Shree Parusha Matha – Kalaburgi

Shree Parusha Matha – Kalaburgi Claimed

ಶ್ರೀ ಪರುಷ ಮಠ - ಕಲಬುರಗಿ

Average Reviews

Description

ಶ್ರೀ ಪರುಷ ಮಠ – ಕಲಬುರಗಿ

ಕರ್ತೃ – ಶ್ರೀ ಷ.ಬ್ರ. ಚನ್ನಮಲ್ಲೇಶ್ವರ ಶಿವಯೋಗಿಗಳು

ಕಲಬುರಗಿ ನಗರದ ಶಹಾಬಜಾರದ ಕಬಾಡಗಲ್ಲಿಯಲ್ಲಿ ಅಸ್ತಿತ್ವದಲ್ಲಿರುವ ಶ್ರೀಪರುಷ ಮಠವು ಶ್ರೀ ಷ.ಬ್ರ.ಚನ್ನಮಲ್ಲೇಶ್ವರ ಶಿವಯೋಗಿಗಳಿಂದ ಈಗ್ಗೆ 80 ವರ್ಷಗಳಹಿಂದೆ ಸ್ಥಾಪಿತಗೊಂಡಿದ್ದು ತನ್ನ ಧಾರ್ಮಿಕ ಆಚರಣೆಗಳ ಮೂಲಕ ಭಕ್ತರಲ್ಲಿ ಧಾರ್ಮಿಕಅರಿವನ್ನು ಮೂಡಿಸುತ್ತಿದೆ. ಶ್ರೀ ಮಠವು ಶ್ರೀಮದ್ ಉಜ್ಜಯಿನಿ ಪೀಠದ ಶಾಖಾಮಠವಾಗಿದ್ದುಶಿಷ್ಯವರ್ಗದ ಪರಂಪರೆಯಲ್ಲಿ ಬೆಳೆದುಬಂದಿದೆ.ಶ್ರೀ ಚನ್ನಮಲ್ಲೇಶ್ವರರು ಬಾಲ್ಯದಿಂದಲೂ ಆಧ್ಯಾತ್ಮಿಕತೆಯ ಒಲವು ಹೊಂದಿದ್ದುಶಾಸ್ತ್ರೀಯವಾಗಿ ಧರ್ಮವನ್ನು ಅಧ್ಯಯನ ಮಾಡಿ ಆಧ್ಯಾತ್ಮಸಿದ್ಧಿಯನ್ನು ಪಡೆದವರು.ತದನಂತರ ಲೋಕಸಂಚಾರಕ್ಕೆ ಹೊರಡುವ ಶ್ರೀಗಳು ದೇಶಪರ್ಯಟನೆ ಮಾಡಿಅಪಾರಜ್ಞಾನವನ್ನು ಸಂಪಾದಿಸಿಕೊಂಡು ಕಲಬುರಗಿ ನಗರಕ್ಕೆ ಆಗಮಿಸುತ್ತಾರೆ. ಶ್ರೀಗಳು ತಮ್ಮಪವಾಡಗಳ ಮೂಲಕ ಹೆಸರಾಗಿದ್ದು ಭಕ್ತರು ಶ್ರೀಗಳಿಗೋಸ್ಕರ ಮಠವನ್ನು ಸ್ಥಾಪಿಸಿಗುರುಗಳನ್ನು ಗೌರವಾದರಗಳಿಂದ ಮಠಕ್ಕೆ ಕರೆತಂದರು. ಆನಂತರ ಗುರುಗಳ ಪ್ರಭಾವಸುತ್ತಲ ಪ್ರಾಂತ್ಯಕ್ಕೆ ಹಬ್ಬಿ ಶ್ರೀಗಳ ಕಾರ್ಯಚಟುವಟಿಕೆ ವಿಸ್ತಾರವಾಯಿತು.ಇಂತಹ ಮಹಾಮಹಿಮ ಕರ್ತೃಗುರುಗಳಿಂದ ಜಾಗೃತಗೊಂಡಿದ್ದ ಶ್ರೀಮಠದಲ್ಲಿಧಾರ್ಮಿಕ ಆಚರಣೆಗಳನ್ನು ಮುನ್ನಡೆಸಿಕೊಂಡು ಬಂದವರು ಹಿಂದಿನ ಶ್ರೀಗಳಾದಶ್ರೀ.ಷ.ಬ್ರ.ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು. ಗುರುಗಳು ಶ್ರೀಮಠದಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಿ 2003ರಲ್ಲಿ ಲಿಂಗೈಕ್ಯರಾದರು. ಇವರ ನಂತರ ಉಜ್ಜಯಿನಿಜಗದ್ಗುರುಗಳ ಸಮ್ಮುಖದಲ್ಲಿ ಕನ್ನೋಳಿ ಶ್ರೀಮಠದ ಶ್ರೀ.ಷ.ಬ್ರ.ಮರುಳಾರಾzs À್ಯಶಿವಾಚಾರ್ಯರಿಂದ ಶ್ರೀ ಪರುಷ ಮಠಕ್ಕೆ ಪಟ್ಟಾಧಿಕಾರದ ಅನುಗ್ರಹ ಪಡೆದವರು ಈಗಿನಶ್ರೀಗಳಾದ ಶ್ರೀ.ಷ.ಬ್ರ. ಅಭಿನವ ಚನ್ನಮಲ್ಲ ಶಿವಾಚಾರ್ಯ ಸ್ವಾಮಿಗಳು.ಪ್ರಸ್ತುತ ಶ್ರೀಗಳು ಮೈಸೂರಿನ ಸುತ್ತೂರುಮಠ ಹಾಗೂ ಹುಬ್ಬಳ್ಳಿಯ ಮೂರುಸಾವಿರ ಮಠಗಳಲ್ಲಿ ತಮ್ಮ ಪದವಿಶಿಕ್ಷಣ ಹಾಗೂ ಆದ್ಯಾತ್ಮ ಶಿಕ್ಷಣವನ್ನು ಪೂರೈಸಿ ಶ್ರೀಮಠಕ್ಕೆ2007ರಲ್ಲಿ ಅಧಿಕಾರಗೊಂಡರು. ಶ್ರೀಮಠದ ಧಾರ್ಮಿಕ ಆಚರಣೆಗಳನ್ನುಚುರುಕುಗೊಳಿಸಿರುವ ಶ್ರೀಗಳು ಭಕ್ತರ ಸಹಕಾರದೊಂದಿಗೆ ಶ್ರೀಮಠದ ಸರ್ವತೋಮುಖಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಶ್ರೀಮಠದಲ್ಲಿ ಪ್ರತಿವರ್ಷ ಡಿಸೆಂಬರ್ನಲ್ಲಿ ಕರ್ತೃಗುರುಗಳಹಾಗೂ ಅಕ್ಟೋಬರ್ನಲ್ಲಿ ಶ್ರೀ.ಷ.ಬ್ರ. ಚಂದ್ರಶೇಖರ ಶಿವಾಚಾರ್ಯರ ಪುಣ್ಯಾರಾಧನಾಮಹೋತ್ಸವ ನಡೆಯುತ್ತದೆ.

