Shree Neelakantheshwara Matha

Shree Neelakantheshwara Matha Claimed

ಶ್ರೀ ನೀಲಕಂಠೇಶ್ವರ ಮಠ

Average Reviews

Description

ಶ್ರೀ ನೀಲಕಂಠೇಶ್ವರ ಮಠ – ಬೆಟಗೇರಿ – ಗದಗ

ಕರ್ತೃ – ಪೂಜ್ಯ ಶ್ರೀ ನೀಲಕಂಠ ಪಟ್ಟದಾರ್ಯ ಮಹಾಸ್ವಾಮಿಗಳು

ಗದಗ ನಗರದ ಬೆಟಗೇರಿ ಭಾಗದಲ್ಲಿ ಸುಮಾರು 18ನೇ ಶತಮಾನದಅಂತ್ಯಭಾಗದಲ್ಲಿ ಶ್ರೀ ನೀಲಕಂಠ ಪಟ್ಟದಾರ್ಯ ಮಹಾಸ್ವಾಮಿಗಳಿಂದ ಸ್ಥಾಪಿತಗೊಂಡಿರುವಶ್ರೀ ನೀಲಕಂಠೇಶ್ವರ ಮಠವು ಈ ಭಾಗದ ಪ್ರಮುಖ ಧಾರ್ಮಿಕ ಕೇಂದ್ರವಾಗಿದೆ. ಶ್ರೀ ಮಠವುಈ ಮೊದಲು ಶ್ರೀಶೈಲದಲ್ಲಿದ್ದು ನಂತರ ಇಲ್ಲಿಗೆ ಸ್ಥಳಾಂತರ ಮಾಡಲಾಗಿದೆ ಎಂದುಹೇಳಲಾಗಿದ್ದು ಕುರುಹಿನಶೆಟ್ಟರ ಸಮಾಜದ ಕುಲಗುರುಗಳಾಗಿ ಆ ಸಮಾಜದಅಭಿವೃದ್ದಿಯಲ್ಲಿ ಬಹಳವಾಗಿ ಶ್ರಮಿಸುತ್ತಾ ಬಂದಿದೆ. ಶ್ರೀಶೈಲದಲ್ಲಿದ್ದ ಮೂಲ ಮಠವನ್ನುಇಲ್ಲಿಗೆ ಸ್ಥಳಾಂತರಿಸಿದ ಶ್ರೀ ನೀಲಕಂಠ ಪಟ್ಟದಾರ್ಯ ಮಹಾಸ್ವಾಮಿಗಳಿಂದಾಗಿ ಶ್ರೀ ಮಠಕ್ಕೆಶ್ರೀ ನೀಲಕಂಠೇಶ್ವರ ಮಠವೆಂಬ ಹೆಸರು ಬಂದಿದ್ದು ಪರಂಪರೆಯ ಗುರುಗಳೆಲ್ಲರೂ ಶ್ರೀನೀಲಕಂಠ ಮಹಾಸ್ವಾಮಿಗಳೆಂಬ ಅಭಿದಾನ ಪಡೆದು ಬಂದಿರುವುದು ವಿಶೇಷ.ಇವರ ನಂತರ ಸುಮಾರು 45 ವರ್ಷಗಳ ಕಾಲ ಶ್ರೀ ಮಠವು ಖಾಲಿ ಉಳಿದಿದ್ದು1886ರಲ್ಲಿ ಇಮ್ಮಡಿ ಶ್ರೀ ನೀಲಕಂಠ ಪಟ್ಟದಾರ್ಯ ಮಹಾಸ್ವಾಮಿಗಳು ಅಧಿಕಾರಕ್ಕೆ ಬಂದುಬಹುಕಾಲದಿಂದ ಖಾಲಿ ಉಳಿದಿದ್ದ ಮಠದ ಧಾರ್ಮಿಕ ಆಚರಣೆಗಳನ್ನು ಚುರುಕುಗೊಳಿಸಿಸಾಮಾಜಿಕವಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಶ್ರೀಗಳು ಕುರುಹಿನಶೆಟ್ಟರ ಸಮಾಜದಅಭಿವೃದ್ದಿಗಾಗಿ ಶ್ರಮಿಸಿ ವೀರಶೈವ ತತ್ವಗಳು ಹಾಗೂ ಆಚರಣೆಗಳನ್ನು ಹೆಚ್ಚು ಪ್ರಚುರಗೊಳಿಸಿ1932ರಲ್ಲಿ ಲಿಂಗೈಕ್ಯರಾದರು. 1960ರಲ್ಲಿ ಅಧಿಕಾರ ವಹಿಸಿಕೊಂಡ ಮುಮ್ಮಡಿ ಶ್ರೀ ನೀಲಕಂಠಪಟ್ಟದಾರ್ಯ ಮಹಾಸ್ವಾಮಿಗಳು ಶ್ರೀ ಮಠದಲ್ಲಿ ಧಾರ್ಮಿಕ ಆಚರಣೆಗಳೊಂದಿಗೆ ಶ್ರೀ ಮಠದಸರ್ವಾಂಗೀಣ ಅಭಿವೃದ್ದಿಗೆ ಕಾರಣರಾಗಿದ್ದು ಶ್ರೀ ಮಠಕ್ಕೆ ಶಾಶ್ವತ ಆದಾಯ ಬರುವಂತೆಮಾಡಿ 1995ರಲ್ಲಿ ಲಿಂಗೈಕ್ಯರಾದರು.ಈಗಿನ ಶ್ರೀಗಳಾದ ನಾಲ್ಮಡಿ ಶ್ರೀ ನೀಲಕಂಠ ಪಟ್ಟಾದಾರ್ಯ ಮಹಾಸ್ವಾಮಿಗಳು1998ರಲ್ಲಿ ಶ್ರೀ ಮಠದ ಅಧಿಕಾರ ವಹಿಸಿಕೊಂಡು ಹಿಂದಿನ ಶ್ರೀಗಳಂತೆಯೇ ಕ್ರಿಯಾಶೀಲರಾಗಿಶ್ರೀಮಠವನ್ನು ಮುನ್ನಡೆಸುತ್ತಿದ್ದಾರೆ. ಶ್ರೀಗಳು ಶಕ್ತಿ ವಿಶಿಷ್ಟಾದ್ವೈತ ವಿಷಯದಲ್ಲಿ ಸ್ನಾತಕೋತ್ತರಪದವಿ ಪಡೆದವರಾಗಿದ್ದಾರೆ. ಶ್ರೀಗಳು ಕುರುಹಿನ ಶೆಟ್ಟಿ ಸಮಾಜದಲ್ಲಿ ಬಿನ್ನಾಬಿಪ್ರಾಯವನ್ನುತೊಡೆದು ಹಾಕುವ ನಿಟ್ಟಿನಲ್ಲಿ ನಿರತರಾಗಿದ್ದು ಶ್ರೀಮಠದ ಹಾಗೂ ಸಮಷ್ಠಿ ಸಮಾಜದಅಭಿವೃದ್ದಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಶ್ರೀಮಠದಲ್ಲಿ ನಿತ್ಯ ಧಾರ್ಮಿಕಆಚರಣೆಗಳೊಂದಿಗೆ ಪ್ರತಿ ವರ್ಷ ಮಾಘ ಶುದ್ಧ ತ್ರಯೋದಶಿಗೆ ಪ್ರಸ್ತುತ ಶ್ರೀಗಳ ವರ್ದಂತಿಮಹೋತ್ಸವ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಆಚರಿಸಲ್ಪಡುತ್ತವೆ.

