Shree Nidumamidi Jagadguru Shakha Matha

Shree Nidumamidi Jagadguru Shakha Matha Claimed

ಶ್ರೀ ನಿಡುಮಾಮಿಡಿ ಜಗದ್ಗುರು ಶಾಖಾ ಮಠ

Average Reviews

Description

ಶ್ರೀ ನಿಡುಮಾಮಿಡಿ ಜಗದ್ಗುರು ಶಾಖಾ ಮಠ – ವಾಪಸಂದ್ರ, ಚಿಕ್ಕಬಳ್ಳಾಪುರ

ಕರ್ತೃ – ಶ್ರೀ ಚಂದ್ರಗುಂಡ ದೇಶಿಕೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳ ತಪೋಭೂಮಿ

ಚಿಕ್ಕಬಳ್ಳಾಪುರ ನಗರದ ವಾಪಸಂದ್ರದಲ್ಲಿ ಅಸ್ತಿತ್ತ್ವದಲ್ಲಿರುವ ಶ್ರೀ ನಿಡುಮಾಮಿಡಿಜಗದ್ಗುರು ಶಾಖಾ ಮಠವು ತನ್ನ ಧಾರ್ಮಿಕ, ಸಾಮಾಜಿಕ ಹಾಗೂ ಶೈಕ್ಷಣಿಕಕಾರ್ಯಕ್ರಮಗಳ ಮೂಲಕ ಈ ಭಾಗದಲ್ಲಿ ಪ್ರಸಿದ್ಧಿಯಾಗಿದೆ. ಗೂಳೂರಿನ ಶ್ರೀನಿಡುಮಾಮಿಡಿ ಮಹಾಸಂಸ್ಥಾನ ಮಠದ ಶಾಖಾ ಮಠವಾಗಿರುವ ಶ್ರೀಮಠವು ಪ್ರಗತಿಪರಚಿಂತಕರ ವೇದಿಕೆಯಾಗಿ ಗುರುತಿಸಿಕೊಂಡಿದೆ. ಶ್ರೀಮಠವು ಸ್ಥಾಪನೆಯಾದ ಕಾಲಮಾನಹಾಗೂ ಗುರುಪರಂಪರೆಯ ಕುರಿತಂತೆ ಸ್ಪಷ್ಟಮಾಹಿತಿಗಳಿಲ್ಲ.

ಗೂಳೂರು ಶ್ರೀ ನಿಡುಮಾಮಿಡಿ ಮಹಾಸಂಸ್ಥಾನದ ಕರ್ತೃಗುರುಗಳಾದಆದಿಗುರು ಶ್ರೀ ಚಂದ್ರಗುಂಡ ದೇಶಿಕೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳುಲೋಕಕಲ್ಯಾಣಾರ್ಥ ಶ್ರೀಶೈಲದಿಂದ ಸಂಚಾರ ಹೊರಟು ಅಲ್ಲಲ್ಲಿ ನೆಲೆನಿಂತುಅನುಷ್ಠಾನಗೊಳ್ಳುತ್ತಾ ಮುಂದುವರೆದರು. ಈ ರೀತಿ ಸಂಚಾರದಲ್ಲಿ ನಂದಿಬೆಟ್ಟದ ಪರಿಸರದಲ್ಲಿಅನುಷ್ಠಾನಗೊಂಡು ತದನಂತರ ವಾಪಸಂದ್ರ ಪ್ರದೇಶದಲ್ಲಿ ಕೆಲಕಾಲ ನೆಲೆನಿಂತುಅನುಷ್ಠಾನಗೈದು ಈ ಸ್ಥಳವನ್ನು ಜಾಗೃತಗೊಳಿಸುತ್ತಾರೆ. ಇಂತಹ ಮಹಾಮಹಿಮಜಗದ್ಗುರುಗಳು ಅನುಷ್ಠಾನಗೈದ ಸ್ಥಳದಲ್ಲಿ ಕಾಲಾನುಕ್ರಮದಲ್ಲಿ ಗೂಳೂರಿನ ನಂತರದಪೀಠಾಧಿಪತಿಗಳು ಶಾಖಾಮಠವನ್ನು ನಿರ್ಮಿಸಿದರೆಂದು ತಿಳಿದುಬರುತ್ತದೆ.ಶ್ರೀಮಠದ ಪೂರ್ಣ ಪರಂಪರೆ ಲಭ್ಯವಿಲ್ಲವಾದರೂ ಇಲ್ಲಿರುವ ಮೂಲ ಮೂರುಗದ್ದುಗೆಗಳನ್ನು ಗುರುತಿಸಲಾಗಿದ್ದು ಶ್ರೀ ಚನ್ನಬಸವಸ್ವಾಮಿ, ಶ್ರೀ ರುದ್ರಸ್ವಾಮಿ ಹಾಗೂ ಶ್ರೀವೀರಪ್ಪಸ್ವಾಮಿಗಳ ಹೆಸರಿನಲ್ಲಿವೆ. ಗೂಳೂರಿನ ಈಗಿನ ಪಟ್ಟಾಧ್ಯಕ್ಷರಾದ ಶ್ರೀ ಶ್ರೀ ವೀರಭದ್ರಚನ್ನಮಲ್ಲ ಮಹಾಸ್ವಾಮಿಗಳು ಮುತುವರ್ಜಿ ವಹಿಸಿ ಶ್ರೀಮಠವನ್ನು ಜೀರ್ಣೋದ್ಧಾರಗೊಳಿಸಿಶಿಕ್ಷಣ ಸಂಸ್ಥೆಗಳನ್ನು ಪ್ರಾರಂಭಿಸಿದರು. ನಂತರ 2008ರ ಮಾರ್ಚ್ 05ರಂದು ಹಿಂದಿನಶ್ರೀಗಳಾದ ಶಿಕ್ಷಣ ತಜ್ಞ ಶ್ರೀ ಗಣೇಶ್ವರ ದೇಶಿಕೋತ್ತಮರನ್ನು ಶ್ರೀಮಠಕ್ಕೆ ಪಟ್ಟಾಧಿಕಾರಿಗಳನ್ನಾಗಿನಿಯುಕ್ತಿಗೊಳಿಸಿದರು.

