ನರಗುಂದ, ನವಲಗುಂದ, ಕುಂದಗೋಳ, ಅಮ್ಮಿನಭಾವಿ ಹಾಗೂ ಸುಳ್ಳಗಳಲ್ಲಿಒಟ್ಟು ಐದು ಮುಖ್ಯ ಮಠಗಳನ್ನು ಸ್ಥಾಪಿಸಲಾಗಿ ಈ ಮಠಗಳಿಗೆ ಪಂಚಗ್ರಹ ಹಿರೇಮಠಗಳೆಂದು ಹೆಸರು ಬಂದಿದ್ದು ಅವುಗಳಲ್ಲಿ ನವಲಗುಂದದ ಶ್ರೀ ಪಂಚಗ್ರಹ ಹಿರೇಮಠವೂಒಂದಾಗಿದೆ. ಶ್ರೀಮದ್ ಕಾಶಿ ಪೀಠದ ಶಾಖಾಮಠವಾಗಿ ಪುತ್ರವರ್ಗದ ಪರಂಪರೆಯಲ್ಲಿಬೆಳೆದು ಬಂದಿರುವ ಶ್ರೀ ಹಿರೇಮಠದ ಕರ್ತೃಗುರುಗಳೆಂದು ಶ್ರೀ ಸಿದ್ದೇಶ್ವರ ಶಿವಾಚಾರ್ಯಮಹಾಸ್ವಾಮಿಗಳನ್ನು ಗುರುತಿಸಲಾಗಿದೆ.ಕರ್ತೃಗುರುಗಳ ನಂತರ ಬಂದ ಶ್ರೀ ಬಸವಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ತಪೋನಿಷ್ಠರಾಗಿದ್ದು ಇವರ ನಂತರ ಬಂದ ಎಲ್ಲಾ 21 ಜನ ಶ್ರೀಗಳು ಶ್ರೀ ಬಸವಲಿಂಗಶಿವಾಚಾರ್ಯ ಸ್ವಾಮಿಗಳೆಂದು ಅಭಿದಾನ ಪಡೆದು ಅಧಿಕಾರಕ್ಕೆ ಬಂದಂತೆ ತೋರುತ್ತಿದ್ದು ಈಕಾರಣದಿಂದಾಗಿ ಶ್ರೀಮಠದ ಇತಿಹಾಸವನ್ನು ಸ್ಪಷ್ಟವಾಗಿ ಗುರುತಿಸಲು ಸಾಧ್ಯವಾಗುವುದಿಲ್ಲ.ಈ ಕಾರಣದಿಂದಾಗಿ ಈಗಿನ ಶ್ರೀಗಳು ಶ್ರೀ ಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಗಳೆಂಬ ಹೆಸರಿನಿಂದ ಪಟ್ಟಾಧಿಕಾರ ಸ್ವೀಕರಿಸಿದ್ದಾರೆ.ಹಿಂದಿನ ಶ್ರೀಗಳಾದ ಶ್ರೀ ಬಸವಲಿಂಗ ಶಿವಾಚಾರ್ಯ ಸ್ವಾಮಿಗಳು 1974ರಲ್ಲಿಶ್ರೀಮಠದ ಅಧಿಕಾರವನ್ನು ವಹಿಸಿಕೊಂಡಿದ್ದು ಇವರ ಕಾಲದಲ್ಲಿ ಶ್ರೀಮಠವು ಅಭಿವೃದ್ಧಿಪಥದತ್ತ ಮುನ್ನಡೆದಿದೆ. ಈಗಿನ ಶ್ರೀಗಳಾದ ಶ್ರೀ ಷ.