Shree Oppatteshwara Viraktamatha – Madyala

Shree Oppatteshwara Viraktamatha – Madyala Claimed

ಶ್ರೀ ಒಪ್ಪತ್ತೇಶ್ವರ ವಿರಕ್ತಮಠ - ಮಾಡ್ಯಾಳ

Average Reviews

Description

ಶ್ರೀ ಒಪ್ಪತ್ತೇಶ್ವರ ವಿರಕ್ತಮಠ – ಮಾಡ್ಯಾಳ

ಕರ್ತೃ ಪೂಜ್ಯ ಶ್ರೀ ಒಪ್ಪತ್ತೇಶ್ವರ ಮಹಾಸ್ವಾಮಿಗಳು

ಆಳಂದ ತಾಲ್ಲೂಕು ಕೇಂದ್ರದಿಂದ 30 ಕಿ.ಮೀ. ದೂರದಲ್ಲಿರುವ ಮಾಡ್ಯಾಳಗ್ರಾಮದಲ್ಲಿ ಅಸ್ತಿತ್ವದಲ್ಲಿರುವ ಶ್ರೀ ಒಪ್ಪತ್ತೇಶ್ವರ ವಿರಕ್ತಮಠವು 12ನೇ ಶತಮಾನದ್ದೆಂದುಹೇಳಲಾಗುತ್ತದೆ. ಹನ್ನೆರಡನೇ ಶತಮಾನದಲ್ಲಿ ಕಲ್ಯಾಣದಿಂದ ಹೊರಟ ಶರಣರಲ್ಲಿ ಶ್ರೀಒಪ್ಪತ್ತೇಶ್ವರರು ಒಬ್ಬರೆಂದು, ಶ್ರೀಗಳು ಮಾಡ್ಯಾಳ ಗ್ರಾಮಕ್ಕೆ ಸಂಚಾರದಲ್ಲಿ ಬಂದು ಮಠವನ್ನುಸ್ಥಾಪನೆ ಮಾಡಿ ಧರ್ಮಪ್ರಚಾರ ಕೈಗೊಂಡರೆಂದು ಹೇಳಲಾಗುತ್ತದೆ.ಈ ರೀತಿಯಾಗಿ ಶ್ರೀ ಒಪ್ಪತ್ತೇಶ್ವರರಿಂದ ಸ್ಥಾಪಿತಗೊಂಡ ಮಠದ ಪರಂಪರೆಯಲ್ಲಿಈವರೆಗೂ 18 ಜನ ಶ್ರೀಗಳು ಅಧಿಕಾರ ನಡೆಸಿದ್ದಾರೆಂದು ಹೇಳಲಾಗಿದ್ದು ಪರಂಪರೆಯ ಬಗ್ಗೆಸ್ಪಷ್ಟತೆಯಿಲ್ಲ. ಹಿಂದಿನ ಶ್ರೀಗಳಾದ ಶ್ರೀ ಮ.ನಿ.ಪ್ರ. ಒಪ್ಪತೇಶ್ವರ ಸ್ವಾಮಿಗಳು ಶ್ರೀಮಠವನ್ನುಸಮರ್ಥವಾಗಿ ಮುನ್ನಡೆಸಿದ್ದು 1976ರ ಸೆಪ್ಟೆಂಬರ್ 17ರಲ್ಲಿ ಲಿಂಗೈಕ್ಯರಾಗಿದ್ದಾರೆ. ಶ್ರೀಗಳಐಕ್ಯಾನಂತರ ದುದನಿಯ ಶ್ರೀಗಳು ಶ್ರೀಮಠಕ್ಕೆ ಈಗಿನ ಶ್ರೀಗಳನ್ನು ಕರೆತಂದು ನೇಮಿಸಿದ್ದಾರೆ.ಈಗಿನ ಶ್ರೀಗಳಾದ ಶ್ರೀ ಮ.ನಿ.ಪ್ರ. ಮರುಳಸಿದ್ದ ಸ್ವಾಮಿಗಳು 1978ರ ಮೇ 15ರಲ್ಲಿಶಿಕಾರಿಪುರ ತಾ|| ಕಪ್ಪನಹಳ್ಳಿ ಶಾಖಾ ಶಿವಯೋಗ ಮಂದಿರದ ಹಿಂದಿನ ಗುರುಗಳಾದ ಲಿಂ||ಶ್ರೀ ಮ.ನಿ.ಪ್ರ. ರುದ್ರಮುನಿ ಮಹಾಸ್ವಾಮಿಗಳಿಂದ ಶ್ರೀಮಠಕ್ಕೆ ಪಟ್ಟಾಧಿಕಾರದ ಅನುಗ್ರಹಸ್ವೀಕರಿಸಿದರು. ಶ್ರೀಗಳು ಹಾವೇರಿ ಶ್ರೀ ಸಿಂದಗಿ ಮಠದಲ್ಲಿ ಪ್ರಾರಂಭಿಕ ಶಿಕ್ಷಣ ಪಡೆದುಶಿವಯೋಗ ಮಂದಿರ ಹಾಗೂ ಹುಬ್ಬಳ್ಳಿ ಮೂರು ಸಾವಿರ ಮಠಗಳಲ್ಲಿ ಸಂಸ್ಕøತ, ವೇದಇತ್ಯಾದಿ ವಿಷಯಗಳ ಆಳವಾದ ಅಧ್ಯಯನ ಮಾಡಿದ್ದಾರೆ.ಶ್ರೀ ಮ.ನಿ.ಪ್ರ. ಮರುಳಸಿದ್ದ ಸ್ವಾಮಿಗಳು ಶ್ರೀಮಠದ ಧಾರ್ಮಿಕ, ಸಾಮಾಜಿಕಕಾರ್ಯಕ್ರಮಗಳನ್ನು ಚುರುಕುಗೊಳಿಸಿ ಮಠದ ಭಕ್ತರನ್ನು ಸನ್ಮಾರ್ಗದಲ್ಲಿ ಮುನ್ನಡೆಸುತ್ತಿದ್ದಾರೆ.ಶ್ರೀಗಳು ಶ್ರೀಮಠದಲ್ಲಿ ನಿತ್ಯ ಧಾರ್ಮಿಕ ಆಚರಣೆಗಳೊಂದಿಗೆ ಪ್ರತಿ ವರ್ಷ ವಿಜೃಂಬಣೆಯಬಸವ ಜಯಂತಿ ಕಾರ್ಯಕ್ರಮ ನಡೆಸುತ್ತಾರೆ ಹಾಗೂ ಭಾದ್ರಪದ ಬಹುಳ ಅಷ್ಠಮಿಗೆ ಲಿಂ||ಶ್ರೀ ಮ.ನಿ. ಒಪ್ಪತ್ತೇಶ್ವರ ಮಹಾಸ್ವಾಮಿಗಳ ಪುಣ್ಯಾರಾಧನೆ ಮಹೋತ್ಸವ ನಡೆಸುತ್ತಿದ್ದಾರೆ.

