ಚಾಮರಾಜನಗರ ಜಿಲ್ಲೆ ಯಳಂದೂರು ತಾಲ್ಲೂಕಿನ ಹೊನ್ನೂರು ಗ್ರಾಮವುತಾಲ್ಲೂಕು ಕೇಂದ್ರದಿಂದ 7 ಕಿ.ಮೀ. ದೂರದಲ್ಲಿದ್ದು ಈ ಗ್ರಾಮದ ಮಧ್ಯಭಾಗದಲ್ಲಿಅಸ್ತಿತ್ವದಲ್ಲಿರುವ ಶ್ರೀ ಪಟ್ಟದ ಮಠವು 20ನೇ ಶತಮಾನದ ಪ್ರಾರಂಭ ಎಂದರೆ 1902ರಲ್ಲಿಸ್ಥಾಪಿತಗೊಂಡಿತೆಂದು ಹೇಳಲಾಗಿದೆ. ಟಿ. ನರಸೀಪುರ ತಾಲ್ಲೂಕು ಯಳವರ ಹುಂಡಿಗ್ರಾಮದಿಂದ ಆಗಮಿಸಿದ ಶ್ರೀ ಪುಟ್ಟಬಸಪ್ಪ ಮಹಾಸ್ವಾಮಿಗಳನ್ನು ಶ್ರೀ ಪಟ್ಟದ ಮಠದಕರ್ತೃಗುರುಗಳನ್ನಾಗಿ ಹೆಸರಿಸಲಾಗಿದೆ.ಹೊನ್ನೂರು ಗ್ರಾಮದ ಜನರು ಊರು ಧಾರ್ಮಿಕ ಸಂಸ್ಕಾರಹೊಂದುವಂತಾಗಲು ಒಬ್ಬ ಗುರುಗಳ ಅಗತ್ಯವಿದೆಯೆಂದರಿತು ಮಠಾಧೀಶರ ನೇಮಕಮಾಡಬೇಕೆಂದು ನಿಶ್ಚಯಿಸಿ ಶ್ರೀ ಪಟ್ಟದ ಮಠವನ್ನು ಪ್ರಾರಂಭಿಸಿದರು. ಇಂತಹ ಮಠದಪ್ರಥಮ ಗುರುಗಳಾಗಿ ಬಂದವರೇ ಕಾಯಕಯೋಗಿ, ಮಹಾತಪಸ್ವಿ ಪೂಜ್ಯ ಶ್ರೀ ಪುಟ್ಟಬಸಪ್ಪಮಹಾಸ್ವಾಮಿಗಳು. ಶ್ರೀಗಳು ಶ್ರೀಮಠದ ಆಚರಣೆಗಳ ಮೂಲಕ, ತಮ್ಮ ದಾಸೋಹ ತತ್ತ್ವಗಳಮೂಲಕ ಈ ಭಾಗದ ಜನರನ್ನು ಧರ್ಮ ಮಾರ್ಗದಲ್ಲಿ ಕೊಂಡೊಯ್ದಿದ್ದರು. ಮಠದಜ್ಯೋತಿಗಳಾಗಿ ಬೆಳಗಿ ಲಿಂಗೈಕ್ಯರಾದ ಗುರುಗಳ ಗದ್ದುಗೆಯು ಶ್ರೀಮಠದಲ್ಲಿದೆ.ಕರ್ತೃಗಳ ನಂತರ ಕೆಲಕಾಲ ಖಾಲಿ ಉಳಿದಿದ್ದ ಶ್ರೀಮಠದಲ್ಲಿ ಭಕ್ತರೇ ಧಾರ್ಮಿಕಆಚರಣೆಗಳನ್ನು ನಡೆಸಿದ್ದು ನಂತರ ಬಂದವರು ಶ್ರೀ ಷ.ಬ್ರ. ಸಾಂಬಸದಾಶಿವಮಹಾಸ್ವಾಮಿಗಳು. ಇವರು ಅಧಿಕಾರ ವಹಿಸಿಕೊಳ್ಳುವ ಪೂರ್ವದಲ್ಲಿ ಇವರಸಮ್ಮುಖದಲ್ಲಿಯೇ ಊರಿನ ಭಕ್ತರಾದ ಹೆಚ್.