Shree Omkareshwara Matha, Arishinaghatta

Shree Omkareshwara Matha, Arishinaghatta Claimed

ಶ್ರೀ ಓಂಕಾರೇಶ್ವರ ಮಠ, ಅರಿಶಿನಘಟ್ಟ

Average Reviews

Description

ಶ್ರೀ ಓಂಕಾರೇಶ್ವರ ಮಠ, ಅರಿಶಿನಘಟ್ಟ

ಕರ್ತೃ ಶ್ರೀ ಪರಮಪೂಜ್ಯ ಆತ್ಮಾನಂದ ಮಹಾಸ್ವಾಮಿಗಳು 

ಚನ್ನಗಿರಿ ತಾಲ್ಲೂಕಿನ ಅರಿಶಿನಘಟ್ಟವು ತಾಲ್ಲೂಕು ಕೇಂದ್ರದಿಂದ ಸುಮಾರು 16ಕಿ.ಮೀ. ದೂರದಲ್ಲಿದೆ. ಸುಮಾರು 35 ವರ್ಷಗಳ ಹಿಂದೆ ಪರಮಪೂಜ್ಯ ಆತ್ಮಾನಂದಸ್ವಾಮಿಗಳು ಓಂಕಾರೇಶ್ವರ ಸ್ವಾಮಿ ಮಠವನ್ನು ಅರಿಶಿನಘಟ್ಟ ಗ್ರಾಮದ ಹೊರಭಾಗದಲ್ಲಿಸ್ಥಾಪಿಸಿದ್ದಾರೆ. ಶ್ರೀಗಳ ಹತ್ತಿರ ಜನರು ತಮ್ಮ ಮಾನಸಿಕ ಹಾಗೂ ದೈಹಿಕ ಸಮಸ್ಯೆಗಳಿಗೆಉತ್ತರ ಕಂಡುಕೊಳ್ಳಲು ಆಗಮಿಸುತ್ತಿದ್ದರು. ಈ ಕಾರಣದಿಂದಾಗಿ ಶ್ರೀ ಮಠವು ಬಹುಬೇಗನೆಈ ಭಾಗದ ಜನಮಾನಸದಲ್ಲಿ ನೆಲೆನಿಂತಿತು.ಇವರು ಲಿಂಗೈಕ್ಯರಾದ ನಂತರ ಈಗಿನ ಶ್ರೀಗಳಾದ ಶ್ರೀ ಗುರು ಓಂಕಾರಮೂರ್ತಿಸ್ವಾಮಿಗಳು ಮಠದ ಆಡಳಿತ ವಹಿಸಿಕೊಂಡು ಶ್ರೀ ಮಠದ ಧಾರ್ಮಿಕ ಕಾರ್ಯಗಳನ್ನುಮುಂದುವರಿಸಿಕೊಂಡು ಭಕ್ತರಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ. ಶ್ರೀಗಳು 1961ರಲ್ಲಿಹೊಳಲ್ಕೆರೆ ತಾಲ್ಲೂಕು ಚಿಕ್ಕಂದೋಡಿ ಗ್ರಾಮದಲ್ಲಿ ಜನಿಸಿದವರಾಗಿದ್ದು ಶ್ರೀ ಮಠದಲ್ಲಿಹೇಳಿಕೆಗಳನ್ನು ನಡೆಸಿಕೊಡುತ್ತಾ ಜನರ ಸಮಸ್ಯೆಗಳಿಗೆ ಉತ್ತರ ನೀಡುತ್ತಿದ್ದಾರೆ.

Swamiji

Swamiji Name :
ಶ್ರೀ ಗುರು ಓಂಕಾರಮೂರ್ತಿ ಸ್ವಾಮಿಗಳು
Date of Birth :
1961
Place :
ಚಿಕ್ಕಂದೋಡಿ, ಹೊಳಲ್ಕೆರೆ ತಾ||
Photo :

Programs

ಪ್ರತಿ ಅಮಾವಾಸ್ಯೆ ಮತ್ತು ಹುಣ್ಣಿಮೆಗೆ ವಿಶೇಷ ಪೂಜೆ.
ಪ್ರತಿ ನಿತ್ಯ ಶ್ರೀಮಠದಲ್ಲಿ ಭಕ್ತರ ಸಮಸ್ಯೆಗಳಿಗೆ ಹೇಳಿಕೆ ನಡೆಯುತ್ತದೆ.

Photos

Full Address Kannada

ಶ್ರೀ ಓಂಕಾರೇಶ್ವರ ಮಠ,
ಅರಿಶಿನಘಟ್ಟ ಲಿಂಗದಹಳ್ಳಿ ಪೋಸ್ಟ್ - 577 221
ಚನ್ನಗಿರಿ ತಾ||, ದಾವಣಗೆರೆ ಜಿ||

Map

Near by Places

ಅರಿಶಿನ ಘಟ್ಟ - 1 ಕಿ.ಮೀ.
ಚನ್ನಗಿರಿ - 16 ಕಿ.ಮೀ.
ಶಾಂತಿಸಾಗರ - 10 ಕಿ.ಮೀ.
ದಾವಣಗೆರೆ - 46 ಕಿ.ಮೀ.

Statistic

12 Views
0 Rating
0 Favorite
0 Share
error: Content is protected !!