Shree Panchgraha Hirematha Amminabhavi

Shree Panchgraha Hirematha Amminabhavi Claimed

ಶ್ರೀ ಪಂಚಗ್ರಹ ಹಿರೇಮಠ ಅಮ್ಮಿನಭಾವಿ

Average Reviews

Description

ಶ್ರೀ ಪಂಚಗ್ರಹ ಹಿರೇಮಠ, ಅಮ್ಮಿನಭಾವಿ

ಕರ್ತೃ – ಪೂಜ್ಯ ಶ್ರೀ ಗುರು ಶಾಂತಲಿಂಗ ಶಿವಯೋಗಿಗಳು

ಧಾರವಾಡ ಜಿಲ್ಲಾ ಕೇಂದ್ರದಿಂದ 11 ಕಿ.ಮೀ. ದೂರದಲ್ಲಿರುವ ಅಮ್ಮಿನಭಾವಿಗ್ರಾಮದಲ್ಲಿ ಪೂಜ್ಯ ಶ್ರೀ ಗುರು ಶಾಂತಲಿಂಗ ಶಿವಯೋಗಿಗಳಿಂದ ಸ್ಥಾಪಿತಗೊಂಡಿರುವ ಶ್ರೀಪಂಚಗ್ರಹ ಹಿರೇಮಠವು ತನ್ನ ಧಾರ್ಮಿಕ ಆಚರಣೆಗಳ ಮೂಲಕ ಪ್ರಚಲಿತದಲ್ಲಿದೆ.ಸುಮಾರು 12ನೇ ಶತಮಾನದಲ್ಲಿ ಸ್ಥಾಪಿತಗೊಂಡಿರುವ ಶ್ರೀಮಠವು ಶ್ರೀಮದ್ ರಂಭಾಪುರಿಪೀಠದ ಶಾಖಾಮಠವಾಗಿ ಬೆಳೆದು ಬಂದಿದೆ.ಬಳ್ಳಾರಿ ಜಿಲ್ಲೆ ಹೂವಿನಹಡಗಲಿ ತಾಲ್ಲೂಕಿನ ಬ್ಯಾಲೆಹುಣಸೆ ಗ್ರಾಮದ ತುಂಗಭದ್ರಾನದಿದಂಡೆಯಲ್ಲಿ ಅಸ್ತಿತ್ವದಲ್ಲಿದ್ದ ಹಿರೇಮಠದ ಶ್ರೀ ಗುರು ಶಾಂತಲಿಂಗ ಶಿವಯೋಗಿಗಳುಸಂಚಾರದಲ್ಲಿ ಶಿರಹಟ್ಟಿ ತಾಲ್ಲೂಕಿನ ಸಾಸಲವಾಡದ ತುಂಗಭದ್ರಾ ನದಿದಂಡೆಯಲ್ಲಿ ನೆಲೆಗೊಂಡು ತದನಂತರ ಅಮ್ಮಿನಭಾವಿಗೆ ಆಗಮಿಸುತ್ತಾರೆ. ಇಲ್ಲಿನ ಭಕ್ತರ ಒತ್ತಾಸೆಯ ಮೇರೆಗೆಶ್ರೀಮಠವನ್ನು ಸ್ಥಾಪಿಸಿ ನೆಲೆಗೊಂಡರೆಂದು ಶ್ರೀಮಠದ ಇತಿಹಾಸದಲ್ಲಿ ತಿಳಿದುಬರುತ್ತದೆ.ಕರ್ತೃಗುರುಗಳು ಅನುಷ್ಠಾನ ಪ್ರಿಯರಾಗಿದ್ದು ತಮ್ಮ ಅನುಷ್ಠಾನಗಳಿಂದ ಈಭಾಗದಲ್ಲಿ ಮನೆಮಾತಾಗಿದ್ದರೆಂದು ತಿಳಿದುಬರುತ್ತದೆ. ಈ ಕಾರಣಗಳಿಂದಾಗಿ ಶ್ರೀಗಳಿಗೆಭಕ್ತರೇ ಶ್ರೀಮಠದ ಕಟ್ಟಡ ಕಟ್ಟಿಸಿಕೊಟ್ಟರೆಂದು ಹೇಳಲಾಗುತ್ತಿದ್ದು ಇಂದಿಗೂ ಕರ್ತೃಗುರುಗಳಗದ್ದುಗೆಗೆ ಅಪಾರ ಜನ ನಡೆದುಕೊಳ್ಳುತ್ತಾರೆ. ಆದರೆ ಕರ್ತೃಗಳ ಮುಂದಿನ ಪರಂಪರೆಯಬಗ್ಗೆ ನಿಖರವಾಗಿ ತಿಳಿದುಬರುವುದಿಲ್ಲ. ಬಹುಶಃ ಪರಂಪರೆಯ ಎಲ್ಲಾ ಗುರುಗಳು ಕರ್ತೃಗಳಹೆಸರನ್ನೇ ಅಭಿದಾನ ಪಡೆದು ಅಧಿಕಾರಕ್ಕೆ ಬಂದಿರುವುದು ಕಾರಣವಿರಬಹುದು.ಈಗಿನ ಹಿರಿಯ ಶ್ರೀಗಳಾದ ಶ್ರೀ ಷ.ಬ್ರ. ಶಾಂತಲಿಂಗ ಶಿವಾಚಾರ್ಯ ಸ್ವಾಮಿಗಳುತಮ್ಮ ಕಿರಿಯ ವಯಸ್ಸಿನಲ್ಲಿಯೇ 1939ರ ಮೇ 25ರಂದು ಶ್ರೀಮಠಕ್ಕೆ ಪಟ್ಟಾಧಿಕಾರಗೊಂಡಿದ್ದು ಸುಧೀರ್ಘ 7 ಶತಮಾನಗಳಿಗೂ ಅಧಿಕ ಕಾಲ ಭಕ್ತರಿಗೆ ಸನ್ಮಾರ್ಗ ತೋರುತ್ತಾಶ್ರೀಮಠವನ್ನು ನಿರಂತರವಾಗಿ ಅಭಿವೃದ್ಧಿಗೊಳಿಸುತ್ತಾ ಬಂದಿದ್ದಾರೆ. ಇತ್ತೀಚೆಗೆ ಶ್ರೀಗಳುತಮ್ಮ ಉತ್ತರಾಧಿಕಾರಿಗಳನ್ನಾಗಿ ಶ್ರೀ ಷ.ಬ್ರ. ಅಭಿನವ ಶಾಂತಲಿಂಗ ಶಿವಾಚಾರ್ಯರನ್ನು2008ರ ನವೆಂಬರ್ 23ರಲ್ಲಿ ಪಟ್ಟಕ್ಕೆ ತಂದಿದ್ದು ಕಿರಿಯ ಶ್ರೀಗಳು ಹಿರಿಯ ಶ್ರೀಗಳಮಾರ್ಗದರ್ಶನದಲ್ಲಿ ಮುಂದುವರೆದಿದ್ದಾರೆ.

