ಕರ್ತೃ ಪೂಜ್ಯ ಶ್ರೀ ಸದ್ಗುರು ಸಿದ್ದವೀರೇಶ್ವರ ಮಹಾಸ್ವಾಮಿಗಳು
ಕಲಬುರಗಿ ಜಿಲ್ಲೆ ಚಿತ್ತಾಪುರ ತಾಲ್ಲೂಕು ಕೇಂದ್ರದಿಂದ ಕೇವಲ 8 ಕಿ.ಮೀ.ದೂರದಲ್ಲಿರುವ ದಿಗ್ಗಾಂವ ಗ್ರಾಮದ ಮಧ್ಯಭಾಗದಲ್ಲಿ ಅಸ್ತಿತ್ತದಲ್ಲಿರುವ ಶ್ರೀ ಪಂಚಗೃಹಹಿರೇಮಠವು ತನ್ನ ಧಾರ್ಮಿಕ ಕಾರ್ಯಕ್ರಮಗಳ ಮುಖೇನ ಈ ಭಾಗದಲ್ಲಿ ಧಾರ್ಮಿಕವಾತಾವರಣವನ್ನು ಸೃಷ್ಠಿಸಿದೆ. ಶ್ರೀಮದ್ ರಂಭಾಪುರಿ ಪೀಠದ ಶಾಖಾಮಠವಾಗಿಪಂಚಪೀಠಗಳ ಪರಂಪರೆಯನ್ನು ಪಾಲಿಸಿಕೊಂಡು ಬಂದಿರುವ ಶ್ರೀಮಠವು ಪುರಾತನಮಠವಾಗಿದ್ದು ಈವರೆಗೂ 25 ಕ್ಕೂ ಹೆಚ್ಚು ಜನ ಶ್ರೀಗಳು ಅಧಿಕಾರ ನಡೆಸಿದ್ದಾರೆಂದುಹೇಳಲಾಗುತ್ತದೆ.ದಿಗ್ಗಾಂವಿ ಗ್ರಾಮದಲ್ಲಿಯೇ ಇತಿಹಾಸ ಪ್ರಸಿದ್ದ ಪುರಾತನ ಶ್ರೀ ಶಂಭುಲಿಂಗೇಶ್ವರದೇವಾಲಯವಿದೆ. ಈ ದೇವಾಲಯ ಹಾಗೂ ದಿಗ್ಗಾಂವಿ ಮತ್ತು ನಾಗಾವಿ ಅವಳಿ ಗ್ರಾಮಗಳಬಗ್ಗೆ ಶಿಲಾಶಾಸನಗಳಿದ್ದು ಅದರ ಪ್ರಕಾರ ದೇವಾಲಯಕ್ಕೆ ಸಂಬಂದಪಟ್ಟಂತೆ ಶಾಲಿವಾಹನಶಕೆ 1054ರ ಶಿಲಾಶಾಸನವಿದೆ. ಈ ಆಧಾರದ ಮೇಲೆ ಈಗಿನ ಗುರುಗಳು ಹೇಳುವಂತೆ ಶ್ರೀಶಂಭುಲಿಂಗೇಶ್ವರ ಕಿಯಾಶೀಲ ಗುರು ಪರಂಪರೆಯ ಮಠವೇ ಶ್ರೀ ಪಂಚಗೃಗ ಹಿರೇಮಠ.ಈ ಪ್ರಕಾರ ಶ್ರೀಮಠವು ಸಹಸ್ರ ವರ್ಷಗಳ ಇತಿಹಾಸವನ್ನು ಹೊಂದಿದೆ.ಶ್ರೀಮಠದ ಪರಂಪರೆಯಲ್ಲಿ ಮಹಾತಪಸ್ವಿಗಳು, ಧರ್ಮನಿಷ್ಠರೂ ಆದ ಹಲವಾರುಜನ ಶ್ರೀಗಳು ಅಧಿಕಾರವನ್ನು ನಡೆಸಿದ್ದು ಶ್ರೀಮಠದ ಧಾರ್ಮಿಕ ಶ್ರೀಮಂತಿಕೆಯನ್ನುಅಧಿಕಗೊಳಿಸಿದ್ದಾರೆ. ಅವರಲ್ಲಿ ಪ್ರಮುಖವಾಗಿ ಶ್ರೀ. ಷ. ಬ್ರ. ಸಿದ್ದವೀರ ಶಿವಯೋಗಿಗಳುಮಠದ ಪೀಠವನ್ನಲಂಕರಿಸಿ ಮಠ-ಘಟ ಬೆಳೆಸಿ ಉಳಿಸಿ ಹೆಸರಾದವರು. ಗುರು ಮುಟ್ಟಿಗುರುವಾಗಿ ಹಲವಾರು ಲೀಲೆಗಳನ್ನು ಮಾಡಿದ ಗುರುಗಳು ಶಾಲಿವಾಹನ ಶಕೆ 1848ರಲ್ಲಿಲಿಂಗೈಕ್ಯರಾದರು. ಇವರ ಗದ್ದುಗೆಯನ್ನು ಕರ್ತೃಗದ್ದುಗೆಯೆಂದು ಪೂಜಿಸಲಾಗುತ್ತಿದೆ.