆಗೆ ಶ್ರೀಮಠವನ್ನು ಜೀರ್ಣೋದ್ಧಾರಗೊಳಿಸಿದರು.ತದ ನಂತರ ಪ್ರಾಚೀನ ಇತಿಹಾಸದ ಮಠ ಖಾಲಿ ಉಳಿಯಬಾರದೆಂದು ಈಗಿನ ಶ್ರೀಗಳನ್ನುಕರೆತಂದು ಮಠದ ಅಧಿಕಾರ ವಹಿಸಿದರು.ಈಗಿನ ಶ್ರೀಗಳಾದ ಶ್ರೀ ಷ.ಬ್ರ. ನಂದೀಶ ಶಿವಾಚಾರ್ಯ ಸ್ವಾಮಿಗಳು 1992ರ ಮೇ15ರಂದು ಶ್ರೀಮಠದ ಪಟ್ಟಕ್ಕೆ ಬಂದಿದ್ದು ಭಕ್ತರ ಸಹಕಾರದೊಂದಿಗೆ ಶ್ರೀಮಠದ ಸರ್ವಾಂಗೀಣಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಶ್ರೀಮಠದಲ್ಲಿ ಪ್ರಾರ್ಥನಾ ಮಂದಿರ, ವಸತಿ ಗೃಹಗಳನ್ನುನಿರ್ಮಿಸಿರುವ ಶ್ರೀಗಳು “ಅಕ್ಕನ ಬಳಗ” ಹಾಗೂ “ವೀರಶೈವ ಸಮಾಜ ವೇದಿಕೆ”ಗಳನ್ನುಪ್ರಾರಂಭಿಸಿ ಆ ಮುಖೇನ ಸಮಾಜದ ಅಭ್ಯುದಯದಲ್ಲಿ ನಿರತರಾಗಿದ್ದಾರೆ.

Swamiji

Swamiji Name :
ಶ್ರೀ ಷ.ಬ್ರ. ನಂದೀಶ ಶಿವಾಚಾರ್ಯ ಸ್ವಾಮಿಗಳು
Date of Birth :
20-05-1973
Place :
ಅಜ್ಜೀಪುರ, ಕೊಳ್ಳೇಗಾಲ ತಾ||
Pattadikara :
15-05-1992
Photo :

Programs

ಪ್ರತಿ ತಿಂಗಳ ಮಾಸ ಶಿವರಾತ್ರಿ, ಅಮವಾಸ್ಯೆ ಹಾಗೂ ಹುಣ್ಣಿಮೆಗಳಲ್ಲಿ
ವಿಶೇಷ ಪೂಜಾ ಕಾರ್ಯಕ್ರಮಗಳು
ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಆಚರಣೆ
ಯುಗಾದಿಗೆ ಉತ್ಸವ, ಪಂಚಾಗ ಶ್ರವಣ ಮತ್ತು ಮಹಾಮಂಗಳಾರತಿ
ಅಕ್ಕಮಹಾದೇವಿ ಜಯಂತಿ ವಿಶೇಷ ಧಾರ್ಮಿಕ ಸಮಾರಂಭ
ಬಸವ ಜಯಂತಿ ಆಚರಣೆ, ಶಿವಾನುಭವ ಕಾರ್ಯಕ್ರಮ
ಪ್ರತಿ ವರ್ಷ ಮೇ 15ಕ್ಕೆ ಪ್ರಸ್ತುತ ಶ್ರೀಗಳ ಪಟ್ಟಾಧಿಕಾರ ಮಹೋತ್ಸವ
ಗುರುಪೂರ್ಣಿಮೆಗೆ ವಿಶೇಷ ಆಚರಣೆಗಳು
ಕಾರ್ತಿಕ ಮಾಸ ಪರ್ಯಂತ ದೀಪೋತ್ಸವ ಹಾಗೂ ವಿಶೇಷ ಪೂಜೆ

Photos

Full Address Kannada

ಶ್ರೀ ಪಟ್ಟದ ಮಠ
ಅಜ್ಜೀಪುರ - 571 439
ಕೊಳ್ಳೇಗಾಲ ತಾ||, ಚಾಮರಾಜನಗರ ಜಿಲ್ಲೆ

Map

Near by Places

ಕೊಳ್ಳೇಗಾಲ - 30 ಕಿ.ಮೀ.
ಎಂ.ಎಂ.ಹಿಲ್ಸ್ - 40 ಕಿ.ಮೀ.
ಚಾಮರಾಜನಗರ - 80 ಕಿ.ಮೀ.

Statistic

13 Views
0 Rating
0 Favorite
0 Share
error: Content is protected !!