ಶ್ರೀ ಗಣೇಶ್ವರ ದೇಶಿಕೋತ್ತಮರು ಎರಡೂವರೆ ವರ್ಷಗಳ ಕಾಲ ಶ್ರೀಮಠ ಹಾಗೂಶಿಕ್ಷಣ ಸಂಸ್ಥೆಗಳನ್ನು ಮುನ್ನಡೆಸಿದ್ದು 2010ರಲ್ಲಿ ಲಿಂಗೈಕ್ಯರಾದರು. ತದನಂತರ ಗೂಳೂರುಪೀಠಾಧಿಪತಿಗಳೇ ಶ್ರೀಮಠವನ್ನು ಹಂತಹಂತವಾಗಿ ಅಭಿವೃದ್ದಿಗೊಳಿಸಿ ಇದೀಗ ಪೂಜ್ಯ ಶ್ರೀಶಿವಜ್ಯೋತಿಯವರನ್ನು ಶ್ರೀಮಠಕ್ಕೆ ಉತ್ತರಾಧಿಕಾರಿಯನ್ನಾಗಿ ನಿಯಮಿಸಿದ್ದು, ಇವರಪಟ್ಟಾಧಿಕಾರವನ್ನು 2018ರ ಮಹಾಶಿವರಾತ್ರಿಯಂದು ನೆರವೇರಿಸಲು ಸಂಕಲ್ಪಿಸಲಾಗಿದೆ.ಪೂಜ್ಯ ಶ್ರೀ ಶಿವಜ್ಯೋತಿ ಅಮ್ಮನವರು ನಾಲ್ಕು ಸ್ನಾತಕೋತ್ತರ ಪದವಿಗಳನ್ನು ಪಡೆದಿದ್ದಾರೆ.ಪರಂಪರೆಯ ಮಠಕ್ಕೆ ಒಬ್ಬ ಮಹಿಳೆಯನ್ನು ಅಧ್ಯಕ್ಷರನ್ನಾಗಿಸುತ್ತಿರುವ ಶ್ರೀ ಶ್ರೀ ವೀರಭದ್ರಚನ್ನಮಲ್ಲ ಮಹಾಸ್ವಾಮಿಗಳ ಕಾರ್ಯ ಸ್ತುತ್ಯರ್ಹ.

Swamiji

Swamiji Name :
ಪೂಜ್ಯ ಡಾ. ಶ್ರೀ ಶಿವಜ್ಯೋತಿ ಅಮ್ಮನವರು
Date of Birth :
14-07-1976
Place :
ಬೆಂಗಳೂರು
Photo :

Programs

ಪ್ರತಿ ಸೋಮವಾರ ಸಂಜೆ ವಿಶೇಷ ಪೂಜೆ, ಭಜನೆ, ಪ್ರಸಾದ
ಕಾರ್ತಿಕ ಮಾಸದಲ್ಲಿ ಸಹಸ್ರದೀಪೋತ್ಸವ
ಮಹಾಶಿವರಾತ್ರಿಗೆ ಶಿವೋತ್ಸಾಹ ಕಾರ್ಯಕ್ರಮ
ರಥ ಸಪ್ತಮಿಗೆ ವಿಶೇಷ ಪೂಜೆ
ಜೂನ್ 23ಕ್ಕೆ ಶ್ರೀ ವೀರಭದ್ರ ಚನ್ನಮಲ್ಲ ಮಹಾಸ್ವಾಮಿಗಳ ಜನ್ಮದಿನಾಚರu

Institutions

ಡಾ. ಶ್ರೀ ಜ.ಚ.ನಿ. ಪಿಯು ಕಾಲೇಜ್/ಪದವಿ ಕಾಲೇಜ್
ಶ್ರೀ ವಿ.ಸಿ.ಎಂ. ಕಾನೂನು ಕಾಲೇಜು
ಇಗ್ನೋ ಸೆಂಟರ್

Photos

Full Address Kannada

ಶ್ರೀ ನಿಡುಮಾಮಿಡಿ ಜಗದ್ಗುರು ಶಾಖಾ ಮಠ
ವಾಪಸಂದ್ರ, ಚಿಕ್ಕಬಳ್ಳಾಪುರ - 562 101

Map

Near by Places

ದೇವನಹಳ್ಳಿ - 22 ಕಿ.ಮೀ.
ನಂದಿಬೆಟ್ಟ - 23 ಕಿ.ಮೀ.
ದೊಡ್ಡಬಳ್ಳಾಪುರ - 27 ಕಿ.ಮೀ.
ಕೋಲಾರ - 61 ಕಿ.ಮೀ.

Statistic

263 Views
0 Rating
0 Favorite
0 Share
error: Content is protected !!