ಈಗಿನ ಶ್ರೀಗಳಾದ ಶ್ರೀ. ಷ.ಬ್ರ. ಸಿದ್ದವೀರ ಶಿವಾಚಾರ್ಯ ಸ್ವಾಮಿಗಳು ಶ್ರೀಮಠದಪಟ್ಟಕ್ಕೆ ಬಂದ ನಂತರ ಶ್ರೀಮಠವು ಸರ್ವತೋಮುಖವಾಗಿ ಅಭಿವೃದ್ದಿಯನ್ನು ಕಂಡಿದೆ.ಶ್ರೀಗಳು ಶ್ರೀಮಠದ ಶಾಖಾಮಠಗಳ ಜೊತೆಯಲ್ಲಿ ಶ್ರೀಮಠಕ್ಕೆ ನಾಗಾವಿಯ ಶ್ರೀ ಸಿದ್ದೇಶ್ವರಕೋಟಿ ಮಠ ಹಾಗೂ ಶ್ರೀ ಸಿದ್ದೇಶ್ವರ ಪೆದ್ದು ಮಠಗಳನ್ನು ಶಾಖಾಮಠಗಳನ್ನಾಗಿ ರೂಡಿಸಿದ್ದುಎಲ್ಲಾ ಮಠಗಳಲ್ಲೂ ಧಾರ್ಮಿಕ ಆಚರಣೆಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ ಹಾಗೂಸುತ್ತಮುತ್ತಲಿನ ಪಟ್ಟಣ ಗ್ರಾಮದಲ್ಲಿ ತಮ್ಮ ಪ್ರವಚನ, ಅನುಷ್ಠಾನಗಳಿಂದ ಅಪಾರ ಭಕ್ತರನ್ನುಸಂಪಾದಿಸಿದ್ದಾರೆ.
Swamiji
Swamiji Name :
ಶ್ರೀ ಷ.ಬ್ರ. ಸಿದ್ದವೀರ ಶಿವಾಚಾರ್ಯ ಸ್ವಾಮಿಗಳು
Date of Birth :
1968
Place :
ದಿಗ್ಗಾಂವ, ಚಿತ್ತಾಪುರ ತಾ||
Photo :
Programs
ಮಾರ್ಚ್ ತಿಂಗಳಲ್ಲಿ ಶ್ರೀ ರೇಣುಕ ಜಯಂತಿ ಆಚರಣೆ ಹಾಗೂ ಲಿಂ|| ಸದ್ಗುರು ಸಿದ್ಧವೀರ ಶಿವಯೋಗಿ ಸ್ವಾಮಿಗಳ ಪುಣ್ಯಾರಾಧನೆ ಏಪ್ರಿಲ್ನಲ್ಲಿ ಶ್ರೀ ಶಂಭುಲಿಂಗೇಶ್ವರ ದೇವರ ಜಾತ್ರೆ
ಕಾರ್ತಿಕ ಮಾಸದಲ್ಲಿ ನಿತ್ಯ ದೀಪಾರಾಧನೆ ಮತ್ತು ಕೊನೆಯ ದಿನ ಲಿಂ|| ಷ.ಬ್ರ.ಶ್ರೀ ಮುರುಲಿಂಗೇಶ್ವರ ಶಿವಾಚಾರ್ಯ ಸ್ವಾಮಿಗಳ ಪುಣ್ಯಾರಾಧನೆ
Institutions
ಸಂಸ್ಕøತ ವೇದ ಪಾಠಶಾಲೆ
ಕಿರಿಯ / ಹಿರಿಯ ಪ್ರಾಥಮಿಕ /ಪ್ರೌಢಶಾಲೆ
ಗೋಶಾಲೆ ವಿದ್ಯಾರ್ಥಿ ನಿಲಯ
Photos
Full Address Kannada
ಶ್ರೀ ಪಂಚಗೃಹ ಹಿರೇಮಠ
ದಿಗ್ಗಾಂವ - 585 211
ಚಿತ್ತಾಪುರ ತಾ||, ಕಲಬುರಗಿ ಜಿಲ್ಲೆ