ಬ್ರ. ಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು 1981ರಲ್ಲೇ ಶ್ರೀಮಠದ ಉತ್ತರಾಧಿಕಾರಿಗಳಾಗಿ ನೇಮಕಗೊಂಡು ನಂತರ 1994ರ ಮೇ21ರಂದು ಶ್ರೀಮಠಕ್ಕೆ ಪಟ್ಟಾಧಿಕಾರಗೊಂಡಿದ್ದು ಶ್ರೀಮಠವನ್ನು ಹಿಂದಿನ ಶ್ರೀಗಳ ಹಾದಿಯಲ್ಲಿಸರ್ವತೋಮುಖವಾಗಿ ಅಭಿವೃದ್ಧಿಗೊಳಿಸುತ್ತಿದ್ದಾರೆ.ಶ್ರೀಮಠದ ಕಟ್ಟಡವು 17ನೇ ಶತಮಾನದಲ್ಲಿ ಕೆಳದಿಯ ಶಿವಪ್ಪನಾಯಕನಿಂದನಿರ್ಮಿತಿಗೊಂಡಿದ್ದು ಹಿಂದಿನ ಶ್ರೀಗಳಾದ ಶ್ರೀ ಬಸವಲಿಂಗ ಶಿವಾಚಾರ್ಯರು ಪುರಾತನಕಟ್ಟಡಕ್ಕೆ ಯಾವುದೇ ಚ್ಯುತಿ ಬಾರದಂತೆ ಶ್ರೀಮಠವನ್ನು ನವೀಕರಿಸಿದ್ದಾರೆ. ಇಲ್ಲಿ ಪ್ರತಿಕಂಬಗಳು ಜಂತಿ ತೊಲೆಗಳು ಬಹು ರೀತಿಯ ಕೆತ್ತನೆಗಳಿಂದ ಅಲಂಕೃತಗೊಂಡಿವೆ. ಎಂಟುದಿಕ್ಕುಗಳಿಗೆ ಅಷ್ಟದಿಕ್ಪಾಲಕರ ವಿಗ್ರಹಗಳಿದ್ದು ತಲಾ ಒಂದೊಂದು ದಿಕ್ಪಾಲಕರ ಬದಿಗಳಲ್ಲಿ ಋಷಿಮುನಿಗಳು, ದೇವತೆಗಳು, ನೃತ್ಯಗಾರ್ತಿಯರ ವಿಗ್ರಹಗಳನ್ನು ಕೆತ್ತಲಾಗಿದೆ.
Swamiji
Swamiji Name :
ಶ್ರೀ ಷ.ಬ್ರ. ಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು
Date of Birth :
6-6-1969
Place :
ಕರಮುಡಿ, ರೋಣ.
Pattadikara :
21-5-1994
Photo :
Programs
ಪ್ರತಿ ಅಮವಾಸ್ಯೆಗೆ ರುದ್ರಾಭಿಷೇಕ. ಶ್ರಾವಣದಲ್ಲಿ ನಿತ್ಯ ಪುರಾಣ ಪ್ರವಚನ.
ಮಾರ್ಗಶಿರ ಮಾಸದಲ್ಲಿ ಶ್ರೀ ಹಿರಿಯ ಗುರುಗಳ ಪುಣ್ಯಾರಾಧನೆ.
ಕಾರ್ತೀಕ ಮಾಸದಲ್ಲಿ ದೀಪೋತ್ಸವ.
ದಸರಾದಲ್ಲಿ ಶ್ರೀದೇವಿ ಪುರಾಣ ಪ್ರವಚನ.
Institutions
ಪ್ರೌಢಶಾಲೆ.
ಪದವಿಪೂರ್ವ / ಪದವಿ ಕಾಲೇಜು. ಡಿ.ಇ.ಡಿ. / ಐ.ಟಿ.ಐ. ಕಾಲೇಜು.
ವಿದ್ಯಾರ್ಥಿ ನಿಲಯ
Photos
Full Address Kannada
ಶ್ರೀ ಪಂಚಗ್ರಹ ಹಿರೇಮಠ,
ನವಲಗುಂದ - 581 113 ಧಾರವಾಡ ಜಿ||