ಚಾಮರಾಜನಗರ ಜಿಲ್ಲೆ ಕೊಳ್ಳೆಗಾಲ ತಾಲ್ಲೂಕಿನ ಚಿಲಕವಾಡಿ ಗ್ರಾಮದಿಂದಒಂದು ಕಿ.ಮೀ. ಅಂತರದಲ್ಲಿರುವ ಶ್ರೀ ಶಂಭುಲಿಂಗ ಕ್ಷೇತ್ರದಲ್ಲಿ ಅಸ್ತಿತ್ತ್ವದಲ್ಲಿರುವ ಶ್ರೀನಿಜಗುಣಾನುಭವ ಮಂಟಪ ಸುಕ್ಷೇತ್ರವು ತನ್ನ ಧಾರ್ಮಿಕ, ಸಾಮಾಜಿಕ ಹಾಗೂ ಸಾಹಿತ್ಯಿಕಕಾರ್ಯಚಟುವಟಿಕೆಗಳ ಮುಖೇನ ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವಲ್ಲಿ ನಿರತವಾಗಿದೆ.ವಚನಕಾರರಿಗಿಂತ ಭಿನ್ನವಾದ ಕೈವಲ್ಯ ಸಾಹಿತ್ಯವನ್ನು ಕನ್ನಡ ಸಾಹಿತ್ಯಲೋಕಕ್ಕೆ ಪರಿಚಯಿಸಿದಶ್ರೀ ನಿಜಗುಣಶಿವಯೋಗಿಗಳ ಸಾಹಿತ್ಯದ ಪ್ರಚಾರಕ್ಕೆ ಹಾಗೂ ಅವರ ತತ್ತ್ವಗಳ ಪ್ರಚಾರಕ್ಕೆಶ್ರೀಮಠವು ಶ್ರಮಿಸುತ್ತಿದೆ.ಶಂಭುಲಿಂಗಬೆಟ್ಟದ ಹಿಂಬದಿಯಲ್ಲಿರುವ ಕರಡಿಮಠದಲ್ಲಿ 1971ರಲ್ಲಿ ನಿಜಗುಣರಸಾಹಿತ್ಯವನ್ನು ಪ್ರಚಾರಕ್ಕೆ ತರುವ ಉದ್ದೇಶದಿಂದ ಪಿ. ಬಸವಣ್ಣ ಎಂಬ ನ್ಯಾಯವಾದಿಗಳುವಿರಕ್ತಾಶ್ರಮ ಸ್ವೀಕರಿಸಿ ಶ್ರೀ ಕುಮಾರ ನಿಜಗುಣ ಮಹಾಸ್ವಾಮಿಗಳೆಂದು ಅಭಿದಾನ ಪಡೆದುಕೈವಲ್ಯ ಸಾಹಿತ್ಯದ ಪ್ರಚಾರದಲ್ಲಿ ತೊಡಗಿಕೊಂಡರು. 1980ರಲ್ಲಿ ಸಿದ್ದಗಂಗೆಯ ಶ್ರೀಶಿವಕುಮಾರ ಮಹಾಸ್ವಾಮಿಗಳಿಂದ ದೀಕ್ಷೆ ಪಡೆದು ನಂತರ ವಿಜಯಪುರದಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳಿಂದ ಅನುಗ್ರಹ ಪಡೆದು ಪೂರ್ಣಮಟ್ಟದ ವಿರಕ್ತಯೋಗಿಗಳಾಗಿ ನಿಜಗುಣರ ಸಾಹಿತ್ಯ, ಶರಣ ಸಾಹಿತ್ಯವನ್ನು ಪ್ರಚಾರಕ್ಕೆತಂದರು.ಈ ರೀತಿ ಲೌಕಿಕದಿಂದ ಅಲೌಕಿಕದೆಡೆಗೆ ಪಾದಾರ್ಪಣೆ ಮಾಡಿದ ಶ್ರೀಗಳು ಶ್ರೀನಿಜಗುಣಾನುಭವ ಮಂಟಪವನ್ನು ಅಭಿವೃದ್ದಿಪಡಿಸಿ ಕ್ಷೇತ್ರಕ್ಕೆ ಆಗಮಿಸುವ ಭಕ್ತರ,ಸಾಹಿತ್ಯಪ್ರೇಮಿಗಳ, ಅಧ್ಯಯನಾಸಕ್ತರ ವಸತಿಗಾಗಿ ಕೊಠಡಿಗಳನ್ನು ನಿರ್ಮಿಸಿದರು. ಶ್ರೀಗಳುನಿಜಗುಣಾನುಭವ ಮಂಟಪದ ನಿರ್ಮಾಣಕ್ಕೆ ನಿರ್ದರಿಸಿ 1983 ರಿಂದ 1991ರ ಅವಧಿಯಲ್ಲಿಇಪ್ಪತ್ತೊಂದು ಲಕ್ಷಗಳ ವೆಚ್ಚದಲ್ಲಿ ಅಭಿವೃದ್ದಿಪಡಿಸಿದರು.ಶ್ರೀ ಕುಮಾರ ನಿಜಗುಣ ಸ್ವಾಮಿಗಳು ನಿಜಗುಣರ ಕೈವಲ್ಯ ಪದ್ದತಿಯನ್ನುಸರಳಭಾಷೆಯಲ್ಲಿ ಒದುಗರಿಗಾಗಿ ಪ್ರಕಟಿಸಿದ್ದಾರೆ. ಅಲ್ಲದೆ ನಿಜಗುಣ ಶಿವಯೋಗಿಗಳ ಬಗ್ಗೆಅನೇಕ ಧ್ವನಿಸುರಳಿ ಹೊರತಂದಿದ್ದಾರೆ. ಈ ರೀತಿಯಾಗಿ ಧಾರ್ಮಿಕ, ಸಾಮಾಜಿಕ, ಸಾಹಿತ್ಯಿಕಕಾರ್ಯಚಟುವಟಿಕೆಗಳ ಮೂಲಕ ಹೆಸರಾದ ಶ್ರೀಗಳು ಪ್ರತಿ ವರ್ಷ ಜನವರಿ ತಿಂಗಳಲ್ಲಿ ಶ್ರೀನಿಜಗುಣ ಶಿವಯೋಗಿಗಳ ಜಯಂತೋತ್ಸವ ಆಚರಿಸುತ್ತಿದ್ದಾರೆ.
Swamiji
Swamiji Name :
ಪೂಜ್ಯ ಶ್ರೀ ಕುಮಾರ ನಿಜಗುಣ ಮಹಾಸ್ವಾಮಿಗಳು
Photo :
Programs
ಪ್ರತಿ ಹುಣ್ಣಿಮೆಗೆ ವಿಶೇಷ ಪೂಜೆ
ಜನವರಿಯಲ್ಲಿ ಶ್ರೀ ನಿಜಗುಣ ಶಿವಯೋಗಿಗಳ ಜಯಂತೋತ್ಸª
Institutions
ಕಿರಿಯ / ಹಿರಿಯ ಪ್ರಾಥಮಿಕ ಶಾಲೆ
ಫ್ರೌಢಶಾಲೆ
ಪದವಿ ಪೂರ್ವ ಕಾಲೇಜು
Photos
Full Address Kannada
ಶ್ರೀ ನಿಜಗುಣಾನುಭವ ಮಂಟಪ
ಶ್ರೀ ಶಂಭುಲಿಂಗ ಕ್ಷೇತ್ರ, ಚಿಲಕವಾಡಿ - 571 442
ಕೊಳ್ಳೇಗಾಲ ತಾ||, ಚಾಮರಾಜನಗರ ಜಿಲ್ಲೆ