Swamiji

Swamiji Name :
ಶ್ರೀ ಷ.ಬ್ರ. ಅಭಿನವ ಚನ್ನಮಲ್ಲ ಶಿವಾಚಾರ್ಯ ಸ್ವಾಮಿಗಳು
Date of Birth :
24-04-1978
Place :
ದೇವರ ಹಿಪ್ಪರಗಿ
Pattadikara :
2007
Photo :

Programs

ಶ್ರಾವಣ ಮಾಸದಲ್ಲಿ ನಿತ್ಯ ಪುರಾಣ ಪ್ರವಚನ.
ಅಕ್ಟೋಬರ್ನಲ್ಲಿ ಶ್ರೀ ಷ.ಬ್ರ.ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳ ಪುಣ್ಯಾರಾಧನೆ
ಡಿಸೆಂಬರ್ನಲ್ಲಿ ಕತೃ ಶ್ರೀಗಳ ಪುಣ್ಯಾರಾಧನೆ

Institutions

ಕಿರಿಯ / ಹಿರಿಯ ಪ್ರಾಥಮಿಕ ಶಾಲೆ ಪ್ರೌಢಶಾಲೆ
ವಿದ್ಯಾರ್ಥಿ ನಿಲಯ

Photos

Full Address Kannada

ಶ್ರೀ ಪರುಷ ಮಠ
ಕಬಾಡಗಲ್ಲಿ, ಶಹಾಬಜಾರ್
ಕಲಬುರಗಿ - 585 101

Map

Near by Places

ಬಸ್ ಸ್ಟ್ಯಾಂಡ್ - 4 ಕಿ.ಮೀ.
ರೈಲ್ವೆ ಸ್ಟೇಷನ್ - 4 ಕಿ.ಮೀ.

Statistic

2 Views
0 Rating
0 Favorite
0 Share
error: Content is protected !!