Swamiji

Swamiji Name :
ಶ್ರೀ ಷ.ಬ್ರ. ಶಾಂತಲಿಂಗ ಶಿವಾಚಾರ್ಯ ಸ್ವಾಮಿಗಳು
Date of Birth :
13-8-1934
Place :
ಅಮ್ಮಿನಭಾವಿ, ಧಾರವಾಡ ತಾ||
Pattadikara :
25-5-1939
Photo :
Swamiji Name :
ಶ್ರೀ ಷ.ಬ್ರ. ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮಿಗಳು
Date of Birth :
10-7-1987
Place :
ಅಮ್ಮಿನಭಾವಿ, ಧಾರವಾಡ ತಾ||
Pattadikara :
23-11-2008
Photo :

Programs

ಪ್ರತಿ ಅಮವಾಸ್ಯೆ, ಹುಣ್ಣಿಮೆಗಳಲ್ಲಿ ವಿಶೇಷ ಪೂಜೆ.
ಶ್ರಾವಣ ಮಾಸದಲ್ಲಿ ನಿತ್ಯ ರುದ್ರಾಭಿಷೇಕ, ಪ್ರವಚನ.
ಶ್ರಾವಣ ಮಾಸದ ಕೊನೆಯ ದಿನ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ.

Institutions

ಕಿರಿಯ / ಹಿರಿಯ ಪ್ರಾಥಮಿಕ ಶಾಲೆ ಪ್ರೌಢಶಾಲೆ

Photos

Full Address Kannada

ಶ್ರೀ ಪಂಚಗ್ರಹ ಹಿರೇಮಠ
ಅಮ್ಮಿನಭಾವಿ - 581 201
ಧಾರವಾಡ ತಾ||, ಜಿ||

Map

Near by Places

ಧಾರವಾಡ - 11 ಕಿ.ಮೀ.
ಸವದತ್ತಿ - 25 ಕಿ.ಮೀ.
ಹುಬ್ಬಳ್ಳಿ - 35 ಕಿ.ಮೀ.

Statistic

11 Views
0 Rating
0 Favorite
0 Share
error: Content is protected !!