ಮಂಡ್ಯ ಜಿˉÉ್ಲಯ ಮಳವಳ್ಳಿ ತಾಲ್ಲೂಕು ಕೇಂದ್ರದಿಂದ ಕೇವಲ 02 ಕಿ.ಮೀ.ದೂರದಲ್ಲಿರುವ ರಾಗಿಬೊಮ್ಮನಹಳ್ಳಿ ಗ್ರಾಮದ ಹೊರಭಾಗದಲ್ಲಿ ಸ್ಥಾಪಿತಗೊಂಡಿರುವ ಶ್ರೀಪಟ್ಟದ ಮಠವು ತನ್ನ ಆಚರಣೆಗಳ ಮೂಲಕ ಪ್ರಚಲಿತದಲ್ಲಿದೆ. ಶ್ರೀ ಪಟ್ಟದ ಮಠವು ಶ್ರೀಸುತ್ತೂರು ಶಿವರಾತ್ರೀಶ್ವರ ಮಠದ ಶಾಖಾಮಠವಾಗಿದ್ದು ಪ್ರಸ್ತುತ ಶ್ರೀ ಪ್ರಭುಲಿಂಗ ಸ್ವಾಮಿಗಳುಅಧಿಕಾರ ನಡೆಸುತ್ತಿದ್ದಾರೆ.ಶ್ರೀ ಮಠವು ಗ್ರಾಮದಲ್ಲಿ ಮುಂಚಿನಿಂದಲೂ ಅಸ್ತಿತ್ವದಲ್ಲಿರುವಂತೆ ಕಾಣುತ್ತಿದ್ದುಸಂತರೊಬ್ಬರು ಭಿಕ್ಷಾ ಕಾಯಕ ಮಾಡುತ್ತಾ ಹಸಿದವರ ಹೊಟ್ಟೆ ತುಂಬಿಸುತ್ತಾ ಧಾರ್ಮಿಕಆಚರಣೆಗಳನ್ನು ನಡೆಸುತ್ತಿದ್ದರೆಂದು ಹೇಳˉÁಗುತ್ತದೆ. ಆ ನಂತರ ಶ್ರೀಮಠವು ಖಾಲಿಉಳಿದಿದ್ದರಿಂದ ಗ್ರಾಮಸ್ಥರು ಸುತ್ತೂರು ಶ್ರೀಗಳಿಗೆ ಶ್ರೀಮಠಕ್ಕೆ ಪಟ್ಟಾಧಿಕಾರಿಯನ್ನುನೇಮಿಸಬೇಕೆಂದು ಬಿನ್ನವಿಸಿಕೊಂಡರು. ಆಗ ಶ್ರೀಮಠದ ಪಟ್ಟಕ್ಕೆ ಬಂದವರೇ ಹಿಂದಿನಶ್ರೀಗಳಾದ ಶ್ರೀ ಸಿದ್ದಲಿಂಗ ಸ್ವಾಮಿಗಳು.ಶ್ರೀ ಸಿದ್ದಲಿಂಗ ಸ್ವಾಮಿಗಳು ಶ್ರೀಮಠದಲ್ಲಿ ನಿರಂತರವಾಗಿ ಧಾರ್ಮಿಕಚಟುವಟಿಕೆಗಳನ್ನು ನಡೆಸುತ್ತಾ ಭಕ್ತರಲ್ಲಿ ಧರ್ಮ ಜಾಗೃತಿ ಮೂಡಿಸುತ್ತಿದ್ದರು. ಶ್ರೀಮಠವನ್ನುಭಕ್ತರ ಸಹಕಾರದೊಂದಿಗೆ ಹಂತಹಂತವಾಗಿ ಅಭಿವೃದ್ಧಿಪಡಿಸಿದ್ದು ಕಂಡುಬರುತ್ತದೆ. ಶ್ರೀಗಳುಶ್ರೀಮಠದಲ್ಲಿ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾಭಕ್ತರನ್ನು ಧಾರ್ಮಿಕ ಚಿಂತನೆಗೆ ಒಳಪಡಿಸುತ್ತಿದ್ದರು. ಶ್ರೀಮಠದಲ್ಲಿ ದಾಸೋಹವನ್ನುಪ್ರಾರಂಭಿಸಿದ ಶ್ರೀಗಳು 2008ರಲ್ಲಿ ಈಗಿನ ಶ್ರೀಗಳಿಗೆ ಪಟ್ಟಾಧಿಕಾರ ನೀಡಿ 2010ರಲ್ಲಿಲಿಂಗೈಕ್ಯರಾದರು.ಈಗಿನ ಶ್ರೀಗಳಾದ ಶ್ರೀ ಪ್ರಭುಲಿಂಗ ಸ್ವಾಮಿಗಳು 2008ರ ಮಾರ್ಚ್ 19ರಂದುಶ್ರೀಮಠಕ್ಕೆ ಪಟ್ಟಾಧಿಕಾರ ಸ್ವೀಕರಿಸಿ ಬಂದಿದ್ದು ಹಿರಿಯ ಗುರುಗಳ ಮಾರ್ಗದರ್ಶನದಲ್ಲಿಪರಿಪಕ್ವಗೊಂಡರು. ಗುರುಗಳ ಐಕ್ಯಾನಂತರ ಶ್ರೀಮಠದ ಸಂಪೂರ್ಣ ಜವಾಬ್ದಾರಿವಹಿಸಿಕೊಂಡ ಶ್ರೀಗಳು ಗುರುಗಳ ಹಾದಿಯಲ್ಲಿಯೇ ಶ್ರೀಮಠವನ್ನು ಮುನ್ನಡೆಸುತ್ತಿದ್ದಾರೆ.ಶ್ರೀಗಳು ಶ್ರೀಮಠದಲ್ಲಿ ಪ್ರತಿ ವರ್ಷ ಆಗಸ್ಟ್ ತಿಂಗಳಲ್ಲಿ ಶ್ರೀ ಲಿಂ. ಸಿದ್ದಲಿಂಗ ಸ್ವಾಮಿಗಳಪುಣ್ಯಾರಾಧನೆ ಮಹೋತ್ಸವ ಆಯೋಜಿಸಿಕೊಂಡು ಬರುತ್ತಿದ್ದಾರೆ.
Swamiji
Swamiji Name :
ಪೂಜ್ಯ ಶ್ರೀ ಪ್ರಭುಲಿಂಗ ಸ್ವಾಮಿಗಳು
Date of Birth :
21-12-1992
Place :
ಚಿಕ್ಕಬಾಗಿಲು, ಮಳವಳ್ಳಿ ತಾ||
Pattadikara :
19-03-2008
Photo :
Programs
ಆಶ್ವೀಜ ಮಾಸದಲ್ಲಿ ಹಿಂದಿನ ಗುರುಗಳಾದ ಲಿಂ|| ಶ್ರೀ ಸಿದ್ದಲಿಂಗ ಸ್ವಾಮಿಗಳ ಪುಣ್ಯಾರಾಧನೆ z£sÀ Àುರ್ಮಾಸದಲ್ಲಿ ವಿಶೇಷ ಪೂಜೆ ಬಸವ ಜಯಂತಿ ಆಚರಣೆ
Photos
Full Address Kannada
ಶ್ರೀ ಪಟ್ಟದ ಮಠ
ರಾಗಿಬೊಮ್ಮನಹಳ್ಳಿ - 571 430
ಮಳವಳ್ಳಿ ತಾ||, ಮಂಡ್ಯ ಜಿಲ್ಲೆ