ವಿ. ಮಲ್ಲಪ್ಪ ಮತ್ತು ಹೆಚ್.ವಿ. ಶಿವಣ್ಣನವರುನಾಲ್ಕು ಅಂಕಣದ ಮಠದ ಕಟ್ಟಡವನ್ನು ತೆಗೆಸಿ ವಿಶಾಲವಾದ ಮಠ ಕಟ್ಟಿಸಿ 1976ರ ಫೆಬ್ರವರಿ05ರಂದು ಉದ್ಘಾಟನೆ ಮಾಡಿದರು. ಆ ನಂತರವಷ್ಟೇ ಶ್ರೀ ಸಾಂಬಸದಾಶಿವಮಹಾಸ್ವಾಮಿಗಳು ಪಟ್ಟಾಧಿಕಾರ ಸ್ವೀಕರಿಸಿದರು.2003ರವರೆಗೂ ಶ್ರೀಮಠದ ಪಟ್ಟಾಧಿಕಾರಿಗಳಾಗಿ ಮುಂದುವರೆದಿದ್ದ ಶ್ರೀಸಾಂಬಸದಾಶಿವ ಮಹಾಸ್ವಾಮಿಗಳು 2003ರಲ್ಲಿ ಹುಣಸೂರು ತಾಲ್ಲೂಕು ಮಾದಹಳ್ಳಿಯಉಕ್ಕಿನಕಂತೆ ಮಠದ ಪೀಠಾಧಿಪತಿಗಳಾಗಿ ಅಧಿಕಾರ ಸ್ವೀಕರಿಸಿದ್ದು ಆ ನಂತರದಲ್ಲಿ2010ರವರೆಗೆ ಈಗಿನ ಶ್ರೀಗಳ ತಂದೆಯವರೇ ಮಠವನ್ನು ನಿರ್ವಹಿಸುತ್ತಿದ್ದರು. 2010ರ ಮೇ28ರಂದು ಶ್ರೀ ಮಠದ ಪಟ್ಟಕ್ಕೆ ಬಂದಿರುವ ಶ್ರೀ ಷ.ಬ್ರ. ಶಿವಕುಮಾರ ಸ್ವಾಮಿಗಳುಪರಂಪರೆಯ ಹಾದಿಯಲ್ಲಿ ಶ್ರೀಮಠದಲ್ಲಿ ಮುನ್ನಡೆಸಿಕೊಂಡು ಬರುತ್ತಿದ್ದಾರೆ.
Swamiji
Swamiji Name :
ಶ್ರೀ ಷ.ಬ್ರ. ಶಿವಕುಮಾರ ಸ್ವಾಮಿಗಳು
Date of Birth :
25-07-1994
Place :
ಗಟ್ಟವಾಡಿ, ನಂಜನಗೂಡು ತಾ||
Pattadikara :
28-05-2010
Photo :
Programs
ಪ್ರತಿ ಅಮವಾಸ್ಯೆಗೆ ವಿಶೇಷ ಪೂಜೆ
ಶಿವರಾತ್ರಿಗೆ ಜಾಗರಣೆ
ಬಸವ ಜಯಂತಿ ಆಚರಣೆ
ವರ್ಷದಲ್ಲಿ ಎರಡು ಬಾರಿ ಲಿಂಗಧಾರಣೆ ಕಾರ್ಯಕ್ರಮ
ರಾಮನವಮಿಯ ಮರುದಿನ ಕರ್ತೃಗುರುಗಳ ಪುಣ್ಯಾರಾಧನೆ
ಧನುರ್ಮಾಸದಲ್ಲಿ ನಿತ್ಯ ರುದ್ರಾಭಿಷೇಕ
ಕಾರ್ತಿಕ ಮಾಸದಲ್ಲಿ ಪ್ರತಿ ಸೋಮವಾರ ದೀಪೋತ್ಸª