Swamiji

Swamiji Name :
ಶ್ರೀ ಮ.ನಿ.ಪ್ರ. ಮರುಳಸಿದ್ದ ಸ್ವಾಮಿಗಳು
Date of Birth :
17-03-1952
Place :
ಚನ್ನೂರು, ಹಾವೇರಿ ತಾ||
Pattadikara :
15-05-1978
Photo :

Programs

ಸೆಪ್ಟಂಬರ್ನಲ್ಲಿ ಶ್ರೀ ಹಿರಿಯ ಗುರುಗಳ ಪುಣ್ಯಾರಾಧನೆ
ಭಾದ್ರಪದ ಬಹುಳ ಅಷ್ಠಮಿಗೆ ಲಿಂ|| ಶ್ರೀ ಮ.ನಿ.ಪ್ರ. ಒಪ್ಪತ್ತೇಶ್ವರ ಮಹಾಸ್ವಾಮಿಗಳ ಪುಣ್ಯಾರಾಧನೆ

Institutions

ಕಿರಿಯ / ಹಿರಿಯ ಪ್ರಾಥಮಿಕ ಶಾಲೆ

Photos

Full Address Kannada

ಶ್ರೀ ಒಪ್ಪತ್ತೇಶ್ವರ ವಿರಕ್ತ ಮಠ
ಮಾಡ್ಯಾಳ - 585236
ಆಳಂದ ತಾ||, ಕಲಬುರಗಿ ಜಿಲ್ಲೆ

Map

Near by Places

ನಿಂಬರ್ಗಾ 11 ಕಿ.ಮೀ.
ಆಳಂದ 30 ಕಿ.ಮೀ.
ಕಲಬುರಗಿ 45 ಕಿ.ಮೀ.

Statistic

1 Views
0 Rating
0 Favorite
0 Share
error: Content is protected !!