Shree Paradeshi Matha, Devara Hipparagi

Shree Paradeshi Matha, Devara Hipparagi Claimed

ಶ್ರೀ ಪರದೇಶಿ ಮಠ, ದೇವರಹಿಪ್ಪರಗಿ

Average Reviews

Description

ಶ್ರೀ ಪರದೇಶಿ ಮಠ, ದೇವರಹಿಪ್ಪರಗಿ

ಕರ್ತೃ – ಶ್ರೀ ಷ.ಬ್ರ. ಶಿವಯೋಗಿ ಶಿವಾಚಾರ್ಯ ಮಹಾಸ್ವಾಮಿಗಳು

ದೇವರ ಹಿಪ್ಪರಗಿ ಪಟ್ಟಣದಲ್ಲಿ ಶ್ರೀ ಪರದೇಶಿ ಮಠವು ಪುರಾತನ ಕಾಲದಿಂದಲೂಅಸ್ತಿತ್ವದಲ್ಲಿದ್ದು, ಶ್ರೀಮಠದ ಕರ್ತೃಗುರುಗಳು ಶ್ರೀ ಷ.ಬ್ರ. ಶಿವಯೋಗಿ ಶಿವಾಚಾರ್ಯಸ್ವಾಮಿಗಳೆಂದು ತಿಳಿದುಬರುತ್ತದೆ. ಶ್ರೀಮದ್ ರಂಭಾಪುರಿ ಪೀಠದ ಶಾಖಾಮಠವಾಗಿಪುತ್ರವರ್ಗದ ಪರಂಪರೆಯಲ್ಲಿ ಬೆಳೆದು ಬಂದಿರುವ ಶ್ರೀ ಪರದೇಶಿ ಮಠವು ತನ್ನ ಧಾರ್ಮಿಕಆಚರಣೆಗಳಿಂದಾಗಿ ಈ ಭಾಗದಲ್ಲಿ ಪ್ರಸಿದ್ದಿಗೆ ಬಂದಿದೆ.ಶ್ರೀ ಪರದೇಶಿ ಮಠದ ಕರ್ತೃಗುರುಗಳ ಕಾಲಮಾನದ ಬಗ್ಗೆಯಾಗಲೀ ಹಾಗೂಶ್ರೀಮಠದ ಮುಂದಿನ ಪರಂಪರೆಯ ಬಗ್ಗೆಯಾಗಲೀ ನಿಖರವಾಗಿ ತಿಳಿದು ಬರುವುದಿಲ್ಲ.ಈಗಿನ ಶ್ರೀಗಳ ಪ್ರಕಾರ ಶ್ರೀಮಠದ ಪರಂಪರೆಯಲ್ಲಿ ಇಲ್ಲಿಯವರೆಗೂ 8ಜನ ಶ್ರೀಗಳು ಪಟ್ಟಕ್ಕೆಬಂದಿದ್ದು ಈಗಿನವರು 9ನೆಯವರೆಂದು ಹೇಳಬಹುದು.ಹಿಂದಿನ ಪರಂಪರೆಯ ಶ್ರೀಗಳಾದ ಶ್ರೀ ಸಿದ್ದರಾಮ ಶಿವಾಚಾರ್ಯ ಸ್ವಾಮಿಗಳಬಗ್ಗೆ ಅಲ್ಪ ಮಾಹಿತಿ ತಿಳಿದು ಬರುತ್ತದೆ. ಶ್ರೀಗಳು ಶ್ರೀಮಠದ ಅಧಿಕಾರವನ್ನು ವಹಿಸಿಕೊಂಡುಈ ಪುರಾತನ ಮಠವನ್ನು ಅಭಿವೃದ್ಧಿಪಡಿಸಿ ಪರಂಪರೆಯನ್ನು ಬೆಳೆಸಿದ್ದಾರೆ. ನಂತರ ಶ್ರೀರೇಣುಕ ಶಿವಾಚಾರ್ಯ ಸ್ವಾಮಿಗಳು ಶ್ರೀಮಠದ ಪಟ್ಟಕ್ಕೆ ಬಂದಿದ್ದು ಭಕ್ತರಿಗೆ ಸೂಕ್ತಮಾರ್ಗದರ್ಶನ ನೀಡಿ 1974 ರಲ್ಲಿ ಲಿಂಗೈಕ್ಯರಾಗಿದ್ದಾರೆ ಎಂದು ತಿಳಿದುಬರುತ್ತದೆ.ಈಗಿನ ಶ್ರೀಗಳಾದ ಶ್ರೀ ಷ.ಬ್ರ. ರೇಣುಕ ಶಿವಾಚಾರ್ಯ ಸ್ವಾಮಿಗಳು 1971ರಲ್ಲಿಜನಿಸಿದವರಾಗಿದ್ದು ಚಿಕ್ಕ ವಯಸ್ಸಿನಲ್ಲಿಯೇ ಪುತ್ರವರ್ಗದ ಶ್ರೀಮಠಕ್ಕೆ ಉತ್ತರಾಧಿಕಾರಿಗಳಾಗಿನೇಮಕಗೊಂಡಿದ್ದಾರೆ. ನಂತರ ವಿದ್ಯಾಭ್ಯಾಸ ಪೂರ್ಣಗೊಳಿಸಿದ ಶ್ರೀಗಳು ಶ್ರೀಮಠಕ್ಕೆ ಮರಳಿಪಟ್ಟಾಧಿಕಾರ ಸ್ವೀಕರಿಸಿದ್ದು 2000ದ ಡಿಸೆಂಬರ್ನಿಂದ 3 ತಿಂಗಳ ಕಾಲ ˉÉೂೀಕೋದ್ಧಾರಕ್ಕಾಗಿಶ್ರೀಮಠದಲ್ಲಿ ಧೀರ್ಘಾನುಷ್ಠಾನ ಕೈಗೊಂಡು ಭಕ್ತರ ಸಂಪ್ರೀತಿಗೆ ಪಾತ್ರರಾಗಿದ್ದಾರೆ.ಶ್ರೀಗಳು ತಮ್ಮ ಪುರಾಣ ಪ್ರವಚನ ಕˉÉಯಿಂದ ನಾಡಿನಾದ್ಯಂತ ಸಂಚರಿಸಿಪ್ರವಚನ ಮಾಡಿ ವೀರಶೈವ ಧರ್ಮದ ಬಗ್ಗೆ ಜನರಿಗೆ ಅರಿವು ನೀಡುತ್ತಿದ್ದಾರೆ. ಶ್ರೀಗಳುಶ್ರೀಮಠದ ಅಧಿಕಾರ ವಹಿಸಿಕೊಂಡ ನಂತರ ಶ್ರೀಮಠವನ್ನು ಸರ್ವಾಂಗೀಣವಾಗಿ ಅಭಿವೃದ್ಧಿಗೊಳಿಸಿದ್ದು, ಊರ ಮಧ್ಯದ ಹಾಗೂ ಊರ ಹೊರಗಿನ ಎರಡೂ ಮಠಗಳನ್ನು ವಿಸ್ತರಿಸಿಅಭಿವೃದ್ಧಿಗೊಳಿಸಿದ್ದಾರೆ.

