ಚಾಮರಾಜನಗರ ಜಿಲ್ಲೆ ಕೊಳ್ಳೆಗಾಲ ತಾಲ್ಲೂಕಿನ ಕಾಮಗೆರೆ ಗ್ರಾಮವು ತಾಲ್ಲೂಕುಕೇಂದ್ರದಿಂದ 15 ಕಿ.ಮೀ. ದೂರದಲ್ಲಿದ್ದು ಈ ಗ್ರಾಮದ ಮಧ್ಯಭಾಗದಲ್ಲಿ ಅಸ್ತಿತ್ವದಲ್ಲಿರುವ ಶ್ರೀಪಟ್ಟದ ಮಠವು ತನ್ನ ಧಾರ್ಮಿಕ ಆಚರಣೆಗಳ ಮೂಲಕ ಪ್ರಚಲಿತದಲ್ಲಿದೆ. ಶ್ರೀ ಶ್ರೀಶೈಲಪೀಠದ ಶಾಖಾಮಠವಾಗಿ ಪುತ್ರವರ್ಗದ ಪರಂಪರೆಯಲ್ಲಿ ಬೆಳೆದು ಬಂದಿರುವ ಶ್ರೀ ಪಟ್ಟದಮಠದ ಕರ್ತೃಗುರುಗಳೆಂದು ಶ್ರೀ. ಷ.ಬ್ರ. ಭೋಗನಂಜಪ್ಪ ಮಹಾಸ್ವಾಮಿಗಳನ್ನು ಹೆಸರಿಸಬಹುದು.ಶ್ರೀ ಮಠದ ಸ್ಥಾಪಿತ ಕಾಲಮಾನ ಹಾಗೂ ಗುರುಪರಂಪರೆಯ ಬಗ್ಗೆ ಸ್ಪಷ್ಟತೆಯಿಲ್ಲಶ್ರೀ ಮಠದ ಕರ್ತೃಗುರುಗಳೆಂದು ಶ್ರೀ ¨s Éೂೀಗನಂಜಪ ್ಪ ಸ್ವಾಮಿಗಳನ್ನುಹೆಸರಿಸಲಾಗಿದೆಯಾದರು ದಾಖಲೆಗಳಿಲ್ಲ. ನಂತರದ ಪರಂಪರೆಯ ಶ್ರೀ ಚನ್ನಬಸವಮಹಾಸ್ವಾಮಿಗಳು ನಾಡಿನಾದ್ಯಂತ ಸಂಚರಿಸಿ ಜನರನ್ನು ಜಾಗೃತಗೊಳಿಸಿ ವೀರಶೈವಧರ್ಮದ ಆಚರಣೆಗಳನ್ನು ಪ್ರಚುರಪಡಿಸಿದ್ದಾರೆ. ನಂತರದ ಶ್ರೀ ನಂಜುಂಡ ಮಹಾಸ್ವಾಮಿಗಳಕಾಲದಲ್ಲಿ ಶ್ರೀ ಮಠವು ಅಭಿವೃದ್ದಿಗೊಂಡಂತೆ ಕಾಣುತ್ತಿದ್ದು ಶ್ರೀಗಳು ಮಠದ ಆಸ್ತಿಯನ್ನುವಿಸ್ತರಿಸಿ, ವಾಣಿಜ್ಯ ಬೆಳೆಗಳನ್ನು ಬೆಳೆದು ಮಠದ ಆದಾಯವನ್ನು ಹೆಚ್ಚಿಸಿದ್ದಾರೆ. ಇವರಕಾಲದಲ್ಲಿ ಶ್ರೀ ಮಠವು ಜೀರ್ಣಾಭಿವೃದ್ದಿಗೊಂಡಿದೆ.ಹಿಂದಿನ ಶ್ರೀಗಳಾದ ಶ್ರೀ ಷ.