Swamiji

Swamiji Name :
ಶ್ರೀ ಶ್ರೀ 1008 ಶ್ರೀಮದ್ ಜಗದ್ಗುರು ಶ್ರೀ ನಾಲ್ಮಡಿ ನೀಲಕಂಠ ಪಟ್ಟದಾರ್ಯ ಮಹಾಸ್ವಾಮಿಗಳು
Date of Birth :
1971
Pattadikara :
1998
Photo :

Programs

ಪ್ರತಿ ಅಮವಾಸ್ಯೆ, ಹುಣ್ಣಿಮೆಗಳಲ್ಲಿ ವಿಶೇಷ ಪೂಜೆ
ಮಾಘ ಶುದ್ಧ ತ್ರಯೋದಶಿಗೆ ವರ್ದಂತಿ ಮಹೋತ್ಸವ
ಮತ್ತು ಕಾರ್ಯಕ್ರಮಗಳು

Photos

Full Address Kannada

ಶ್ರೀ ನೀಲಕಂಠೇಶ್ವರ ಮಠ
ಬೆಟಗೇರಿ, ಗದಗ - 582 102

Map

Near by Places

ಹುಬ್ಬಳ್ಳಿ - 50 ಕಿ.ಮೀ.
ಹಾವೇರಿ - 75 ಕಿ.ಮೀ.
ರೋಣ - 55 ಕಿ.ಮೀ.
ಶಿರಹಟ್ಟಿ - 35 ಕಿ.ಮೀ.

Statistic

12 Views
0 Rating
0 Favorite
0 Share
error: Content is protected !!