Swamiji

Swamiji Name :
ಶ್ರೀ ಷ.ಬ್ರ. ರೇಣುಕ ಶಿವಾಚಾರ್ಯ ಮಹಾಸ್ವಾಮಿಗಳು
Date of Birth :
1-1-1971
Place :
ದೇವರಹಿಪ್ಪರಗಿ, ಸಿಂಧಗಿ ತಾ||
Photo :

Programs

ಛಟ್ಟಿ ಅಮವಾಸ್ಯೆ ನಂತರ ಕಾರ್ತಿಕೋತ್ಸವ.
ಎಳ್ಳು ಅಮವಾಸ್ಯೆಯಿಂದ ಅವರಾತ್ರಿ ಅಮವಾಸ್ಯೆವರೆಗೆ ಕರ್ತೃಗುರುಗಳ ಪುಣ್ಯಸ್ಮರಣೋತ್ಸವ.
(ಪುರಾಣ ಪ್ರವಚನ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳು).
ಶಿವರಾತ್ರಿ ಶ್ರೀ ದುರ್ಗಾಪೂಜೆ.

Photos

Full Address Kannada

ಶ್ರೀ ಪರದೇಶಿ ಮಠ ದೇವರ
ಹಿಪ್ಪರಗಿ - 586 115
ಸಿಂಧಗಿ ತಾ||, ವಿಜಯಪುರ ಜಿ||

Map

Near by Places

ಸಿಂಧಗಿ - 20 ಕಿ.ಮೀ.
ವಿಜಯಪುರ - 35 ಕಿ.ಮೀ.
ಕಲಬುರ್ಗಿ - 125 ಕಿ.ಮೀ.

Statistic

3 Views
0 Rating
0 Favorite
0 Share
error: Content is protected !!