ಬ್ರ. ಶಾಂತಮಲ್ಲಿಕಾರ್ಜುನ ಮಹಾಸ್ವಾಮಿಗಳು1988ರಲ್ಲಿ ಶ್ರೀ ಮಠದ ಪಟ್ಟಕ್ಕೆ ಬಂದು ತಮ್ಮ ಕಾಯಕ ಯೋಗದಿಂದ ಶ್ರೀಮಠವುಸದೃಡಗೊಳ್ಳುವಂತೆ ರೂಪಿಸಿದರು. ತಮ್ಮ ಕ್ರಿಯಾಶೀಲತೆಯಿಂದ ಮಠದ ಭಕ್ತರನ್ನುಸಂಘಟಿಸುತ್ತ ಅವರಿಗೆ ಧಾರ್ಮಿಕ ಸಂಸ್ಕಾರವನ್ನು ನೀಡಿ ಸಂಸ್ಕಾರಯುತ ಸಮಾಜರೂಪಿಸಲು ಶ್ರಮಿಸಿದರು. ಇಷ್ಟೆಲ್ಲಾ ಶ್ರಮಿಸಿದ ಶ್ರೀಗಳು ಚಿಕ್ಕ ವಯಸ್ಸಿನಲ್ಲಿಯೇ 2005ರ ಮೇ21ರಲ್ಲಿ ಲಿಂಗೈಕ್ಯರಾಗಿದ್ದಾರೆ.ಈಗಿನ ಶ್ರೀಗಳಾದ ಶ್ರೀ ಷ.ಬ್ರ. ಇಮ್ಮಡಿ ನಂಜುಂಡ ರಾಜೇಂದ್ರ ಸ್ವಾಮಿಗಳುಹಿಂದಿನ ಶ್ರೀಗಳ ಐಕ್ಯಾನಂತರ 2005ರ ಜೂನ್ 27ರಂದು ತಮ್ಮ 14ನೇ ವಯಸ್ಸಿನಲ್ಲಿಯೇಶ್ರೀ ಮಠದ ಪಟ್ಟಾಧಿಕಾರದ ಅನುಗ್ರಹ ಪಡೆದರು. ನಂತರ ತಮ್ಮ ವಿದ್ಯಾಭ್ಯಾಸಮುಂದುವರೆಸಿದ ಶ್ರೀಗಳು ಸ್ನಾತಕೋತ್ತರ ಪದವಿ ಪೂರ್ಣಗೊಳ್ಳಿಸಿದ್ದಾರೆ. ಶ್ರೀಮಠದಲ್ಲಿ ನಿತ್ಯಧಾರ್ಮಿಕ ಆಚರಣೆಗಳೊಂದಿಗೆ ಮೇ ತಿಂಗಳಲ್ಲಿ ಹಿಂದಿನ ಶ್ರೀಗಳ ಪುಣ್ಯಾರಾಧನೆಕಾರ್ಯಕ್ರಮ ನಡೆಸಿಕೊಂಡು ಬರುತ್ತಿದ್ದಾರೆ.
Swamiji
Swamiji Name :
ಶ್ರೀ ಷ.ಬ್ರ. ಇಮ್ಮಡಿ ನಂಜುಂಡ ರಾಜೇಂದ್ರ ಸ್ವಾಮಿಗಳು
Date of Birth :
1991
Place :
ಕಾಮಗೆರೆ, ಕೊಳ್ಳೇಗಾಲ ತಾ||
Pattadikara :
27-06-2005
Photo :
Programs
ಮೇ ತಿಂಗಳಲ್ಲಿ ಹಿಂದಿನ ಗುರುಗಳಾದ ಶ್ರೀ ಷ.ಬ್ರ. ಶಾಂತಮಲ್ಲಿಕಾರ್ಜುನ ಮಹಾಸ್ವಾಮಿಗಳ ಪುಣ್ಯಾರಾಧನೆ
ಶ್ರೀ ಮಠದಲ್ಲಿ ಪ್ರತಿ ಹಬ್ಬಗಳ ಆಚರಣೆ
Photos
Full Address Kannada
ಶ್ರೀ ಪಟ್ಟದ ಮಠ
ಕಾಮಗೆರೆ - 571 443
ಕೊಳ್ಳೇಗಾಲ ತಾ||, ಚಾಮರಾಜನಗರ ಜಿಲ್ಲೆ